ಉಫ್‌...! ಉರ್ಫಿ ಜಾವೇದ್‌ ಸೀರೆ ಫ್ಯಾಷನ್‌ ಕಂಡು ಕಂಗಲಾದ ನೆಟ್ಟಿಗರು; ಉರ್ಫಿ ಪ್ರಯೋಗಗಳಿಗೆ ಕೊನೆಯುಂಟೆ!-bollywood news actress urfi javed saree fashion video viral fans says insult of traditional dress pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಉಫ್‌...! ಉರ್ಫಿ ಜಾವೇದ್‌ ಸೀರೆ ಫ್ಯಾಷನ್‌ ಕಂಡು ಕಂಗಲಾದ ನೆಟ್ಟಿಗರು; ಉರ್ಫಿ ಪ್ರಯೋಗಗಳಿಗೆ ಕೊನೆಯುಂಟೆ!

ಉಫ್‌...! ಉರ್ಫಿ ಜಾವೇದ್‌ ಸೀರೆ ಫ್ಯಾಷನ್‌ ಕಂಡು ಕಂಗಲಾದ ನೆಟ್ಟಿಗರು; ಉರ್ಫಿ ಪ್ರಯೋಗಗಳಿಗೆ ಕೊನೆಯುಂಟೆ!

Urfi Javed Viral Video: ಬಾಲಿವುಡ್‌ ನಟಿ ಮತ್ತು ಸೋಷಿಯಲ್‌ ಮೀಡಿಯಾ ಸೆಲೆಬ್ರಿಟಿ ಉರ್ಫಿ ಜಾವೇದ್‌ ಇತ್ತೀಚೆಗೆ ಕಾರ್ಯಕ್ರಮವೊಂದಕ್ಕೆ ತೊಡೆ ಕಾಣಿಸುವಂತಹ ಸೀರೆಯುಟ್ಟು ಆಗಮಿಸಿದ್ದಾರೆ. ಇವರ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಉರ್ಫಿ ಜಾವೇದ್‌ ಫೋಟೋಗಳು
ಉರ್ಫಿ ಜಾವೇದ್‌ ಫೋಟೋಗಳು (First Photo Courtesy- instantbollywood)

ಬೆಂಗಳೂರು: ತನ್ನ ಭಿನ್ನ ಫ್ಯಾಷನ್‌ ಉಡುಗೆಗಳ ಮೂಲಕ ವೈರಲ್‌ ಆಗುತ್ತಿರುವ ಬಾಲಿವುಡ್‌ ನಟಿ ಉರ್ಫಿ ಜಾವೇದ್‌ ಇತ್ತೀಚೆಗೆ ಧರಿಸಿದ ಸೀರೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈಕೆಯ ಈ ಡ್ರೆಸ್‌ಗೆ ನೆಗೆಟಿವ್‌ ಕಾಮೆಂಟ್‌ಗಳೇ ಹೆಚ್ಚಾಗಿವೆ. ಸಾಂಪ್ರದಾಯಿಕ ಸೀರೆಗೆ ಮಾಡುವ ಅವಮಾನ ಇದೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಉರ್ಫಿ ಜಾವೇದ್‌ ವಿಡಿಯೋ ವೈರಲ್‌

ಇನ್‌ಸ್ಟಾಂಟ್‌ ಬಾಲಿವುಡ್‌ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಉರ್ಫಿ ಜಾವೇದ್‌ ಸೀರೆ ಉಟ್ಟುಕೊಂಡು ಕಾರ್ಯಕ್ರಮವೊಂದಕ್ಕೆ ಆಗಮಿಸುವ ದೃಶ್ಯವಿದೆ. ಅಚ್ಚರಿಯೆಂದರೆ ಸೊಂಟ, ತೊಡೆ ತುಸು ಕಾಣಿಸುವಂತೆ ಸೀರೆ ಧರಿಸಿದ್ದಾರೆ. ವೈರಲ್‌ ಆಗಲು ಇಷ್ಟೊಂದು ಅಶ್ಲೀಲ ಪ್ರದರ್ಶನ ಅಗತ್ಯವಿರಲಿಲ್ಲ ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ. ಉದ್ದೇಶಪೂರ್ವಕವಾಗಿ ಆ ವಿಡಿಯೋವನ್ನು ಈ ಲೇಖನದಲ್ಲಿ ಎಂಬೆಡ್‌ ಮಾಡಿಲ್ಲ.

ಉರ್ಫಿ ಜಾವೇದ್‌ ಇನ್ನಷ್ಟು ವಿಡಿಯೋಗಳು

ಉರ್ಫಿ ಜಾವೇದ್‌ ತನ್ನ ಇನ್‌ಸ್ಟಾಗ್ರಾಂನಲ್ಲಿ ವೈವಿಧ್ಯಮಯ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ವಿಶೇಷ ಉಡುಪು ಧರಿಸಿ ಪೋಸ್‌ ನೀಡುತ್ತಾರೆ. ವಿವಿಧ ಮೆಟಿರಿಯಲ್‌ಗಳನ್ನೇ ಉಡುಪಾಗಿಸಿ ಪೋಸ್‌ ನೀಡುತ್ತಾರೆ.

