ಕನ್ನಡ ಸುದ್ದಿ  /  ಮನರಂಜನೆ  /  Arjun Kapoor: ಮಲೈಕಾ ಅರೋರಾ ಜತೆ ಬ್ರೇಕಪ್‌ ಮಾಡಿಕೊಳ್ಳುವ ವಿಚಾರದ ಕುರಿತು ಗೂಢಾರ್ಥದ ಪೋಸ್ಟ್‌ ಹಂಚಿಕೊಂಡ ಅರ್ಜುನ್‌ ಕಪೂರ್‌

Arjun Kapoor: ಮಲೈಕಾ ಅರೋರಾ ಜತೆ ಬ್ರೇಕಪ್‌ ಮಾಡಿಕೊಳ್ಳುವ ವಿಚಾರದ ಕುರಿತು ಗೂಢಾರ್ಥದ ಪೋಸ್ಟ್‌ ಹಂಚಿಕೊಂಡ ಅರ್ಜುನ್‌ ಕಪೂರ್‌

Arjun Kapoor Malaika Arora breakup: ಬಾಲಿವುಡ್‌ ನಟ ಅರ್ಜುನ್‌ ಕಪೂರ್‌ ಮತ್ತು ಮಲೈಕಾ ಅರೋರ 2018ರಲ್ಲಿ ವಿವಾಹವಾಗಿದ್ದರು. ಇದೀಗ ಇವರಿಬ್ಬರ ನಡುವೆ ಬ್ರೇಕಪ್‌ ವದಂತಿ ಹೆಚ್ಚಾಗಿದೆ. ಇದೇ ಸಮಯದಲ್ಲಿ ಅರ್ಜುನ್‌ ಕಪೂರ್‌ ನಿಗೂಢಾರ್ಥದ ಪೋಸ್ಟ್‌ವೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅರ್ಜುನ್‌ ಕಪೂರ್-‌ ಮಲೈಕಾ ಅರೋರಾ ಬ್ರೇಕಪ್‌ ವದಂತಿ
ಅರ್ಜುನ್‌ ಕಪೂರ್-‌ ಮಲೈಕಾ ಅರೋರಾ ಬ್ರೇಕಪ್‌ ವದಂತಿ

ಬೆಂಗಳೂರು: ಬಾಲಿವುಡ್‌ ನಟ ಅರ್ಜುನ್‌ ಕಪೂರ್‌ ಮತ್ತು ಅವರ ಬಹುಕಾಲದ ಗೆಳತಿ, ರಿಯಾಲಿಟಿ ಶೋ ಟಿವಿ ತೀರ್ಪುಗಾರ್ತಿ ಮಲೈಕಾ ಅರೋರಾ ತಮ್ಮ ಸಂಬಂಧ ಕೊನೆಗೊಳಿಸಿದ್ದಾರೆ ಎಂಬ ವದಂತಿ ಹಬ್ಬಿದೆ. ಇದೇ ಸಮಯದಲ್ಲಿ ಅರ್ಜುನ್‌ ಕಪೂರ್‌ ನಿಗೂಢಾರ್ಥದ ಪೋಸ್ಟ್‌ ಹಂಚಿಕೊಂಡಿದ್ದಾರೆ. ಇನ್ನೊಂದೆಡೆ ಇಂಡಿಯಾ ಟುಡೇ ಜತೆ ಮಲೈಕಾ ಅರೋರಾ ಮ್ಯಾನೇಜರ್‌ ಮಾತನಾಡಿದ್ದು, ಬ್ರೇಕಪ್‌ ವದಂತಿ ನಿರಾಕರಿಸಿದ್ದಾರೆ. ಈ ರೀತಿ ಬ್ರೇಕಪ್‌ ವದಂತಿ ನಿರಾಕರಿಸಿದ ಒಂದು ದಿನದ ಬಳಿಕ ಅರ್ಜುನ್‌ ಕಪೂರ್‌ ಸೋಷಿಯಲ್‌ ಮೀಡಿಯಾದಲ್ಲಿ ಒಂದು ಟಿಪ್ಪಣಿ ಹಂಚಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಅರ್ಜುನ್‌ ಕಪೂರ್‌ ಪೋಸ್ಟ್‌ನಲ್ಲಿ ಏನಿದೆ?

"ನಮ್ಮ ಜೀವನದಲ್ಲಿ ಎರಡು ಅಯ್ಕೆಗಳಿವೆ. ನಾವು ನಮ್ಮ ಗತಕಾಲದ ಕೈದಿಗಳಾಗಬಹುದು ಅಥವಾ ಭವಿಷ್ಯದ ಸಾಧ್ಯತೆಗಳ ಅನ್ವೇಷಕರಾಗಬಹುದು" ಎಂದು ಅರ್ಜುನ್‌ ಕಪೂರ್‌ ಅಡ್ಡಗೋಡೆಯ ಮೇಲೆ ದೀಪವಿಟ್ಟಂತಹ ಪೋಸ್ಟ್‌ ಹಂಚಿಕೊಂಡಿದ್ದಾರೆ. ಮಲೈಕಾ ಮತ್ತು ಅರ್ಜುನ್ 2018 ರಲ್ಲಿ ತಮ್ಮ 45 ನೇ ಹುಟ್ಟುಹಬ್ಬದಂದು ವಿವಾಹವಾಗಿದ್ದರು.

