Poonam Pandey: ಬಿಟೌನ್‌ ಬೆಡಗಿ ಪೂನಂ ಪಾಂಡೆ ಸ್ಪೆಷಲ್‌ ಕೇಕ್‌ ಐಸ್‌ಕ್ರಿಂ ರೆಸಿಪಿ; ಬಾಯಲ್ಲಿ ನೀರೂರುತ್ತಿದೆ ಅಂದ್ರು ಫ್ಯಾನ್ಸ್‌
ಕನ್ನಡ ಸುದ್ದಿ  /  ಮನರಂಜನೆ  /  Poonam Pandey: ಬಿಟೌನ್‌ ಬೆಡಗಿ ಪೂನಂ ಪಾಂಡೆ ಸ್ಪೆಷಲ್‌ ಕೇಕ್‌ ಐಸ್‌ಕ್ರಿಂ ರೆಸಿಪಿ; ಬಾಯಲ್ಲಿ ನೀರೂರುತ್ತಿದೆ ಅಂದ್ರು ಫ್ಯಾನ್ಸ್‌

Poonam Pandey: ಬಿಟೌನ್‌ ಬೆಡಗಿ ಪೂನಂ ಪಾಂಡೆ ಸ್ಪೆಷಲ್‌ ಕೇಕ್‌ ಐಸ್‌ಕ್ರಿಂ ರೆಸಿಪಿ; ಬಾಯಲ್ಲಿ ನೀರೂರುತ್ತಿದೆ ಅಂದ್ರು ಫ್ಯಾನ್ಸ್‌

Poonam Pandey: ಬಾಲಿವುಡ್‌ ನಟಿ ಪೂನಂ ಪಾಂಡೆ ಇನ್‌ಸ್ಟಾಗ್ರಾಂನಲ್ಲಿ ಇತ್ತೀಚೆಗೆ ಹಂಚಿಕೊಂಡ ಐಸ್‌ಕ್ರೀಂ ಕೇಕ್‌ ರೆಸಿಪಿ ವೈರಲ್‌ ಆಗಿದೆ. ಬರಿಮೈಯಲ್ಲಿ ಏಫ್ರನ್‌ ಧರಿಸಿ ಕುಕ್ಕಿಂಗ್‌ ವಿಡಿಯೋ ಹಂಚಿಕೊಂಡಿದ್ದಾರೆ. ಈಕೆ ಕೇಕ್‌ ಐಸ್‌ಕ್ರಿಂ ತಯಾರಿಸುವುದನ್ನು ನೋಡಿ "ಬಾಯಲ್ಲಿ ನೀರೂರುತ್ತಿದೆ" ಎಂದು ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ.

Ponam Pandey: ಬಿಟೌನ್‌ ಬೆಡಗಿ ಪೂನಂ ಪಾಂಡೆ ಸ್ಪೆಷಲ್‌ ಕೇಕ್‌ ಐಸ್‌ಕ್ರಿಂ ರೆಸಿಪಿ
Ponam Pandey: ಬಿಟೌನ್‌ ಬೆಡಗಿ ಪೂನಂ ಪಾಂಡೆ ಸ್ಪೆಷಲ್‌ ಕೇಕ್‌ ಐಸ್‌ಕ್ರಿಂ ರೆಸಿಪಿ

ಬೆಂಗಳೂರು: ಬಾಲಿವುಡ್‌ ನಟಿ ಪೂನಂ ಪಾಂಡೆ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಹೊಸ ಕೇಕ್‌ ಐಸ್‌ ಕ್ರೀಂ ರೆಸಿಪಿ ಹಂಚಿಕೊಂಡಿದ್ದಾರೆ. ಏಪ್ರನ್‌ ತೊಟ್ಟ ಪೂನಂ ಪಾಂಡೆ ತನ್ನ ಅಡುಗೆ ಮನೆಗೆ ಅಭಿಮಾನಿಗಳನ್ನು ಕರೆದೊಯ್ದಿದ್ದಾರೆ. ಅಲ್ಲಿ ಕೇಕ್‌ ಮಾಡುತ್ತ, ಐಸ್‌ಕ್ರೀಂ ಮಾಡುತ್ತ ತಾನು ಕುಕ್ಕಿಂಗ್‌ಗೂ ಸೈ ಎಂದು ತೋರಿಸಿದ್ದಾರೆ. ಈ ಸಮಯದಲ್ಲಿ ಇವರ ಮಾದಕ ನೋಟ, ಮೈಮಾಟ ನೋಡಿ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ. ತಾನೇ ತಯಾರಿಸಿದ ಕೇಕ್‌ ಐಸ್‌ಕ್ರೀಂ ಅನ್ನು ಸವಿದ ಪೂನಂ ಪಾಂಡೆ ವಿಡಿಯೋ ವೀಕ್ಷಕರ ನಾಲಗೆಯಲ್ಲೂ ನೀರು ಬರುವಂತೆ ಮಾಡಿದ್ದಾರೆ. ಸಾಕಷ್ಟು ಅಭಿಮಾನಿಗಳು ಕಾಮೆಂಟ್‌ ಬಾಕ್ಸ್‌ನಲ್ಲಿ "ವಾಹ್‌, ಬಾಯಲ್ಲಿ ನೀರೂರುತ್ತಿದೆ" ಎಂದು ಕಾಮೆಂಟ್ಸ್‌ ಮಾಡಿದ್ದಾರೆ.

ಪೂನಂ ಪಾಂಡೆ ಕೇಕ್‌-ಐಸ್‌ಕ್ರಿಂ ರೆಸಿಪಿ ವಿಡಿಯೋ

 

ಕುಕ್ಕಿಂಗ್‌ ಮಾಡಲು ಏನು ಮುಖ್ಯ? ಅಡುಗೆ ಸಾಮಾಗ್ರಿ ಎಂದರೆ ತಪ್ಪು. "ಕುಕ್ಕಿಂಗ್‌ ಮಾಡಲು ಏಪ್ರನ್‌ ಮುಖ್ಯ" ಎಂದು ಪೂನಂ ಪಾಂಡೆ ಕ್ಯಾಪ್ಷನ್‌ ಬರೆದು ವಿಡಿಯೋ ಹಂಚಿಕೊಂಡಿದ್ದಾರೆ. ಇವರು ಧರಿಸಿದ ಏಪ್ರನ್‌ ನೋಡಿ ಅಭಿಮಾನಿಗಳು "ಈ ಉಡುಗೆಯಲ್ಲಿ ನಿಮ್ಮನ್ನು ನೋಡೋದು ತುಂಬಾ ಡಿಫರೆಂಟ್‌, ಬೇರೆ ರೀತಿಯೇ ಕಾಣಿಸುವಿರಿ" ಎಂದೆಲ್ಲ ಕಾಮೆಂಟ್‌ ಮಾಡಿದ್ದಾರೆ. ಕೆಲವರು "ನೀವು ಏಪ್ರನ್‌ ಅನ್ನು ಸರಿಯಾಗಿ ಧರಿಸಿಲ್ಲ" ಎಂದಿದ್ದಾರೆ. ಪೂನಂ ಪಾಂಡೆ ಟಾಪ್‌ನಲ್ಲಿ ಮಾತ್ರ ಏಪ್ರನ್‌ ಧರಿಸಿದ್ದರು. ಏಪ್ರನ್‌ ಒಳಗೆ ಯಾವುದೇ ಉಡುಗೆ ತೊಟ್ಟಿರಲಿಲ್ಲ.

ಫುಡ್‌ಗಾಸಮ್‌ ವಿತ್‌ ಪೂನಂ ಹೆಸರಲ್ಲಿ ಪೂನಂ ಪಾಂಡೆ ವಿಡಿಯೋ ಹಂಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ರೆಸಿಪಿ ವಿಡಿಯೋಗಳನ್ನು ಪೂನಂ ಪಾಂಡೆ ಹಂಚಿಕೊಂಡರೆ ಅಚ್ಚರಿಯಿಲ್ಲ. ಪೂನಂ ಪಾಂಡೆ ಈ ಹಿಂದೆಯೂ ಫುಡ್‌ ರೆಸಿಪಿ ವಿಡಿಯೋ ಹಂಚಿಕೊಂಡಿದ್ದರು. ಮಾವಿನಹಣ್ಣಿನ ರೆಸಿಪಿ ಹಂಚಿಕೊಂಡು ಫ್ಯಾನ್ಸ್‌ ನಾಲಗೆಯಲ್ಲಿ ನೀರೂರಿಸಿದ್ದರು. ಇದೀಗ ಕೇಕ್‌ ಐಸ್‌ಕ್ರಿಮ್‌ ಜತೆ ಬಂದಿದ್ದಾರೆ.

ಪೂನಂ ಪಾಂಡೆ ಇತ್ತೀಚೆಗೆ ಅಶ್ಲೀಲ ವಿಡಿಯೋ ವಿಚಾರಕ್ಕೆ ಸಂಬಂಧಪಟ್ಟಂತೆ ಸುದ್ದಿಯಲ್ಲಿದ್ದರು. ತನ್ನ ಬಾತ್‌ ರೂಂ ವಿಡಿಯೋಗಳನ್ನು ಲೀಕ್‌ ಮಾಡಿದ್ದು ನನ್ನ ಬಾಯ್‌ಫ್ರೆಂಡ್‌ ಎಂದು ನೋವು ತೋಡಿಕೊಂಡಿದ್ದರು. ಕೆಲವು ವರ್ಷಗಳ ಹಿಂದೆ ವೈರಲ್‌ ಆದ ಆ ವಿಡಿಯೋದ ಕುರಿತು ಇವರು ಮಾತನಾಡಿದ್ದರು. ಈ ಖಾಸಗಿ ವಿಡಿಯೋವನ್ನು ನನ್ನ ಮಾಜಿ ಗೆಳೆಯ ಸೋರಿಕೆ ಮಾಡಿದ್ದ ಎಂದು ಹೇಳಿದ್ದಾರೆ. ನನ್ನ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹಾಕುವುದಾಗಿ ಆತ ಹೇಳಿದಾಗ ಮೊದಲು ನಾನು ಈ ವಿಷಯ ನಿರ್ಲಕ್ಷ್ಯ ಮಾಡಿದ್ದೆ. ಆದರೆ, ಆತ ಅದನ್ನು ಸೋಷಿಯಲ್‌ ಮೀಡಿಯಾಕ್ಕೆ ಹಾಕಿಯೇ ಬಿಟ್ಟಿದ್ದ. ಇದರಿಂದಾಗಿ ಆ ವಿಡಿಯೋ ವೈರಲ್‌ ಆಯ್ತು. ಆತ ಹಾಗೆ ಮಾಡಬಾರದಿತ್ತು ಎಂದು ಪೂನಂ ಪಾಂಡೆ ಬೇಸರತೋಡಿಕೊಂಡಿದ್ದರು.

ಇತ್ತೀಚೆಗೆ ಗರ್ಭಕಂಠ ಕ್ಯಾನ್ಸರ್‌ ಕುರಿತು ಜಾಗೃತಿ ಮೂಡಿಸಲು ಸಾವಿನ ನಾಟಕವಾಡಿ ಪೂನಂ ಪಾಂಡೆ ಹೊಸ ವಿವಾದಕ್ಕೆ ಕಾರಣವಾಗಿದ್ದರು. ಸರ್ವೈಕಲ್‌ ಕ್ಯಾನ್ಸರ್‌ನಿಂದ ಈಕೆ ಮೃತಪಟ್ಟಿರುವುದಾಗಿ ಸ್ವತಃ ಇವರ ಮ್ಯಾನೇಜರ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದರು. ಬಹುತೇಕ ಎಲ್ಲಾ ಮಾಧ್ಯಮಗಳಲ್ಲಿ, ಸೋಷಿಯಲ್‌ ಮೀಡಿಯಾಗಳಲ್ಲಿ ಪೂನಂ ಪಾಂಡೆ ಸಾವಿನ ಸುದ್ದಿ ಪ್ರಕಟವಾಗಿತ್ತು.ಮರುದಿನ ಪೂನಂ ಪಾಂಡೆ ಸ್ವತಃ ವಿಡಿಯೋವೊಂದನ್ನು ಬಿಡುಗಡೆ ಮಾಡಿ "ಗರ್ಭಕಂಠದ ಕ್ಯಾನ್ಸರ್‌ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಈ ರೀತಿಯ ಸಾವಿನ ನಾಟಕವಾಡಿದೆ" ಎಂದು ಹೇಳಿದ್ದರು. ಇವರ ಈ ಕಾರ್ಯಕ್ಕೆ ಸಾಕಷ್ಟು ಜನರು ಶ್ಲಾಘನೆ ವ್ಯಕ್ತಪಡಿಸಿದ್ದರು. ಇದೇ ಸಮಯದಲ್ಲಿ ಸಾಕಷ್ಟು ಜನರು ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು.

Whats_app_banner