ಕನ್ನಡ ಸುದ್ದಿ  /  ಮನರಂಜನೆ  /  Actress Asin: ಘಜಿನಿ ನಟಿ ಆಸಿನ್‌ ಪತಿ ರಾಹುಲ್‌ ಶರ್ಮಾರ ಬಗ್ಗೆ ಗೊತ್ತೆ? ಅಕ್ಷಯ್‌ ಕುಮಾರ್‌ನ ಗೆಳೆಯ, 1,300 ಕೋಟಿ ರೂ ಸಂಪತ್ತಿಗೆ ಒಡೆಯ

Actress Asin: ಘಜಿನಿ ನಟಿ ಆಸಿನ್‌ ಪತಿ ರಾಹುಲ್‌ ಶರ್ಮಾರ ಬಗ್ಗೆ ಗೊತ್ತೆ? ಅಕ್ಷಯ್‌ ಕುಮಾರ್‌ನ ಗೆಳೆಯ, 1,300 ಕೋಟಿ ರೂ ಸಂಪತ್ತಿಗೆ ಒಡೆಯ

ಘಜಿನಿ, ಹೌಸ್‌ಫುಲ್‌2 ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದ ಬಾಲಿವುಡ್‌ ಮಾಜಿ ನಟಿ ಆಸಿನ್‌ ಪತಿ ರಾಹುಲ್‌ ಶರ್ಮಾ ಖ್ಯಾತ ಉದ್ಯಮಿ. ಮೈಕ್ರೊಮ್ಯಾಕ್ಸ್‌ ಮೊಬೈಲ್‌ ಕಂಪನಿಯ ಸಹ-ಸ್ಥಾಪಕ, ಸಿಇಒ. ಇವರ ಕುರಿತು ಹೆಚ್ಚಿನ ವಿವರ ಇಲ್ಲಿದೆ.

Actress Asin: ಘಜಿನಿ ನಟಿ ಆಸಿನ್‌ ಪತಿ ರಾಹುಲ್‌ ಶರ್ಮಾರ ಬಗ್ಗೆ ಗೊತ್ತೆ?
Actress Asin: ಘಜಿನಿ ನಟಿ ಆಸಿನ್‌ ಪತಿ ರಾಹುಲ್‌ ಶರ್ಮಾರ ಬಗ್ಗೆ ಗೊತ್ತೆ?

ಬೆಂಗಳೂರು: ಬಾಲಿವುಡ್‌ ಮಾಜಿ ನಟಿ ಆಸಿನ್‌ ಬಗ್ಗೆ ಎಲ್ಲರಿಗೂ ಗೊತ್ತು. ಸಲ್ಮಾನ್‌ ಖಾನ್‌ ಜತೆ ರೆಡಿ, ಅಮಿರ್‌ ಖಾನ್‌ ಜತೆ ಘಜಿನಿ, ಅಕ್ಷಯ್‌ ಕುಮಾರ್‌ ಜತೆ ಹೌಸ್‌ಫುಲ್‌ 2 ಮುಂತಾದ ಸಿನಿಮಾಗಳಲ್ಲಿ ನಟಿಸಿದ ಪ್ರತಿಭಾನ್ವಿತ ನಟಿ ಈಗ ಯಾವುದೇ ಚಿತ್ರದಲ್ಲಿ ನಟಿಸುತ್ತಿಲ್ಲ. 2016ರ ಜನವರಿಯಲ್ಲಿ ಉದ್ಯಮಿ ರಾಹುಲ್‌ ಶರ್ಮಾರನ್ನು ವಿವಾಹವಾದ ಬಳಿಕ ಈಕೆ ಸಿನಿಮಾಕ್ಕೆ ಗುಡ್‌ಬೈ ಹೇಳಿದ್ದರು. ರಾಹುಲ್‌ ಶರ್ಮಾ ಸಾಮಾನ್ಯ ವ್ಯಕ್ತಿಯಲ್ಲ. ಮೈಕ್ರೊಮ್ಯಾಕ್ಸ್‌ ಕಂಪನಿಯ ಸಿಇಒ ಮತ್ತು ಸಹ ಸ್ಥಾಪಕ.

