ಕನ್ನಡ ಸುದ್ದಿ  /  ಮನರಂಜನೆ  /  Deepika Padukone: ಬೇಬಿ ಬಂಪ್‌ ಫೋಟೋಗಳಲ್ಲಿ ಸಖತ್‌ ಕ್ಯೂಟಾಗಿ ಕಂಡ್ರು ದೀಪಿಕಾ ಪಡುಕೋಣೆ; ಕಪ್ಪು ಬಣ್ಣದ ಈ ಉಡುಗೆ ತುಂಬಾ ದುಬಾರಿ ಕಣ್ರೀ

Deepika Padukone: ಬೇಬಿ ಬಂಪ್‌ ಫೋಟೋಗಳಲ್ಲಿ ಸಖತ್‌ ಕ್ಯೂಟಾಗಿ ಕಂಡ್ರು ದೀಪಿಕಾ ಪಡುಕೋಣೆ; ಕಪ್ಪು ಬಣ್ಣದ ಈ ಉಡುಗೆ ತುಂಬಾ ದುಬಾರಿ ಕಣ್ರೀ

Deepika Padukone Baby Bump: ಕಲ್ಕಿ 2898 ಎಡಿ ಚಿತ್ರದ ಪ್ರಿ ರಿಲೀಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ದೀಪಿಕಾ ಪಡುಕೋಣೆ ಅವರ ಫ್ಯಾಷನ್‌ ಲುಕ್‌ಗಳು ಸೆಲೆಬ್ರಿಟಿ ಬೇಬಿ ಬಂಪ್‌ ಫೋಟೋಗಳಾಗಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಅಂದಹಾಗೆ, ಈ ಕಾರ್ಯಕ್ರಮದಲ್ಲಿ ಇವರು ತೊಟ್ಟ ಈ ಬಾಡಿಕಾರ್ನ್‌ ಉಡುಗೆ ದರ ಸುಮಾರು ಒಂದೂವರೆ ಲಕ್ಷ ರೂಪಾಯಿ ಆಸುಪಾಸಿನಲ್ಲಿದೆ.

ಬೇಬಿ ಬಂಪ್‌ ಫೋಟೋಗಳಲ್ಲಿ ಸಖತ್‌ ಕ್ಯೂಟಾಗಿ ಕಂಡ್ರು ದೀಪಿಕಾ ಪಡುಕೋಣೆ
ಬೇಬಿ ಬಂಪ್‌ ಫೋಟೋಗಳಲ್ಲಿ ಸಖತ್‌ ಕ್ಯೂಟಾಗಿ ಕಂಡ್ರು ದೀಪಿಕಾ ಪಡುಕೋಣೆ (HT Photos/Varinder Chawla, Instagram/@deepikapadukone)

ಬೆಂಗಳೂರು: ದೀಪಿಕಾ ಪಡುಕೋಣೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇಂದು (ಬುಧವಾರ) ದೀಪಿಕಾ ಪಡುಕೋಣೆ  ಕಲ್ಕಿ 2898 ಎಡಿ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ಸಂದರ್ಭದ ಅವರ ಹೊಸ ಬೇಬಿ ಬಂಪ್‌ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಸದ್ಯ ಗರ್ಭಿಣಿ ದೀಪಿಕಾ ಪಡುಕೋಣೆ ಕಲ್ಕಿ 2898 ಎಡಿ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಈ ಐತಿಹಾಸಿಕ ಆಕ್ಷನ್-ಡ್ರಾಮಾ ಚಿತ್ರದಲ್ಲಿ ದೀಪಿಕಾ ಪಡುಕೋನೆ, ಪ್ರಭಾಸ್, ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದಿಶಾ ಪಟಾನಿ ಮತ್ತು ಬ್ರಹ್ಮಾನಂದಂ ಸೇರಿದಂತೆ ಪ್ರಮುಖ ನಟರು ನಟಿಸಿದ್ದಾರೆ. ಈ ಚಿತ್ರದ ಪ್ರೀ-ರಿಲೀಸ್ ಈವೆಂಟ್ ಇಂದು ಮುಂಬೈನಲ್ಲಿ ನಡೆದಿದೆ.

ದೀಪಿಕಾ ಪಡುಕೋಣೆ ಬೇಬಿ ಬಂಪ್‌ ಫೋಟೋಗಳು ವೈರಲ್‌

ರಣವೀರ್‌ ಸಿಂಗ್‌ ಪತ್ನಿ ದೀಪಿಕಾ ಗರ್ಭಿಣಿ. ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಶುಭ ಸುದ್ದಿಯನ್ನು ಹಂಚಿಕೊಂಡಿದ್ದರು. ಇಂದಿನ ಕಾರ್ಯಕ್ರಮಕ್ಕೆ ಅಂದದ ಉಡುಗೆ ತೊಟ್ಟು ದೀಪಿಕಾ ಆಗಮಿಸಿದ್ದರು. ಈ ಮೂಲಕ ಮೆಟರ್ನಿಟಿ ಫ್ಯಾಷನ್‌ಗೆ ಕಲೆ ತಂದರು. ಈ ಉಡುಗೆ ಸ್ಲಿಮ್‌ ಫಿಟ್‌ ಆಗಿದ್ದು, ನೆಕ್‌ಲೈನ್‌ನಲ್ಲಿ ಬೆಳ್ಳಿಯ ಕಲ್ಲಿನ ಅಲಂಕಾರವನ್ನೂ ಹೊಂದಿದೆ. ದೀಪಿಕಾ ಪಡುಕೋಣೆಯ ಬೇಬಿ ಬಂಪ್‌ ಫೋಟೋಗಳು ಇಲ್ಲಿವೆ ನೋಡಿ.

