Kriti Kharbanda: ನಮ್ಮ ಹಳದಿ ಕಾರ್ಯಕ್ರಮ ತುಸು ವಿಭಿನ್ನ; ಪತಿ ಪುಲ್ಕಿತ್‌ ಜತೆ ಮುಲ್ತಾನಿ ಮಣ್ಣಿನಲ್ಲಿ ಮಿಂದ ಮಾಸ್ತಿಗುಡಿ ನಟಿ ಕೃತಿ ಕರಬಂಧ
ಕನ್ನಡ ಸುದ್ದಿ  /  ಮನರಂಜನೆ  /  Kriti Kharbanda: ನಮ್ಮ ಹಳದಿ ಕಾರ್ಯಕ್ರಮ ತುಸು ವಿಭಿನ್ನ; ಪತಿ ಪುಲ್ಕಿತ್‌ ಜತೆ ಮುಲ್ತಾನಿ ಮಣ್ಣಿನಲ್ಲಿ ಮಿಂದ ಮಾಸ್ತಿಗುಡಿ ನಟಿ ಕೃತಿ ಕರಬಂಧ

Kriti Kharbanda: ನಮ್ಮ ಹಳದಿ ಕಾರ್ಯಕ್ರಮ ತುಸು ವಿಭಿನ್ನ; ಪತಿ ಪುಲ್ಕಿತ್‌ ಜತೆ ಮುಲ್ತಾನಿ ಮಣ್ಣಿನಲ್ಲಿ ಮಿಂದ ಮಾಸ್ತಿಗುಡಿ ನಟಿ ಕೃತಿ ಕರಬಂಧ

Kriti Kharbanda Marriage: ಕನ್ನಡದಲ್ಲಿ ಗೂಗ್ಲಿ, ಮಾಸ್ತಿ ಗುಡಿ, ದಳಪತಿ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ನಟಿ ಕೃತಿ ಕರಬಂಧ ಅವರು ಇತ್ತೀಚೆಗೆ ಪುಲ್ಕಿತ್‌ ಸಮರ್ಥ್‌ ಜತೆ ವಿವಾಹವಾಗಿದ್ದರು. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಹಳದಿ ಕಾರ್ಯಕ್ರಮದ ಫೋಟೋ ಹಂಚಿಕೊಂಡಿದ್ದಾರೆ

ಕೃತಿ ಕರಬಂಧ ಮದುವೆ
ಕೃತಿ ಕರಬಂಧ ಮದುವೆ

ಬೆಂಗಳೂರು: ಬಾಲಿವುಡ್‌ ನಟಿ ಕೃತಿ ಕರಬಂಧ ಮತ್ತು ಪುಲ್ಕಿತ್‌ ಸಮರ್ಥ್‌ ವಿವಾಹ ಕಾರ್ಯಕ್ರಮ ಇತ್ತೀಚೆಗೆ ಜರುಗಿತ್ತು. ಗೂಗ್ಲಿ, ಮಾಸ್ತಿ ಗುಡಿ, ದಳಪತಿ ಮುಂತಾದ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಕೃತಿ ಕರಬಂಧ ಇದೀಗ ವೈವಾಹಿಕ ಕಾರ್ಯಕ್ರಮದ ಭಾಗವಾಗಿ ನಡೆದ ಹಳದಿ ಕಾರ್ಯಕ್ರಮ (ಅಲ್ಲಿ ಮುಲ್ತಾನಿ ಮಿಟ್ಟಿ)ದ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮುಲ್ತಾನಿ ಮಣ್ಣಿಗೆ ತುಸು ಅರಸಿನ ಬೆರೆಸಿ ವಧುವರರ ಮುಖ ಮತ್ತು ಮೈಗೆ ಹಚ್ಚಲಾಗುತ್ತದೆ. ಮುಲ್ತಾನಿ ಮಣ್ಣಿನ ಹಳದಿ ಕಾರ್ಯಕ್ರಮದ ಬಳಿಕ ಜಳಕ ಮಾಡಲಾಗುತ್ತದೆ.

