Malaika Arora: ಬಹುಮಹಡಿ ಕಟ್ಟಡದಿಂದ ಜಿಗಿದು ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಅನಿಲ್‌ ಅರೋರಾ ಆತ್ಮಹತ್ಯೆ-bollywood news actress malaika arora s father anil arora dies by suicide malaika arora father no more mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Malaika Arora: ಬಹುಮಹಡಿ ಕಟ್ಟಡದಿಂದ ಜಿಗಿದು ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಅನಿಲ್‌ ಅರೋರಾ ಆತ್ಮಹತ್ಯೆ

Malaika Arora: ಬಹುಮಹಡಿ ಕಟ್ಟಡದಿಂದ ಜಿಗಿದು ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಅನಿಲ್‌ ಅರೋರಾ ಆತ್ಮಹತ್ಯೆ

Malaika Arora Father Anil Arora Death: ನಟಿ ಮಲೈಕಾ ಅರೋರಾ ಕುಟುಂಬದಿಂದ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಮಲೈಕಾ ಅರೋರಾ ಅವರ ತಂದೆ ಅನಿಲ್‌ ಅರೋರಾ ನಿಧನರಾಗಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಬಹುಮಹಡಿ ಮನೆಯ ಆರನೇ ಪ್ಲೋರ್‌ನಿಂದ ಕೆಳಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 ನಟಿ ಮಲೈಕಾ ಅರೋರಾ ತಂದೆ ಅನಿಲ್‌ ಅರೋರಾ ಆತ್ಮಹತ್ಯೆ
ನಟಿ ಮಲೈಕಾ ಅರೋರಾ ತಂದೆ ಅನಿಲ್‌ ಅರೋರಾ ಆತ್ಮಹತ್ಯೆ

Malaika Arora Father Suicide: ಬಾಲಿವುಡ್‌ ನಟಿ ಮಲೈಕಾ ಅರೋರಾ ಕುಟುಂಬದಿಂದ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಮಲೈಕಾ ಅರೋರಾ ಅವರ ತಂದೆ ಅನಿಲ್‌ ಅರೋರಾ ನಿಧನರಾಗಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಬಹುಮಹಡಿ ಮನೆಯ ಆರನೇ ಪ್ಲೋರ್‌ನಿಂದ ಕೆಳಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಬಾಂದ್ರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮತ್ತು ಅಪರಾಧ ವಿಭಾಗದ ತಂಡ ಘಟನಾ ಸ್ಥಳಕ್ಕೆ ಧಾವಿಸಿ ಸಾವಿನ ಬಗ್ಗೆ ತನಿಖೆ ನಡೆಸುತ್ತಿದೆ. ಇಂದು (ಸೆ. 11) ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಅನಾರೋಗ್ಯ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಅನಿಲ್‌ ಅರೋರಾ ಅವರಿಗೆ ಮಕ್ಕಳಾದ ಮಲೈಕಾ ಅರೋರಾ, ಅಮೃತಾ ಅರೋರಾ ಮತ್ತು ಪತ್ನಿಯಿದ್ದಾರೆ. ಈ ಘಟನೆ ನಡೆದ ವೇಳೆ ನಟಿ ಮಲೈಕಾ ಅರೋರಾ ಮುಂಬೈನಲ್ಲಿ ಇರಲಿಲ್ಲ. ಅಪ್ಪನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ, ಶೂಟಿಂಗ್‌ ನಿಮಿತ್ತ ಪುಣೆಗೆ ತೆರಳಿದ್ದ ಮಲೈಕಾ ಮುಂಬೈಗೆ ಮರಳಿದ್ದಾರೆ. ಸದ್ಯ ಅನಿಲ್‌ ಅರೋರಾ ಅವರ ಮೃತದೇಹವನ್ನು ಮುಂಬೈನ ಬಾಬಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕವೇ ಸಾವಿನ ಅಸಲಿಯತ್ತು ತಿಳಿಯಲಿದೆ.

