ರಾಖಿ ಸಾವಂತ್ ಮೊದಲ ಪತಿಗೆ ಡಿವೋರ್ಸ್ ನೀಡದೆ ನನ್ನನ್ನು ಮದುವೆ ಆಗಿದ್ದಾಳೆ; ಜೈಲಿನಿಂದ ರಿಲೀಸ್ ಆದ ಆದಿಲ್ ಖಾನ್ ದುರ್ರಾನಿ ಆರೋಪ
ನಾನು ಆಕೆಯನ್ನು ಎಂದಿಗೂ ಹೊಡೆದಿಲ್ಲ. ಆಕೆಯೇ ನನ್ನ ಮೇಲೆ ಹಲ್ಲೆ ಮಾಡಿದ್ದಾಳೆ, ಅದಕ್ಕೆ ನನ್ನ ದೇಹದ ಮೇಲಿನ ಗಾಯದ ಗುರುತುಗಳೇ ಸಾಕ್ಷಿ. ಅಷ್ಟೇ ಅಲ್ಲ, ಆಕೆ ಆರೋಪ ಮಾಡಿದಂತೆ ನಾನು ಯಾರನ್ನೂ ಪ್ರೀತಿಸುತ್ತಿಲ್ಲ, ಇರಾನಿ ಹುಡುಗಿಯನ್ನೂ ರೇಪ್ ಮಾಡಿಲ್ಲ.
ಕಳೆದ 6 ತಿಂಗಳಲ್ಲಿ ಬಾಲಿವುಡ್ ನಟಿ ರಾಖಿ ಸಾವಂತ್ ವಿಚಾರದಲ್ಲಿ ಏನೆಲ್ಲಾ ಘಟನೆ ನಡೆಯಿತು ಅನ್ನೋದು ಸಿನಿಪ್ರಿಯರಿಗೆ ತಿಳಿದಿರುವ ವಿಚಾರ. ಆದಿಲ್ ಖಾನ್ ನನಗೆ ಮೋಸ ಮಾಡಿದ್ದಾನೆ, ಬೇರೆ ಯುವತಿಯರೊಂದಿಗೆ ಆತನಿಗೆ ಅಫೇರ್ ಇದೆ. ಇರಾನಿ ಯುವತಿಯೊಬ್ಬಳನ್ನು ಆತ ಅತ್ಯಾಚಾರ ಮಾಡಿದ್ಧಾನೆ ಎಂದು ರಾಖಿ ಸಾವಂತ್ ಆರೋಪಿಸಿದ್ದರು.
ಬೇಲ್ ಪಡೆದು ಹೊರ ಬಂದ ಆದಿಲ್ ಖಾನ್ ದುರ್ರಾನಿ
ಮೈಸೂರು ಜೈಲಿನಲ್ಲಿದ್ದ ಆದಿಲ್ ಖಾನ್ ಈಗ ಬೇಲ್ ಪಡೆದು ಜೈಲಿನಿಂದ ಹೊರ ಬಂದಿದ್ದಾರೆ. ಜೈಲಿನಿಂದ ಹೊರ ಬಂದ ನಂತರ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಆತ, ''ರಾಖಿ ಸಾವಂತ್ ನನ್ನ ಜೀವನದ ದೊಡ್ಡ ಮಿಸ್ಟೇಕ್ ಎಂದು ಹೇಳಿದ್ದಾರೆ. ತಾನು ಮಾಡಿದ್ದೆಲ್ಲವನ್ನೂ ನನ್ನ ಮೇಲೆ ಹಾಕಿ ನನ್ನನ್ನು ಜೈಲಿಗೆ ಹೋಗುವಂತೆ ಮಾಡಿದ್ದಾಳೆ. ಆಕೆಯನ್ನು ಬಿಡುವುದಿಲ್ಲ, ನಾನು ಏನೂ ತಪ್ಪು ಮಾಡಿಲ್ಲ. ಆಕೆಗಾಗಿ ನಾನು ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದೇನೆ. ನಾನೂ ಕಾನೂನಿನ ಮುಖಾಂತರ ಹೋರಾಡಿ ನ್ಯಾಯ ಕೇಳುತ್ತೇನೆ'' ಎಂದಿದ್ದಾರೆ.
