ಕನ್ನಡ ಸುದ್ದಿ  /  Entertainment  /  Bollywood News Actress Model Rakhi Sawant Alleged Husband Adil Khan Durrani Contact Me Through Phone From Jail Rsm

Rakhi Sawant: ಜೈಲಿನಿಂದಲೇ ನನಗೆ ಕರೆ ಮಾಡಿ ಐ ಲವ್‌ ಯೂ ಹೇಳುತ್ತಾನೆ; ಪತಿ ಆದಿಲ್‌ ಖಾನ್‌ ದುರ್ರಾನಿ ವಿರುದ್ಧ ರಾಖಿ ಸಾವಂತ್‌ ಹೊಸ ಆರೋಪ

ಕೆಲವೊಮ್ಮೆ ಐ ಲವ್‌ ಯೂ ಹೇಳುತ್ತಾನೆ. ನಿನ್ನನ್ನು ಪ್ರೀತಿಸುತ್ತಿದ್ದೇನೆ, ನನ್ನನ್ನ ದಯವಿಟ್ಟು ಇಲ್ಲಿಂದ ಬಿಡಿಸು ಎಂದು ಕಣ್ಣೀರಿಡುತ್ತಿದ್ದಾನೆ. ಆದರೆ ನಾನು ಅವನನ್ನು ಎಂದಿಗೂ ಕ್ಷಮಿಸುವುದಿಲ್ಲ, ಅವನನ್ನು ಹತ್ತಿರ ಸೇರಿಸಿಕೊಳ್ಳುವುದಿಲ್ಲ ಎಂದು ರಾಖಿ ಸಾವಂತ್‌ ಮಾಧ್ಯಮಗಳ ಮುಂದೆ ಹೇಳಿದ್ದಾರೆ.

ಆದಿಲ್‌ ಖಾನ್‌ ವಿರುದ್ಧ ರಾಖಿ ಸಾವಂತ್‌ ಹೋಸ ಆರೋಪ
ಆದಿಲ್‌ ಖಾನ್‌ ವಿರುದ್ಧ ರಾಖಿ ಸಾವಂತ್‌ ಹೋಸ ಆರೋಪ

ಬಾಲಿವುಡ್‌ ನಟಿ ರಾಖಿ ಸಾವಂತ್‌ ಮಾತ್ರ ತಾವು ಸದಾ ಸುದ್ದಿಯಲ್ಲಿರಲು ಬಯಸುತ್ತಾರೆ. ಏನಾದರೊಂದು ವಿಚಾರವನ್ನು ಸೃಷ್ಟಿಸುತ್ತಲೇ ಇರುತ್ತಾರೆ. ಮೈಸೂರು ಹುಡುಗ ಆದಿಲ್‌ನನ್ನು ಮದುವೆ ಆಗಿ ಮೋಸ ಹೋದ ರಾಖಿ ಸಾವಂತ್‌ ಈಗ ಆದಿಲ್‌ ಖಾನ್‌ ದುರ್ರಾನಿ ವಿರುದ್ಧ ಹೊಸ ಆರೋಪ ಮಾಡಿದ್ದಾರೆ.

ಆದಿಲ್‌ ಖಾನ್‌ ಸದ್ಯಕ್ಕೆ ಜೈಲಿನಲ್ಲಿದ್ದಾನೆ. ರಾಖಿ ಸಾವಂತ್‌ ಮೇಲೆ ಹಲ್ಲೆ, ಹಣ ದುರುಪಯೋಗ ಮೈಸೂರು ಯುವತಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಿಲ್‌ ಖಾನ್‌ ಜೈಲು ಸೇರಿದ್ದಾರೆ. ಇತ್ತ ರಾಖಿ ಸಾವಂತ್‌ ಪತಿಯಿಂದ ದೂರಾದ ನಂತರ ಮತ್ತೆ ಮೊದಲಿನಂತೆ ಮಾಧ್ಯಮಗಳಿಗೆ ಫೋಟೋ, ವಿಡಿಯೋಗೆ ಪೋಸ್‌ ನೀಡುತ್ತಾ ಆದಿಲ್‌ ಖಾನ್‌ ಮೇಲೆ ಹೊಸ ಹೊಸ ಆಪಾದನೆ ಮಾಡುತ್ತಲೇ ಇದ್ಧಾರೆ. ಆದಿಲ್‌ ಖಾನ್‌ ನನಗೆ ಜೈಲಿನಿಂದಲೇ ಕರೆ ಮಾಡುತ್ತಿದ್ದಾನೆ. ಜೈಲಿನಿಂದಲೇ ಫೋನ್‌ ಮಾಡಿ ನನ್ನನ್ನು ಕ್ಷಮಿಸುವಂತೆ ಮನವಿ ಮಾಡುತ್ತಿದ್ದಾನೆ ಎಂದು ರಾಖಿ ಸಾವಂತ್‌ ಆರೋಪ ಮಾಡುತ್ತಿದ್ದಾರೆ.