ದಂಪತಿ ನಡುವೆ ವಿಚ್ಛೇದನ

ಮಲೈಕಾ ಅರೋರಾ ಅವರ ತಂದೆ ಅನಿಲ್ ಅವರು ಪಂಜಾಬ್‌ನ ಫಾಜಿಲ್ಕಾ ಜಿಲ್ಲೆಯವರು. ಪಂಜಾಬಿ ಕುಟುಂಬಕ್ಕೆ ಸೇರಿದ ಅನಿಲ್ ಅರೋರಾ, ನೇವಿಯಲ್ಲಿ ಅಧಿಕಾರಿಯೂ ಆಗಿದ್ದರು. ಕೇರಳ ಮೂಲದ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಜಾಯ್ಸ್ ಪಾಲಿಕಾರ್ಪ್ ಅವರನ್ನು ವರಿಸಿದ್ದ ಅನಿಲ್‌ ಅರೋರಾ ದಂಪತಿಗೆ ಮಲೈಕಾ ಅರೋರಾ ಮತ್ತು ಅಮೃತಾ ಅರೋರಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅಂದಹಾಗೆ ಮಲೈಕಾ 11 ವರ್ಷದವರಿದ್ದಾಗಲೇ ಅಪ್ಪ ಅಮ್ಮ ಇಬ್ಬರೂ ವಿಚ್ಛೇದನ ಪಡೆದು ದೂರವಾಗಿದ್ದರು.

ನಿಗೂಢವಾಗಿ ಅನಿಲ್ ಆತ್ಮಹತ್ಯೆ

ಇದೀಗ ಮಲೈಕಾ ಅರೋರಾ ತಂದೆ ಅನಿಲ್ ಆತ್ಮಹತ್ಯೆ ಮಾಡಿಕೊಂಡಿದ್ದು ಏಕೆ ಎಂಬ ಪ್ರಶ್ನೆ ಮೂಡಿದೆ. ಸಾವಿಗೆ ಅನಾರೋಗ್ಯವೇ ಕಾರಣವಾ ಅಥವಾ ಬೇರೆ ಏನಾದರೂ ಸಮಸ್ಯೆ ಇತ್ತಾ ಎಂಬ ಬಗ್ಗೆ ಇನ್ನಷ್ಟೇ ವೈದ್ಯರ ರಿಪೋರ್ಟ್‌ ಮತ್ತು  ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ. ಈ ನಡುವೆ ಮಲೈಕಾ ಅರೋರಾ ಅವರ ಮಾಜಿ ಪತಿ ಅರ್ಬಾಜ್‌ ಖಾನ್‌ ಸಹ ಮಲೈಕಾ ಕುಟುಂಬದ ಜತೆ ನಿಂತಿದ್ದಾರೆ.

ಹೌಸ್‌ಫುಲ್‌ 5 ಚಿತ್ರದಲ್ಲಿ ಮಲೈಕಾ

ಮಲೈಕಾ ಅರೋರಾ ಕೊನೆಯದಾಗಿ ಆಯುಷ್ಮಾನ್ ಖುರಾನಾ ಮತ್ತು ಜೈದೀಪ್ ಅಹ್ಲಾವತ್ ಅವರ 'ಆ್ಯಕ್ಷನ್ ಹೀರೋ' ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ 'ಆಪ್ ಜೈಸಾ ಕೋಯಿ' ಹಾಡಿನಲ್ಲಿ ಕಾಣಿಸಿಕೊಂಡರು. ಅದಾದ ಬಳಿಕ 'ತೇರಾ ಹಿ ಖಯಾಲ್' ಎಂಬ ಮ್ಯೂಸಿಕ್ ವಿಡಿಯೋದಲ್ಲೂ ಮಲೈಕಾ ಕುಣಿದಿದ್ದಾರೆ. ಬಹುತಾರಾಗಣದ 'ಹೌಸ್‌ಫುಲ್ 5' ಚಿತ್ರದಲ್ಲಿ ನಟಿಸಲಿದ್ದಾರೆ ಎಂದೂ ಹೇಳಲಾಗುತ್ತಿದೆ.

mysore-dasara_Entry_Point