Poonam Pandey: ನಾನು ಸತ್ತಿಲ್ಲ, ಬದುಕಿದ್ದೇನೆ! ಸಾವಿನ ನಾಟಕದ ಹಿಂದಿನ ಬಲವಾದ ಉದ್ದೇಶ ವಿವರಿಸಿದ ಪೂನಂ ಪಾಂಡೆ
ಕನ್ನಡ ಸುದ್ದಿ  /  ಮನರಂಜನೆ  /  Poonam Pandey: ನಾನು ಸತ್ತಿಲ್ಲ, ಬದುಕಿದ್ದೇನೆ! ಸಾವಿನ ನಾಟಕದ ಹಿಂದಿನ ಬಲವಾದ ಉದ್ದೇಶ ವಿವರಿಸಿದ ಪೂನಂ ಪಾಂಡೆ

Poonam Pandey: ನಾನು ಸತ್ತಿಲ್ಲ, ಬದುಕಿದ್ದೇನೆ! ಸಾವಿನ ನಾಟಕದ ಹಿಂದಿನ ಬಲವಾದ ಉದ್ದೇಶ ವಿವರಿಸಿದ ಪೂನಂ ಪಾಂಡೆ

ಸಾವಿನ ಸುದ್ದಿಯ ಬೆನ್ನಲ್ಲೆ ನಟಿ ಪೂನಂ ಪಾಂಡೆ ಎಲ್ಲರೆದುರು ಪ್ರತ್ಯಕ್ಷರಾಗಿದ್ದಾರೆ. ನಾನು ಸತ್ತಿಲ್ಲ, ಬದುಕಿದ್ದೇನೆ ಎಂದು ಹೇಳಿದ್ದಾರೆ. ಈ ಸಾವಿನ ಹಿಂದಿರುವ ಅಸಲಿ ವಿಷ್ಯವನ್ನೂ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.

Poonam Pandey: ನಾನು ಸತ್ತಿಲ್ಲ, ಬದುಕಿದ್ದೇನೆ! ಸಾವಿನ ನಾಟಕದ ಹಿಂದಿನ ಬಲವಾದ ಉದ್ದೇಶ ವಿವರಿಸಿದ ಪೂನಂ ಪಾಂಡೆ
Poonam Pandey: ನಾನು ಸತ್ತಿಲ್ಲ, ಬದುಕಿದ್ದೇನೆ! ಸಾವಿನ ನಾಟಕದ ಹಿಂದಿನ ಬಲವಾದ ಉದ್ದೇಶ ವಿವರಿಸಿದ ಪೂನಂ ಪಾಂಡೆ

Poonam Pandey Alive: ಬಾಲಿವುಡ್‌ನ ಚೆಲುವೆ, ಮಾದಕ ನಟಿ ಪೂನಂ ಪಾಂಡೆ ಇನ್ನಿಲ್ಲ ಎಂಬ ಸುದ್ದಿ ಶುಕ್ರವಾರ ದೊಡ್ಡ ಸುದ್ದಿ ಮಾಡಿತ್ತು. ಆದರೆ, ಇದೀಗ ಅಚ್ಚರಿಯ ರೀತಿಯಲ್ಲಿ ಪೂನಂ ಪಾಂಡೆ ಅವರ ಆಗಮನವಾಗಿದೆ. ನಾನು ಸತ್ತಿಲ್ಲ, ಬದುಕಿದ್ದೇನೆ ಎಂದು ಹೇಳಿಕೊಂಡು ಹೊಸ ವಿಡಿಯೋ ರಿಲೀಸ್‌ ಮಾಡಿದ್ದಾರೆ ಪೂನಂ. ಜತೆಗೆ ಈ ಸಾವಿನ ನಾಟಕದ ಹಿಂದಿರುವ ಬಲವಾದ ಉದ್ದೇಶವನ್ನೂ ಅವರು ರಿವೀಲ್‌ ಮಾಡಿದ್ದಾರೆ.

