ಕನ್ನಡ ಸುದ್ದಿ  /  ಮನರಂಜನೆ  /  ದೀಪಿಕಾ ಪಡುಕೋಣೆ ಗರ್ಭಿಣಿಯಾ? ಹೊಟ್ಟೆ ದೊಡ್ಡದಾಗಿಲ್ಲ, ನಡೆಯಲು ಕಷ್ಟವೇಕೆ? ಅವಮಾನಿಸಿದ ನೆಟ್ಟಿಗರ ವಿರುದ್ಧ ಆಲಿಯಾ ಭಟ್‌ ಗರಂ

ದೀಪಿಕಾ ಪಡುಕೋಣೆ ