ಕನ್ನಡ ಸುದ್ದಿ  /  ಮನರಂಜನೆ  /  Aishwarya Rai: ಮಾಧ್ಯಮಗಳ ಮುಂದೆ ಕೋಪಗೊಂಡ ಐಶ್ವರ್ಯಾ ರೈ; ಥೇಟ್‌ ಜಯಾ ಬಚ್ಚನ್‌ ಪಡಿಯಚ್ಚು ಅಂದ್ರು ಫ್ಯಾನ್ಸ್‌, ಇಲ್ಲಿದೆ ವೈರಲ್‌ ವಿಡಿಯೋ

Aishwarya Rai: ಮಾಧ್ಯಮಗಳ ಮುಂದೆ ಕೋಪಗೊಂಡ ಐಶ್ವರ್ಯಾ ರೈ; ಥೇಟ್‌ ಜಯಾ ಬಚ್ಚನ್‌ ಪಡಿಯಚ್ಚು ಅಂದ್ರು ಫ್ಯಾನ್ಸ್‌, ಇಲ್ಲಿದೆ ವೈರಲ್‌ ವಿಡಿಯೋ

ಬಾಲಿವುಡ್‌ ನಟಿ ಐಶ್ವರ್ಯಾ ರೈ ಸದಾ ಕೂಲ್‌ ಆಗಿ ಇರುವವರು. ಸಾರ್ವಜನಿಕವಾಗಿ ಅವರು ಕೋಪಗೊಳ್ಳುವುದು ಅಪರೂಪ. ಆದರೆ, ಐಶ್ವರ್ಯಾ ರೈ ಮಾಧ್ಯಮಗಳ ಎದುರು ಕೋಪಗೊಂಡ ಹಳೆಯ ವಿಡಿಯೋವೊಂದು ಇದೀಗ ಮತ್ತೆ ವೈರಲ್‌ ಆಗಿದೆ.

ಕೋಪಗೊಂಡ ಐಶ್ವರ್ಯಾ ರೈ; ಥೇಟ್‌ ಜಯಾ ಬಚ್ಚನ್‌ ಪಡಿಯಚ್ಚು ಅಂದ್ರು ಫ್ಯಾನ್ಸ್‌
ಕೋಪಗೊಂಡ ಐಶ್ವರ್ಯಾ ರೈ; ಥೇಟ್‌ ಜಯಾ ಬಚ್ಚನ್‌ ಪಡಿಯಚ್ಚು ಅಂದ್ರು ಫ್ಯಾನ್ಸ್‌

ಬೆಂಗಳೂರು: ಬಾಲಿವುಡ್‌ನ ಜನಪ್ರಿಯ ನಟಿ ಐಶ್ವರ್ಯಾ ರೈ ನಮ್ಮ ಕರ್ನಾಟಕ ಮೂಲದ ಹುಡುಗಿ. ಅಭಿಷೇಕ್‌ ಬಚ್ಚನ್‌ ಅವರನ್ನು ವಿವಾಹವಾದ ಬಳಿಕ ಬಚ್ಚನ್‌ ಕುಟುಂಬದ ಸೊಸೆಯಾದರು. ಇವರು ಬಾಲಿವುಡ್‌ ಮಾತ್ರವಲ್ಲದೆ ಹಾಲಿವುಡ್‌ ಸಿನಿಮಾಗಳಲ್ಲೂ ನಟಿಸಿದ್ದಾರೆ. ಈ ರೀತಿ ಹಿಂದಿ ಸಿನಿಮಾದಿಂದ ಇಂಗ್ಲಿಷ್‌ ಸಿನಿಮಾಕ್ಕೆ ನೆಗೆದ ಮೊದಲ ಲೀಡ್‌ ರೋಲ್‌ ನಟಿ ಎನ್ನಬಹುದು. 2000ನೇ ಇಸವಿಯಲ್ಲಿ ಹಲವು ಇಂಗ್ಲಿಷ್‌ ಸಿನಿಮಾಗಳಲ್ಲಿ ನಟಿಸಿದರು. ಅಲ್ಲಿ ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿ ಮತ್ತೆ ಬಾಲಿವುಡ್‌ಗೆ ಹಿಂತುರುಗಿದರು. ಇದೇ ಸಮಯದಲ್ಲಿ "ನೀವು ಹಾಲಿವುಡ್‌ಗೆ ಶಿಫ್ಟ್‌ ಆಗುತ್ತಿದ್ದೀರಾ?" ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಐಶ್ವರ್ಯಾ ರೈ ಕೋಪಗೊಂಡು ಉತ್ತರಿಸಿದ್ದಾರೆ. ಈ ಹಳೆಯ ವಿಡಿಯೋ ಮತ್ತೆ ವೈರಲ್‌ ಆಗಿದೆ.

