ಕನ್ನಡ ಸುದ್ದಿ  /  ಮನರಂಜನೆ  /  Deepika Padukone: ಕಲ್ಕಿ 2898 ಎಡಿ ಕ್ಲೈಮ್ಯಾಕ್ಸ್‌ ಶೂಟಿಂಗ್‌ ವೇಳೆ ದೀಪಿಕಾ ಪಡುಕೋಣೆ ಗರ್ಭಿಣಿ, ಸೆಟ್‌ನಲ್ಲೇ ರಣವೀರ್‌ ಸಿಂಗ್‌ ಕಾಳಜಿ

Deepika Padukone: ಕಲ್ಕಿ 2898 ಎಡಿ ಕ್ಲೈಮ್ಯಾಕ್ಸ್‌ ಶೂಟಿಂಗ್‌ ವೇಳೆ ದೀಪಿಕಾ ಪಡುಕೋಣೆ ಗರ್ಭಿಣಿ, ಸೆಟ್‌ನಲ್ಲೇ ರಣವೀರ್‌ ಸಿಂಗ್‌ ಕಾಳಜಿ

Kalki 2898 AD ಸಿನಿಮಾದ ಕ್ಲೈಮ್ಯಾಕ್ಸ್‌ ದೃಶ್ಯವನ್ನು ಹೇಗೆ ಶೂಟಿಂಗ್‌ ಮಾಡಲಾಯಿತು? ದೈಹಿಕವಾಗಿ ಯಾವೆಲ್ಲ ಸವಾಲುಗಳಿದ್ದವು? ಈ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ನಿಜ ಜೀವನದಲ್ಲೂ ಗರ್ಭಿಣಿಯಾಗಿದ್ರು ಇತ್ಯಾದಿ ಅಂಶಗಳನ್ನು ಸಂದರ್ಶನವೊಂದರಲ್ಲಿ ಶಾಶ್ವತ ಚಟರ್ಜಿ ವಿವರಿಸಿದ್ದಾರೆ.

Deepika Padukone: ಕಲ್ಕಿ 2898 ಎಡಿ ಕ್ಲೈಮ್ಯಾಕ್ಸ್‌ ಶೂಟಿಂಗ್‌ ವೇಳೆ ದೀಪಿಕಾ ಪಡುಕೋಣೆ ಗರ್ಭಿಣಿ
Deepika Padukone: ಕಲ್ಕಿ 2898 ಎಡಿ ಕ್ಲೈಮ್ಯಾಕ್ಸ್‌ ಶೂಟಿಂಗ್‌ ವೇಳೆ ದೀಪಿಕಾ ಪಡುಕೋಣೆ ಗರ್ಭಿಣಿ

ಬೆಂಗಳೂರು: ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 ಎಡಿ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಎಸ್ಯು-ಎಂ 80 ಅಕಾ ಸುಮತಿ ಎಂಬ ಗರ್ಭಿಣಿ ಲ್ಯಾಬ್‌ ಗರ್ಲ್‌ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಸಿನಿಮಾದ ಸಹನಟ ಶಾಶ್ವತ ಚಟರ್ಜಿ ಅವರು ನ್ಯೂಸ್‌18ಗೆ ನೀಡಿದ ಸಂದರ್ಭದಲ್ಲಿ ಕ್ಲೈಮ್ಯಾಕ್ಸ್‌ ಶೂಟಿಂಗ್‌ನ ಸವಾಲಿನ ಕುರಿತು ಹೇಳಿದ್ದರು. ಆ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ತನ್ನ ನಿಜಜೀವನದಲ್ಲಿ ಗರ್ಭಿಣಿಯಾಗಿದ್ದರು ಎಂಬ ಅಂಶವನ್ನು ಬಹಿರಂಗಪಡಿಸಿದ್ದಾರೆ.

ಕಲ್ಕಿ 2898 ಎಡಿ ಕ್ಲೈಮ್ಯಾಕ್ಸ್‌ ಸವಾಲು

ನೀವು ಕಲ್ಕಿ ಸಿನಿಮಾ ನೋಡಿದ್ದರೆ ರೋಚಕ ಕ್ಲೈಮ್ಯಾಕ್ಸ್‌ ದೃಶ್ಯ ಮರೆಯಲಾರಿರಿ. ಕಮಾಂಡರ್‌ ಮಾನಸ್‌ ಅವರು ಅಮಿತಾಬ್‌ ಬಚ್ಚನ್‌ ನಟಿಸಿರುವ ಅಶ್ವತ್ಥಾಮ ಪಾತ್ರದೊಂದಿಗೆ ಫೈಟಿಂಗ್‌ ಮಾಡುತ್ತ ಇರುತ್ತಾನೆ. ಅಶ್ವತ್ಥಾಮನನ್ನು ಲಾಕ್‌ ಮಾಡಿ ಸುಮತಿಯನ್ನು ಕೂದಲಿನಿಂದ ಎಳೆದುಕೊಂಡು ಹೋಗುತ್ತಾನೆ. ಈ ದೃಶ್ಯವನ್ನು ಶೂಟಿಂಗ್‌ ಮಾಡುವ ವೇಳೆ ದೀಪಿಕಾ ಪಡುಕೋಣೆ ಗರ್ಭಿಣಿಯಾಗಿದ್ದರು. ಚಿತ್ರೀಕರಣದ ಸಂದರ್ಭದಲ್ಲಿ ಆಕೆಯ ಪತಿ ರಣವೀರ್‌ ಸಿಂಗ್‌ ಕೂಡ ಶೂಟಿಂಗ್‌ ಸೆಟ್‌ನಲ್ಲಿದ್ದು ಪತ್ನಿಯ ಬಗ್ಗೆ ಕಾಳಜಿ ವಹಿಸಿದ್ದರು" ಎಂದು ಶಾಶ್ವತ ಚಟರ್ಜಿ ಹೇಳಿದ್ದಾರೆ.