 

ಬಾಲಿವುಡ್‌ ನಟಿ, ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ ಉರ್ಫಿ ಜಾವೇದ್‌ "ಹೊಸ ಬಗೆಯ ಫ್ಯಾಷನ್‌" ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತ ಇರುತ್ತಾರೆ. ಇತ್ತೀಚೆಗೆ ಮೊಟ್ಟೆಗಳನ್ನೇ ಜೋಡಿಸಿ ಲಂಗದಂತೆ ಧರಿಸಿದ್ದರು. ಈ ಸ್ಟೋರಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಉರ್ಫಿ ಜಾವೇದ್‌ ಲೈಫ್‌ ಸ್ಟೋರಿ

ಬಾಲಿವುಡ್‌ ನಟಿ ಉರ್ಫಿ ಜಾವೇದ್‌ ಸೋಷಿಯಲ್‌ ಮೀಡಿಯಾದಲ್ಲಿ ತನ್ನ ವಿನೂತನ ವಿಡಿಯೋಗಳ ಮೂಲಕ ಮತ್ತು ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ. 1997ರ ಅಕ್ಟೋಬರ್‌ 15ರಂದು ಲಖನೌನ ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಕಿರುತೆರೆ ನಟಿಯಾಗಿ ಮತ್ತು ಸೋಷಿಯಲ್‌ ಮೀಡಿಯಾ ಪರ್ಸನಾಲಿಟಿಯಾಗಿ ಜನಪ್ರಿಯತೆ ಪಡೆದಿದ್ದಾರೆ. ವಿಶೇಷವಾಗಿ ವಿನೂತನ ಫ್ಯಾಷನ್‌ ಪರ್ಸನಾಲಿಟಿಯಿಂದ ಫೇಮಸ್‌ ಆಗಿದ್ದಾರೆ. 2021ರಲ್ಲಿ ವೂಟ್‌ನಲ್ಲಿ ಬಿಗ್‌ ಬಾಸ್‌ ಒಟಿಟಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಗಮನ ಸೆಳೆದಿದ್ದರು.

ಉರ್ಫಿಯ ಬಾಲ್ಯದ ಕುರಿತು ಏನೇನೋ ಕಥೆಗಳಿವೆ. ಬಾಲ್ಯದ ಜೀವನ ತುಂಬಾ ಕಷ್ಟವಾಗಿತ್ತಂತೆ. ಅಪ್ಪನ ಕೆಟ್ಟವರ್ತನೆಯಿಂದ ತೊಂದರೆ ಅನುಭವಿಸಿದ್ದರು. ಮೇರಿ ದುರ್ಗಾ ಸಿನಿಮಾದ ನಟ ಪಾರಸ್‌ ಕಲ್ನಾವತ್‌ ಜತೆ ಉರ್ಫಿ ಜಾವೇದ್‌ ಡೇಟಿಂಗ್‌ ಮಾಡಿ ಸುದ್ದಿಯಲ್ಲಿದ್ದರು. ಕೆಲವು ವರ್ಷಗಳಲ್ಲಿ ಇವರಿಬ್ಬರು ಬ್ರೇಕಪ್‌ ಆಗಿದ್ದರು.

ತನ್ನ ಹೆಸರನ್ನು ಉರ್ಫಿ ಬದಲು ಊರ್ಫಿ ಎಂದು ಚೇಂಜ್‌ ಮಾಡಿದ್ದರು. ಸೋನಿ ಟೀವಿಯಲ್ಲಿ ಪ್ರಸಾರವಾಗುತ್ತಿದ್ದ ಬಡೇ ಬಯ್ಯಾ ಕಿ ದುಲ್ಹಾನಿಯಾದಲ್ಲಿ ಅವನಿ ಪಂತ್‌ ಪಾತ್ರದಲ್ಲಿ ಮಿಂಚಿದ್ದರು. ಚಂದ್ರ ನಂದಿನಿ ಸೀರಿಯಲ್‌ನಲ್ಲಿ ಛಾಯಾ ಆಗಿದ್ದರು. ಮೇರಿ ದುರ್ಗಾ ಸೀರಿಯಲ್‌ನಲ್ಲಿ ಆರತಿಯಾಗಿ ಕಾಣಿಸಿಕೊಂಡಿದ್ದರು. ಈ ಮೂಲಕ ಹಿಂದಿ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು.

ಆದರೆ, ಇತ್ತೀಚಿನ ವರ್ಷಗಳಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಫ್ಯಾನ್ಸ್‌ ಬಳಗ ಹೆಚ್ಚಿಸಿಕೊಂಡಿದ್ದರು. ತನ್ನ ಚಿತ್ರವಿಚಿತ್ರ, ಭಿನ್ನ ವಿಭಿನ್ನ ಫ್ಯಾಷನ್‌ ಲುಕ್‌ನಿಂದ ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೆಷನ್‌ ಉಂಟುಮಾಡುತ್ತಿದ್ದಾರೆ.