ಟ್ರೆಂಡಿಂಗ್​ ಸುದ್ದಿ

ದೀಪಿಕಾ ಪಡುಕೋಣೆ ಉಡುಗೆಯ ಬೆಲೆ ಎಷ್ಟು?

ಲೋವೆಯ ಅಧಿಕೃತ ವೆಬ್‌ಸೈಟ್‌ ಪ್ರಕಾರ ಈ ಅನಗ್ರಾಮ್ ಪೆಬಲ್ ಉಡುಗೆಯ ಬೆಲೆ 1,14,000 ರೂಪಾಯಿ ಇದೆ. ದೀಪಿಕಾ ಪಡುಕೋಣೆ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಈ ಫೋಟೋಗಳು ವೈರಲ್‌ ಆಗಿವೆ. ಸಾಕಷ್ಟು ಜನರು ತುಂಬಾ ಪ್ರೀತಿಯಿಂದ ಕಾಮೆಂಟ್‌ ಮಾಡಿದ್ದಾರೆ. "ತುಂಬಾ ಸುಂದರವಾಗಿದೆ" ಎಂದು ಜಾಕ್ವೆಲೀನ್‌ ಫೆರ್ನಾಂಡಿಸ್‌ ಕಾಮೆಂಟ್‌ ಮಾಡಿದ್ದಾರೆ. ಅದ್ಭುತ ಎಂದು ಶಿಬಾನಿ ಅಖ್ತರ್‌ ಕಾಮೆಂಟ್‌ ಮಾಡಿದ್ದಾರೆ.

ಲೋವೆ ಅಧಿಕೃತ ವೆಬ್‌ಸೈಟ್‌ನಲ್ಲಿ ದೀಪಿಕಾ ಪಡುಕೋಣೆ ಧರಿಸಿದ ಉಡುಗೆಯ ದರ 114,000 ರೂಪಾಯಿ ಇದೆ.
ಲೋವೆ ಅಧಿಕೃತ ವೆಬ್‌ಸೈಟ್‌ನಲ್ಲಿ ದೀಪಿಕಾ ಪಡುಕೋಣೆ ಧರಿಸಿದ ಉಡುಗೆಯ ದರ 114,000 ರೂಪಾಯಿ ಇದೆ. (https://www.loewe.com/)

2018ರಲ್ಲಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ವಿವಾಹವಾದರು. ಇವರಿಬ್ಬರಿಗೆ 2013 ರ ಗೋಲಿಯೋನ್ ಕಿ ರಾಸ್ಲೀಲಾ ರಾಮ್-ಲೀಲಾ ಚಿತ್ರದ ಸೆಟ್‌ನಲ್ಲಿ ಲವ್‌ ಆಗಿತ್ತು. ದೀಪಿಕಾ ಮತ್ತು ರಣವೀರ್ 2013ರಲ್ಲಿ ರಾಮ್ ಲೀಲಾ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಆ ಸಂದರ್ಭದಲ್ಲಿ ಅವರು ಲವ್‌ ಪ್ರಪೋಸ್‌ ಮಾಡಿದ್ದರು. ಸುಮಾರು ಐದು ವರ್ಷ ಡೇಟಿಂಗ್‌ ಮಾಡಿದರು. ಗೋಲಿಯೊನ್‌ ಕಿ ರಾಸ್‌ಲೀಲಾ ರಾಮ್‌ಲೀಲಾ ಸಿನಿಮಾದ ಬಳಿಕ ಬಾಜಿರಾವ್ ಮಸ್ತಾನಿ, 83 ಮತ್ತು ಫಾತ್ಮಾವತ್ ಚಿತ್ರಗಳಲ್ಲಿ ಜತೆಯಾಗಿ ನಟಿಸಿದರು. ಪರದೆಯಲ್ಲಿ ಪ್ರೇಮಿಗಳಾಗಿದ್ದ ಇವರು ಹೊರಗೂ ಪ್ರೇಮಿಗಳಾದರು. ಇವರ ಲವ್‌ ಸ್ಟೋರಿ ಕುರಿತು ವದಂತಿಗಳು ಶುರುವಾದವು.

2015ರಲ್ಲಿ, ದೀಪಿಕಾ ಮತ್ತು ರಣವೀರ್ ರಹಸ್ಯವಾಗಿ ಉಂಗುರಗಳನ್ನು ವಿನಿಮಯ ಮಾಡಿಕೊಂಡರು ಮತ್ತು ನಿಶ್ಚಿತಾರ್ಥ ಮಾಡಿಕೊಂಡರು. ದೀಪಿಕಾ ಪಡುಕೋಣೆ ಮತ್ತು ರಣವೀರ್ 2018 ರಲ್ಲಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾದರು. ಕರ್ನಾಟಕ ಮೂಲದ ಸೊಸೆ ರಣವೀರ್‌ ಮನೆ ಸೇರಿದರು. ದೀಪಿಕಾ ಮತ್ತು ರಣವೀರ್ ಫೆಬ್ರವರಿ 29 ರಂದು ಇನ್ಸ್ಟಾಗ್ರಾಮ್‌ನಲ್ಲಿ ಮಗುವಿನ ಬೂಟುಗಳು, ಬಟ್ಟೆಗಳು, ಬಲೂನ್‌ಗಳು ಮತ್ತು ಹೃದಯಗಳನ್ನು ಒಳಗೊಂಡ ಸೂಪರ್ ಆರಾಧ್ಯ ಚಿತ್ರದೊಂದಿಗೆ ತಮ್ಮ ಗರ್ಭಧಾರಣೆಯನ್ನು ಘೋಷಿಸಿದ್ದರು.