ಕನ್ನಡ ಸುದ್ದಿ  /  ಮನರಂಜನೆ  /  ರಿಷಬ್‌ ಶೆಟ್ಟಿ ನನ್ನ ಬಯೋಪಿಕ್ ಡೈರೆಕ್ಷನ್‌ ಮಾಡಬೇಕು; ಮನದಾಸೆ ವ್ಯಕ್ತಪಡಿಸಿದ ರಾಖಿ ಸಾವಂತ್‌; ಶೆಟ್ರು ಏನಂತಾರೆ?

ರಿಷಬ್‌ ಶೆಟ್ಟಿ ನನ್ನ ಬಯೋಪಿಕ್ ಡೈರೆಕ್ಷನ್‌ ಮಾಡಬೇಕು; ಮನದಾಸೆ ವ್ಯಕ್ತಪಡಿಸಿದ ರಾಖಿ ಸಾವಂತ್‌; ಶೆಟ್ರು ಏನಂತಾರೆ?

ರಾಖಿ ಸಾವಂತ್‌ ಆಪ್ತರು ಆಕೆಯ ಬಯೋಪಿಕ್‌ ಅನೌನ್ಸ್‌ ಮಾಡಿದ್ದಾರೆ. ರಾಖಿ ಜೀವನ ಚರಿತ್ರೆಯನ್ನು ಸಿನಿಮಾ ಮಾಡಲು ನಿರ್ಮಾಪಕರು ಮುಂದೆ ಬಂದಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಶೂಟಿಂಗ್‌ ಆರಂಭವಾಗಲಿದೆಯಂತೆ.

ಬಯೋಪಿಕ್‌ ನಿರ್ದೇಶನ ಮಾಡಲು ರಿಷಬ್‌ ಶೆಟ್ಟಿಗೆ ಮನವಿ ಮಾಡಿದ ರಾಖಿ ಸಾವಂತ್‌
ಬಯೋಪಿಕ್‌ ನಿರ್ದೇಶನ ಮಾಡಲು ರಿಷಬ್‌ ಶೆಟ್ಟಿಗೆ ಮನವಿ ಮಾಡಿದ ರಾಖಿ ಸಾವಂತ್‌

'ಕಾಂತಾರ' ಸಿನಿಮಾ ಸಕ್ಸಸ್‌ ನಂತರ ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ಈಗ ಸೀಕ್ವೆಲ್‌ ತಯಾರಿಯಲ್ಲಿದ್ದಾರೆ. ಸ್ಕ್ರಿಪ್ಟ್‌ ಬರೆಯಲೆಂದು ಕೆಲವು ದಿನಗಳ ಯಾರ ಕೈಗೂ ಸಿಗದೆ ಸ್ವಿಚ್‌ ಆಫ್‌ ಮಾಡಿಕೊಂಡಿದ್ದರು. ಇದೀಗ ಬಹುತೇಕ ಕಾಂತಾರ ಸೀಕ್ವೆಲ್‌ ಪ್ರೀ ಪ್ರೊಡಕ್ಷನ್‌ ಕೆಲಸಗಳು ಮುಕ್ತಾಯಗೊಂಡಿದ್ದು ಶೀಘ್ರದಲ್ಲೇ ಚಿತ್ರೀಕರಣ ಆರಂಭಿಸುವ ಸಿದ್ದತೆಯಲ್ಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ರಿಷಬ್‌ ಶೆಟ್ಟಿಗೆ ರಾಖಿ ಸಾವಂತ್ ಆಫರ್‌

ಈ ನಡುವೆ ರಿಷಬ್‌ ಶೆಟ್ಟಿ ಅವರಿಗೆ ಬಾಲಿವುಡ್‌ ನಟಿ ರಾಖಿ ಸಾವಂತ್‌ ಅವರ ಕಡೆಯಿಂದ ಒಂದು ಆಫರ್‌ ಬಂದಿದೆ. ತಮ್ಮ ಬಯೋಪಿಕ್‌ ತೆಗೆಯುವಂತೆ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರಿಗೆ ರಾಖಿ ಸಾವಂತ್‌ ಮನವಿ ಮಾಡಿದ್ದಾರೆ. ರಾಖಿ ಸಾವಂತ್‌ ಮೈಸೂರು ಮೂಲಕ ಆದಿಲ್‌ ಖಾನ್‌ನನ್ನು ಮದುವೆ ಆಗಿದ್ದು, ನಂತರ ಜಗಳ ಆಗಿದ್ದು, ಅರೆಸ್ಟ್‌ ಮಾಡಿಸಿದ್ದು ಈಗ ಯಾವುದೂ ಗುಟ್ಟಾಗಿ ಉಳಿದಿಲ್ಲ. ಆದಿಲ್‌ ಖಾನ್‌ ಜೈಲಿಗೆ ಹೋದ ನಂತರ ನಾನು ಜೀವನ ಪೂರ್ತಿ ನಿನ್ನನ್ನೇ ಪ್ರೀತಿಸುತ್ತೇನೆ ಎಂದಿದ್ದ ರಾಖಿ ಈಗ ಆದಿಲ್‌ ಖಾನ್‌ಗೆ ಶಿಕ್ಷೆ ಕೊಡಿಸಲು ಪಣ ತೊಟ್ಟಿದ್ಧಾರೆ.

