ಕನ್ನಡ ಸುದ್ದಿ  /  Entertainment  /  Bollywood News Akshay Kumar Tiger Shroff Starrer Bade Miyan Chote Miyan Title Track Released Mnk

ಬಡೇ ಮಿಯಾ ಚೋಟೆ ಮಿಯಾ ಚಿತ್ರದ ಕನ್ನಡ ಹಾಡು ರಿಲೀಸ್;‌ ಅಕ್ಷಯ್ ಕುಮಾರ್- ಟೈಗರ್ ಶ್ರಾಫ್ ಸಖತ್‌ ಡಾನ್ಸ್‌

ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ನಟನೆಯ 'ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ. ಬಾಸ್ಕೊ- ಸೀಸರ್ ಕೋರಿಯೋಗ್ರಾಫ್‌ ಮಾಡಿರುವ ಹಾಡಿಗೆ ಅಕ್ಕಿ- ಟೈಗರ್ ಭರ್ಜರಿ ಸ್ಟೆಪ್ಸ್‌ ಹಾಕಿದ್ದಾರೆ.

ಬಡೇ ಮಿಯಾ ಚೋಟೆ ಮಿಯಾ ಟೈಟಲ್ ಟ್ರ್ಯಾಕ್ ರಿಲೀಸ್;‌ ಅಕ್ಷಯ್ ಕುಮಾರ್- ಟೈಗರ್ ಶ್ರಾಫ್ ಸಖತ್‌ ಡಾನ್ಸ್‌
ಬಡೇ ಮಿಯಾ ಚೋಟೆ ಮಿಯಾ ಟೈಟಲ್ ಟ್ರ್ಯಾಕ್ ರಿಲೀಸ್;‌ ಅಕ್ಷಯ್ ಕುಮಾರ್- ಟೈಗರ್ ಶ್ರಾಫ್ ಸಖತ್‌ ಡಾನ್ಸ್‌

Bade Miyan Chote Miyan: ಬಾಲಿವುಡ್‌ನಲ್ಲಿ ಆಗೊಂದು ಈಗೊಂದು ಎಂಬಂತೆ ಮಲ್ಟಿಸ್ಟಾರರ್‌ ಸಿನಿಮಾಗಳು ತೆರೆಗೆ ಬರುತ್ತಲೇ ಇರುತ್ತವೆ. ಇದೀಗ ಅಕ್ಷಯ್‌ ಕುಮಾರ್‌ ಮತ್ತು ಟೈಗರ್‌ ಶ್ರಾಫ್‌ ನಟನೆಯ ಸಿನಿಮಾವೊಂದು ರಿಲೀಸ್‌ಗೆ ರೆಡಿಯಾಗಿದೆ. ಸದ್ಯ ಸೋಲಿನ ಸುಳಿಗೆ ಸಿಲುಕಿರುವ ಈ ಇಬ್ಬರೂ ನಟರಿಗೆ ತುರ್ತಾಗಿ ಒಂದು ಗೆಲುವಿನ ಅವಶ್ಯಕತೆ ಇದೆ. ಆ ಗೆಲುವನ್ನು ಬಡೇ ಮಿಯಾ ಚೋಟೆ ಮಿಯಾ ಸಿನಿಮಾ ತಂದು ಕೊಡಲಿದೆಯಾ ಎಂಬ ಉತ್ತರ ಇನ್ನು ಕೆಲವೇ ದಿನಗಳಿಗೆ ಸಿಗಲಿದೆ. ಈಗ ಇದೇ ಸಿನಿಮಾ ಹಾಡಿನ ಮೂಲಕ ಆಗಮಿಸಿದೆ.