ಟ್ರೆಂಡಿಂಗ್​ ಸುದ್ದಿ

ಈ ವಿಡಿಯೋದಲ್ಲಿ ಏನಿದೆ?

ಇನ್‌ಸ್ಟಾಗ್ರಾಂನಲ್ಲಿ ಐಶ್ವರ್ಯಾ ರೈ ಫ್ಯಾನ್‌ ಪೇಜ್‌ವೊಂದರಲ್ಲಿ ಈ ವಿಡಿಯೋ ಮತ್ತೆ ವೈರಲ್‌ ಆಗಿದೆ. ಕಾರ್ಯಕ್ರಮವೊಂದರಲ್ಲಿ ಐಶ್ವರ್ಯಾ ರೈ ಅವರು ಹಳದಿ ಬಣ್ಣದ ಟಾಪ್‌ನಲ್ಲಿದ್ದಾರೆ. ಈ ಸಮಯದಲ್ಲಿ ನಟಿಯು ಮಾಧ್ಯಮದವರನ್ನು ಪ್ರಶ್ನಿಸುತ್ತಾರೆ. "ನಾನು ಹಾಲಿವುಡ್‌ಗೆ ಶಿಫ್ಟ್‌ ಆಗುತ್ತಿದ್ದೇನೆ? ಎಂದು ಹೇಗೆ ಹೇಳಿದಿರಿ" ಎಂದು ಮಾಧ್ಯಮದವರನ್ನು ಪ್ರಶ್ನಿಸುತ್ತಾರೆ. ಈ ಸಮಯದಲ್ಲಿ ಕೊಂಚ ಹೊತ್ತು ಐಶ್ವರ್ಯಾ ರೈ ಕೋಪಗೊಂಡಿರುವುದು ಸ್ಪಷ್ಟವಾಗಿ ಕಾಣಿಸುತ್ತಿದ್ದರು. ಸ್ವಲ್ಪ ಹೊತ್ತಲ್ಲಿ ಇವರು ಕೂಲ್‌ ಆದರು. "ಒಂದು ನಿಮಿಷ, ನಾನು ಯಾವಾಗ ಹಾಗೆ ಹೇಳಿದೆ? ಯಾವ ಸಂದರ್ಶನದಲ್ಲಿ ಹೇಳಿದೆ? ತೋರಿಸಿ ನನಗೆ ಆ ಸಂದರ್ಶನವನ್ನು? ಬಳಿಕ ಮಾತನಾಡೋಣ" ಎಂದು ಐಶ್ವರ್ಯಾ ರೈ ಕೋಪದಿಂದ ಹೇಳುತ್ತಿರುವುದು ವಿಡಿಯೋದಲ್ಲಿದೆ.

ಮಾಧ್ಯಮದ ಮತ್ತೊಬ್ಬರು ಪ್ರತಿನಿಧಿಯಲ್ಲಿ ಮತ್ತೆ ಐಶ್ವರ್ಯಾ ರೈ ಪ್ರಶ್ನಿಸುತ್ತಾರೆ. "ನಿಮಗೆ ಪ್ರಶ್ನೆ ಕೇಳುವುದಿದ್ದರೆ ಕೇಳಿ. ಆದರೆ, ನನ್ನ ಬಗ್ಗೆ ಯಾವುದೇ ಹೇಳಿಕೆಗಳನ್ನು ಹರಿಯಬಿಡಬೇಡಿ. ನಾನು ಮೊದಲು ತಮಿಳು ಸಿನಿಮಾಗಳಲ್ಲಿ ನಟಿಸಿದೆ. ನಂತರ ಹಿಂದಿ ಮತ್ತು ಬಂಗಾಳಿ ಸಿನಿಮಾಗಳಲ್ಲಿ ನಟಿಸಿದೆ. ಈಗ ನಾನು ಕೆಲವು ಇಂಗ್ಲಿಷ್‌ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಆದರೆ, ಇಂಗ್ಲಿಷ್‌ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದರೆ ನಾನು ನಾನು ಬೇರೆ ಕಡೆಗೆ ಶಿಫ್ಟ್‌ ಆಗುತ್ತಿದ್ದೇನೆ ಎಂದರ್ಥವೇ? ಇದು ನಮ್ಮ ಅನುಭವವನ್ನು ಇನ್ನಷ್ಟು ವಿಸ್ತರಿಸಿಕೊಳ್ಳುವ ಪ್ರಕ್ರಿಯೆ" ಎಂದು ಐಶ್ವರ್ಯಾ ರೈ ಹೇಳಿದ್ದಾರೆ.

