Taapsee Pannu: ಚೆಲುವಿ ತಾಪ್ಸೆ ಪನ್ನುಗೆ ಇಂದು ಹುಟ್ಟುಹಬ್ಬದ ಸಂಭ್ರಮ, ಬಹುಭಾಷಾ ನಟಿಯ ಕುರಿತು ಸೋಜಿಗದ ಸಂಗತಿಗಳು
Taapsee Pannu: ಬಾಲಿವುಡ್ ನಟಿ ಮೃಣಾಲ್ ಠಾಕೂರ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿರುವ ತಾಪ್ಸೆ ಪನ್ನು ಕುರಿತು ಹೆಚ್ಚಿನ ವಿವರ ತಿಳಿದುಕೊಳ್ಳೋಣ ಬನ್ನಿ.
(1 / 6)
ತಾಪ್ಸಿ ಪನ್ನು ಆಗಸ್ಟ್ 1, 1987 ರಂದು ದೆಹಲಿಯಲ್ಲಿ ಜನಿಸಿದರು. ಇವರು ಪಂಜಾಬ್‌ನ ಲುಧಿಯಾನ ಮೂಲದವರು. ಆದರೆ, ಈಕೆ ಬೆಳೆದದ್ದು, ಶಿಕ್ಷಣ ಪಡೆದದ್ದು ದೆಹಲಿಯಲ್ಲಿ. ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿರುವ ತಾಪ್ಸೆ ಪನ್ನು ಎರಡು ಫಿಲ್ಮ್ ಫೇರ್ ಅವಾರ್ಡ್ ಪಡೆದಿದ್ದಾರೆ.
(Instagram/taapsee)(2 / 6)
ಜುಮ್ಮಂದಿ ನಾದಂ ಎಂಬ ತೆಲುಗು ಸಿನಿಮಾದ ಮೂಲಕ 2010ರಲ್ಲಿ ಇವರು ಚಿತ್ರರಂಗಕ್ಕೆ ಕಾಲಿಟ್ಟರು. ಇದಾದ ಬಳಿಕ 2021ರಲ್ಲಿ ಅಂದಕಾಲಂ ಎಂಬ ತಮಿಳು ಸಿನಿಮಾದಲ್ಲಿ ನಟಿಸಿದರು. 2013ರಲ್ಲಿ ಡೇವಿಡ್ ಧವನ್ ಅವರ ಕಾಮಿಡಿ ಸಿನಿಮಾ ಚಸ್ಮಿ ಬದ್ದೂರ್ ಮೂಲಕ ಬಾಲಿವುಡ್‌ಗೆ ಎಂಟ್ರಿ ನೀಡಿದರು.
(Instagram/taapsee)(3 / 6)
2015ರಲ್ಲಿ ಬೇಬಿ ಎಂಬ ಹಿಂದಿ ಸ್ಪೈ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸಿದರು. ಇದಾದ ಬಳಿಕ 2016ರಲ್ಲಿ ಕೋರ್ಟ್ ರೂಂ ಸಿನಿಮಾ ಪಿಂಕ್ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದರು. ಪಿಂಕ್ ಸಿನಿಮಾವು ಉತ್ತಮ ವಿಮರ್ಶೆ ಪಡೆಯಿತು. ವಾಣಿಜ್ಯಿಕವಾಗಿಯೂ ಲಾಭ ಪಡೆಯಿತು.
(Instagram/taapsee)(4 / 6)
ಇದಾದ ಬಳಿಕ ಗಾಝಿ ಅಟಾಕ್, ಮುಲ್ಕ್, ಮನ್ಮರಿಯಾನ್, ಬಾಆದ್ಲಾ, ಮಿಷನ್ ಮಂಗಳ್ ಮುಂತಾದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶಾರ್ಪ್ ಶೂಟರ್ ಪ್ರಕಾಶಿ ತೋಮರ್ ಅವರ ಬಯೋಪಿಕ್ ಸಾಂದ್ ಕಿ ಆಂಕ್‌ನಲ್ಲಿ ನಟಿಸಿದರು. ಈ ಸಿನಿಮಾದ ನಟನೆಗೆ ಅತ್ಯುತ್ತಮ ನಟಿ ಫಿಲ್ಮ್ ಫೇರ್ ಅವಾರ್ಡ್ ಪಡೆದರು.
(Instagram/taapsee)(5 / 6)
ತಾಪ್ಸಿ ನಟನೆಯ ತಪ್ಪಡ್ ಸಿನಿಮಾ (2020) ಕೂಡ ಸಾಕಷ್ಟು ಮೆಚ್ಚುಗೆ ಪಡೆಯಿತು. ಈ ಸಿನಿಮಾದ ನಟನೆಗೂ ಅತ್ಯುತ್ತಮ ನಟಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು. ದಿಲ್ರೂಬಾ, ರಶ್ಮಿ ರಾಕೆಟ್, ಲೂಪ್ ಲಾಪೆಟಾ ಮುಂತಾದ ಸಿನಿಮಾಗಳಲ್ಲಿ ನಟಿಸಿದರು.
(Instagram/taapsee)ಇತರ ಗ್ಯಾಲರಿಗಳು