Rani Mukerji: ನನಗೆ ಗರ್ಭಪಾತವಾಗಿತ್ತು, ಈಗ ನಿಮ್ಮೆಲ್ಲರ ಮುಂದೆ ಹೇಳಿಕೊಳ್ಳಬೇಕು ಎನಿಸಿತು; ಬಾಲಿವುಡ್ ನಟಿ ರಾಣಿ ಮುಖರ್ಜಿ
ಆ ಸಮಯದಲ್ಲಿ ನಾನು ಸಿನಿಮಾ ಪ್ರಮೋಷನ್ ಮಾಡಬೇಕಿತ್ತು. ನನ್ನ ವೈಯಕ್ತಿಕ ಸಮಸ್ಯೆ ಸಿನಿಮಾ ಪ್ರಮೋಷನ್‌ಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಯಾರಿಗೂ ಹೇಳಲಿಲ್ಲ. ಒಂದು ವೇಳೆ ಹೇಳಿದ್ದರೆ ಈ ವಿಚಾರವನ್ನು ತಿಳಿಸಿದರೆ ಬಹುಶ: ಸಿನಿಮಾ ಬಗ್ಗೆ ಗಮನ ಸೆಳೆಯಲು ಹೀಗೆ ಕನಿಕರ ಗಿಟ್ಟಿಸಿಕೊಳ್ಳುತ್ತಿದ್ದಾರೆಂದು ಯಾರೂ ತಪ್ಪು ತಿಳಿಯಬಾರದು ಎಂಬ ಕಾರಣಕ್ಕೆ ಹೇಳಿರಲಿಲ್ಲ.
ಬಾಲಿವುಡ್ ನಟಿ ರಾಣಿ ಮುಖರ್ಜಿ ಮದುವೆ ನಂತರ ಕೂಡಾ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಮದುವೆ ಮಗು ಆದ ನಂತರ ಕೆಲವು ದಿನಗಳ ಕಾಲ ರೆಸ್ಟ್‌ನಲ್ಲಿದ್ದ ಈ ಚೆಲುವೆ ಮೊದಲಿನಂತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಸಿನಿಮಾಗೆ ಬಂದ ಆರಂಭದಲ್ಲಿ ಇದ್ದ ಬೇಡಿಕೆ ಈಗಲೂ ರಾಣಿ ಮುಖರ್ಜಿಗೆ ಇದೆ. ಫ್ಯಾಮಿಲಿ ಚಿತ್ರರಂಗ ಎರಡನ್ನೂ ಸರಿ ಸಮನಾಗಿ ಬ್ಯಾಲೆನ್ಸ್ ಮಾಡುತ್ತಿದ್ದಾರೆ.
ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ್ದ ನಟಿ
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಾಣಿ ಮುಖರ್ಜಿ ತಮ್ಮ ಜೀವನದಲ್ಲಿ ನಡೆದ ಬೇಸರದ ಘಟನೆಯೊಂದನ್ನು ಹೇಳಿಕೊಂಡಿದ್ದಾರೆ. ಎರಡನೇ ಮಗುವಿನ ಆಗಮನದ ಖುಷಿಯಲ್ಲಿದ್ದ ನಮಗೆ ಗರ್ಭದಲ್ಲೇ ಮಗುವನ್ನು ಕಳೆದುಕೊಂಡ ಆಘಾತ ಎದುರಿಸಬೇಕಾಯ್ತು. 5 ತಿಂಗಳ ಗರ್ಭಿಣಿಯಾಗಿದ್ದಾಗ ಮಗುವನ್ನು ಕಳೆದುಕೊಂಡೆ ಎಂದು ಎಲ್ಲರೆದುರು ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆದ ಇಂಡಿಯನ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಣಿ ಮುಖರ್ಜಿ, ಜೀವನದಲ್ಲಿ ನಡೆದ ಈ ನೋವಿನ ವಿಚಾರವನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ.