ಐಶ್ವರ್ಯಾ ರೈ ಕೋಪಗೊಂಡ ವಿಡಿಯೋ ಇಲ್ಲಿದೆ ನೋಡಿ

ವಿಡಿಯೋಗೆ ಅಭಿಮಾನಿಗಳ ಪ್ರತಿಕ್ರಿಯೆ

ಈ ವಿಡಿಯೋಗೆ ಸೋಷಿಯಲ್‌ ಮೀಡಿಯಾ ಬಳಕೆದಾರರು ಬಗೆಬಗೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ನೇರವಾಗಿ ಹೇಳಿರುವ ಐಶ್ವರ್ಯಾ ರೈ ಮಾತಿಗೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಐಶ್ವರ್ಯಾ ರೈಯನ್ನು ಅವರ ಅತ್ತೆ ಜಯಾ ಬಚ್ಚನ್‌ಗೆ ಹೋಲಿಸಿದ್ದಾರೆ. ಜಯಾ ಬಚ್ಚನ್‌ ಅವರು ಮಾಧ್ಯಮಗಳಿಗೆ ಹರಿಹಾಯುವುದರಲ್ಲಿ ಜನಪ್ರಿಯತೆ ಪಡೆದಿದ್ದರು. "ಅಬ್ಬಾ ಇಂದು ಈಕೆ ಜಯಾ ಬಚ್ಚನ್‌ ರೀತಿಯೇ ಸೌಂಡ್‌ ಮಾಡಿದ್ದಾರೆ" ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. "ಒಂದು ಕ್ಷಣ ನನಗೆ ಜಯಾ ಬಚ್ಚನ್‌ ಧ್ವನಿ ಕೇಳಿದಂತೆ ಆಯ್ತು" ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಐಶ್ವರ್ಯಾ ರೈ ಅವರು 1997ರಲ್ಲಿ ತಮಿಳು ರಾಜಕೀಯ ಸಿನಿಮಾ ಇರುವೆರ್‌ ಮೂಲಕ ಸಿನಿಪ್ರಯಾಣ ಆರಂಭಿಸಿದ್ದರು. ಅದೇ ವರ್ಷ ರಾಹುಲ್‌ ರಾವಲಿ ಅವರ ರೊಮ್ಯಾಟಿಂಕ್‌ ಸಿನಿಮಾ ಔರ್‌ ಪ್ಯಾರ್‌ ಹೋ ಗಯಾದಲ್ಲಿ ನಟಿಸಿ ಹಿಂದಿಚಿತ್ರರಂಗಕ್ಕೆ ಪ್ರವೇಶಿಸಿದರು. ಬಂಗಾಳಿಯಲ್ಲಿ ರಿತುಪರ್ಣ ಘೋಷ್‌ರ ಚಕೋರ್‌ ಬಾಲಿ ಸಿನಿಮಾದಲ್ಲಿ ನಟಿಸಿದ್ದಾರೆ. ಹಾಲಿವುಡ್‌ನಲ್ಲಿ 2004ರಲ್ಲಿ ಗುರಿನಂದೆರ್‌ ಚಂದ್‌ ನಿರ್ದೇಶನದ ಬ್ರೈಬ್‌ ಆಂಡ್‌ ಪ್ರಿಜ್ಯೂಡಿಸ್‌ನಲ್ಲಿ ನಟಿಸಿದರು. 2005ರಲ್ಲಿ ಮಾಯೆಡಾ ಬೆರ್ಜೆಸ್‌ನಲ್ಲಿ ನಟಿಸಿದರು. 2007ರಲ್ಲಿ ಡಾಗ್‌ ಲೆಫ್ಟರ್‌ನಲ್ಲಿ ನಟಿಸಿದರು. ಹಿಂದಿಯಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಐಶ್ವರ್ಯಾ ರೈ ಅವರು ಕರ್ನಾಟಕದ ಮಂಗಳೂರು ಮೂಲದವರು.

IPL_Entry_Point