ಕನ್ನಡ ಸುದ್ದಿ  /  ಮನರಂಜನೆ  /  ಮೊಟ್ಟೆ ಉಡುಗೆ ತೊಟ್ಟ ನಟಿ ಉರ್ಫಿ ಜಾವೇದ್‌; ಮೊಟ್ಟೆಗಳ ಮೇಲೆ ಕಣ್ಣು ನೆಟ್ಟ ನೆಟ್ಟಿಗರು ಹೇಳಿದ್ದೇ ಬೇರೆ

ಮೊಟ್ಟೆ ಉಡುಗೆ ತೊಟ್ಟ ನಟಿ ಉರ್ಫಿ ಜಾವೇದ್‌; ಮೊಟ್ಟೆಗಳ ಮೇಲೆ ಕಣ್ಣು ನೆಟ್ಟ ನೆಟ್ಟಿಗರು ಹೇಳಿದ್ದೇ ಬೇರೆ

Actress Urfi Javed: ವಿಭಿನ್ನ ಫ್ಯಾಷನ್‌ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗಿರುವ ನಟಿ ಉರ್ಫಿ ಜಾವೇದ್‌ ಇದೀಗ ಹೊಚ್ಚ ಹೊಸ ಮೊಟ್ಟೆ ಉಡುಗೆ ಜತೆ ಬಂದಿದ್ದಾರೆ. ಇದು ಜಿಮ್‌ಗೆ ಹೋಗುವವರಿಗೆ ಸರಿಯಾದ ಉಡುಗೆ ಎಂದು ನೆಟ್ಟಿಗರು ಹೇಳಿದ್ದಾರೆ.

ಮೊಟ್ಟೆ ಉಡುಗೆ ತೊಟ್ಟ ನಟಿ ಉರ್ಫಿ ಜಾವೇದ್‌; ಮೊಟ್ಟೆಗಳ ಮೇಲೆ ಕಣ್ಣು ನೆಟ್ಟ ನೆಟ್ಟಿಗರು ಹೇಳಿದ್ದೇ ಬೇರೆ
ಮೊಟ್ಟೆ ಉಡುಗೆ ತೊಟ್ಟ ನಟಿ ಉರ್ಫಿ ಜಾವೇದ್‌; ಮೊಟ್ಟೆಗಳ ಮೇಲೆ ಕಣ್ಣು ನೆಟ್ಟ ನೆಟ್ಟಿಗರು ಹೇಳಿದ್ದೇ ಬೇರೆ

ಬೆಂಗಳೂರು: ಬಾಲಿವುಡ್‌ ನಟಿ, ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ ಉರ್ಫಿ ಜಾವೇದ್‌ "ಹೊಸ ಬಗೆಯ ಫ್ಯಾಷನ್‌" ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತ ಇರುತ್ತಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸದಾ ಭಿನ್ನವಾದ ಫೋಟೋಶೂಟ್‌, ವಿಡಿಯೋಗಳನ್ನು ಹಂಚಿಕೊಳ್ಳುತ್ತ ಫ್ಯಾನ್ಸ್‌ಗೆ ಮುದ ನೀಡುತ್ತಾರೆ. ಇದೀಗ ಅಂಡ ಕ ಪಂಡ ಎಂದು ಮೊಟ್ಟೆಗಳನ್ನೇ ಉಡುಗೆಯಾಗಿ ಧರಿಸಿದ್ದಾರೆ. ಇವರು ಪಾರದರ್ಶಕ ಉಡುಗೆ ತೊಟ್ಟಿದ್ದು, ಲಂಗದಂತೆ ಒಂದಿಷ್ಟು ಮೊಟ್ಟೆಗಳನ್ನು ಸಾಲಾಗಿ ಕಟ್ಟಿಕೊಂಡಿದ್ದಾರೆ. ಇದನ್ನು ಮೊಟ್ಟೆ ಸ್ಕರ್ಟ್‌ ಎನ್ನಬಹುದೇನೋ.

ಟ್ರೆಂಡಿಂಗ್​ ಸುದ್ದಿ

ಮೊಟ್ಟೆ ಉಡುಗೆ ನೋಡಿ ನೆಟ್ಟಿಗರು ಏನಂದ್ರು?

