ಸನ್‌ ಸೆಟ್‌ ಡ್ರಿಂಕ್‌ ಟ್ರೈ ಮಾಡಿದ್ದೀರಾ? ತಾಪ್ಸಿ ಪನ್ನು ಫಿಟ್ನೆಸ್‌ ಸೀಕ್ರೇಟ್‌ ಇದು
ಕನ್ನಡ ಸುದ್ದಿ  /  ಮನರಂಜನೆ  /  ಸನ್‌ ಸೆಟ್‌ ಡ್ರಿಂಕ್‌ ಟ್ರೈ ಮಾಡಿದ್ದೀರಾ? ತಾಪ್ಸಿ ಪನ್ನು ಫಿಟ್ನೆಸ್‌ ಸೀಕ್ರೇಟ್‌ ಇದು

ಸನ್‌ ಸೆಟ್‌ ಡ್ರಿಂಕ್‌ ಟ್ರೈ ಮಾಡಿದ್ದೀರಾ? ತಾಪ್ಸಿ ಪನ್ನು ಫಿಟ್ನೆಸ್‌ ಸೀಕ್ರೇಟ್‌ ಇದು

2 ವರ್ಷಗಳ ಹಿಂದೆ ತಾಪ್ಸಿ, 'ರಶ್ಮಿ ರಾಕೆಟ್‌' ಎಂಬ ಸಿನಿಮಾದಲ್ಲಿ ನಟಿಸಿದ್ದರು. ಗುಜರಾತಿನ ಅಥ್ಲೀಟ್‌ ರಶ್ಮಿ ಚಿಬ್ಬೆರ್‌ ಜೀವನ ಆಧರಿಸಿದ ತಯಾರಾದ ಈ ಚಿತ್ರಕ್ಕಾಗಿ ತಾಪ್ಸಿ ಸಾಕಷ್ಟು ವರ್ಕೌಟ್‌ ಮಾಡಿದ್ದರು. ಪ್ರತಿ ದಿನ ಇಂತಿಷ್ಟು ಕಿಲೋ ಮೀಟರ್‌ ಓಡುತ್ತಿದ್ದರು. ವರ್ಕೌಟ್‌ ಮಾಡುತ್ತಿದ್ದರು.

ಬಾಲಿವುಡ್‌ ನಟಿ ತಾಪ್ಸಿ ಪನ್ನು
ಬಾಲಿವುಡ್‌ ನಟಿ ತಾಪ್ಸಿ ಪನ್ನು (PC: Taapsee Pannu)

ಸಿನಿಮಾ ನಟಿಯರು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುತ್ತಾರೆ. ತಾವು ಪಡೆಯುವ ಅರ್ಧ ಸಂಭಾವನೆಯನ್ನು ತಮ್ಮ ಸೌಂದರ್ಯ ಹಾಗೂ ಫಿಟ್ನೆಸ್‌ ಕಾಪಾಡಿಕೊಳ್ಳಲು ಖರ್ಚು ಮಾಡುತ್ತಾರೆ. ಕೆಲವು ನಟಿಯರು ಕಾಸ್ಮೆಟಿಕ್‌ ಸರ್ಜರಿ ಮೊರೆ ಹೋದರೆ, ಇನ್ನೂ ಕೆಲವರು ನೈಸರ್ಗಿವಾಗಿ ತಮ್ಮ ಅಂದ ಹೆಚ್ಚಿಸಿಕೊಳ್ಳುತ್ತಾರೆ.

ತೆಲುಗು ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ತಾಪ್ಸಿ

ನಟಿಯರು ಆಗ್ಗಾಗ್ಗೆ ಅಭಿಮಾನಿಗಳಿಗಾಗಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಬ್ಯೂಟಿ ಸೀಕ್ರೇಟ್‌ ಹಂಚಿಕೊಳ್ಳುತ್ತಾರೆ. ಬಾಲಿವುಡ್‌ ನಟಿ ತಾಪ್ಸಿ ಪನ್ನು ಕೂಡಾ 2 ವರ್ಷಗಳ ಹಿಂದೆ ಹಂಚಿಕೊಂಡಿದ್ದ ಪೋಸ್ಟ್‌ವೊಂದು ಈಗ ಮತ್ತೆ ವೈರಲ್‌ ಆಗುತ್ತಿದೆ. ತಾಪ್ಸಿ ಪನ್ನು ದೆಹಲಿಗೆ ಸೇರಿದ ಹುಡುಗಿ. ಆದರೆ ಆಕೆ ಕರಿಯರ್‌ ಆರಂಭಿಸಿದ್ದು 2010ರಲ್ಲಿ ತೆರೆ ಕಂಡ 'ಜುಮ್ಮಂದಿ ನಾದಂ' ತೆಲುಗು ಸಿನಿಮಾ ಮೂಲಕ. ಅದಾದ ನಂತರ ಕೂಡಾ ಆಕೆ ಅನೇಕ ತೆಲುಗು ಸಿನಿಮಾಗಳಲ್ಲಿ ನಟಿಸಿದರು. ಈಗ ತೆಲುಗು ಸಿನಿಮಾಗಳಿಂದ ದೂರ ಉಳಿದು ಸಂಪೂರ್ಣ ಬಾಲಿವುಡ್‌ನಲ್ಲೇ ಬ್ಯುಸಿ ಆಗಿದ್ದಾರೆ.

