ಕನ್ನಡ ಸುದ್ದಿ  /  Entertainment  /  Bollywood News Actor Vicky Kaushal Says He Matured More Since Marrying Katrina Kaif Pcp

ಹೆಂಡ್ತಿ ಅಂದ್ರೆ ಸುಮ್ನೆನಾ? ಕತ್ರಿನಾ ಕೈಫ್‌ರನ್ನ ವಿವಾಹವಾದ ಬಳಿಕ ನಾನು ಹೆಚ್ಚು ಪ್ರಬುದ್ಧನಾದೆ ಎಂದ್ರು ವಿಕ್ಕಿ ಕೌಶಲ್‌

Vicky Kaushal Katrina Kaif Marriage Life: ತನ್ನ ಪತ್ನಿ ಕತ್ರಿನಾ ಕೈಫ್‌ ಕುರಿತು ವಿಕ್ಕಿ ಕೌಶಲ್‌ ಮುಕ್ತವಾಗಿ ಮಾತನಾಡಿದ್ದಾರೆ. ಈಗ ಮೊದಲ ರೀತಿ ಬದುಕಿನಲ್ಲಿ ಅವಸರ ಮಾಡುತ್ತಿಲ್ಲ. ಕತ್ರಿನಾ ಕೈಫ್‌ ನನ್ನ ಬದುಕಿಗೆ ಬಂದ ಬಳಿಕ ಅದಕ್ಕೂ ಹಿಂದಿನ 33 ವರ್ಷಗಳಿಗೆ ಹೋಲಿಸಿದರೆ ಹೆಚ್ಚು ಪ್ರಬುದ್ಧನಾಗಿದ್ದೇನೆ ಎಂದು ಎಂದು ವಿಕ್ಕಿ ಕೌಶಲ್‌ ಹೇಳಿದ್ದಾರೆ.

ಕತ್ರಿನಾ ಕೈಫ್‌ರನ್ನ ವಿವಾಹವಾದ ಬಳಿಕ ನಾನು ಹೆಚ್ಚು ಪ್ರಬುದ್ಧನಾದೆ ಎಂದ್ರು ವಿಕ್ಕಿ ಕೌಶಲ್‌
ಕತ್ರಿನಾ ಕೈಫ್‌ರನ್ನ ವಿವಾಹವಾದ ಬಳಿಕ ನಾನು ಹೆಚ್ಚು ಪ್ರಬುದ್ಧನಾದೆ ಎಂದ್ರು ವಿಕ್ಕಿ ಕೌಶಲ್‌

ಬೆಂಗಳೂರು: ತನ್ನ ಪತ್ನಿ ಕತ್ರಿನಾ ಕೈಫ್‌ ಜತೆಗಿನ ಸಂಬಂಧದ ಕುರಿತು ನಟ ವಿಕ್ಕಿ ಕೌಶಲ್‌ ಮುಕ್ತವಾಗಿ ಮಾತನಾಡಿದ್ದಾರೆ. ಜಿಕ್ಯೂ ಇಂಡಿಯಾದ ಜತೆ ಮಾತನಾಡಿರುವ ವಿಕ್ಕಿ ಕೌಶಲ್‌ ಅವರು "ಮದುವೆಯಾದ ಬಳಿಕ ಹೆಚ್ಚು ತಾಳ್ಮೆ ಮತ್ತು ಪ್ರಬುದ್ಧತೆ ನನಗೆ ದೊರಕಿದೆ" ಎಂದು ಹೇಳಿದ್ದಾರೆ. ತನ್ನ ಪತ್ನಿಯನ್ನು ಮನಸ್ಸೋ ಇಚ್ಛೆ ಹೊಗಳಿರುವ ವಿಕ್ಕಿ ಕತ್ರಿನಾರನ್ನು ನನ್ನ ಸೂಕ್ತವಾದ ಸಂಗಾತಿ ಎಂದಿದ್ದಾರೆ. ಇದೇ ಸಮಯದಲ್ಲಿ ನಾನು ಹಠಮಾರಿ, ಆದರೆ ಕತ್ರಿನಾ ತುಂಬಾ ಭಾವುಕ ಜೀವಿ ಎಂದೂ ವಿಕ್ಕಿ ಹೇಳಿದ್ದಾರೆ.

