ಕನ್ನಡ ಸುದ್ದಿ  /  ಮನರಂಜನೆ  /  Ipl Finals: ಐಪಿಎಲ್‌ ಫೈನಲ್‌ ನೋಡಲು ಮಾಸ್ಕ್‌ ಹಾಕಿಕೊಂಡು ಬಂದ ಶಾರೂಖ್‌ ಖಾನ್‌; ಹುಷಾರಾಗಿದ್ದಾರಲ್ವ ದೇವರ ದಯೆ ಎಂದ ಫ್ಯಾನ್ಸ್‌

IPL finals: ಐಪಿಎಲ್‌ ಫೈನಲ್‌ ನೋಡಲು ಮಾಸ್ಕ್‌ ಹಾಕಿಕೊಂಡು ಬಂದ ಶಾರೂಖ್‌ ಖಾನ್‌; ಹುಷಾರಾಗಿದ್ದಾರಲ್ವ ದೇವರ ದಯೆ ಎಂದ ಫ್ಯಾನ್ಸ್‌

ಐಪಿಎಲ್‌ ಪಂದ್ಯವನ್ನು ಬಾಲಿವುಡ್‌ ನಟ ಶಾರೂಖ್‌ ಖಾನ್‌ ತನ್ನ ಕುಟುಂಬದ ಜತೆ ವೀಕ್ಷಿಸುತ್ತಿದ್ದಾರೆ. ಇತ್ತೀಚೆಗೆ ಇವರು ಸನ್‌ ಸ್ಟ್ರೋಕ್‌ನಿಂದ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ದರು. ಇವರನ್ನು ಮತ್ತೆ ನೋಡಿ ಅಭಿಮಾನಿಗಳು ಖುಷಿಗೊಂಡಿದ್ದಾರೆ.

IPL finals: ಐಪಿಎಲ್‌ ಫೈನಲ್‌ ನೋಡಲು ಮಾಸ್ಕ್‌ ಹಾಕಿಕೊಂಡು ಬಂದ ಶಾರೂಖ್‌ ಖಾನ್‌
IPL finals: ಐಪಿಎಲ್‌ ಫೈನಲ್‌ ನೋಡಲು ಮಾಸ್ಕ್‌ ಹಾಕಿಕೊಂಡು ಬಂದ ಶಾರೂಖ್‌ ಖಾನ್‌

ಬೆಂಗಳೂರು: ಬಾಲಿವುಡ್‌ ನಟ ಶಾರೂಖ್‌ ಖಾನ್‌ ಚೆನ್ನೈನಲ್ಲಿ ನಡೆಯುತ್ತಿರುವ ಐಪಿಎಲ್‌ ಪಂದ್ಯ ವೀಕ್ಷಿಸುತ್ತಿದ್ದಾರೆ. ಕಳೆದ ವಾರ ಇವರು ಆಸ್ಪತ್ರೆಯಲ್ಲಿ ಅಡ್ಮಿಟ್‌ ಆಗಿದ್ದರು. ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆದರೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಇಂದು ಐಪಿಎಲ್‌ ಫೈನಲ್‌ ಪಂದ್ಯ ವೀಕ್ಷಿಸಲು ಮಾಸ್ಕ್‌ ಹಾಕಿಕೊಂಡು ಆಗಮಿಸಿದ್ದಾರೆ. ಶಾರೂಖ್‌ ಖಾನ್‌ ಆರೋಗ್ಯವಾಗಿರುವುದನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ದೇವರ ದಯೆಯಿಂದ ಬಾಲಿವುಡ್‌ ಬಾದ್‌ಶಾ ಹುಷಾರಾಗಿದ್ದಾರೆ ಎಂದು ಖುಷಿಯಿಂದ ಫ್ಯಾನ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ಬರೆದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಸನ್ರೈಸರ್ಸ್ ಹೈದರಾಬಾದ್ (ಎಸ್ಆರ್ಹೆಚ್) ನಡುವಿನ ಅಂತಿಮ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಚೆನ್ನೈ ಕ್ರೀಡಾಂಗಣದಲ್ಲಿ ಶಾರೂಖ್‌ ಖಾನ್‌ ಕಾಣಿಸಿಕೊಂಡಿದ್ದಾರೆ. ಐಪಿಎಲ್‌ ಫೈನಲ್‌ನಲ್ಲಿ ಕೆಕೆಆರ್‌ ಗೆಲುವು ಪಡೆದ ಬಳಿಕ ಶಾರೂಖ್‌ ಖಾನ್‌ ಮಾಸ್ಕ್‌ ತೆಗೆದು ಸಂಭ್ರಮಿಸಿದ್ದಾರೆ. 