ಬಾಲಿವುಡ್‌ನ ಪವರ್- ಪ್ಯಾಕ್ಡ್ ಜೋಡಿಗಳಾದ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ನಟನೆಯ 'ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ. ಬಾಸ್ಕೊ- ಸೀಸರ್ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡಿಗೆ ಅಕ್ಕಿ- ಟೈಗರ್ ಭರ್ಜರಿ ಹೆಜ್ಜೆ ಹಾಕಿದ್ದಾರೆ. ಅನಿರುದ್ಧ್ ರವಿಚಂದರ್ ಮತ್ತು ವಿಶಾಲ್ ಮಿಶ್ರಾ ಧ್ವನಿಯಾಗಿರುವ ಟೈಟಲ್ ಟ್ರ್ಯಾಕ್ ಗೆ ವಿಶಾಲ್ ಮಿಶ್ರಾ ಟ್ಯೂನ್ ಹಾಕಿದ್ದಾರೆ.

ಡೆಹರಾಡೂನ್‌ನಲ್ಲಿ ಚಿತ್ರೀಕರಿಸಲಾಗಿರುವ ಹಾಡಿಗೆ 100ಕ್ಕೂ ಹೆಚ್ಚು ಡ್ಯಾನ್ಸರ್ಸ್ ಕುಣಿದು ಕುಪ್ಪಳಿಸಿದ್ದಾರೆ. ಕನ್ನಡದಲ್ಲಿಯೂ ಹಾಡು ಮೂಡಿಬಂದಿದ್ದು, ಸಂತೋಷ್ ವಿಶ್ವರತ್ನ ಸಾಹಿತ್ಯ ಬರೆದಿದ್ದು, ಅನಿರುದ್ಧ ಶಾಸ್ತ್ರಿ, ಅಭಿಷೇಕ್ ಎಂ ಆರ್ ಹಾಗೂ ಋಷಿಕೇಶ ಬಿ ಆರ್ ಹಾಡಿಗೆ ಧ್ವನಿ ನೀಡಿದ್ದಾರೆ.

ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ನಾಯಕರಾಗಿ ನಟಿಸಿದ್ದು, ಖಳನಾಯಕನಾಗಿ ಪೃಥ್ವಿರಾಜ್ ಸುಕುಮಾರನ್ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟಿಮಣಿಯರಾದ ಸೋನಾಕ್ಷಿ ಸಿನ್ಹಾ, ಮಾನುಷಿ ಚಿಲ್ಲರ್, ಅಲಯಾ ಎಫ್ ಪ್ರಮುಖ ಪಾತ್ರಗಳಲ್ಲಿ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಮುಂಬೈ, ಲಂಡನ್, ಅಬುಧಾಬಿ, ಸ್ಕಾಟ್ಲೆಂಡ್ ಮತ್ತು ಜೋರ್ಡಾನ್ ಸ್ಥಳಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಹಾಲಿವುಡ್ ರೇಂಜ್‌ನಲ್ಲಿ ದೊಡ್ಡ ಬಜೆಟ್‌ನಲ್ಲಿ ಬಡೇ ಮೀಯಾ ಚೋಟೆ ಮೀಯಾ ಚಿತ್ರ ನಿರ್ಮಿಸಲಾಗಿದೆ. ಅಲಿ ಅಬ್ಬಾಸ್ ಜಾಫರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ವಶು ಭಗ್ನಾನಿ, ದೀಪಿಕ್ಷಾ ದೇಶಮುಖ್, ಜಾಕಿ ಭಗ್ನಾನಿ, ಹಿಮಾಂಶು ಕಿಶನ್ ಮೆಹ್ರಾ, ಅಲಿ ಅಬ್ಬಾಸ್ ಜಾಫರ್ ಚಿತ್ರ ನಿರ್ಮಾಣ ಮಾಡಿದ್ದಾರೆ.

ವಶು ಭಗ್ನಾನಿ ಮತ್ತು ಪೂಜಾ ಎಂಟರ್ ಟೈನ್ಮೆಂಟ್ AAZ ಫಿಲ್ಮಂಸ್ ಸಹಯೋಗದಡಿ ಬಡೇ ಮಿಯಾ ಚೋಟೆ ಮೀಯಾ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಏಪ್ರಿಲ್ 2024 ಈದ್ ಹಬ್ಬದ ಸಂದರ್ಭದಲ್ಲಿ ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ.

IPL_Entry_Point