ಕಾಂಡೋಮ್ ಖರೀದಿಯ ಆಯ್ಕೆ ಪುರುಷರಿಗೇಕೆ? ಈ ವಿಷ್ಯದಲ್ಲಿ ರಾಜಿಯಾದರೆ ಪರಿಣಾಮ ಎದುರಿಸುವವರು ನಾವೇ ಅಲ್ಲವೇ; ರಾಧಿಕಾ ಆಪ್ಟೆ
ಬಾಲಿವುಡ್ ನಟಿ ರಾಧಿಕಾ ಆಪ್ಟೆ, ಹಸಿ ಬಿಸಿ ದೃಶ್ಯಗಳಲ್ಲಿ, ಬೋಲ್ಡ್ ಲುಕ್‌ನಲ್ಲಿಯೂ ಆಗಾಗ ಕಾಣಿಸಿಕೊಂಡು, ಅಚ್ಚರಿ ಮೂಡಿಸಿದ ಉದಾಹರಣೆಗಳಿವೆ. ಇದೀಗ ಇದೇ ನಟಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಬಾರಿ ಅವರು ಯಾವುದೇ ಸಿನಿಮಾ ವಿಚಾರಕ್ಕೆ ಸುದ್ದಿಯಾಗಿಲ್ಲ. ಬದಲಿಗೆ ಕಾಂಡೋಮ್ ಬಗ್ಗೆ ಮಾತನಾಡಿ ಅಚ್ಚರಿ ಮೂಡಿಸಿದ್ದಾರೆ.

Radhika Apte About Condom: ಬಾಲಿವುಡ್ ನಟಿ ರಾಧಿಕಾ ಆಪ್ಟೆ ತಮ್ಮದೇ ಅಭಿಮಾನಿ ವಲಯವನ್ನು ಸಂಪಾದಿಸಿಕೊಂಡಿದ್ದಾರೆ. ತಮ್ಮ ನಟನೆ, ಆಯ್ಕೆ ಮಾಡಿಕೊಳ್ಳುವ ಕಥೆಯಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ. ಸ್ಟಾರ್ ನಟರ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳದ ರಾಧಿಕಾ, ಆಫ್‌ಬೀಟ್ ಕಥೆಯಿಂದಲೇ ಈ ವರೆಗೂ ಗಮನ ಸೆಳೆಯುತ್ತ ಬಂದಿದ್ದಾರೆ. ಸಿನಿಮಾಗಳ ಜತೆಗೆ ಒಟಿಟಿಯಲ್ಲಿಯೂ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ.
ನಟಿ ರಾಧಿಕಾ ಆಪ್ಟೆ, ಹಸಿ ಬಿಸಿ ದೃಶ್ಯಗಳಲ್ಲಿ, ಬೋಲ್ಡ್ ಲುಕ್‌ನಲ್ಲಿಯೂ ಆಗಾಗ ಕಾಣಿಸಿಕೊಂಡು, ಅಚ್ಚರಿ ಮೂಡಿಸಿದ ಉದಾಹರಣೆಗಳೂ ಇವೆ. ಇದೀಗ ಇದೇ ನಟಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಬಾರಿ ಅವರು ಯಾವುದೇ ಸಿನಿಮಾ ವಿಚಾರಕ್ಕೆ ಸುದ್ದಿಯಾಗಿಲ್ಲ. ಬದಲಿಗೆ ಕಾಂಡೋಮ್ ಬ್ರ್ಯಾಂಡ್‌ನ ಜಾಹೀರಾತಿನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಕಾಂಡೋಮ್ ಬ್ರಾಂಡ್‌ಗೆ ರಾಯಭಾರಿಯಾಗಿರುವ ರಾಧಿಕಾ ಆಪ್ಟೆ, ಈ ಅಭಿಯಾನದಿಂದ ಮಹಿಳೆಯರ ಮನಸ್ಥಿತಿಯಲ್ಲಿ ಬದಲಾವಣೆಯನ್ನು ತರಲು ಮುಂದಾಗಿದ್ದಾರೆ. ಈ ಮೂಲಕ ಮಹಿಳೆಯರು ಈ ವಿಚಾರದಲ್ಲೂ ಸ್ವಾತಂತ್ರ್ಯ ಹೊಂದಬೇಕು. ಅದು ಮಹಿಳೆಯ ಆಯ್ಕೆಯಾಗಬೇಕು ಎಂದು ಜಾಹೀರಾತಿನ ವಿಡಿಯೋದಲ್ಲಿ ರಾಧಿಕಾ ಮಾತನಾಡಿದ್ದಾರೆ. ಕಾಂಡೋಮ್ ಖರೀದಿಯ ನಿರ್ಧಾರವನ್ನು ಪುರುಷನ ಮೇಲೆ ಹಾಕುವ ಬದಲು, ನಾವೇ ಅದರ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದಿದ್ದಾರೆ ರಾಧಿಕಾ.