ಟ್ರೆಂಡಿಂಗ್​ ಸುದ್ದಿ

ಆಸಿನ್‌ ಪತಿ ರಾಹುಲ್‌ ಶರ್ಮಾ ಪರಿಚಯ

ಈಗಾಗಲೇ ಹೇಳಿದಂತೆ ಮೈಕ್ರೊಮ್ಯಾಕ್ಸ್‌ ಎಂಬ ಭಾರತದ ಪ್ರಮುಖ ಮೊಬೈಲ್‌ ಕಂಪನಿಯ ಸಹ ಸ್ಥಾಪಕ ಮತ್ತು ಸಿಇಒ ಈ ರಾಹುಲ್‌ ಶರ್ಮಾ. ತನ್ನ ಗೆಳೆಯರಾದ ರಾಜೇಶ್‌ ಅಗರ್‌ವಾಲ್‌, ವಿಕಾಸ್‌ ಜೈನ್‌, ಸುಮಿತ್‌ ಅರೋರ ಜತೆ ಸೇರಿ 2000ನೇ ವರ್ಷದಲ್ಲಿ ಮೈಕ್ರೊಮ್ಯಾಕ್ಸ್‌ ಇನ್‌ಫಾರ್ಮೊಟಿಕ್ಸ್‌ ಎಂಬ ಕಂಪನಿಯನ್ನು ಸ್ಥಾಪಿಸಿದ್ದರು. ವರದಿಗಳ ಪ್ರಕಾರ ಇವರು ಕಂಪನಿ ಆರಂಭಿಸಲು ತನ್ನ ತಂದೆಯಿಂದ 3 ಲಕ್ಷ ರೂಪಾಯಿ ಸಾಲ ಪಡೆದಿದ್ದರಂತೆ.

ಆರಂಭದಲ್ಲಿ ಇದು ಮೊಬೈಲ್‌ ಫೋನ್‌ ತಯಾರಿಕ ಕಂಪನಿಯಾಗಿರಲಿಲ್ಲ. ಮೊದಲು ಐಟಿ ಸಾಫ್ಟ್‌ವೇರ್‌ ಕಂಪನಿಯಾಗಿತ್ತು. 2008ರಲ್ಲಿ ಮೊಬೈಲ್‌ ತಯಾರಿಕಾ ಉದ್ಯಮಕ್ಕೆ ಕಾಲಿಟ್ಟಿತ್ತು. 2010ರ ವೇಳೆಗೆ ಭಾರತದ ಜನಪ್ರಿಯ ಮೊಬೈಲ್‌ ಫೋನ್‌ ಕಂಪನಿಯಾಯಿತು. ಹಾಲಿವುಡ್‌ ನಟ ಹಗ್‌ ಜಾಕ್‌ಮೆನ್‌ ಈ ಮೊಬೈಲ್‌ ಕಂಪನಿಯ ರಾಯಭಾರಿಯಾಗಿದ್ದರು.

ವಿವಿಧ ವರದಿಗಳ ಪ್ರಕಾರ ರಾಹುಲ್‌ ಶರ್ಮಾ ಸುಮಾರು 1,300 ಕೋಟಿ ರೂಪಾಯಿ ಸಂಪತ್ತಿನ ಒಡೆಯ. ತುಕಾದೋಜಿ ಮಹಾರಣಿ ನಾಗ್‌ಪುರ್‌ ಯೂನಿವರ್ಸಿಟಿಯಲ್ಲಿ ಮೆಕ್ಯಾನಿಕ್‌ ಎಂಜಿನಿಯರಿಂಗ್‌ ಓದಿದ್ದ ರಾಹುಲ್‌ ಶರ್ಮಾ ಶತಕೋಟ್ಯಧಿಪತಿಯಾಗಿದ ಯಶಸ್ಸಿನ ಕಥೆ ಎಲ್ಲರಿಗೂ ಸ್ಪೂರ್ತಿದಾಯಕ. ಕೆನಡಾದ ಯೂನಿವರ್ಸಿಟಿ ಆಫ್‌ ಸಾಸ್ಕಾಚೆವಾನ್‌ನಲ್ಲಿ ವಾಣಿಜ್ಯ ಪದವಿ ಪಡೆದ ಇವರು ಕೇವಲ ಮೈಕ್ರೊಮ್ಯಾಕ್ಸ್‌ ಮಾತ್ರವಲ್ಲದೆ ರಿವೋಲ್ಟ್‌ ಇಂಟೆಲಿಕಾರ್ಪ್‌ ಎಂಬ ಭಾರತದ ಎಐ ಆಧರಿತ ಎಲೆಕ್ಟ್ರಿಕ್‌ ಬೈಕ್‌ ಕಂಪನಿಯನ್ನೂ ಹೊಂದಿದ್ದಾರೆ.

