Malaika Arora: ‘ವರ್ಜಿನಿಟಿ ಯಾವಾಗ ಕಳೆದುಕೊಂಡೆ?’ ಪುತ್ರ ಅರ್ಹಾನ್ ಜತೆಗೆ ಮಲೈಕಾ ಅರೋರಾ ಬೋಲ್ಡ್ ಸಂಭಾಷಣೆ
ಬಾಲಿವುಡ್ ಬ್ಯೂಟಿ ಮಲೈಕಾ ಅರೋರಾ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಬೋಲ್ಡ್ ಫೋಟೋಗಳ ಜತೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಇವರು, ಈಗ ವರ್ಜಿನಿಟಿ ಬಗ್ಗೆ ಮಗ ಅರ್ಹಾನ್ ಬಳಿ ಪ್ರಶ್ನೆ ಮಾಡಿದ್ದಾರೆ.
Malaika Arora: ಬಾಲಿವುಡ್ ನಟಿ ಮಲೈಕಾ ಅರೋರಾ ನಿತ್ಯ ಒಂದಲ್ಲ ಒಂದು ವಿಚಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಾರೆ. ಸಿನಿಮಾ ನಟನೆಯಿಂದ ದೂರವೇ ಉಳಿದರೂ, ಸಿನಿಮಾ ನಂಟಿನ ಹಿನ್ನೆಲೆಯಿಂದ ಬಂದ ಕಾರಣಕ್ಕೆ, ಚರ್ಚೆಗೆ ತುಪ್ಪ ಸುರಿಯುತ್ತಿರುತ್ತಾರೆ. ಹಾಕುವ ಬಟ್ಟೆಯಿಂದಲೋ, ಫಿಟ್‌ನೆಸ್ ವಿಚಾರಕ್ಕೋ, ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಸಹವಾಸದಿಂದಲೋ, ಬೋಲ್ಡ್ ಫೋಟೋ ವಿಡಿಯೋಗಳಿಂದಲೋ.. ಒಟ್ಟಿನಲ್ಲಿ ಸುದ್ದಿಯ ಮುನ್ನೆಲೆಗೆ ಬಂದು ಕೂತಿರುತ್ತಾರೆ.
ಈ ನಡುವೆ ವೈಯಕ್ತಿಕ ಬದುಕಿನ ಬಗ್ಗೆಯೂ ನೇರನೇರಾ ಮಾತನಾಡುವ ಮಲೈಕಾ, ಎದೆ ಎತ್ತರ ಬೆಳೆದ ಮಗನ ಜತೆಗೂ ಅಷ್ಟೇ ಓಪನ್ ಆಗಿದ್ದಾರೆ. ಈ ನಡುವೆ ಪಾಡ್‌ಕಾಸ್ಟ್ ಶೋವೊಂದರಲ್ಲಿ ತಮ್ಮ ಮಗನಿಗೆ ಲೈಂಗಿಕತೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಪ್ರತಿಯಾಗಿ ಮಗನಿಂದಲೂ ಒಂದು ಕೋರಿಕೆ ಹೊರಬಿದ್ದಿದೆ. ಈ ತಾಯಿ ಮಗನ ಈ ಮಾತುಕತೆಯ ಕಿರು ಪ್ರೋಮೋ ಹೊರಬಿದ್ದಿದ್ದೇ ತಡ ಬಗೆಬಗೆ ರೀತಿಯಲ್ಲಿ ಕಾಮೆಂಟ್‌ಗಳೂ ಸಂದಾಯವಾಗಿವೆ. ಒಂದು ಹೆಜ್ಜೆ ಮುಂದೆ ಹೋದ ನೆಟ್ಟಿಗರು ಮಲೈಕಾ ಅರೋರಾ ಅವರನ್ನು ಟೀಕಿಸುವ ಕೆಲಸ ಮುಂದುವರಿಸಿದ್ದಾರೆ.
ಮಲೈಕಾ ಪ್ರಶ್ನೆಗೆ ಮುಜುಗರಕ್ಕೀಡಾದ ಅರ್ಹಾನ್
ದಂಬ್ ಬಿರಿಯಾನಿ ಅನ್ನೋ ಪಾಡ್‌ಕಾಸ್ಟ್ ಕಾರ್ಯಕ್ರಮದಲ್ಲಿ ಮಲೈಕಾ ಅರೋರಾ ಮತ್ತು ಅವರ ಪುತ್ರ ಅರ್ಹಾನ್ ಭಾಗವಹಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಟ್ರುಥ್ ಅಥವಾ ಸ್ಪೈಸ್ ಎಂಬ ಗೇಮ್ ಆಡಿದ್ದಾರೆ. ನಿಜಹೇಳಬೇಕು ಇಲ್ಲದಿದ್ದರೆ, ಖಾರ ತಿನ್ನಬೇಕು. ಇದರಲ್ಲಿ ಮೊದಲಿಗೆ ಮಗನಿಗೆ ವರ್ಜಿನಿಟಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ. "ಯಾವಾಗ ನೀನು ನಿನ್ನ ವರ್ಜಿನಿಟಿ ಕಳೆದುಕೊಂಡೆ?" ಎಂದು ಪ್ರಶ್ನೆ ಮಾಡಿದ್ದಾರೆ. ಅಮ್ಮನ ಈ ಪ್ರಶ್ನೆಗೆ ಮಾತನಾಡದೇ, ವ್ಹಾವ್ ಎಂದು ಮೌನಕ್ಕೆ ಜಾರಿದ್ದಾರೆ ಅರ್ಹಾನ್.
