Naked Party: ಬೆರ್ಲಿನ್‌ನಲ್ಲಿ ಬೆತ್ತಲೆ ಪಾರ್ಟಿಗೆ ಹೋಗಿ ಬೆಚ್ಚಿಬಿದ್ದ ಸುಚಿತ್ರಾ ಕೃಷ್ಣಮೂರ್ತಿ; ಶೀ… ಅದನ್ನೆಲ್ಲ ನೋಡೋದು ತುಂಬಾ ಕಷ್ಟ
Suchitra Krishnamoorthi: ಕನ್ನಡದಲ್ಲಿ ವಿಶ್ವ ಸೇರಿದಂತೆ ಹಿಂದಿ ತಮಿಳು ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ನಟಿ ಸುಚಿತ್ರಾ ಕೃಷ್ಣಮೂರ್ತಿ ಇತ್ತೀಚೆಗೆ ಬೆರ್ಲಿನ್‌ನಲ್ಲಿ ನಡೆದ ಬೆತ್ತಲೆ ಪಾರ್ಟಿಯ ಅನುಭವವನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರು: ನಟಿ ಸುಚಿತ್ರಾ ಕೃಷ್ಣಮೂರ್ತಿ ಇತ್ತೀಚೆಗೆ ಯುರೋಪ್ ಪ್ರವಾಸ ಕೈಗೊಂಡಿದ್ದರು. ಈ ಸಮುದಲ್ಲಿ ಜರ್ಮನಿಯ ಬೆರ್ಲಿನ್‌ಗೂ ಹೋಗಿದ್ದರು. ಇದೇ ಸಂದರ್ಭದಲ್ಲಿ ಅಲ್ಲಿ ನಡೆದ ಬೆತ್ತಲೆ ಪಾರ್ಟಿಯಲ್ಲಿ ಭಾಗವಹಿಸಿದ್ದರಂತೆ. ಜೀವನದಲ್ಲಿ ಎಲ್ಲಾ ಗೊತ್ತಿರಬೇಕು ಎಂದು ಅಲ್ಲಿಗೆ ಹೋದೆ, ಆದರೆ, ಆ ಪಾರ್ಟಿ ಎಂಜಾಯ್ ಮಾಡಲು ನನ್ನಿಂದ ಸಾಧ್ಯವಾಗಲಿಲ್ಲ ಎಂದು ಅವರು ಬಾಲಿವುಡ್ ಹಂಗಾಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಈ ಕುರಿತು ಸುಚಿತ್ರಾ ಕೃಷ್ಣಮೂರ್ತಿ ಎಕ್ಸ್‌ನಲ್ಲೂ ಬರೆದಿದ್ದಾರೆ. "ಬರ್ಲಿನ್‌ನಲ್ಲಿ ನಡೆದ ದೇಹದ ಪಾಟಿಸಿವಿಟಿ/ಬೆತ್ತಲೆ ಪಾರ್ಟಿಯಲ್ಲಿ ಭಾಗವಹಿಸಿದೆ. ಇದಕ್ಕೆ ಭಾಗಿಯಾದ ಬಳಿಕ ಅರಿವಾಯ್ತು ಯಾವತ್ತೂ ನಿಮ್ಮ ಮಿದುಳುಗಳು ಬೀಳುವಷ್ಟು ಮುಕ್ತ ಮನಸ್ಸಿನಿಂದ ಇರಬಾರದೆಂದು ಅರಿವಾಯ್ತು. ನಾನು ಎಂದೆಂದಿಗೂ ದೇಸಿ ಹುಡುಗಿ. ಈ ಪಾರ್ಟಿಯಿಂದ ಬಂದ ತಕ್ಷಣ ಒಂದು ಜಳಕ ಮತ್ತು ಕೊಂಚ ಹೊತ್ತು ಗಾಯತ್ರಿ ಮಂತ್ರ ಪಠಿಸಬೇಕಿದೆ" ಎಂದು ಎಕ್ಸ್‌ನಲ್ಲಿ ಸುಚಿತ್ರಾ ಕೃಷ್ಣಮೂರ್ತಿ ಪೋಸ್ಟ್ ಮಾಡಿದ್ದರು.
ಹೇಗಿತ್ತಂತೆ ಬೆತ್ತಲೆ ಪಾರ್ಟಿ ಅನುಭವ?