ಕೃತಿ ಕರಬಂಧ ಏನಂದ್ರು?

ನಟಿ ಕೃತಿ ಕರಬಂಧ ಅವರು ಇನ್‌ಸ್ಟಾಗ್ರಾಂನಲ್ಲಿ ಮುಲ್ತಾನಿ ಮಿಟ್ಟಿ ಕಾರ್ಯಕ್ರಮದ ಫೋಟೋ ಹಂಚಿಕೊಂಡಿದ್ದಾರೆ. "ನಮ್ಮ ಹಳದಿ ಕಾರ್ಯಕ್ರಮ ಸ್ವಲ್ಪ ಬೇರೆ ರೀತಿ ಇತ್ತು. ಮುಲ್ತಾನಿ ಮಣ್ಣಿಗೆ ತುಸು ಹಳದಿ ಹಾಕಿ ಈ ಕಾರ್ಯಕ್ರಮ ಮಾಡಲಾಗಿದೆ. ಇದು ವಿಶೇಷವಾಗಿ ಪುಲ್ಕಿತ್‌ ಅವರು ಮಾಡಿರುವ ಕಾರ್ಯಕ್ರಮ. ಈ ಮೂಲಕ ವಧು ವರರ ತ್ವಚೆ ಹೊಳಪು ಹೆಚ್ಚುವಂತೆ ಮಾಡಿದ್ದಾರೆ" ಎಂದು ಕೃತಿ ಕರಬಂಧ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ನನ್ನನ್ನು ಈ ಕಾರ್ಯಕ್ರಮದ ಬಳಿಕ ಕಾಪಾಡಿದವರಿಗೆ ಧನ್ಯವಾದ. ಪುಲ್ಕಿತ್‌ನನ್ನು ಕೊಳಕ್ಕೆ ಹೊತ್ತು ಹಾಕಿದ್ದಾರೆ ಎಂದು ಕೃತಿ ಬರೆದಿದ್ದಾರೆ.

ಕೃತಿ ಕರಬಂಧ ಮತ್ತು ಪುಲ್ಕಿತ್‌ ಸಮರ್ಥ್‌ ಶುಭವಿವಾಹ

ಇದೇ ಮಾರ್ಚ್‌ 15ರಂದು ಕೃತಿ ಕರಬಂಧ ಮತ್ತು ಪುಲ್ಕಿತ್‌ ಸಮರ್ಥ್‌ ವಿವಾಹ ಸಮಾರಂಭ ನಡೆದಿತ್ತು. ಗುರುಗ್ರಾಮದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಬಾಲಿವುಡ್‌ ನಟ ಪುಲ್ಕಿತ್‌ ಮತ್ತು ಕೃತಿ ಅವರ ಹತ್ತಿರದ ಸಂಬಂಧಿಗಳು, ಆಪ್ತರು ಭಾಗವಹಿಸಿದ್ದರು. ಮಾರ್ಚ್‌ 16ರಂದು ಇವರು ತಮ್ಮ ವಿವಾಹದ ಕುರಿತು ಅಧಿಕೃತವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡಿದ್ದರು.

ಕೃತಿ ಕರಬಂಧ ಸಿನಿಮಾಗಳು

ಕೃತಿ ಕರಬಂಧ ಅಂದಾಗ ಬಹುತೇಕರಿಗೆ ಇವರು ಕನ್ನಡ ನಟಿ ಎಂದೆನಿಸಬಹುದು. ಆದರೆ, ಇವರು ಮೊದಲ ಬಾರಿಗೆ ತೆಲುಗಿನ ಪ್ರಗತಿ ಸಿನಿಮಾದಲ್ಲಿ ನಟಿಸಿದ್ದರು. 2010ರಲ್ಲಿ ಚಿರು ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸಿದರು. ದೆಹಲಿ ಮೂಲದ ಇವರು ಅಲ ಮೊದಲಿಂಡಿ, ಟೀನ್‌ ಮಾರ್‌, ಮಿಸ್ಟರ್‌ ನೋಕಯ್ಯ ಚಿತ್ರಗಳಲ್ಲಿ ನಟಿಸಿದ್ದರು. 2012ರಲ್ಲಿ ಪ್ರೇಮ್‌ ಅಡ್ಡಾ, ಗಲಾಟೆ ಎಂಬ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.