ಈ ವಿಡಿಯೋದಲ್ಲಿ ಮೊದಲಿಗೆ ಉರ್ಫಿ ಜಾವೇದ್‌ ಎರಡು ಮೊಟ್ಟೆಗಳನ್ನು ತೋರಿಸುತ್ತಾರೆ. ಇದಾದ ಬಳಿಕ ಮೊಟ್ಟೆ ಉಡುಗೆಯಲ್ಲಿ ಫ್ಯಾಷನ್‌ ಶೋ ನಡೆಸಿದ್ದಾರೆ. ಉರ್ಫಿ ಜಾವೇದ್‌ ಮೊಟ್ಟೆ ಸ್ಕರ್ಟ್‌ ನೋಡಿ ಅಭಿಮಾನಿಗಳು ನಾನಾ ಬಗೆಯ ಕಾಮೆಂಟ್‌ ಮಾಡಿದ್ದಾರೆ. "ನನ್ನ ಪರೀಕ್ಷೆಯ ಅಂಕಗಳನ್ನು ಏಕೆ ಧರಿಸಿದ್ದೀರಿ" ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ಈ ಮೂಲಕ ಎಗ್ಸಾಂನಲ್ಲಿ ಮೊಟ್ಟೆ ದೊರಕುತ್ತಿತ್ತು ಎಂದು ನೆನಪಿಸಿಕೊಂಡಿದ್ದಾರೆ. "ಇಷ್ಟೊಂದು ಮೊಟ್ಟೆ ಧರಿಸಿ ಅಷ್ಟು ವೇಗದಲ್ಲಿ ಹೇಗೆ ಸಾಗ್ತಾರೆ" ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. "ಬಹುಶಃ ಅದು ರಿಯಲ್‌ ಮೊಟ್ಟೆ ಆಗಿರದು" ಎಂದು ಇನ್ನೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. "ಉಡುಗೆ ಚೆನ್ನಾಗಿದೆ, ಹೇಗೆ ಕುಳಿತುಕೊಳ್ಳುವಿರಿ" ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. ಹೀಗೆ ಈಕೆಯ ಮೊಟ್ಟೆ ಉಡುಗೆಯನ್ನು ಮೆಚ್ಚಿ ಫ್ಯಾನ್ಸ್‌ ನಾನಾ ಬಗೆಯ ಕಾಮೆಂಟ್ಸ್‌ ಮಾಡಿದ್ದಾರೆ.

ಉರ್ಫಿ ಜಾವೇದ್‌ ಪರಿಚಯ

ಬಾಲಿವುಡ್‌ ನಟಿ ಉರ್ಫಿ ಜಾವೇದ್‌ ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ. ಇವರು 1997ರ ಅಕ್ಟೋಬರ್‌ 15ರಂದು ಲಖನೌನ ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಕಿರುತೆರೆ ನಟಿಯಾಗಿ ಮತ್ತು ಸೋಷಿಯಲ್‌ ಮೀಡಿಯಾ ಪರ್ಸನಾಲಿಟಿಯಾಗಿ ಜನಪ್ರಿಯತೆ ಪಡೆದಿದ್ದಾರೆ. ವಿಶೇಷವಾಗಿ ವಿನೂತನ ಫ್ಯಾಷನ್‌ ಪರ್ಸನಾಲಿಟಿಯಿಂದ ಫೇಮಸ್‌ ಆಗಿದ್ದಾರೆ. 2021ರಲ್ಲಿ ವೂಟ್‌ನಲ್ಲಿ ಬಿಗ್‌ ಬಾಸ್‌ ಒಟಿಟಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು.

ಉರ್ಫಿ ಜಾವೇದ್‌ ಬಾಲ್ಯ ಕಷ್ಟಕರವಾಗಿತ್ತಂತೆ. ತಂದೆಯ ಕೆಟ್ಟ ವರ್ತನೆಯಿಂದ ಬೇಸೆತ್ತಿದ್ದರು. ಮೇರಿ ದುರ್ಗಾ ಸಿನಿಮಾದ ನಟ ಪಾರಸ್‌ ಕಲ್ನಾವತ್‌ ಜತೆ ಡೇಟಿಂಗ್‌ ಮಾಡಿ ಸುದ್ದಿಯಲ್ಲಿದ್ದರು. ಕೆಲವು ವರ್ಷಗಳಲ್ಲಿ ಇವರಿಬ್ಬರು ಬ್ರೇಕಪ್‌ಗೊಂಡಿದ್ದರು. ತನ್ನ ಹೆಸರನ್ನು ಉರ್ಫಿ ಬದಲು ಊರ್ಫಿ ಎಂದು ಬದಲಾಯಸಿಕೊಂಡಿದ್ದರು. ಸೋನಿ ಟೀವಿಯಲ್ಲಿ ಪ್ರಸಾರವಾಗುತ್ತಿದ್ದ ಬಡೇ ಬಯ್ಯಾ ಕಿ ದುಲ್ಹಾನಿಯಾದಲ್ಲಿ ಅವನಿ ಪಂತ್‌ ಆಗಿ ನಟಿಸಿದ್ದರು. ಚಂದ್ರ ನಂದಿನಿ ಸೀರಿಯಲ್‌ನಲ್ಲಿ ಛಾಯಾ ಆಗಿದ್ದರು. ಮೇರಿ ದುರ್ಗಾ ಸೀರಿಯಲ್‌ನಲ್ಲಿ ಆರತಿಯಾಗಿ ಕಾಣಿಸಿಕೊಂಡಿದ್ದರು. ಹೀಗೆ ಹಲವು ಸೀರಿಯಲ್‌ಗಳ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ಇವರು ಇತ್ತೀಚಿನ ವರ್ಷಗಳಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೆಷನ್‌ ಉಂಟುಮಾಡುತ್ತಿದ್ದಾರೆ.

IPL_Entry_Point