ಜಾಹೀರಾತಿನ ಮೂಲಕ ಜಾಗೃತಿ ಕೆಲಸಕ್ಕಿಳಿದ ನಟಿ
ಈ ಕುರಿತು ಜಾಹೀರಾತಿನ ವಿಡಿಯೋವನ್ನು ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಶೇರ್ ಮಾಡಿರುವ ರಾಧಿಕಾ, ಕಾಂಡೋಮ್ ಖರೀದಿಯ ಆಯ್ಕೆ ಪುರುಷರಿಗೇಕೆ? ಈ ವಿಚಾರದಲ್ಲಿ ಮಹಿಳೆ ಯಾವತ್ತೂ ಹಿಂಜರಿಯಬಾರದು. ಒಂದು ವೇಳೆ ರಾಜಿಯಾದರೆ, ಅದರ ನೇರ ಪರಿಣಾಮವನ್ನು ನಾವೇ ಎದುರಿಸಬೇಕಾಗುತ್ತದೆ ಎಂದಿದ್ದಾರೆ ರಾಧಿಕಾ. ಈ ಮೂಲಕ ಜಾಹೀರಾತಿನಿಂದ ಜಾಗೃತಿ ಕೆಲಸಕ್ಕೂ ಇಳಿದಿದ್ದಾರೆ. ಈ ಜಾಹೀರಾತಿಗಾಗಿ ದೊಡ್ಡ ಮಟ್ಟದ ಸಂಭಾವನೆಯನ್ನೂ ಅವರು ಪಡೆದುಕೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ.
ಗರ್ಭನಿರೋಧಕ ಖರೀದಿ ನಮ್ಮ ಆಯ್ಕೆ ಆಗಿರಲಿ..