''ರಾಖಿ ಸಾವಂತ್ ನಾನು ರಿತೇಶ್‌ನನ್ನು ಮದುವೆ ಆಗಿಲ್ಲ ಎಂದು ಹೇಳಿದಾಗ ನಾನು ನಂಬಿದೆ, ಆದರೆ ನಂತರ ತಿಳಿಯಿತು, ಇಬ್ಬರೂ ಕಾನೂನಿನ ಪ್ರಕಾರ ಮದುವೆ ಆಗಿದ್ದಾರೆ. ಆದರೆ ಆತನಿಗೆ ಡಿವೋರ್ಸ್ ನೀಡದ ನನ್ನನ್ನು ಮದುವೆ ಆಗಿದ್ಧಾಳೆ. ಎಲ್ಲವೂ ಸರಿ ಹೋಗುತ್ತದೆ ಎಂದು ನಾನು ಆಕೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೆ, ಆದರೆ ಆಕೆ ನನಗೆ ಪ್ರಾಮಾಣಿಕಳಾಗಿರಲಿಲ್ಲ. ಒಮ್ಮೆ ಆಕೆ ನನಗೆ ತಿಳಿಯದೆ ಲಂಡನ್‌ಗೆ ಹೋಗಿ ಮೊದಲ ಪತಿಯನ್ನು ಭೇಟಿ ಮಾಡಿ ಆತನೊಂದಿಗೆ ಇದ್ದು ಬಂದಿದ್ದಾಳೆ.''
ಆಕೆಯೇ ನನ್ನ ಮೇಲೆ ಹಲ್ಲೆ ಮಾಡಿದ್ದಾಳೆ
''ನಾನು ಆಕೆಯನ್ನು ಎಂದಿಗೂ ಹೊಡೆದಿಲ್ಲ. ಆಕೆಯೇ ನನ್ನ ಮೇಲೆ ಹಲ್ಲೆ ಮಾಡಿದ್ದಾಳೆ, ಅದಕ್ಕೆ ನನ್ನ ದೇಹದ ಮೇಲಿನ ಗಾಯದ ಗುರುತುಗಳೇ ಸಾಕ್ಷಿ. ಅಷ್ಟೇ ಅಲ್ಲ, ಆಕೆ ಆರೋಪ ಮಾಡಿದಂತೆ ನಾನು ಯಾರನ್ನೂ ಪ್ರೀತಿಸುತ್ತಿಲ್ಲ, ಇರಾನಿ ಹುಡುಗಿಯನ್ನೂ ರೇಪ್ ಮಾಡಿಲ್ಲ. ಇರಾನಿ ಯುವತಿಯೊಂದಿಗೆ ನಾನು ಸ್ನೇಹಿತನಂತೆ ಇದ್ದೆ, ಆಕೆಗೆ ಹಣದ ಸಹಾಯ ಮಾಡಿದ್ದೆ, ಆಕೆಯ ಬಗ್ಗೆ ನನಗೆ ಕಾಳಜಿ ಇತ್ತು ಅಷ್ಟೇ. ಆದರೆ ರಾಖಿ ಸಾವಂತ್ ಆಕೆಗೆ 3 ಲಕ್ಷ ರೂಪಾಯಿ ನೀಡಿ, ನನ್ನ ವಿರುದ್ಧ ಎತ್ತಿ ಕಟ್ಟಿದ್ದಾಳೆ.''
''ರಾಖಿಗೆ ಆರೋಗ್ಯ ಸಮಸ್ಯೆ ಇದೆ, ಆಕೆ ಎಂದಿಗೂ ಗರ್ಭಿಣಿ ಆಗಿರಲಿಲ್ಲ, ಪೊಲೀಸರ ಮುಂದೆ ಆಕೆ ಸುಳ್ಳು ಹೇಳಿದ್ದಾಳೆ. ಆಕೆಯೇ ನನ್ನ ನಗ್ನ ವಿಡಿಯೋಗಳನ್ನು ರೆಕಾರ್ಡ್ ಮಾಡಿ ನನ್ನನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾಳೆ. ಆಕೆಯನ್ನು ನಾನು ಬಹಳ ಇಷ್ಟಪಟ್ಟೆ, ಆಕೆಗಾಗಿ ಬಹಳ ಹಣ ಖರ್ಚು ಮಾಡಿದ್ದೇನೆ. ಆಕೆ ಕಾಸ್ಮೆಟಿಕ್ ಸರ್ಜರಿಗೆ ಕೂಡಾ ನಾನೇ ಹಣ ಸುರಿದಿದ್ದೇನೆ. ಆಕೆ ನನ್ನ ಜೀವನದ ಬಹುದೊಡ್ಡ ಮಿಸ್ಟೇಕ್ ಎಂದು ಆದಿಲ್ ಖಾನ್ ದುರಾನಿ ಹೊಸ ಬಾಂಬ್ ಸಿಡಿಸಿದ್ದಾರೆ.