ಕನ್ನಡ ಸುದ್ದಿ  /  Entertainment  /  Bollywood News Ajay Devgn Jyotika R Madhavan's Shaitaan Box Office Collection Day 1 Film Earns 10 Crore Mnk

Shaitan Collection: ಪಾಸಿಟಿವ್‌ ವಿಮರ್ಶೆ ಸಿಕ್ಕರೂ, ಗಳಿಕೆ ವಿಚಾರದಲ್ಲಿ ಸ್ಲೋ ಆಯ್ತು ‘ಶೈತಾನ್‌’; ಆದ್ರೂ ಹೊಸ ದಾಖಲೆ ಸೃಷ್ಟಿ

Shaitaan box office collection day 1: ಅಜಯ್ ದೇವಗನ್‌, ಮಾಧವನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಶೈತಾನ್ ಸಿನಿಮಾ ಮಾ. 8ರ ಶುಕ್ರವಾರ ಬಿಡುಗಡೆಯಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಮೊದಲ ದಿನ ಹೆಚ್ಚು ಸದ್ದು ಮಾಡದ ಈ ಸಿನಿಮಾ, ಮುಂದಿನ ಎರಡ್ಮೂರು ದಿನ ಒಳ್ಳೆಯ ಕಮಾಯಿ ಮಾಡಲಿದೆ ಎಂದೇ ಹೇಳಲಾಗುತ್ತಿದೆ.

Shaitan Collection: ಪಾಸಿಟಿವ್‌ ರಿವ್ಯೂವ್‌ ಸಿಕ್ಕರೂ, ಕಲೆಕ್ಷನ್‌ ವಿಚಾರದಲ್ಲಿ ಸ್ಲೋ ಆಯ್ತು ‘ಶೈತಾನ್‌’; ಆದ್ರೂ ಹೊಸ ದಾಖಲೆ ಸೃಷ್ಟಿ
Shaitan Collection: ಪಾಸಿಟಿವ್‌ ರಿವ್ಯೂವ್‌ ಸಿಕ್ಕರೂ, ಕಲೆಕ್ಷನ್‌ ವಿಚಾರದಲ್ಲಿ ಸ್ಲೋ ಆಯ್ತು ‘ಶೈತಾನ್‌’; ಆದ್ರೂ ಹೊಸ ದಾಖಲೆ ಸೃಷ್ಟಿ

Shaitan Box Office Collection: ಅಜಯ್ ದೇವಗನ್ ಮತ್ತು ಮಾಧವನ್ ಅಭಿನಯದ ಶೈತಾನ್ ಸಿನಿಮಾ ಹಾರರ್‌ ಥ್ರಿಲ್ಲರ್‌ ಪ್ರೇಮಿಗಳ ಹೃದಯಗೆದ್ದಿದೆ. ಆದರೆ, ನಿರೀಕ್ಷಿತ ಮಟ್ಟದ ಕಲೆಕ್ಷನ್‌ ಮಾಡುವಲ್ಲಿ ಕೊಂಚ ಎಡವಿದೆ. ಹೀಗಿದ್ದರೂ, ಈ ಮೊದಲಿನ ಬೇರಾವ ಹಾರರ್‌ ಸಿನಿಮಾ ಮಾಡದ ಹೊಸ ದಾಖಲೆಯೊಂದನ್ನು ಈ ಚಿತ್ರ ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಅಂದರೆ, ಶೈತಾನ್‌ ಸಿನಿಮಾ ಮೊದಲ ದಿನ ವಿಶ್ವಾದ್ಯಂತ 14.50 ಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.

