ಕನ್ನಡ ಸುದ್ದಿ  /  ಮನರಂಜನೆ  /  ಪ್ರತ್ಯೇಕವಾಗಿ ವಾಸಿಸ್ತಾ ಇದ್ದಾರಂತೆ ನಟಿ ನತಾಶಾ ಸ್ಟಾಂಕೋವಿಕ್- ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ; ಡಿವೋರ್ಸ್‌ ವದಂತಿಗೆ ಪುಷ್ಠಿ

ಪ್ರತ್ಯೇಕವಾಗಿ ವಾಸಿಸ್ತಾ ಇದ್ದಾರಂತೆ ನಟಿ ನತಾಶಾ ಸ್ಟಾಂಕೋವಿಕ್- ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ; ಡಿವೋರ್ಸ್‌ ವದಂತಿಗೆ ಪುಷ್ಠಿ

Natasa Stankovic And Hardik Pandya News: ನತಾಶಾ ಸ್ಟಾಂಕೋವಿಕ್- ಹಾರ್ದಿಕ್‌ ಪಾಂಡ್ಯ ಸಂಬಂಧ ಸರಿಯಿಲ್ಲ ಎನ್ನುವುದಕ್ಕೆ ಪುಷ್ಠಿ ನೀಡುವಂತೆ ಇವರಿಬ್ಬರು ಕಳೆದ ಕೆಲವು ತಿಂಗಳುಗಳಿಂದ ಬೇರೆಬೇರೆ ವಾಸಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಪ್ರತ್ಯೇಕವಾಗಿ ವಾಸಿಸ್ತಾ ಇದ್ದಾರಂತೆ ನತಾಶಾ ಸ್ಟಾಂಕೋವಿಕ್- ಹಾರ್ದಿಕ್‌ ಪಾಂಡ್ಯ
ಪ್ರತ್ಯೇಕವಾಗಿ ವಾಸಿಸ್ತಾ ಇದ್ದಾರಂತೆ ನತಾಶಾ ಸ್ಟಾಂಕೋವಿಕ್- ಹಾರ್ದಿಕ್‌ ಪಾಂಡ್ಯ

ಬೆಂಗಳೂರು: ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಮಾಡೆಲ್-ನಟಿ ನತಾಶಾ ಸ್ಟಾಂಕೋವಿಕ್ ಸಂಬಂಧ ಹಾಳಾಗಿದೆ ಎಂದು ಕಳೆದ ಕೆಲವು ದಿನಗಳಿಂದ ವದಂತಿ ಹರಿದಾಡುತ್ತಿದೆ. ಇವರಿಬ್ಬರು ಡಿವೋರ್ಸ್‌ ನೀಡಲಿದ್ದಾರೆ ಎಂದು ಸಾಕಷ್ಟು ವರದಿಗಳು ಹೇಳಿವೆ. ರೆಡ್ಡಿಟ್‌ನಲ್ಲಿ ಈ ಕುರಿತು ಬಿಸಿಬಿಸಿ ಚರ್ಚೆಯಾಗುತ್ತಿದೆ. ಇದೀಗ ಬಂದ ತಾಜಾ ಮಾಹಿತಿ ಪ್ರಕಾರ ನತಾಶಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್‌ ಪಾಂಡ್ಯ ಕಳೆದ ಕೆಲವು ತಿಂಗಳಿನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರಂತೆ.

ಟ್ರೆಂಡಿಂಗ್​ ಸುದ್ದಿ

""ನತಾಶಾ ಮತ್ತು ಹಾರ್ದಿಕ್ ಕೆಲವು ತಿಂಗಳುಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಅವರಬ್ಬರಲ್ಲಿ ಪರಸ್ಪರ ಸಮಸ್ಯೆಗಳಿವೆ. ನತಾಶಾ ಅವರು ಹಾರ್ದಿಕ್‌ ಬಿಟ್ಟು ಹೊರನಡೆದಿದ್ದಾರೆ. ಮತ್ತೆ ಇವರು ಒಂದಾಗುತ್ತಾರ ಇಲ್ಲವೇ ಎನ್ನುವ ಕುರಿತು ಖಚಿತತೆ ಇಲ್ಲ. ಈಗಾಗಲೇ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ನತಾಶಾ ತನ್ನ ಹೆಸರಿನ ಮುಂದೆ ಇದ್ದ ಪಾಂಡ್ಯ ಎಂಬ ಉಪನಾಮವನ್ನು ತೆಗೆದುಹಾಕಿದ್ದಾರೆ. ಇದಾದ ಬಳಿಕ ನತಾಶ ಅವರು ತನ್ನ ಖಾತೆಯಲ್ಲಿದ್ದ ಪಾಂಡ್ಯರ ಫೋಟೋಗಳನ್ನೂ ತೆಗೆದಿದ್ದರು" ಎಂದು ಝೂಮ್‌ ವರದಿ ತಿಳಿಸಿದೆ.