2013ರಲ್ಲಿ ಒಂಗಲೆ ಗೀತಾ, ಓಮ್‌ 3ಡಿ ಎಂಬ ತೆಲುಗು ಸಿನಿಮಾಗಳಲ್ಲಿ, ಗೂಗ್ಲಿ ಎಂಬ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅಂದರೆ, ಕೆಜಿಎಫ್‌ ನಟ ಯಶ್‌ ಜತೆಗೆ ಗೂಗ್ಲಿಯಲ್ಲಿ ಡಾಕ್ಟರ್‌ ಸ್ವಾತಿಯಾಗಿ ಕಾಣಿಸಿಕೊಂಡಿದ್ದರು. ಗೂಗ್ಲಿ ಸಕ್ಸಸ್‌ ಬಳಿಕ ತಿರುಪತಿ ಎಕ್ಸ್‌ಪ್ರೆಸ್‌, ಸೂಪರ್‌ ರಂಗ, ಬೆಳ್ಳಿ, ಮಿಂಚಾಗಿ ನೀ ಬರಲು, ಬ್ರೂಸ್‌ ಲೀ ದಿ ಫೈಟರ್‌ ಮುಂತಾದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.

ಸ್ಯಾಂಡಲ್‌ವುಡ್‌ನಲ್ಲಿ ಪಡೆದ ಯಶಸ್ಸಿನಿಂದ ಇವರಿಗೆ ರಾಜ್‌: ರಿಬೂಟ್‌ ಎಂಬ ಹಿಂದಿ ಸಿನಿಮಾದಲ್ಲಿ ಅವಕಾಶ ದೊರಕಿತ್ತು. ಬ್ರೂಸ್‌ಲಿ ಎಂಬ ತಮಿಳು ಸಿನಿಮಾದಲ್ಲೂ ನಟಿಸಿದ್ದಾರೆ. ಇದಾದ ಬಳಿಕ ಕನ್ನಡದ ಮಾಸ್ತಿ ಗುಡಿ ಸಿನಿಮಾದಲ್ಲಿ ನಟಿಸಿದ್ದರು. ಮಾಸ್ತಿ ಗುಡಿ ಸಿನಿಮಾ ಎಂದಾಗ ನೀರಲ್ಲಿ ಮುಳುಗಿ ಮೃತಪಟ್ಟ ಕಲಾವಿದರ ಘಟನೆ ನೆನಪಾಗಬಹುದು. ಗೆಸ್ಟ್‌ ಇನ್‌ ಲಂಡನ್‌, ಶಾದಿ ಮೇನ್‌ ಝರೂರ್‌ ಆನಾ, ಕರ್ವಾನ್‌ ಮುಂತಾದ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

ದಳಪತಿ ಎಂಬ ಕನ್ನಡ ಸಿನಿಮಾದಲ್ಲಿ 2018ರಲ್ಲಿ ಕಾಣಿಸಿಕೊಂಡರು. ಬಳಿಕ ತೈಶ್‌, ಹೌಸ್‌ಫುಲ್‌ 4 ಸೇರಿದಂತೆ ಹಲವು ಬಾಲಿವುಡ್‌ ಸಿನಿಮಾಗಳಲ್ಲಿ ಅವಕಾಶ ಪಡೆದರು. ರಿಸ್ಕಿ ರೋಮಿಯೊ ಎನ್ನುವುದು ಇವರ ಮುಂಬರುವ ಸಿನಿಮಾ. ಇದೀಗ ನಟ ಪುಲ್ಕಿತ್‌ ಸಮರ್ಥ್‌ ಜತೆ ವಿವಾಹವಾಗಿದ್ದಾರೆ ಗೂಗ್ಲಿ ನಟಿ.

Whats_app_banner