2 ವರ್ಷಗಳ ಹಿಂದೆ ತಾಪ್ಸಿ, 'ರಶ್ಮಿ ರಾಕೆಟ್‌' ಎಂಬ ಸಿನಿಮಾದಲ್ಲಿ ನಟಿಸಿದ್ದರು. ಗುಜರಾತಿನ ಅಥ್ಲೀಟ್‌ ರಶ್ಮಿ ಚಿಬ್ಬೆರ್‌ ಜೀವನ ಆಧರಿಸಿದ ತಯಾರಾದ ಈ ಚಿತ್ರಕ್ಕಾಗಿ ತಾಪ್ಸಿ ಸಾಕಷ್ಟು ವರ್ಕೌಟ್‌ ಮಾಡಿದ್ದರು. ಪ್ರತಿ ದಿನ ಇಂತಿಷ್ಟು ಕಿಲೋ ಮೀಟರ್‌ ಓಡುತ್ತಿದ್ದರು. ವರ್ಕೌಟ್‌ ಮಾಡುತ್ತಿದ್ದರು. ಒಟ್ಟಿನಲ್ಲಿ ಚಿತ್ರಕ್ಕಾಗಿ ಅವರು ಸಾಕಷ್ಟು ಎಫರ್ಟ್‌ ಹಾಕಿದ್ದರು. ಈ ಸಿನಿಮಾ 2021 ಅಕ್ಟೋಬರ್‌ನಲ್ಲಿ ತೆರೆ ಕಂಡಿತ್ತು. ಈ ಸಿನಿಮಾಗಾಗಿ ತಾಪ್ಸಿ ವರ್ಕೌಟ್‌ ಮಾಡುತ್ತಿದ್ದ ಸಮಯದಲ್ಲಿ ದೇಹದ ತೂಕ ಇಳಿಸಲು ಹಾಗೂ ಸ್ನಾಯುಗಳ ನೋವನ್ನು ತಡೆಯಲು ಸಹಾಯ ಮಾಡುವ ಡ್ರಿಂಕ್ಸ್‌ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ನೀಡಿದ್ದರು.

ಫಿಟ್ನೆಸ್‌ ಸೀಕ್ರೇಟ್‌ ಹಂಚಿಕೊಂಡ ತಾಪ್ಸಿ

''ನಾನು ಬೇಯಿಸಿದ ಆಹಾರವನ್ನು ಸೇವಿಸುವುದಿಲ್ಲ. ಹಾಗೇ ಅನ್‌ಫಿಲ್ಟರ್ಡ್‌ ಆಪಲ್‌ ಸೈಡರ್‌ ವಿನಿಗರ್‌ ತೂಕ ಇಳಿಸಲು ಬಹಳ ಸಹಾಯ ಮಾಡುತ್ತದೆ. ಬಹಳಷ್ಟು ಜನರು ಇದರ ಉಪಯೋಗ ಪಡೆದುಕೊಂಡಿದ್ದಾರೆ. ನಾನು ಸೇವಿಸುವ ಡ್ರಿಂಕ್‌ನಲ್ಲಿ ಆಪಲ್‌ ಸೈಡರ್‌ ವಿನಿಗರ್‌, ಮೆಂತ್ಯ, ಅರಿಶಿನ ಹಾಗೂ ಶುಂಠಿ ಇರುತ್ತದೆ. ತೂಕ ಕಳೆದುಕೊಳ್ಳಲು ಹಾಗೂ ಇಮ್ಯೂನಿಟಿ ಪವರ್‌ ಹೆಚ್ಚಿಸಿಕೊಳ್ಳಲು ಈ ಡ್ರಿಂಕ್ಸ್‌ ಬಹಳ ಸಹಾಯಕಾರಿ. ಶುಂಠಿ ಹಾಗೂ ಅರಿಶಿನದಲ್ಲಿ ನೈಸರ್ಗಿಕ ಉರಿಯೂತದ ವಿರುದ್ಧ ಹೋರಾಡುವ ಗುಣಗಳಿವೆ. ನಾನು ಕಠಿಣ ವರ್ಕೌಟ್‌ ಮಾಡಿದಾಗ ಉಂಟಾಗುವ ಸ್ನಾಯು ನೋವು ಹಾಗೂ ಉರಿಯೂತದ ಸಮಸ್ಯೆಯನ್ನು ಈ ಎರಡೂ ನೈಸರ್ಗಿಕ ಪದಾರ್ಥಗಳು ಕಡಿಮೆ ಮಾಡುತ್ತದೆ'' ಎಂದು ತಾಪ್ಸಿ ಬರೆದುಕೊಂಡಿದ್ದಾರೆ.

ತಾಪ್ಸಿ ಪನ್ನು ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ವೋ ಲಡ್ಕಿ ಹೇ ಕಹಾ, ಡಂಕಿ, ಫಿರ್‌ ಆಯಿ ಹಸೀನ್‌ ದಿಲ್‌ರುಬಾ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.

Whats_app_banner