ಕನ್ನಡ ಸುದ್ದಿ  /  ಮನರಂಜನೆ  /  Pooja Hegde: 45 ಕೋಟಿ ರೂ ಕೊಟ್ಟು 4000 ಚದರಡಿಯ ಕಡಲ ಬದಿಯ ಮನೆ ಖರೀದಿಸಿದ ಪೂಜಾ ಹೆಗ್ಡೆ; ಕರಾವಳಿ ಬೆಡಗಿ ಈಗ ಬಾಂದ್ರಾ ನಿವಾಸಿ

Pooja Hegde: 45 ಕೋಟಿ ರೂ ಕೊಟ್ಟು 4000 ಚದರಡಿಯ ಕಡಲ ಬದಿಯ ಮನೆ ಖರೀದಿಸಿದ ಪೂಜಾ ಹೆಗ್ಡೆ; ಕರಾವಳಿ ಬೆಡಗಿ ಈಗ ಬಾಂದ್ರಾ ನಿವಾಸಿ

Pooja Hegde Property: ಬಾಲಿವುಡ್‌ ನಟಿ ಪೂಜಾ ಹೆಗ್ಡೆ ಈಗ ಬಾಂದ್ರಾ ನಿವಾಸಿ. ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳು ಮನೆ ಹೊಂದಿರುವ ಬಾಂದ್ರಾದಲ್ಲಿ 45 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಪೂಜಾ ಹೆಗ್ಡೆ ಖರೀದಿಸಿದ್ದಾರೆ. ಈ ಏರಿಯಾದಲ್ಲಿ ಮತ್ತು ಆಸುಪಾಸಿನಲ್ಲಿ ಬೇರೆ ಯಾರೆಲ್ಲ ಸೆಲೆಬ್ರಿಟಿಗಳು ಮನೆ ಮಾಡಿದ್ದಾರೆ ಎಂಬ ವಿವರವೂ ಇಲ್ಲಿದೆ.

Pooja Hegde: 45 ಕೋಟಿ ಕೊಟ್ಟು 4000 ಚದರಡಿಯ ಕಡಲ ಬದಿಯ ಮನೆ ಖರೀದಿಸಿದ ಪೂಜಾ ಹೆಗ್ಡೆ
Pooja Hegde: 45 ಕೋಟಿ ಕೊಟ್ಟು 4000 ಚದರಡಿಯ ಕಡಲ ಬದಿಯ ಮನೆ ಖರೀದಿಸಿದ ಪೂಜಾ ಹೆಗ್ಡೆ

ಬೆಂಗಳೂರು: ಕರ್ನಾಟಕದ ಮಂಗಳೂರು ಮೂಲದ ನಟಿ ಪೂಜಾ ಹೆಗ್ಡೆ ಶೀಘ್ರದಲ್ಲಿ ಹೊಸ ಮನೆಗೆ ಗೃಹ ಪ್ರವೇಶ ಮಾಡಲಿದ್ದಾರೆ. ಮುಂಬೈನ ಬಾಂದ್ರಾದಲ್ಲಿ 45 ಕೋಟಿ ರೂಪಾಯಿ ಮೌಲ್ಯದ 4 ಸಾವಿರ ಚದರಡಿ ವಿಸ್ತೀರ್ಣದ ಮನೆ ಖರೀದಿಸಿದ್ದಾರೆ. ಈ ಮೂಲಕ ಸಮುದ್ರದ ಕಡೆಗೆ ಮುಖ ಮಾಡಿರುವ, ಮನೆಯಿಂದಲೇ ಸಮುದ್ರ ನೋಡಬಹುದಾದ ಮನೆ ಖರೀದಿಸಿದ ಸೆಲೆಬ್ರಿಟಿಗಳ ಸಾಲಿಗೆ ಪೂಜಾ ಹೆಗ್ಡೆ ಸೇರಿದ್ದಾರೆ. ಈಗಾಗಲೇ ಮುಂಬೈನಲ್ಲಿ ಪೂಜಾ ಹೆಗ್ಡೆಗೆ ಬೇರೆ ಮನೆಯಿದೆ. ಇದೇ ಸಮಯದಲ್ಲಿ ಸುಮಾರು 45 ಕೋಟಿ ರೂಪಾಯಿ ಮೌಲ್ಯದ ಹೊಸ ಪ್ರಾಪರ್ಟಿ ಖರೀದಿಸಿದ್ದಾರೆ. ತನ್ನ ಅಭಿರುಚಿಗೆ ತಕ್ಕಂತೆ ಹೊಸ ಮನೆಯ ಇಂಟೀರಿಯರ್‌ ಡಿಸೈನ್‌ ಮಾಡಿದ್ದಾರೆ ಎನ್ನಲಾಗಿದೆ.

ಟ್ರೆಂಡಿಂಗ್​ ಸುದ್ದಿ

"ಪೂಜಾ ಹೆಗ್ಡೆ ಅವರು ಅತ್ಯಾಕರ್ಷಕ ಸಮುದ್ರದ ಕಡೆಗೆ ಮುಖ ಮಾಡಿರುವ ಮನೆ ಖರೀದಿಸಿದ್ದಾರೆ. ಇದು ಸುಮಾರು 4 ಸಾವಿರ ಚದರಿ ಲಿವಿಂಗ್‌ ಸ್ಥಳಾವಕಾಶ ಹೊಂದಿದೆ. ಮುಂಬೈನ ಪ್ರಮುಖ ಸ್ಥಳದಲ್ಲಿ ಇರುವ ಈ ಮನೆಯಿಂದ ಸಮುದ್ರದ ಸುಂದರ ನೋಟ ದೊರಕುತ್ತದೆ. ಇದರೊಂದಿಗೆ ಮುಂಬೈನ ಅಂದವನ್ನೂ ಮನೆಯಿಂದಲೇ ಕಣ್ತುಂಬಿಕೊಳ್ಳಬಹುದು" ಎಂದು ವರದಿಗಳು ತಿಳಿಸಿವೆ.

ಮುಂಬೈನ ಬಾಂದ್ರಾ ಮತ್ತು ಆಸುಪಾಸಿನಲ್ಲಿ ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳು ತಮ್ಮ ಮನೆ ಹೊಂದಿದ್ದಾರೆ. ಅಮಿತಾಬ್‌ ಬಚ್ಚನ್‌ ಅವರ ಜಲ್ಸಾ ಮನೆಯು ಜುಹುವಿನಲ್ಲಿದೆ. ಈ ಮನೆಯಲ್ಲಿ ಜಯಾ ಬಚ್ಚನ್‌, ಅಭಿಷೇಕ್‌ ಬಚ್ಚನ್‌, ಸೊಸೆ ಐಶ್ವರ್ಯಾ ರೈ ಬಚ್ಚನ್‌, ಮೊಮ್ಮಗ ಆರಾಧ್ಯ ಬಚ್ಚನ್‌ ಜತೆ ವಾಸವಿದ್ದಾರೆ. ಈ ಎರಡು ಅಂತಸ್ತಿನ ಬಂಗಲೆಯು 10,125 ಚದರಡಿ ಹೊಂದಿದೆ. ಈ ಮನೆಯ ಮೌಲ್ಯ ಸುಮಾರು 100 ಕೋಟಿ ರೂಪಾಯಿ ಇದೆಯಂತೆ.

ಶಾರೂಖ್‌ ಖಾನ್‌ ಅವರ ಮನೆಯು ಬಾಂದ್ರಾದಲ್ಲಿದೆ. ಇವರ ಮನೆ ಹೆಸರು ಮನ್ನತ್‌. ಇದು ಸುಮಾರು 27 ಸಾವಿರ ಚದರಡಿ ಇದೆ. ಇದು ಆರು ಮಹಡಿ ಎತ್ತರದ, ಸಮುದ್ರದ ಕಡೆಗೆ ಮುಖ ಮಾಡಿರುವ ಬಂಗಲೆಯಾಗಿದೆ. ಈ ಪ್ರಾಪರ್ಟಿ ಮೌಲ್ಯ ಸುಮಾರು 200 ಕೋಟಿ ರೂಪಾಯಿ ಎನ್ನಲಾಗಿದೆ.

ಕಾಜಲ್‌ ಮತ್ತು ಅಜಯ್‌ ದೇವಗನ್‌ ಅವರ ಮನೆ ಜುಹುವಿನಲ್ಲಿದೆ. ಈ ಮನೆಗೆ ಶಿವಶಕ್ತಿ ಎಂದು ಹೆಸರು. ಸುಮಾರು 5,300 ಚದರಡಿಯ ಈ ಮನೆಯನ್ನು ಅಜಯ್‌ ದೇವಗನ್‌ ಅವರು ಸುಮಾರು 60 ಕೋಟಿ ರೂಪಾಯಿ ನೀಡಿ ಖರೀದಿಸಿದ್ದಾರೆ.

ರಣಬೀರ್‌ ಕಪೂರ್‌ ಕೂಡ ಬಾಂದ್ರಾದಲ್ಲಿ ಮನೆ ಹೊಂದಿದ್ದಾರೆ. ಬಹುಮಹಡಿಯ ಈ ಮನೆಗೆ ಕೃಷ್ಣರಾಜ ಬಂಗಲೆ ಎಂದು ಹೆಸರು. ರಿಶಿ ಕಪೂರ್‌ ಮತ್ತು ನೀತು ಕಪೂರ್‌ ಅವರಿಂದ ಈ ಪ್ರಾಪರ್ಟಿ ರಣಬೀರ್‌ಗೆ ದೊರಕಿತ್ತು. ಈ ಮನೆಯನ್ನು ರಾಜ್‌ ಕಪೂರ್‌ ನಿರ್ಮಿಸಿದ್ದರು. ಈ ಪ್ರಾಪರ್ಟಿ ಮೌಲ್ಯ ಸುಮಾರು 250 ಕೋಟಿ ರೂಪಾಯಿಗೂ ಹೆಚ್ಚಿದೆ.

ಜುಹುವಿನಲ್ಲಿ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಕೂಡ ಸ್ವಂತ ಮನೆ ಹೊಂದಿದ್ದಾರೆ. ಬೀಚನ್‌ ಪಕ್ಕ ಇವರು ಈ ಮನೆಯಲ್ಲಿ ತನ್ನ ಪತ್ನಿ ಟ್ವಿಂಕಲ್‌ ಖನ್ನಾ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಸಮುದ್ರದ ಕಡೆಗೆ ಮುಖ ಮಾಡಿರುವ ಈ ಪ್ರಾಪರ್ಟಿ ದರ ಸುಮಾರು 80 ಕೋಟಿ ರೂಪಾಯಿ ಮೌಲ್ಯವನ್ನು ಹೊಂದಿದೆ. ಅಮಿರ್‌ ಖಾನ್‌, ಜಾನ್‌ ಅಬ್ರಾಹಂ ಸೇರಿದಂತೆ ಹಲವು ಸೆಲೆಬ್ರಿಟಿಗಳು ಬಾಂದ್ರಾ, ಜುಹುವಿನಲ್ಲಿ ಮನೆ ಹೊಂದಿದ್ದಾರೆ.

IPL_Entry_Point