“ಕಾಂಡೋಮ್.. ಈ ಪದ ಕೇಳುತ್ತಿದ್ದಂತೆ, ಬಹುತೇಕರು ಕೊಂಚ ಮುಜುಗರಕ್ಕೊಳಗಾಗುತ್ತಾರೆ. ಅನ್‌ಕಂಫರ್ಟ್ ಆಗುತ್ತಾರೆ. ಯಾಕೆ? ಅಷ್ಟಕ್ಕೂ ಕಾಂಡೋಮ್ ಖರೀದಿಯ ನಿರ್ಧಾರವನ್ನು ಜತೆಗಿರುವ ಸಂಗಾತಿಗೆ ವಹಿಸುತ್ತಾರೆ. ಏಕೆ? ಈ ವಿಷಯದಲ್ಲಿ ನಮ್ಮ ಅಭಿಪ್ರಾಯವೂ ಮುಖ್ಯವಾಗಿರುತ್ತೆ ಎಂದು ಯಾರಿಗೂ ಯಾಕೆ ಅನ್ನಿಸಿಲ್ಲವೇಕೆ? ಈ ಕಾಂಡೋಮ್ ಖರೀದಿ ಏಕೆ ನಮ್ಮ ಆಯ್ಕೆ ಆಗಬಾರದು? ಮಹಿಳೆಯರು ಗರ್ಭನಿರೋಧಕ ಖರೀದಿ ಮಾಡಿದ್ದೇ ಆದರೆ ಏನಾಗುತ್ತೆ? ಅಷ್ಟಕ್ಕೂ ಆ ಕಾಂಡೋಮ್‌ನ ಅನುಭವ ಪಡೆಯುವವರು ನಾವೇ ಅಲ್ಲವೇ? ಹಾಗಾಗಿ ಅದರ ಖರೀದಿ ಆಯ್ಕೆಯೂ ನಮ್ಮದೇ ಆಗಬೇಕು”
“ಹಾಗಾಗಿ ಗರ್ಲ್ಸ್, ಕಾಂಡೋಮ್ ಖರೀದಿ ನಮ್ಮ ಚಾಯ್ಸ್ ಆಗಿರಲಿ. ಈ ವಿಷ್ಯದಲ್ಲಿ ಯಾವತ್ತೂ ಕಾಂಪ್ರಮೈಸ್ ಆಗಬೇಡಿ. ಸಂತೋಷ, ರಕ್ಷಣೆ, ಮತ್ತು ಕಂಫರ್ಟ್‌ಗಾಗಿ ಈ ಆಯ್ಕೆಯನ್ನು ಬೇರೆ ಯಾರಿಗೂ ನೀಡಬೇಡಿ. ನಿಮಗೆ ಬೇಕಿರುವ ಕಾಂಡೋಮ್‌ಗಳನ್ನು ನೀವೇ ಖರೀದಿಸಿ. ಒಂದು ವೇಳೆ ರಾಜಿಯಾದರೆ, ಕೊನೆಗೆ ಅದರ ಪರಿಣಾಮವನ್ನು ನಾವೇ ಎದುರಿಸಬೇಕಾಗುತ್ತದೆ” ಎಂದಿದ್ದಾರೆ.
ಇಂಗ್ಲಿಷ್ ಸಿನಿಮಾಗಳಲ್ಲಿ ಬಿಜಿ
ಇನ್ನು ನಟನೆಯ ವಿಚಾರಕ್ಕೆ ಬಂದರೆ, ಹಲವು ಸಿನಿಮಾಗಳಲ್ಲಿ ರಾಧಿಕಾ ನಟಿಸುತ್ತಿದ್ದಾರೆ. ಭಾರತೀಯ ಸಿನಿಮಾಗಳಷ್ಟೇ ಅಲ್ಲದೇ, ಇಂಗ್ಲಿಷ್ ಚಿತ್ರಗಳಲ್ಲೂ ರಾಧಿಕಾ ಬಿಜಿಯಾಗಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ವಿಜಯ್ ಸೇತುಪತಿ, ಕತ್ರಿನಾ ಕೈಫ್ ನಟನೆಯ ಮೇರಿ ಕ್ರಿಸ್‌ಮಸ್ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದ ರಾಧಿಕಾ, ಅದಾದ ಮೇಲೆ ಅವರ ಬೇರಾವ ಸಿನಿಮಾ ತೆರೆಗೆ ಬಂದಿಲ್ಲ. ಸಿಸ್ಟಮ್ ಮಿಡ್‌ನೈಟ್ ಎಂಬ ಇಂಗ್ಲಿಷ್ ಸಿನಿಮಾದ ಶೂಟಿಂಗ್ ಮುಗಸಿದ್ದಾರೆ. ಲಾಸ್ಟ್ ಡೇಸ್ ಇಂಗ್ಲಿಷ್ ಚಿತ್ರದ ಚಿತ್ರೀಕರಣದಲ್ಲೂ ಅವರು ಭಾಗವಹಿಸಿದ್ದಾರೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