ಅಮ್ಮ ಮಲೈಕಾಗೆ ಮಗನ ಪ್ರಶ್ನೆ
ಸರಿಯಾದ ಮತ್ತು ಪ್ರಾಮಾಣಿಕ ಉತ್ತರ ಕೊಡು ಎಂದು ಮಗನಿಗೆ ತಾಕೀತು ಮಾಡಿದ್ದಾರೆ. ಆದರೆ, ಅರ್ಹಾನ್ ಏನು ಉತ್ತರ ನೀಡಿರಬಹುದು ಎಂಬುದಕ್ಕೆ ಏಪಿಸೋಡ್ ಟೆಲಿಕಾಸ್ಟ್ ಆದಮೇಲೆಯೇ ಗೊತ್ತಾಗಲಿದೆ. ಇನ್ನು ಅಮ್ಮನ ಪ್ರಶ್ನೆ ಬಳಿಕ, ಅದೇ ಅಮ್ಮನಿಗೆ ಅರ್ಹಾನ್ ಪ್ರಶ್ನೆ ಮಾಡಿದ್ದಾರೆ. "ನೀವು ಜನರೊಂದಿಗೆ ಬೆರೆಯಲು ಇಷ್ಟಪಡುತ್ತೀರಾ?" ಎಂದಿದ್ದಾನೆ. ಮುಂದುವರಿದು "ನನ್ನ ಮುಂದಿನ ಪ್ರಶ್ನೆ, ನೀವು ಯಾವಾಗ ಮದುವೆಯಾಗುತ್ತೀರಿ?" ಎಂದಿದ್ದಾನೆ. ಹೀಗೆ ತಾಯಿ ಮತ್ತು ಮಗನ ಸಂಭಾಷಣೆಯ ಕಿರು ಪ್ರೋಮೋ ಝಲಕ್ ಸದ್ಯ ವೈರಲ್ ಆಗಿದೆ.
ನೆಟ್ಟಿಗರಿಂದ ಟೀಕೆಗಳ ಸುರಿಮಳೆ
ಮಗನಿಗೆ ವರ್ಜಿನಿಟಿ ಬಗ್ಗೆ ಹೇಳುವ, ಅಮ್ಮನ ಮದುವೆ ಮಾಡಿಸುವ ಮಗನ ಮಾತುಗಳು ನೆಟ್ಟಿಗರನ್ನು ಕೆರಳಿಸಿವೆ. ಈ ಬಗ್ಗೆ ಅದೇ ಪೋಸ್ಟ್‌ಗೆ ಬಗೆಬಗೆ ಕಾಮೆಂಟ್‌ಗಳ ಮೂಲಕ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ. "ಅದ್ಭುತವಾದ ಮೌಲ್ಯಗಳ ಪ್ರದರ್ಶನ" ಎಂದು ಒಬ್ಬ ಬಳಕೆದಾರ ವ್ಯಂಗ್ಯ ಮಾಡಿದರೆ, "ಪಾಶ್ಚಿಮಾತ್ಯರ ಅನುಕರಣೆ" ಎಂದು ಮತ್ತೋರ್ವ ಕಾಮೆಂಟ್ ಮಾಡಿದ್ದಾನೆ. "ಪಾಪ ಅರ್ಬಾಜ್ ಖಾನ್ ಜತೆಗಿನ ಡಿವೋರ್ಸ್‌ಗೆ ಅವನದೇನೂ ತಪ್ಪಿಲ್ಲ. ಶೇಮ್‌ಲೆಸ್ ಮಹಿಳೆ" ಎಂದಿದ್ದಾರೆ. "ಭಾರತ ಪ್ರಗತಿಯತ್ತ ಸಾಗುತ್ತಿದೆ. ಅದು ಮೆಚ್ಚುವ ವಿಚಾರ. ಆದರೆ, ಇಂಥ ಅಸಭ್ಯತನದಿಂದ ನಮ್ಮ ಸಂಸ್ಕೃತಿ ಹಾಳಾಗುತ್ತಿದೆ" ಎಂದೂ ಕೆಲವರರು ಕಾಮೆಂಟ್ ಮಾಡುತ್ತಿದ್ದಾರೆ.
ಸೋಹೆಲ್, ಅರ್ಬಾಜ್ ಖಾನ್ ಭಾಗಿ
ಈ ಸಂಚಿಕೆಗೂ ಮೊದಲು, ಇದೇ ಶೋನಲ್ಲಿ ಸೊಹೈಲ್ ಮತ್ತು ಅರ್ಬಾಜ್ ಸಹ ಭಾಗವಹಿಸಿದ್ದರು. ಸಲ್ಮಾನ್ ಖಾನ್ ಬಗ್ಗೆಯೂ ಇಬ್ಬರೂ ಸಹೋದರರು ಮಾತನಾಡಿದರು. ಸದ್ಯ ನಾವು ನಮ್ಮ ನಮ್ಮ ಕೆಲಸಗಳಲ್ಲಿ ಬಿಜಿಯಾಗರುವುದರಿಂದ ಭೇಟಿಯಾಗದೇ ಇರಬಹುದು. ಆದರೆ, ನನಗೆ ಏನೋ ಸಮಸ್ಯೆ ಆಗಿದೆ ಎಂದರೆ ಅಲ್ಲಿ ಸಲ್ಮಾನ್ ಖಾನ್ ಇದ್ದೇ ಇರ್ತಾರೆ. ನಮ್ಮ ನಡುವಿನ ಸಂಬಂಧ ಹಾಗೇ ಇದೆ ಎಂದು ಅರ್ಬಾಜ್, ಅಣ್ಣ ಸಲ್ಮಾನ್ ಬಗ್ಗೆ ಹೇಳಿಕೊಂಡಿದ್ದರು.