ಆದಿಲ್‌ ಖಾನ್‌ ನನಗೆ ಪ್ರತಿದಿನ ಜೈಲಿನಿಂದ ಫೋನ್‌ ಮಾಡುತ್ತಿದ್ದಾನೆ. ನನ್ನನ್ನು ಕೊಲ್ಲುವಂತೆ ಬೆದರಿಸುತ್ತಿದ್ದಾನೆ. ನನ್ನ ಹತ್ಯೆ ಮಾಡುವಂತೆ ಜೈಲಿನಲ್ಲಿದ್ದುಕೊಂಡೇ ಕಾಂಟ್ರಾಕ್ಟ್‌ ನೀಡಿದ್ದಾನೆ. ಇನ್ನೂ ಕೆಲವೊಮ್ಮೆ ಐ ಲವ್‌ ಯೂ ಹೇಳುತ್ತಾನೆ. ನಿನ್ನನ್ನು ಪ್ರೀತಿಸುತ್ತಿದ್ದೇನೆ, ನನ್ನನ್ನ ದಯವಿಟ್ಟು ಇಲ್ಲಿಂದ ಬಿಡಿಸು ಎಂದು ಕಣ್ಣೀರಿಡುತ್ತಿದ್ದಾನೆ. ಆದರೆ ನಾನು ಅವನನ್ನು ಎಂದಿಗೂ ಕ್ಷಮಿಸುವುದಿಲ್ಲ, ಅವನನ್ನು ಹತ್ತಿರ ಸೇರಿಸಿಕೊಳ್ಳುವುದಿಲ್ಲ ಎಂದು ರಾಖಿ ಸಾವಂತ್‌ ಮಾಧ್ಯಮಗಳ ಮುಂದೆ ಹೇಳಿದ್ದಾರೆ.

ಮೈಸೂರು ಮೂಲದ ಆದಿಲ್‌ ಖಾನ್‌ ದುರ್ರಾನಿಯನ್ನು ರಾಖಿ ಸಾವಂತ್‌ ಪ್ರೀತಿಸಿ ಮದುವೆ ಆದರು. ಯಾರಿಗೂ ತಿಳಿಯದಂತೆ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ಆದಿಲ್‌ ಖಾನ್‌ನನ್ನು ಮದುವೆ ಆಗಿದ್ದರು. ಮದುವೆ ಆಗಿರುವ ವಿಚಾರ ಯಾರಿಗೂ ಹೇಳದಂತೆ ಆದಿಲ್‌ ಖಾನ್‌ ನನಗೆ ಬೆದರಿಕೆ ಹಾಕಿದ್ದಾಗಿ ರಾಖಿ ಸಾವಂತ್‌ ಆರೋಪಿಸಿದ್ದರು. ಅಲ್ಲದೆ ಆದಿಲ್‌ಗೆ ಬೇರೆ ಹುಡುಗಿ ಜೊತೆ ಅಫೇರ್‌ ಇದೆ. ಬೇರೆ ಹುಡುಗಿಯನ್ನು ಕಣ್ಣೆತ್ತಿ ನೋಡುವುದಿಲ್ಲ ಎಂದು ಕುರಾನ್‌ ಮೇಲೆ ಪ್ರಾಮಿಸ್‌ ಮಾಡಿದರೂ ಆದಿಲ್‌ ತನ್ನ ಬುದ್ಧಿ ಬಿಟ್ಟಿಲ್ಲ, ದಯವಿಟ್ಟು ಆದಿಲ್‌ನನ್ನು ಯಾರೂ ಇಂಟರ್‌ವ್ಯೂ ಮಾಡಬೇಡಿ. ಏಕೆಂದರೆ ಅವನು ನನ್ನನ್ನು ಬಳಸಿಕೊಂಡು ಸಿನಿಮಾ ಇಂಡಸ್ಟ್ರಿಗೆ ಬರಲು ಆಸೆ ಪಡುತ್ತಿದ್ದಾನೆ. ಎಂದು ರಾಖಿ ಸಾವಂತ್‌ ಆರೋಪಿಸಿದ್ದರು. ಇದೇ ವರ್ಷ ಫೆಬ್ರವರಿ 7 ರಂದು ಪೊಲೀಸರು ಆದಿಲ್‌ ಖಾನ್‌ ಬಂಧಿಸಿದ್ದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