‘ನಾನೀಗ 3ನೇ ಹಂತದ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ!’ ಬಾಲಿವುಡ್ ನಟಿ ಹಿನಾ ಖಾನ್ ಬಹಿರಂಗ ಪೋಸ್ಟ್
ಹಿಂದಿ ಕಿರುತೆರೆ ಸೇರಿ ಬಾಲಿವುಡ್‌ನಲ್ಲಿಯೂ ಗುರುತಿಸಿಕೊಂಡಿರುವ ನಟಿ ಹಿನಾ ಖಾನ್ ಇದೀಗ ಅಚ್ಚರಿಯ ವಿಚಾರವೊಂದನ್ನು ಬಹಿರಂಗಪಡಿಸಿ, ಅವರ ಫ್ಯಾನ್ಸ್‌ಗೆ ಶಾಕ್ ನೀಡಿದ್ದಾರೆ.
![‘ನಾನೀಗ 3ನೇ ಹಂತದ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ!’ ಬಾಲಿವುಡ್ ನಟಿಯ ಬಹಿರಂಗ ಪೋಸ್ಟ್ ‘ನಾನೀಗ 3ನೇ ಹಂತದ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ!’ ಬಾಲಿವುಡ್ ನಟಿಯ ಬಹಿರಂಗ ಪೋಸ್ಟ್](https://images.hindustantimes.com/kannada/img/2024/06/28/550x309/Hinaa_1719566407919_1719566416483.jpg)
Hina Khan Diagnosed With Stage 3 Breast Cancer: ಹಿಂದಿ ಕಿರುತೆರೆಯಲ್ಲಿ ಗುರುತಿಸಿಕೊಂಡ ಬಾಲಿವುಡ್ ನಟಿ ಹಿನಾ ಖಾನ್, ಅಚ್ಚರಿಯ ಪೋಸ್ಟ್ ಹಂಚಿಕೊಂಡು ಅವರ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಇತ್ತೀಚಿನ ಕಳೆದ ಕೆಲವು ದಿನಗಳಿಂದ, ನಟಿ ಹಿನಾ ಖಾನ್ ಅವರಿಗೆ ಕ್ಯಾನ್ಸರ್ ಇರುವ ವಿಚಾರ ಸದ್ದು ಮಾಡಿತ್ತು. ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ ಅಧಿಕೃತ ಮಾಹಿತಿ ಮಾತ್ರ ಹೊರಬಿದ್ದಿರಲಿಲ್ಲ. ಇದೀಗ ಈ ವಿಷಯವನ್ನು ಸ್ವತಃ ನಟಿಯೇ ಖಚಿತಪಡಿಸಿದ್ದಾರೆ.
ಈ ಸಂಬಂಧ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡ ಹಿನಾ ಖಾನ್, "ನಾನು ಸ್ತನ ಕ್ಯಾನ್ಸರ್‌ನ ಮೂರನೇ ಹಂತದಲ್ಲಿದ್ದೇನೆ ಎಂಬ ವದಂತಿಗಳ ಎಲ್ಲೆಡೆ ಹರಿದಾಡಿತ್ತು. ಅದು ನಿಜವೂ ಹೌದು. ಆ ಬಗ್ಗೆಯೇ ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ' ಎಂದು ಹಿನಾ ಖಾನ್ ಬರೆದಿದ್ದಾರೆ.
ಹಿನಾ ಖಾನ್ ಪೋಸ್ಟ್ ಹೀಗಿದೆ..
'ಎಲ್ಲರಿಗೂ ನನ್ನ ನಮಸ್ಕಾರ. ನನ್ನನ್ನು ಪ್ರೀತಿಸುವ ಮತ್ತು ಕಾಳಜಿವಹಿಸುವ ಎಲ್ಲರೊಂದಿಗೆ ಕೆಲವು ಪ್ರಮುಖ ವಿಚಾರಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ನನಗೆ ಮೂರನೇ ಹಂತದ ಸ್ತನ ಕ್ಯಾನ್ಸರ್ ಇದೆ. ಇದರ ಹೊರತಾಗಿಯೂ, ನಾನು ಚೆನ್ನಾಗಿದ್ದೇನೆ ಎಂದು ಎಲ್ಲರಿಗೂ ಹೇಳಲು ಬಯಸುತ್ತೇನೆ. ನಾನು ಗಟ್ಟಿಯಾಗಿದ್ದಾನೆ, ದೃಢವಾಗಿದ್ದೇನೆ. ಈ ಕ್ಯಾನ್ಸರ್ ರೋಗವನ್ನು ಜಯಿಸಲು ಸಂಪೂರ್ಣವಾಗಿ ಬದ್ಧನಾಗಿದ್ದೇನೆ. ನನ್ನ ಚಿಕಿತ್ಸೆಯು ಪ್ರಾರಂಭವಾಗಿದೆ. ಇದರಿಂದ ಚೇತರಿಸಿಕೊಂಡು ಹೊರಬರಲು ಸಾಧ್ಯವಿರುವ ಎಲ್ಲವನ್ನೂ ಮಾಡಲು ನಾನು ಸಿದ್ಧಳಿದ್ದೇನೆ" ಎಂದಿದ್ದಾರೆ.