2020 ಕೊರೊನಾ ಸಮಯದಲ್ಲಿ ಗರ್ಭಪಾತ
2020 ಕೋವಿಡ್ ಸಮಯದಲ್ಲಿ 5 ತಿಂಗಳ ಗರ್ಭಿಣಿಯಾಗಿದ್ದಾಗ ನನಗೆ ಗರ್ಭಪಾತವಾಯ್ತು. ಆದರೆ ಈ ವಿಚಾರವನ್ನು ನಾನು ಯಾರೊಂದಿಗೂ ಹಂಚಿಕೊಂಡಿರಲಿಲ್ಲ. ಆ ಸಮಯದಲ್ಲಿ ನಾನು ಸಿನಿಮಾ ಪ್ರಮೋಷನ್ ಮಾಡಬೇಕಿತ್ತು. ನನ್ನ ವೈಯಕ್ತಿಕ ಸಮಸ್ಯೆ ಸಿನಿಮಾ ಪ್ರಮೋಷನ್‌ಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಯಾರಿಗೂ ಹೇಳಲಿಲ್ಲ. ಒಂದು ವೇಳೆ ಹೇಳಿದ್ದರೆ ಈ ವಿಚಾರವನ್ನು ತಿಳಿಸಿದರೆ ಬಹುಶ: ಸಿನಿಮಾ ಬಗ್ಗೆ ಗಮನ ಸೆಳೆಯಲು ಹೀಗೆ ಕನಿಕರ ಗಿಟ್ಟಿಸಿಕೊಳ್ಳುತ್ತಿದ್ದಾರೆಂದು ಯಾರೂ ತಪ್ಪು ತಿಳಿಯಬಾರದು ಎಂಬ ಕಾರಣಕ್ಕೆ ಹೇಳಿರಲಿಲ್ಲ. ಇದೇ ಮೊದಲ ಬಾರಿಗೆ ನಾನು ಈ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಈಗಂತೂ ಎಲ್ಲರೂ ಎಲ್ಲಾ ವಿಚಾರವನ್ನೂ ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಾರೆ. ಈಗ ಅದನ್ನು ಹೇಳಿಕೊಳ್ಳಬೇಕು ಎನಿಸಿತು ಅದಕ್ಕೆ ಹೇಳಿದೆ ಎಂದು ರಾಣಿ ಮುಖರ್ಜಿ ಭಾವುಕರಾಗಿದ್ದಾರೆ.
ಆದಿತ್ಯ ಛೋಪ್ರಾ ಮದುವೆಯಾಗಿರುವ ರಾಣಿ ಮುಖರ್ಜಿ
ರಾಣಿ ಮುಖರ್ಜಿ ಮೂಲತ: ಪಶ್ಚಿಮ ಬಂಗಾಳಕ್ಕೆ ಸೇರಿದವರು. 1996ರಲ್ಲಿ ಬಂಗಾಳಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಅವರು ನಂತರ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಗುಲಾಮ್, ಮನ್, ಹಲೋ ಬ್ರದರ್, ಹರ್ ದಿಲ್ ಜೊ ಪ್ಯಾರ್ ಕರೇಗಾ, ಚೋರಿ ಚೋರಿ ಚುಪ್ಕೆ ಚುಪ್ಕೆ, ಚಲ್ತೇ ಚಲ್ತೇ, ಸಾವರಿಯಾ, ಬಂಟಿ ಔರ್ ಬಬ್ಲಿ, ಮರ್ದಾನಿ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೇ ವರ್ಷ ಮಾರ್ಚ್‌ನಲ್ಲಿ ತೆರೆ ಕಂಡ ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಿನಿಮಾ ಕಥೆ ಹಾಗೂ ರಾಣಿ ಮುಖರ್ಜಿ ನಟನೆಗೆ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
2014ರಲ್ಲಿ ರಾಣಿ ಮುಖರ್ಜಿ ಫಿಲ್ಮ್ ಮೇಕರ್ ಆದಿತ್ಯ ಛೋಪ್ರಾ ಅವರನ್ನು ಮದುವೆ ಆದರು. 2015ರಲ್ಲಿ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಆ ಮಗುವಿಗೆ ಅದಿರಾ ಎಂದು ಹೆಸರಿಟ್ಟಿದ್ದಾರೆ.