"ದೀಪಿಕಾ ಯಾವಾಗಲೂ ನಗುತ್ತಾರೆ. ಚಿತ್ರದಲ್ಲಿ ನಾನು ಅವರ ಕೂದಲನ್ನು ಹಿಡಿದು ಎಳೆಯುವ ದೃಶ್ಯವಿದೆ. ಚಿತ್ರೀಕರಣದ ಕೊನೆಯ ಹಂತದ ಭಾಗವಾಗಿತ್ತು. ಆ ಸಮಯದಲ್ಲಿ ದೀಪಿಕಾ ಗರ್ಭಿಣಿಯಾಗಿದ್ದ ಕಾರಣ ಮುಂಬೈನಲ್ಲಿ ಶೂಟಿಂಗ್‌ ಮಾಡಲಾಯತು. ದೃಶ್ಯದಲ್ಲಿ ಸಾಕಷ್ಟು ಫೈಟಿಂಗ್‌ ಇತ್ತು. ದೈಹಿಕ ಹೊಡೆದಾಟ ಅಗತ್ಯವಿತ್ತು. ಆ ಸಂದರ್ಭದಲ್ಲಿ ನಾನು ರಣವೀರ್‌ ಸಿಂಗ್‌ಗೆ "ಚಿಂತಿಸಬೇಡಿ. ಹೆಚ್ಚು ದೈಹಿಕವಾದ ಸವಾಲಿನ ದೃಶ್ಯಗಳಿಗೆ ಬಾಡಿ ಡಬಲ್‌ ಬಳಸಲಾಗುತ್ತದೆʼ ಎಂದು ಹೇಳಿದೆ. ಅವರು ವಿನಮ್ರವಾಗಿ ಮುಗುಳ್ನಗುತ್ತ ʼನನಗೆ ಗೊತ್ತು ದಾದಾʼ ಎಂದು ಹೇಳಿದ್ದರು" ಎಂದು ಶಾಶ್ವತ ಚಟರ್ಜಿ ನೆನಪಿಸಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ರಣವೀರ್‌ ಸಿಂಗ್‌ ಮತ್ತು ದೀಪಿಕಾ ಪಡುಕೋಣೆ ನವೆಂಬರ್‌ 14, 2018ರಂದು ವಿವಾಹವಾದರು. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್‌ ಈ ವರ್ಷದ ಸೆಪ್ಟೆಂಬರ್ ನಲ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ದೀಪಿಕಾ ಗರ್ಭಿಣಿ ಎಂದು ಅನೇಕರು ಊಹಿಸಿದ ಬಳಿಕ ದಂಪತಿಫೆಬ್ರವರಿಯಲ್ಲಿ ಗರ್ಭಧಾರಣೆಯನ್ನು ಘೋಷಿಸಿದರು. ಮಗುವಿನ ಬಟ್ಟೆಗಳು, ಬೇಬಿ ಶೂಗಳು ಮತ್ತು ಬಲೂನ್‌ಗಳ ಮುದ್ದಾದ ವಿನ್ಯಾಸಗಳೊಂದಿಗೆ "ಸೆಪ್ಟೆಂಬರ್ 2024" ಎಂದು ಪೋಸ್ಟ್‌ನಲ್ಲಿ ಬರೆಯಲಾಗಿತ್ತು.

ಸುಮಾರು 6 ವರ್ಷಗಳ ಕಾಲ ಡೇಟಿಂಗ್‌ ಮಾಡಿದ ಬಳಿಕ ಇಟಲಿಯ ಲೇಕ್‌ ಕಾಮೊದಲ್ಲಿ ಇವರಿಬ್ಬರು ವಿವಾಹವಾದರು. ಇವರಿಬ್ಬರು ಮೊದಲ ಬಾರಿಗೆ ಸಂಜಯ್‌ ಲೀಲಾ ಬನ್ಸಾಲಿಯವರ ರೋಮಾಂಟಿಕ್‌ ಸಿನಿಮಾ ಗೊಲಿಯಾನ್‌ ಕಿ ರಾಸ್‌ಲೀಲ್‌ ರಾಮ್‌ ಲೀಲಾ ಸಿನಿಮಾ ಸೆಟ್‌ನಲ್ಲಿ ಭೇಟಿಯಾದರು. ಇದಾದ ಬಳಿಕ ಇವರು ಬಾಜಿರಾವ್‌ ಮಸ್ತಾನಿ ಮತ್ತು ಪದ್ಮಾವತ್‌ ಸಿನಿಮಾದಲ್ಲಿ ಜತೆಯಾಗಿ ನಟಿಸಿದರು.

ಪ್ರಭಾಸ್, ಅಮಿತಾಭ್ ಮತ್ತು ಕಮಲ್ ಹಾಸನ್ ನಟಿಸಿದ ಕಲ್ಕಿ 2898 ಕ್ರಿ.ಶ ನಂತರ, ದೀಪಿಕಾ ಶೀಘ್ರದಲ್ಲೇ ರೋಹಿತ್ ಶೆಟ್ಟಿ ಅವರ ಸಿಂಗಂ ಅಗೇನ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.