ಈ ಹಿಂದೆ, ರಾಜ್ 3 ಬಾಲಿವುಡ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಹಾರರ್‌ ಸಿನಿಮಾವಾಗಿತ್ತು. 2012ರಲ್ಲಿ ಇಮ್ರಾನ್ ಹಶ್ಮಿ ಮತ್ತು ಬಿಪಾಶಾ ಬಸು ನಟಿಸಿದ್ದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 10.33 ಕೋಟಿ ಗಳಿಸಿತು. ಇದೀಗ ಆ ಚಿತ್ರದ ದಾಖಲೆಯನ್ನು 12 ವರ್ಷಗಳ ಬಳಿಕ ಶೈತಾನ್‌ ಸಿನಿಮಾ ಮುರಿದಿದೆ. ಶುಕ್ರವಾರ 14 ಕೋಟಿ ಬಾಚಿರುವ ಈ ಸಿನಿಮಾ ಶನಿವಾರ ಮತ್ತು ಭಾನುವಾರ ಒಳ್ಳೆಯ ಕಲೆಕ್ಷನ್‌ ಮಾಡಲಿದ್ದು, ವಾರಾಂತ್ಯದಲ್ಲಿಯೇ ಐವತ್ತು ಕೋಟಿ ಗಡಿ ದಾಟಲಿದೆ ಎನ್ನಲಾಗುತ್ತಿದೆ.

ಶೈತಾನ್‌ ಗುಜರಾತಿ ರಿಮೇಕ್

ಸೂಪರ್ ನ್ಯಾಚುರಲ್ ಹಾರರ್ ಶೈಲಿಯ ಈ ಚಿತ್ರವನ್ನು ವಿಕಾಸ್ ಭಾಲ್ ನಿರ್ದೇಶನ ಮಾಡಿದ್ದಾರೆ. ಅಜಯ್ ದೇವಗನ್ ನಾಯಕನಾಗಿ ನಟಿಸಿರುವ ಈ ಸಿನಿಮಾದಲ್ಲಿ ಮಾಧವನ್ ಖಳನಾಗಿದ್ದಾರೆ. ಸೂಪರ್ ನ್ಯಾಚುರಲ್ ಪವರ್ ಹೊಂದಿರುವ ವ್ಯಕ್ತಿಯಾಗಿ ನೆಗೆಟಿವ್ ಶೇಡ್‌ನಲ್ಲಿ ಖಳನಾಯಕನ ಮೂಲಕ ಪ್ರೇಕ್ಷಕರನ್ನು ಹೆದರಿಸಿದ್ದಾರೆ. ತಮಿಳು ನಟಿ ಜ್ಯೋತಿಕಾ 25 ವರ್ಷಗಳ ಬಳಿಕ ಮತ್ತೆ ಬಾಲಿವುಡ್‌ಗೆ ಎಂಟ್ರಿಕೊಟ್ಟಿದ್ದಾರೆ. ಅಂದಹಾಗೆ, ಬಾಲಿವುಡ್‌ನಲ್ಲಿ ತೆರೆಕಂಡಿರುವ ಈ ಶೈತಾನ್‌ ಮೂಲ ಗುಜರಾತಿಯಲ್ಲಿ ಬಿಡುಗಡೆಯಾಗಿದ್ದ ವಾಶ್‌ ಚಿತ್ರದ ರಿಮೇಕ್.

ಇದು ಸೈತಾನನ ಕಥೆ.

ಕಬೀರ್ (ಅಜಯ್ ದೇವಗನ್) ಮತ್ತು ಜ್ಯೋತಿ (ಜ್ಯೋತಿಕಾ) ಅವರ ಮಗಳು ಜಾನ್ವಿ ಜೊತೆಗೆ ಹಳ್ಳಿಯೊಂದಕ್ಕೆ ರಜೆಯ ಪ್ರವಾಸಕ್ಕೆ ಹೋಗುತ್ತಾರೆ. ವನರಾಜ್ (ಮಾಧವನ್) ಕಬೀರ್‌ಗೆ ಆತ್ಮೀಯ ಗೆಳೆಯನಾಗಿ ಪರಿಚಯವಾಗುತ್ತಾನೆ. ಅವನ ಪ್ರವೇಶದಿಂದ ಕಬೀರನ ಕುಟುಂಬ ಸಮಸ್ಯೆಗೆ ಸಿಲುಕುತ್ತದೆ. ವನರಾಜ್ ತನ್ನ ಕುತಂತ್ರ ಮತ್ತು ಮಂತ್ರಗಳಿಂದ ಕಬೀರನ ಕುಟುಂಬಕ್ಕೆ ಯಾವ ರೀತಿಯ ತೊಂದರೆ ತರುತ್ತಾನೆ?