ಇಂತಹ ಉದ್ಯಮ ಸಾಧಕನ ಹೆಸರು ಹೆಚ್ಚು ಜನಪ್ರಿಯತೆ ಪಡೆದಿದ್ದು ನಟಿ ಆಸಿನ್‌ಳನ್ನು ಮದುವೆಯಾದ ಬಳಿಕ. ಘಜಿನಿಯಂತಹ ಸಿನಿಮಾಗಳಲ್ಲಿ ನಟಿಸಿದ ಈ ಸುಂದರಿಯನ್ನು ಮದುವೆಯಾಗಲು ರಾಹುಲ್‌ ಶರ್ಮಾರಿಗೆ ಸಹಾಯ ಮಾಡಿದ್ದು ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌. ಅಕ್ಷಯ್‌ ಕುಮಾರ್‌ ಮತ್ತು ಆಸಿನ್‌ ಹೌಸ್‌ಫುಲ್‌ 2 ಎಂಬ ಕಾಮಿಡಿ ಸಿನಿಮಾದಲ್ಲಿ ಜತೆಯಾಗಿ ನಟಿಸಿದ್ದರು.

ಈ ನಟಿಯನ್ನು ತನ್ನ ಆತ್ಮೀಯ ಗೆಳೆಯ ರಾಹುಲ್‌ ಶರ್ಮಾರಿಗೆ ಅಕ್ಷಯ್‌ ಕುಮಾರ್‌ ಪರಿಚಯ ಮಾಡಿಸಿದ್ರು. ಈ ಮೂಲಕ ರಾಹುಲ್‌ ಶರ್ಮಾರಿಗೆ ಮದುವೆಯಾಗಲು ಹೆಣ್ಣು ಸೆಟ್‌ ಮಾಡಿಕೊಟ್ಟದ್ದು ಅಕ್ಷಯ್‌ ಕುಮಾರ್‌ ಎನ್ನಲಡ್ಡಿಯಿಲ್ಲ. ಹೀಗೆ ರಾಹುಲ್‌ ಮತ್ತು ಆಸಿನ್‌ ವಿವಾಹವಾದರು. ಇವರಿಗೆ ಆರಿನ್‌ ರಾಯನ್‌ ಎಂಬ ಮಗಳೂ ಇದ್ದಾಳೆ. ಆಸಿನ್‌ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಮಗಳ ಫೋಟೋಗಳನ್ನು ನೋಡಬಹುದು.

ರಾಹುಲ್‌ ಶರ್ಮಾ ಸಾವಿರಾರು ಕೋಟಿಗಳಿಗೆ ಒಡೆಯ. ಹೀಗಾಗಿ ಇವರ ಜೀವನಶೈಲಿಯೂ ರಾಜವೈಭೋಗದಿಂದ ಕೂಡಿದೆ. ದೆಹಲಿಯಲ್ಲಿ ಫಾರ್ಮ್‌ಹೌಸ್‌ ಹೊಂದಿದ್ದಾರೆ. ಇವರಲ್ಲಿ ದುಬಾರಿ ಕಾರುಗಳ ಕಲೆಕ್ಷನ್‌ ಇವೆ. ಬೆಂಟ್ಲಿ ಸೂಪರ್‌ಸ್ಪೋರ್ಟ್‌ ಲಿಮಿಟೆಡ್‌ ಎಡಿಷನ್‌, ಬಿಎಂಡಬ್ಲ್ಯು ಎಕ್ಸ್‌6, ಮರ್ಸಿಡಿಸ್‌ ಬೆಂಝ್‌ 450, ರೋಲ್ಸ್‌ ರಾಯ್ಸ್‌ ಘೋಸ್ಟ್‌ ಸೀರಿಸ್‌ 2 ಕಾರುಗಳನ್ನು ಹೊಂದಿದ್ದಾರೆ.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

ಟಿ20 ವರ್ಲ್ಡ್‌ಕಪ್ 2024