ನನ್ನ ಸಾವಿನ ಸುದ್ದಿ ಸುಳ್ಳು. ನಾನು ಇಹಲೋಕವನ್ನೂ ತ್ಯಜಿಸಿಲ್ಲ. ನನಗೆ ಯಾವುದೇ ಕ್ಯಾನ್ಸರ್‌ ಸಹ ಇಲ್ಲ. ಈ ಸಾವಿನ ನಾಟಕವಾಡಿದ್ದು ಗರ್ಭಕಂಠದ ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಎಂದಿದ್ದಾರೆ. ಆದರೆ, ಇತ್ತ ಸೋಷಿಯಲ್‌ ಮೀಡಿಯಾ ಬಳಕೆದಾರರು, ನಟಿಯ ಈ ಹುಚ್ಚಾಟವನ್ನು ಟೀಕಿಸುತ್ತಿದ್ದಾರೆ. ಸಾವಿನ ವಿಚಾರದಲ್ಲಿ ಈ ರೀತಿ ಸರಸ ಆಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ಇದ್ಯಾವುದಕ್ಕೂ ತಲೆ ಕಡಿಸಿಕೊಳ್ಳದ ಪೂನಂ, ತನ್ನ ಉದ್ದೇಶ ಈಡೇರಿದೆ ಎಂದಿದ್ದಾರೆ.

ಪೂನಂ ಹೇಳಿದ್ದೇನು?

ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡ ಪೂನಂ ಪಾಂಡೆ, "ನಿಮ್ಮ ಬಳಿ ಪ್ರಮುಖ ವಿಚಾರವೊಂದನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಾನು ಜೀವಂತವಾಗಿದ್ದೇನೆ. ಆದರೆ, ದುಃಖದ ಸಂಗತಿಯೆಂದರೆ ಗರ್ಭಕಂಠದ ಕ್ಯಾನ್ಸರ್ ರೋಗವನ್ನು ಹೇಗೆ ಎದುರಿಸಬೇಕೆಂಬುದರ ಬಗ್ಗೆ ಜ್ಞಾನದ ಕೊರತೆ ಎಲ್ಲರಲ್ಲೂ ಇದೆ. ಇದರಿಂದಾಗಿ ಸಾವಿರಾರು ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ. ಇತರ ಕ್ಯಾನ್ಸರ್‌ಗಿಂತಲೂ ಇದು ವಿಭಿನ್ನ. ಗರ್ಭಕಂಠದ ಕ್ಯಾನ್ಸರ್ ಸಂಪೂರ್ಣವಾಗಿ ತಡೆಗಟ್ಟಬಲ್ಲದು. ಅದರ ಜಾಗೃತಿ ಮೂಡಿಸುವ ಸಲುವಾಗಿಯೇ ನಾನು ಈ ರೀತಿ ಮಾಡಿದೆ" ಎಂದಿದ್ದಾರೆ ಪೂನಂ.

ಸಾವಿನ ಪೋಸ್ಟ್‌ನಲ್ಲೇನಿತ್ತು?

ಪೂನಂ ಪಾಂಡೆ ತಮ್ಮ 32ನೇ ವಯಸ್ಸಿನಲ್ಲಿ ಗರ್ಭಕಂಠದ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ ಎಂಬ ವಿಚಾರವನ್ನು ಅವರ ತಂಡ ಹಂಚಿಕೊಂಡಿತ್ತು. “ಈ ಬೆಳಗು ನಮಗೆ ತುಂಬ ಕಷ್ಟಕರ ದಿನವಾಗಿದೆ. ಗರ್ಭಕಂಠದ ಕ್ಯಾನ್ಸರ್‌ನಿಂದಾಗಿ ನಾವು ನಮ್ಮ ಪ್ರೀತಿಯ ಪೂನಂ ಅವರನ್ನು ಕಳೆದುಕೊಂಡಿದ್ದೇವೆ ಎಂದು ತಿಳಿಸಲು ನಮಗೆ ತುಂಬಾ ದುಃಖವಾಗುತ್ತಿದೆ. ಈ ದುಃಖದ ಸಮಯದಲ್ಲಿ, ನಾವು ಈ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕಾಯಿತು” ಎಂದು ಪೂನಂ ಪಾಂಡೆ ಇನ್‌ಸ್ಟಾ ಖಾತೆಯಿಂದ ಪೋಸ್ಟ್‌ ಶೇರ್‌ ಆಗಿತ್ತು. ಈಗ ಅದು ಸುಳ್ಳು ಎಂದು ಖಚಿತವಾಗಿದೆ.

Whats_app_banner