ಕತ್ರಿನಾ ಕೈಫ್‌ ಕುರಿತು ವಿಕ್ಕಿ ಮಾತು

ಕತ್ರಿನಾ ಕೈಫ್‌ ಜತೆ ಜೀವನ ಹೇಗಿದೆ ಎಂದು ಕೇಳಿದ ಪ್ರಶ್ನೆಗೆ ವಿಕ್ಕಿ ಉತ್ತರಿಸಿದ್ದಾರೆ. "ಕಳೆದ ಎರಡೂವರೆ ವರ್ಷಗಳಲ್ಲಿ (ಮದುವೆಯಾದ ಬಳಿಕದ) ನಾನು ಮೊದಲ 33 ವರ್ಷಗಳಿಗಿಂತ ಹೆಚ್ಚು ಸಾಧನೆ ಮಾಡಿದೆ ಎಂದೆನಿಸುತ್ತದೆ. ಇದು ನನಗೆ ಹಲವು ಬಾರಿ ಅನಿಸಿದೆ. ನನಗೆ ಆಗ ಬೇರೆ ದೃಷ್ಟಿಕೋನವಿತ್ತು. ನಾನು ಮೂರ್ಖತನದ ವಿಷಯಗಳನ್ನು ಆಗ ಹೊಂದಿದ್ದೆ. ಈಗ ಹೆಚ್ಚು ಮೆಚ್ಯೂರ್ಡ್‌ ಆಗಿದ್ದೇನೆ. ನಾವು ಇಬ್ಬರಿಗೆ ಒಪ್ಪಿಗೆಯಾಗುವಂತಹ ವಿಷಯಗಳ ಕುರಿತು ಚರ್ಚೆ ಮಾಡುತ್ತೇವೆ. ಒಂದು ದಿನ ಹೊರಗೆ ಮಳೆಯಾಗುತ್ತದೆ ಎಂದು ಊಹಿಸಿ. ಆಗ ಮನೆಯೊಳಗೆ ಕುಳಿತು ಶಾಂತವಾಗಿರಲು ಬಯಸುತ್ತೇವೆ. ಭವಿಷ್ಯದ ಕುರಿತು ಭಯ, ಭೂತಕಾಲದ ಪಶ್ಚಾತಾಪ ಏನೂ ಇಲ್ಲ. ಪ್ರಸ್ತುತದ ಜತೆ ಬದುಕುವುದು ನಮಗೆ ಇಷ್ಟ. ಇದು ಅದ್ಭುತ ತೃಪ್ತಿ ನೀಡುತ್ತದೆ. ಕತ್ರಿನಾ ಕೈಫ್‌ ಜತೆ ಇರುವಾಗ ನನಗೆ ಇಂತಹ ಫೀಲ್‌ ಆಗುತ್ತದೆ" ಎಂದು ಅವರು ಹೇಳಿದ್ದಾರೆ.

ಕತ್ರಿನಾ ಇದ್ದರೆ ಅವಸರವಿಲ್ಲ

"ಕತ್ರಿನಾ ಜತೆಗಿರುವಾಗ ನನಗೆ ಬದುಕಿನ ಅವಸರ ಕಾಡುವುದಿಲ್ಲ. ನಿರಾಳವಾಗಿ ಇರಲು ಸಾಧ್ಯವಾಗುತ್ತದೆ. ಇದು ಸಿಂಪಲ್‌ ಆಗಿ ಅತ್ಯುತ್ತಮ ಭಾವನೆ. ಗಂಟೆಗಟ್ಟಲೆ ಮೌನವಾಗಿ ಕುಳಿತುಕೊಳ್ಳುವ, ಮೌನವನ್ನು ಅನುಭವಿಸುವ ವ್ಯಕ್ತಿಯನ್ನು ಭೇಟಿಯಾದ ಬಳಿಕ ನನ್ನಲ್ಲಿಯೂ ಅಂತಹ ಬದಲಾವಣೆಯಾಗಿದೆ. ಕತ್ರಿನಾ ಕೈಫ್‌ ಎಂದರೆ ಹೀಗೆಯೇ. ಪ್ರೀತಿಸುವ, ಕಾಳಜಿ ವಹಿಸುವ ವ್ಯಕ್ತಿ ಅವಳು. ಭಾವನಾತ್ಮಕವಾಗಿ ತುಂಬಾ ಇಷ್ಟವಾಗುತ್ತಾಳೆ" ಎಂದೆಲ್ಲ ತನ್ನ ಪತ್ನಿ ಬಗ್ಗೆ ಸಾಕಷ್ಟು ವಿಚಾರಗಳನ್ನು ಹೇಳಿದ್ದಾರೆ.