ಈ ಕುರಿತು ಬಾಲಿವುಡ್ ಹಂಗಾಮಕ್ಕೆ ನೀಡಿದ ಸಂದರ್ಶನದಲ್ಲಿ ಸುಚಿತ್ರಾ ಕೃಷ್ಣಮೂರ್ತಿ ಹೀಗೆ ಹೇಳಿದ್ದಾರೆ. "ಬರ್ಲಿನ್‌ನಲ್ಲಿ ಇದು ತುಂಬಾ ಅಂದ್ರೆ ತುಂಬಾ ಸಾಮಾನ್ಯ ಸಂಗತಿ. ದೇಹದ ಕುರಿತು ಪಾಸಿಟಿವಿಟಿ ಬೆಳೆಸಿಕೊಳ್ಳಲು ಉತ್ತೇಜನ ನೀಡುವುದು ಇದರ ಉದ್ದೇಶ. ಜತೆಗೆ ನಮ್ಮ ದೇಹದ ಕುರಿತು ಇರುವ ಭ್ರಮೆಗಳನ್ನು ಕಳಚಿಕೊಳ್ಳುವುದು ಇದರ ಉದ್ದೇಶ. ಈ ಕುರಿತು ಕೇಳಿದಾಗ, ನೋಡುವ, ಈ ಕುರಿತು ಜೀವನದಲ್ಲಿ ಒಂದು ಅನುಭವ ಆಗಲಿ ಎಂದುಕೊಂಡೆ. ಸ್ನೇಹಿತರೊಬ್ಬರ ಸ್ನೇಹಿತರಿಗೆ ಸೇರಿದ ಬಾರ್‌ವೊಂದರಲ್ಲಿ ಈ ಪಾರ್ಟಿ ಆಯೋಜಿಸಲಾಗಿತ್ತು. ನಾನು ಕೂಡ ಅತಿಥಿಗಳ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದೆ. ಅಲ್ಲಿಗೆ ಹೋಗಿ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ನಾನು ತುಂಬಾ ದೇಸಿ ಹುಡುಗಿ. ಇನ್ನೊಬ್ಬರ ಖಾಸಗಿ ಭಾಗಗಳನ್ನು ನೋಡಲು ನನ್ನಿಂದ ಸಾಧ್ಯವಾಗಲಿಲ್ಲ" ಎಂದು ಸುಚಿತ್ರಾ ಕೃಷ್ಣಮೂರ್ತಿ ಹೇಳಿದ್ದಾರೆ.
"ಇವೆಲ್ಲವನ್ನೂ ಉತ್ತಮ ಸ್ಪಿರಿಟ್‌ನಿಂದ ತೆಗೆದುಕೊಳ್ಳಲಾಗುತ್ತದೆ. ಇದು ಮೋಜು ಮತ್ತು ಸಕಾರಾತ್ಮಕ ವಿಷಯವಾಗಿದೆ. ಇದು ಅಶ್ಲೀಲವೂ ಅಲ್ಲ. ಭಾರತೀಯರಾದ ನಮ್ಮ ಆಲೋಚನೆ ಬೇರೆ ಇರಬಹುದು. ನಮ್ಮ ದೇಹದ ಕುರಿತು ಸಾಕಷ್ಟು ಜಾಗೃತರಾಗಿರುವಂತೆ ಬೆಳೆಸಲಾಗಿದೆ. ಅಲ್ಲಿನವರಿಗೆ ಇದು ಸಾಮಾನ್ಯ ವಿಚಾರ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. "ರಾತ್ರಿಯಿಂದ ಬೆಳಗಿನ ತನಕ ಆಯೋಜಿಸಲಾದ ಪಾರ್ಟಿ ಅದಾಗಿತ್ತು. ಆದರೆ, ನನಗೆ ಅಲ್ಲಿ ಸುಮಾರು 20 ನಿಮಿಷ ಇರುವುದು ಕಷ್ಟವಾಯ್ತು. ಜೀವನದಲ್ಲಿ ಒಂದು ಹೊಸ ಅನುಭವವಾಯ್ತು. ಆದರೆ, ನಾನು ದೇಸಿ ಹುಡುಗಿ" ಎಂದು ಅವರು ಹೇಳಿದ್ದಾರೆ.
ಸುಚಿತ್ರಾರ ಮಗಳ ಪ್ರತಿಕ್ರಿಯೆ
ಅಮ್ಮ ಬೆತ್ತಲೆ ಪಾರ್ಟಿಗೆ ಹೋಗಿರುವ ವಿಷಯಕ್ಕೆ ಸಂಬಂಧಪಟ್ಟಂತೆ ಸುಚಿತ್ರರ ಮಗಳು ಕಾವೇರಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಇಂತಹ ಪಾರ್ಟಿಗೆ ಹೋಗ್ತಿನಾ ಗೊತ್ತಿಲ್ಲ, ಹೋದ್ರೆ ಖುಷಿ ಪಡುವೆ ಎಂದು ಅವರು ಹೇಳಿದ್ದಾರೆ. "ನಾನು ಇಂತಹ ಪಾರ್ಟಿಗಳಿಗೆ ಹೋದ್ರೆ ಅಮ್ಮ ಖಂಡಿತಾ ಖುಷಿಪಡುವಳು. ನಾನು 20 ನಿಮಿಷದಲ್ಲಿ ಅಲ್ಲಿಂದ ಓಡಿ ಬಂದ್ರೂ ಆಕೆ ಖುಷಿಪಡಬಹುದು. ಏಕೆಂದರೆ, ಇಂತಹ ಅನುಭವಗಳಿಗೆ ಹೋಗಲು ಮನಸ್ಸು ಮಾಡುವ ಗುಣವನ್ನು ಅವಳು ಖಂಡಿತಾ ಇಷ್ಟಪಡುವವಳು" ಎಂದಿದ್ದಾರೆ.