ಇವರಿಬ್ಬರು ವಿವಾಹವಾಗಿ ಮೂರು ವರ್ಷಗಳು ಕಳೆದಿವೆ. ಡಿವೋರ್ಸ್‌ ವದಂತಿಗಳ ಸಮಯದಲ್ಲಿ ಇವರಿಬ್ಬರೂ ಸೋಷಿಯಲ್‌ ಮೀಡಿಯಾದಲ್ಲಿ ಯಾವುದೇ ಅಪ್‌ಡೇಟ್‌ ನೀಡುತ್ತಿಲ್ಲ. ಆದರೆ, ಹಾರ್ದಿಕ್‌ ಪಾಂಡ್ಯರ ಮಗ ಅಗಸ್ತ್ಯ ಹಾರ್ದಿಕ್ ಇತ್ತೀಚೆಗೆ ಕ್ರಿಕೆಟಿಗ ಕೃನಾಲ್‌ ಪಾಂಡ್ಯ ಜತೆ ಆತ್ಮೀಯವಾಗಿ ಕಾಣಿಸಿಕೊಂಡಿದ್ದರು. ಸರ್ಬಿಯಾದ ರೂಪದರ್ಶಿ ಮತ್ತು ನಟಿ ನತಾಶಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್‌ ಪಾಂಡ್ಯರಿಗೆ ಮೇ 31, 2020ರಂದು ವಿವಾಹವಾಗಿತ್ತು. ಅದೇ ವರ್ಷ ಜುಲೈ 30ರಂದು ಮೊದಲ ಮಗುವಿನ ಕುರಿತು ಅಪ್‌ಡೇಟ್‌ ನೀಡಿದ್ದರು.

ಈ ಹಿಂದೆ ನತಾಶಾ ಅವರು ತನ್ನ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಹಾರ್ದಿಕ್‌ ಪಾಂಡೆ ಅವರನ್ನು ಟ್ಯಾಗ್‌ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಇವರಿಬ್ಬರು ತಮ್ಮ ಸ್ಟೋರಿಗಳನ್ನು ಪರಸ್ಪರ ಹಂಚಿಕೊಳ್ಳುತ್ತಿಲ್ಲ. ಈ ಹಿಂದೆ ನತಾಶಾ ಅವರು ತನ್ನ ಇನ್‌ಸ್ಟಾಗ್ರಾಂನಲ್ಲಿ ಹಾರ್ದಿಕ್‌ ಪಾಂಡ್ಯ ಅವರ ಹೆಸರನ್ನು ಬಳಸುತ್ತಿದ್ದರು. ಆದರೆ, ಈಗ ಹಾರ್ದಿಕ್‌ ಪಾಂಡ್ಯ ಹೆಸರನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಿಂದ ಸಂಪೂರ್ಣವಾಗಿ ತೆಗೆದುಹಾಕಿದ್ದಾರೆ ಎಂದು ರೆಡ್ಡಿಟ್‌ನಲ್ಲಿ ಬಳಕೆದಾರರು ಗಮನ ಸೆಳೆದಿದ್ದರು. ಇವರಿಬ್ಬರು ದೂರವಾಗಿದ್ದಾರೆ ಎನ್ನುವುದಕ್ಕೆ ಇದೇ ಸೂಚನೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚಿಸಲಾಗಿತ್ತು.

ಇವರಿಬ್ಬರ ಸಂಬಂಧದ ಸದ್ಯದ ಸ್ಥಿತಿ ಕುರಿತು ಊಹಿಸಲು ಇನ್ನೂ ಕಾಲ ಬಂದಿಲ್ಲ ಎಂದು ಕೆಲವರು ಸೋಷಿಯಲ್‌ ಮೀಡಿಯಾದಲ್ಲಿ ಹೇಳಿದ್ದಾರೆ. ಆದರೆ, ಇದೇ ಸಮಯದಲ್ಲಿ ಇತ್ತೀಚೆಗೆ ನತಾಶಾ ಅವರು ವಿದೇಶದಲ್ಲಿ ಬೇರೊಬ್ಬ ನಟನ ಜತೆ ಕಾಣಿಸಿಕೊಂಡಿದ್ದರು. ಇವರು ಹೊಸ ನಟನ ಜತೆ ಡೇಟಿಂಗ್‌ನಲ್ಲಿದ್ದಾರೆ ಎಂದು ವರದಿಗಳು ತಿಳಿಸಿದ್ದವು. ಪಾಂಡ್ಯರ ಜತೆ ಸಂಬಂಧ ಹಳಸಿದೆ ಎನ್ನುವುದಕ್ಕೆ ಇದೂ ಸಾಕ್ಷಿ ಎಂದು ಚರ್ಚೆಯಾಗಿದೆ. ಆದರೆ, ಈ ಕುರಿತ ಪ್ರಶ್ನೆಗೆ ನತಾಶ ಉತ್ತರಿಸಿಲ್ಲ. ಡಿವೋರ್ಸ್‌ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ "ಥ್ಯಾಂಕ್‌ ಯು ವೆರಿ ಮಚ್‌" ಎಂದು ಹೇಳಿ ಉತ್ತರ ಹೇಳಲು ಇಷ್ಟವಿಲ್ಲ ಎಂಬ ಸೂಚನೆ ನೀಡಿದ್ದರು.

ಟಿ20 ವರ್ಲ್ಡ್‌ಕಪ್ 2024