ಕತ್ರಿನಾ ಕೈಫ್‌ ತುಂಬಾ ರೊಮ್ಯಾಂಟಿಕ್‌

ಆರಂಭದ ದಿನಗಳಲ್ಲಿ ಕತ್ರಿನಾ ಕೈಫ್‌ರ ಜತೆ ಡೇಟಿಂಗ್‌ ಮಾಡುವಾಗ "ಯಾವಾಗ ಸಿಗ್ತಾಳೋ, ಯಾವಾಗ ಮೀಟ್‌ ಆಗ್ತಿನೋ" ಎಂಬ ಎಕ್ಸೈಟ್‌ಮೆಂಟ್‌ ಇತ್ತು. ಈಗ ಮದುವೆಯಾಗಿ ಎರಡೂವರೆ ವರ್ಷ ಆಗಿದೆ. ಈಗಲೂ ಅದೇ ರೀತಿಯ ಫೀಲ್‌ ಇದೆ. ಈ ಭಾವನೆ ಬದಲಾಗಿಲ್ಲ. ನಾನು ಬಹಿರಂಗವಾಗಿ ರೊಮ್ಯಾಟಿಂಕ್‌ ಆಗಿ ಕಾಣಿಸುವುದಿಲ್ಲ. ಕತ್ರಿನಾ ಕೈಫ್‌ ಜತೆಗಿದ್ದರೆ ಈ ರೀತಿ ಇರಲು ಆಗುವುದಿಲ್ಲ" ಎಂದಿದ್ದಾರೆ.

ಕತ್ರಿನಾ ಕೈಫ್‌ರ ಇತರೆ ಗುಣಗಳ ಬಗ್ಗೆಯೂ ವಿಕ್ಕಿ ಹೇಳಿದ್ದಾರೆ. "ನಾನು ಹೆಚ್ಚು ಹಠಮಾರಿ, ಆದರೆ, ಕತ್ರಿನಾ ಕೈಫ್‌ ತುಂಬಾ ಭಾವುಕ. ನನ್ನನ್ನು ಹೆಚ್ಚು ತಾಳ್ಮೆಯ ವ್ಯಕ್ತಿಯಾಗಿ ಮಾಡಿರುವುದೇ ಈ ಕತ್ರಿನಾ ಕೈಫ್‌. ಆಕೆಯಿಂದಾಗಿ ನಾನು ವಿಷಯಗಳನ್ನು ಭಿನ್ನವಾಗಿ ನೋಡಲು ಕಲಿತೆ" ಎಂದು ವಿಕ್ಕಿ ಕೌಶಲ್‌ ಹೇಳಿದ್ದಾರೆ. ಕತ್ರಿನಾ ಕೈಪ್‌ ಮತ್ತು ವಿಕ್ಕಿ ಕೌಶಲ್‌ಗೆ ಡಿಸೆಂಬರ್‌ 9, 2021ರಂದು ರಾಜಸ್ಥಾನದ ಸವಾಯಿ ಮಧೋಪುರದ ಫೋರ್ಟ್‌ ಬರ್ವಾರದ ಸಿಕ್ಸ್‌ ಸೆನ್ಸ್‌ ರೆಸಾರ್ಟ್‌ನಲ್ಲಿ ವಿವಾಹವಾಗಿತ್ತು.