ಚೇತರಿಸಿಕೊಳ್ಳುವ ವಿಶ್ವಾಸವಿದೆ...
"ಈ ಸಮಯದಲ್ಲಿ ನಾನು ನಿಮ್ಮಿಂದ ಸ್ವಲ್ಪ ಗೌರವ ಮತ್ತು ಗೌಪ್ಯತೆಯನ್ನು ಬಯಸುತ್ತೇನೆ. ನಿಮ್ಮ ಪ್ರೀತಿ ಮತ್ತು ಪ್ರಾರ್ಥನೆ ನನ್ನ ಮೇಲಿರಲಿ. ನಿಮ್ಮ ವೈಯಕ್ತಿಕ ಅನುಭವಗಳು, ಕಥೆಗಳು ಮತ್ತು ನಿಮ್ಮ ಸಲಹೆಗಳು ಈ ಪ್ರಯಾಣದಲ್ಲಿ ನನಗೆ ಬಹಳ ಮುಖ್ಯ. ನಾನು ನನ್ನ ಕುಟುಂಬ ಮತ್ತು ಆಪ್ತರೊಂದಿಗೆ ಸಕಾರಾತ್ಮಕವಾಗಿ ಕಾಲ ಕಳೆಯುತ್ತಿದ್ದೇನೆ. ದೇವರ ದಯೆಯಿಂದ, ನಾನು ಈ ಸವಾಲನ್ನು ಜಯಿಸುತ್ತೇನೆ ಮತ್ತು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತೇನೆ ಎಂಬ ವಿಶ್ವಾಸವಿದೆ. ದಯವಿಟ್ಟು ನಿಮ್ಮ ಪ್ರಾರ್ಥನೆ, ಆಶೀರ್ವಾದ ಮತ್ತು ಪ್ರೀತಿ ನನ್ ಮೇಲಿರಲಿ" ಎಂದಿದ್ದಾರೆ.
ಜನರು ಹಿನಾ ಖಾನ್‌ಗಾಗಿ ಪ್ರಾರ್ಥಿಸಿದರು
ಹಿನಾ ಖಾನ್ ಈ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆ, ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಅವರಿಗೆ ಧೈರ್ಯ ತುಂಬಿದ್ದಾರೆ. ಜತೆಗೆ ಸಿನಿಮಾ ಲೋಕದ ಆಪ್ತರಾದ ಹೆಲ್ಲಿ ಶಾ, ಜೇ ಭಾನುಶಾಲಿ, ಅಂಕಿತಾ ಲೋಖಂಡೆ, ಲತಾ ಸಬರ್ವಾಲ್, ಪ್ರಿಯಾಲ್ ಗೌರ್, ಆಶ್ಕಾ ಗೊರಾಡಿಯಾ, ರೋಹನ್ ಮೆಹ್ರಾ, ಶ್ರದ್ಧಾ ಆರ್ಯ, ಗೌಹರ್ ಖಾನ್, ಅದಾ ಖಾನ್, ಅಮೀರ್ ಅಲಿ ಸೇರಿ ಮತ್ತು ಇತರರು ನಟಿಗೆ ಧೈರ್ಯ ತುಂಬಿದರು. ಶೀಘ್ರವಾಗಿ ಚೇತರಿಸಿಕೊಳ್ಳಿ ಎಂದು ಹಾರೈಸಿದರು.
![Whats_app_banner Whats_app_banner](https://kannada.hindustantimes.com/static-content/1y/wBanner.png)