ಮಾಸ್ಕ್ ಧರಿಸಿದ ಶಾರುಖ್ ಖಾನ್

ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ಶಾರೂಖ್‌ ಖಾನ್‌ ಕೆಕೆಆರ್‌ ತಂಡವನ್ನು ಬೆಂಬಲಿಸುವ ಸಲುವಾಗಿ ಆಗಮಿಸಿದ್ದಾರೆ. ಎಸ್‌ಆರ್‌ಕೆ ತಂಡದ ಜರ್ಸಿ, ಕಪ್ಪು ಗ್ಲೇರ್‌ ಧರಿಸಿ ಕೂದಲನ್ನು ಕಟ್ಟಿಕೊಂಡಿದ್ದರು. ಈ ಸಮಯದಲ್ಲಿ ಶಾರೂಖ್‌ ಖಾನ್‌ ಮಾಸ್ಕ್‌ ಧರಿಸಿರುವುದು ಎಲ್ಲರ ಗಮನ ಸೆಳೆಯಿತು. ಶಾರೂಖ್‌ ಖಾನ್‌ ಅವರು ಫೈನಲ್‌ ಪಂದ್ಯದಲ್ಲಿ ಭಾಗವಹಿಸಿದ ಹಲವು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಶಾರೂಖ್‌ ತಮ್ಮ ಪತ್ನಿ ಗೌರಿ ಖಾನ್‌ ಜತೆ ಕುಳಿತಿದ್ದರು. ಗೌರಿ ಖಾನ್‌ ಕೂಡ ಕೆಕೆಆರ್‌ ತಂಡದ ಜರ್ಸಿ ಧರಿಸಿದ್ದರು.

ಭಾನುವಾರ ಬೆಳಗ್ಗೆ ಗೌರಿ ಖಾನ್, ಮಗಳು-ನಟಿ ಸುಹಾನಾ ಖಾನ್ ಮತ್ತು ಪುತ್ರರಾದ ಆರ್ಯನ್ ಖಾನ್ ಮತ್ತು ಅಬ್ರಾಮ್ ಖಾನ್ ಅವರೊಂದಿಗೆ ಮುಂಬೈನಿಂದ ಹೊರಟಿದ್ದರು. ಕಲಿನಾ ವಿಮಾನ ನಿಲ್ದಾಣದಲ್ಲಿ ಇವರು ಕಂಡರೂ ಫೋಟೋ ತೆಗೆಯಲು ಸಾಧ್ಯವಾಗಲಿಲ್ಲ. ಭದ್ರತಾ ಸಿಬ್ಬಂದಿ ಕೊಡೆ ಅಡ್ಡ ಹಿಡಿದ ಕಾರಣ ಇವರ ಫೋಟೋಗಳನ್ನು ಕ್ಲಿಕ್ಕಿಸಲು ಮಾಧ್ಯಮಗಳಿಗೆ ಸಾಧ್ಯವಾಗಿರಲಿಲ್ಲ.

 

ಐಪಿಎಲ್‌ ಪಂದ್ಯ ವೀಕ್ಷಿಸಲು ಅಹಮದಾಬಾದ್‌ಗೆ ಆಗಮಿಸಿದ ಬಾಲಿವುಡ್‌ ನಟ ಶಾರೂಖ್‌ ಖಾನ್‌ ಬಿಸಿಲಿನ ತಾಪದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಶಾರೂಖ್‌ ಖಾನ್‌ ಅವರನ್ನು ಮಲ್ಟಿ ಸ್ಪೆಷಾಲಿಟಿ ಕೆಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಾರೂಖ್‌ ಖಾನ್‌ ಅನಾರೋಗ್ಯ ಅಭಿಮಾನಿಗಳಿಗೆ ಆತಂಕ ತಂದಿತ್ತು.

ಟಿ20 ವರ್ಲ್ಡ್‌ಕಪ್ 2024