Shah Rukh Khan: ಐಪಿಎಲ್ ಪಂದ್ಯದ ಬಳಿಕ ದಿಢೀರ್ ಅಸ್ವಸ್ಥಗೊಂಡ ಶಾರೂಖ್ ಖಾನ್; ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ, ಇಲ್ಲಿದೆ ಹೆಚ್ಚಿನ ವಿವರ
- Shah Rukh Khan Health: ಐಪಿಎಲ್ ಪಂದ್ಯ ವೀಕ್ಷಿಸಲು ಅಹಮದಾಬಾದ್‌ಗೆ ಆಗಮಿಸಿದ ಬಾಲಿವುಡ್ ನಟ ಶಾರೂಖ್ ಖಾನ್ ಬಿಸಿಲಿನ ತಾಪದಿಂದ ಆಸ್ಪತ್ರೆಗೆ ದಾಖಲಾಗಿ ಡಿಸ್‌ಚಾರ್ಜ್ ಆಗಿದ್ದಾರೆ. ಶಾರೂಖ್ ಖಾನ್ ಅನಾರೋಗ್ಯ ಅಭಿಮಾನಿಗಳಿಗೆ ಆತಂಕ ತಂದಿದೆ.
- Shah Rukh Khan Health: ಐಪಿಎಲ್ ಪಂದ್ಯ ವೀಕ್ಷಿಸಲು ಅಹಮದಾಬಾದ್‌ಗೆ ಆಗಮಿಸಿದ ಬಾಲಿವುಡ್ ನಟ ಶಾರೂಖ್ ಖಾನ್ ಬಿಸಿಲಿನ ತಾಪದಿಂದ ಆಸ್ಪತ್ರೆಗೆ ದಾಖಲಾಗಿ ಡಿಸ್‌ಚಾರ್ಜ್ ಆಗಿದ್ದಾರೆ. ಶಾರೂಖ್ ಖಾನ್ ಅನಾರೋಗ್ಯ ಅಭಿಮಾನಿಗಳಿಗೆ ಆತಂಕ ತಂದಿದೆ.
(1 / 8)
ಐಪಿಎಲ್ ಪಂದ್ಯ ವೀಕ್ಷಿಸಲು ಅಹಮದಾಬಾದ್‌ಗೆ ಆಗಮಿಸಿದ ಬಾಲಿವುಡ್ ನಟ ಶಾರೂಖ್ ಖಾನ್ ಬಿಸಿಲಿನ ತಾಪದಿಂದ ಆಸ್ಪತ್ರೆಗೆ ದಾಖಲಾಗಿ ಡಿಸ್‌ಚಾರ್ಜ್ ಆಗಿದ್ದಾರೆ. ಶಾರೂಖ್ ಖಾನ್ ಅನಾರೋಗ್ಯ ಅಭಿಮಾನಿಗಳಿಗೆ ಆತಂಕ ತಂದಿದೆ.
(PTI)(2 / 8)
ಹೀಟ್ ಸ್ಟ್ರೋಕ್‌ಗೆ ಒಳಗಾಗಿ ಬಾಲಿವುಡ್ ನಟ ಶಾರೂಖ್ ಖಾನ್ ಖಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರನ್ನು ಬುಧವಾರ ಮಧ್ಯಾಹ್ನ ಅಹಮದಾಬಾದ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಹಮದಾಬಾದ್ ಪೊಲೀಸರು ಇದನ್ನು ದೃಢಪಡಿಸಿದ್ದಾರೆ ಎಂದು ಪಿಟಿಐ ಉಲ್ಲೇಖಿಸಿದೆ.
(3 / 8)
ಶಾರೂಖ್ ಖಾನ್ ಅವರನ್ನು ಮಲ್ಟಿ ಸ್ಪೆಷಾಲಿಟಿ ಕೆಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಟ್ ಸ್ಟ್ರೋಕ್ ನಿಂದ ಬಳಲುತ್ತಿದ್ದ ನಟ ಶಾರುಖ್ ಖಾನ್ ಅವರನ್ನು ಕೆಡಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಹಮದಾಬಾದ್ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿ ಓಂ ಪ್ರಕಾಶ್ ಜಾಟ್ ತಿಳಿಸಿದ್ದಾರೆ.
(AFP)(4 / 8)
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಭಾಗವಹಿಸಲು ನಟ ಮಂಗಳವಾರ ಅಹಮದಾಬಾದ್‌ಗೆ ಆಗಮಿಸಿದ್ದರು. ಅವರ ಮಗಳು ಸುಹಾನಾ ಮತ್ತು ಮಗ ಅಬ್ರಾಮ್ ಪಂದ್ಯದ ನಂತರ ಅಭಿಮಾನಿಗಳನ್ನು ಸ್ವಾಗತಿಸಿದ್ದರು. ಶಾರೂಖ್ ಖಾನ್ ಕ್ರಿಕೆಟಿಗರೊಂದಿಗೆ ಸಂವಾದವನ್ನು ನಡೆಸಿದ್ದರು.
(PTI)(5 / 8)
ಮಂಗಳವಾರದ ಪಂದ್ಯದ ನಂತರ ಶಾರುಖ್ ಖಾನ್, ಸುಹಾನಾ ಮತ್ತು ಅಬ್ರಾಮ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಜತೆ ಪಂದ್ಯ ನೋಡಿದ್ದರು.
(AFP)(6 / 8)
ಕಳೆದ ವರ್ಷ ಮೂರು ಸಿನಿಮಾಗಳಿಗೆ ಶಾರೂಖ್ ಖಾನ್ ಸತತವಾಗಿ ಕೆಲಸ ಮಾಡಿದ್ದರು. ಪಠಾಣ್, ಜವಾನ್, ಡಂಕಿ ಸಿನಿಮಾಗಳು ರಿಲೀಸ್ ಆಗಿದ್ದವು.
(AFP)(7 / 8)
ದೈಹಿಕವಾಗಿ ನಿರಂತರವಾಗಿ ಕೆಲಸ ಮಾಡುತ್ತಿದ್ದರಿಂದ ಒಂದಿಷ್ಟು ರಿಲಾಕ್ಸ್‌ಗಾಗಿ ಐಪಿಎಲ್ ಕ್ರಿಕೆಟ್ ತಂಡ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಮೇಲೆ ಗಮನ ಹರಿಸಲು ನಿರ್ಧರಿಸಿದ್ದೇನೆ ಎಂದು ಶಾರೂಖ್ ಖಾನ್ ಹೇಳಿದ್ದಾರೆ.
(AFP)ಇತರ ಗ್ಯಾಲರಿಗಳು