ವನರಾಜ್‌ನ ಕಪಿಮುಷ್ಠಿಯಿಂದ ಕಬೀರ್ ತನ್ನ ಕುಟುಂಬವನ್ನು ಹೇಗೆ ರಕ್ಷಿಸಿಕೊಂಡ ಎಂಬುದೇ ಈ ಸಿನಿಮಾದ ಕಥೆ. ಅಜಯ್ ದೇವಗನ್ ನಾಯಕನಾಗಿ ನಟಿಸುತ್ತಲೇ ಈ ಚಿತ್ರಕ್ಕೆ ನಿರ್ಮಾಪಕರಾಗಿಯೂ ಬಂಡವಾಳ ಹೂಡಿದ್ದಾರೆ. ಅಜಯ್ ದೇವಗನ್ ಅವರ ಸೈತಾನ್ ಚಿತ್ರದ OTT ಹಕ್ಕುಗಳನ್ನು Netflix ಪಡೆದುಕೊಂಡಿದೆ ಎಂದು ವರದಿಯಾಗಿದೆ. ಥಿಯೇಟ್ರಿಕಲ್ ಬಿಡುಗಡೆಗೂ ಮುನ್ನವೇ ಒಟಿಟಿ ಹಕ್ಕು ಭಾರೀ ಮೊತ್ತಕ್ಕೆ ಮಾರಾಟವಾಗಿದೆ ಎನ್ನಲಾಗಿದೆ.

25 ಕೋಟಿ ಸಂಭಾವನೆ...

ಸೈತಾನ್ ಚಿತ್ರಕ್ಕಾಗಿ ಅಜಯ್ ದೇವಗನ್ 25 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ವಿಲನ್ ಪಾತ್ರಕ್ಕಾಗಿ ಮಾಧವನ್ 10 ಕೋಟಿ ಸಂಭಾವನೆ ಪಡೆದಿದ್ದಾರಂತೆ. ಈ ಚಿತ್ರದ ಮೂಲಕ ಬಾಲಿವುಡ್‌ಗೆ ರೀ ಎಂಟ್ರಿ ಕೊಟ್ಟಿರುವ ಜ್ಯೋತಿಕಾ, ಐದು ಕೋಟಿ ಸಂಭಾವನೆ ಪಡೆದಿದ್ದಾರೆ. ಇದಷ್ಟೇ ಅಲ್ಲ ಇನ್ನೂ ಎರಡು ಹಿಂದಿ ಸಿನಿಮಾಗಳಲ್ಲಿ ಜ್ಯೋತಿಕಾ ನಟಿಸುತ್ತಿದ್ದಾರೆ. ಈ ಎರಡು ಸಿನಿಮಾಗಳು ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗಲಿವೆ.

ಶೈತಾನನ ನಂತರ ಮೈದಾನ್

ಶೈತಾನ್ ನಂತರ ಅಜಯ್ ದೇವಗನ್ ಮೈದಾನ್‌ ಚಿತ್ರದ ಮೂಲಕ ಬಾಲಿವುಡ್ ಪ್ರೇಕ್ಷಕರ ಮುಂದೆ ಆಗಮಿಸಲಿದ್ದಾರೆ. ಫುಟ್ಬಾಲ್ ಹಿನ್ನೆಲೆಯಲ್ಲಿ ಸ್ಪೋರ್ಟ್ಸ್ ಡ್ರಾಮಾವಾಗಿ ಮೂಡಿಬಂದಿರುವ ಈ ಚಿತ್ರ ಏಪ್ರಿಲ್ 11ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಹೊರತುಪಡಿಸಿ ಸಿಂಗಂ ಅಗೇನ್ ಮತ್ತು ರೈಡ್ 2 ಜೊತೆಗೆ ಇನ್ನೆರಡು ಸಿನಿಮಾಗಳಲ್ಲಿ ಅಜಯ್ ದೇವಗನ್ ನಾಯಕರಾಗಿ ನಟಿಸುತ್ತಿದ್ದಾರೆ.