ಅರ್ಜುನ್‌ ಕಪೂರ್‌ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದ ಟಿಪ್ಪಣಿ
ಅರ್ಜುನ್‌ ಕಪೂರ್‌ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದ ಟಿಪ್ಪಣಿ

ಬ್ರೇಕಪ್‌ ವದಂತಿ ನಿರಾಕರಿಸಿದ ಮ್ಯಾನೇಜರ್‌

ಮಲೈಕಾ ಅರೋರಾ ಮ್ಯಾನೇಜರ್‌ ಬ್ರೇಕಪ್‌ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. "ಬ್ರೇಕಪ್‌ ಇಲ್ಲ, ಜಸ್ಟ್‌ ವದಂತಿ ಅಷ್ಟೇ" ಎಂದು ಇಂಡಿಯಾ ಟುಡೇಗೆ ಹೇಳಿದ್ದಾರೆ. ಈ ಹಿಂದೆ ಮಲೈಕಾ ಅರ್ಬಾಜ್‌ ಖಾನ್‌ರನ್ನು ವಿವಾಹವಾಗಿದ್ದರು. ಅರ್ಬಜ್‌ ಖಾನ್‌-ಮಲೈಕಾಗೆ ಅರ್ಹಾನ್‌ ಎಂಬ ಮಗನಿದ್ದಾನೆ. ಅರ್ಹಾನ್‌ ಮಲೈಕಾ ಜತೆ ವಾಸಿಸುತ್ತಿದ್ದಾನೆ.

"ಮಲೈಕಾ ಮತ್ತು ಅರ್ಜುನ್‌ ಒಬ್ಬರನ್ನೊಬ್ಬರನ್ನು ತುಂಬಾ ಪ್ರೀತಿಸುತ್ತಾರೆ. ಅವರಿಬ್ಬರು ಬೇರ್ಪಡಲು ನಿರ್ಧರಿಸಿದ್ದಾರೆ. ಇಬ್ಬರು ಗೌರವಯುತವಾಗಿಯೇ ದೂರವಾಗಲು ನಿರ್ಧರಿಸಿದ್ದಾರೆ. ಈ ವಿಷಯದಲ್ಲಿ ರಹಸ್ಯ ಕಾಪಾಡಲು ಬಯಸಿದ್ದಾರೆ. ನಮ್ಮ ಸಂಬಂಧದ ಕುರಿತು ಬಹಿರಂಗವಾಗಿ ಮಾಹಿತಿ ನೀಡಲು ಅವರು ಉದ್ದೇಶಿಸಿಲ್ಲ" ಎಂದು ಮೂಲಗಳನ್ನು ಉಲ್ಲೇಖಿಸಿ ಪಿಂಕ್‌ವಿಲ್ಲಾ ವರದಿ ಮಾಡಿದೆ.

"ಅವರು ದೀರ್ಘಕಾಲದ ಒಳ್ಳೆಯ ಸಂಬಂಧ ಹೊಂದಿದ್ದರು. ಆದರೆ, ದುರದೃಷ್ಟವಶಾತ್ ಅವರ ಬದುಕಿನಲ್ಲಿ ಬದಲಾವಣೆಯಾಗಿದೆ. ಹಾಗಂತ, ಇವರ ನಡುವೆ ಕೆಟ್ಟದ್ದಾಗಿ ಏನೋ ನಡೆದಿದೆ ಎಂದರ್ಥವಲ್ಲ. ಅವರು ಗೌರವದಿಂದಲೇ, ಒಬ್ಬರಿಗೊಬ್ಬರು ಆಧಾರಸ್ತಂಭವಾಗಿದ್ದುಕೊಂಡೇ ಬ್ರೇಕಪ್‌ ಆಗುತ್ತಿದ್ದಾರೆ. ಬ್ರೇಕಪ್‌ ಆದ ಬಳಿಕವೂ ಅವರು ಉತ್ತಮ ಸ್ನೇಹಿತರಂತೆ ಇರುತ್ತಾರೆ. ಈ ಸಮಯದಲ್ಲಿ ಅನಗತ್ಯ ವದಂತಿ, ಕೆಟ್ಟ ಮಾತುಗಳನ್ನು ಜನರಿಂದ ಅವರು ನಿರೀಕ್ಷಿಸುವುದಿಲ್ಲ" ಎಂದು ವರದಿಗಳು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿವೆ.

ರೋಹಿತ್ ಶೆಟ್ಟಿ ಅವರ ಸಿಂಗಂ ಅಗೇನ್ ಚಿತ್ರದಲ್ಲಿ ಅರ್ಜುನ್ ಕಪೂರ್‌ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅಜಯ್ ದೇವಗನ್, ಕರೀನಾ ಕಪೂರ್, ದೀಪಿಕಾ ಪಡುಕೋಣೆ, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಮತ್ತು ರಣವೀರ್ ಸಿಂಗ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಿಂಗಂ ಅಗೇನ್ ಸೂಪರ್ ಹಿಟ್ ಫ್ರ್ಯಾಂಚೈಸ್ ನ ಮೂರನೇ ಕಂತು. ಕಾಜಲ್ ಅಗರ್ವಾಲ್ ಮತ್ತು ಪ್ರಕಾಶ್ ರಾಜ್ ಮುಖ್ಯ ಪಾತ್ರಗಳಲ್ಲಿ ನಟಿಸಿದ ಸಿಂಗಂ 2011 ರಲ್ಲಿ ಬಿಡುಗಡೆಯಾಗಿತ್ತು. ಈ ಹಿಂದಿನ ಸಿಂಗಂ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಸೂಪರ್‌ಹಿಟ್‌ ಆಗಿತ್ತು. ಇದೀಗ ಇದೇ ಆಗಸ್ಟ್‌ ತಿಂಗಳಲ್ಲಿ ಸಿಂಗಂ ಅಗೇನ್‌ ಚಿತ್ರ ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಲಿದೆ.

ಲೋಕಸಭಾ ಚುನಾವಣೆಯ ಎಕ್ಸಿಟ್‌ಪೋಲ್‌ ವರದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

ಟಿ20 ವರ್ಲ್ಡ್‌ಕಪ್ 2024