ಆದಿಲ್‌ ಖಾನ್‌ ಮೇಲೆ ಮತ್ತೊಂದು ಆರೋಪ

ಇತ್ತೀಚೆಗೆ ಜಾಮೀನು ಪಡೆದು ಹೊರ ಬಂದಿದ್ದ ಆದಿಲ್‌ ಖಾನ್‌ ನಾನು ರಾಖಿ ಸಾವಂತ್‌ಗೆ ಹೊಡೆದಿದ್ದೇನೆ ಎಂದು ಆಕೆ ಸುಮ್ಮನೆ ಆರೋಪ ಮಾಡಿದ್ದಾಳೆ. ಹೇಳಬೇಕೆಂದರೆ ಆಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾಳೆ. ಆಕೆಗೆ ಮೊದಲ ಪತಿಯೊಂದಿಗೆ ಇನ್ನೂ ಸಂಪರ್ಕವಿದೆ. ನನ್ನೊಂದಿಗೆ ಸುಳ್ಳು ಹೇಳಿ ಅನೇಕ ಬಾರಿ ಮೊದಲ ಪತಿಯನ್ನು ಭೇಟಿ ಮಾಡಿ ಬಂದಿದ್ದಾಳೆ ಎಂದು ಆರೋಪಿಸಿದ್ದರು. 6 ತಿಂಗಳ ಹಿಂದೆ ಮೈಸೂರಿಗೆ ಬಂದಿದ್ದ ರಾಖಿ ಸಾವಂತ್‌ ಇದೀಗ ಮತ್ತೆ ಮೈಸೂರಿಗೆ ಬಂದಿದ್ದಾರೆ. ಮಾಧ್ಯಮಗಳ ಮುಂದೆ ಮತ್ತೆ ಆದಿಲ್‌ ಖಾನ್‌ ವಿರುದ್ಧ ಆರೋಪ ಮಾಡಿದ್ದಾರೆ. ಆದಿಲ್‌ ಖಾನ್‌ ಹೆಣ್ಣುಬಾಕ, ಆತ ನನ್ನ ನಗ್ನ ವಿಡಿಯೋಗಳನ್ನು ಮಾಡಿ 2-3 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದಾನೆ. ಇನ್ನು ಬೇರೆ ಹೆಣ್ಣು ಮಕ್ಕಳ ವಿಡಿಯೋ ಮಾಡಿಲ್ಲ ಎಂದು ಏನು ಗ್ಯಾರಂಟಿ ಎಂದಿದ್ದಾರೆ.

ರಾಖಿ ಪಾತ್ರದಲ್ಲಿ ವಿದ್ಯಾ ಬಾಲನ್‌ ಅಥವಾ ಆಲಿಯಾ ಭಟ್

ಈ ನಡುವೆ ರಾಖಿ ಸಾವಂತ್‌ ಆಪ್ತರು ಆಕೆಯ ಬಯೋಪಿಕ್‌ ಅನೌನ್ಸ್‌ ಮಾಡಿದ್ದಾರೆ. ರಾಖಿ ಜೀವನ ಚರಿತ್ರೆಯನ್ನು ಸಿನಿಮಾ ಮಾಡಲು ನಿರ್ಮಾಪಕರು ಮುಂದೆ ಬಂದಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಶೂಟಿಂಗ್‌ ಆರಂಭವಾಗಲಿದೆಯಂತೆ. ಆದರೆ ಆ ಸಿನಿಮಾಗೆ ಇನ್ನೂ ನಿರ್ದೇಶಕರು ಸಿಕ್ಕಿಲ್ಲ. ಅಷ್ಟೇ ಅಲ್ಲ, ತನ್ನ ಬಯೋಪಿಕ್‌ನಲ್ಲಿ ನಟಿಸಲು ರಾಖಿ ಸಾವಂತ್‌ ವಿದ್ಯಾ ಬಾಲನ್‌ ಅಥವಾ ಆಲಿಯಾ ಭಟ್‌ ಇಬ್ಬರನ್ನೂ ಮನವಿ ಮಾಡಿದ್ದಾರಂತೆ. ಇಬ್ಬರಲ್ಲಿ ಯಾರು ಒಪ್ಪಿದರೂ ನನಗೆ ಸರಿಯೇ. ಹಾಗೇ ತಮನ್ನಾ ಬಾಯ್‌ ಫ್ರೆಂಡ್‌ ವಿಜಯ್‌ ವರ್ಮಾ, ಆದಿಲ್‌ ಖಾನ್‌ ರೋಲ್‌ ಮಾಡಬೇಕು ಎಂದಿದ್ದಾರೆ. ಸಿನಿಮಾ ಯಾರು ನಿರ್ದೇಶನ ಮಾಡುತ್ತಾರೆ ಎಂಬ ಪ್ರಶ್ನೆಗೆ ಕಾಂತಾರ ನಿರ್ದೇಶಕ ರಿಷಬ್‌ ಶೆಟ್ಟಿ ಮಾಡಿದರೆ ಚೆನ್ನಾಗಿರುತ್ತದೆ ಎಂದಿದ್ದಾರೆ.

IPL_Entry_Point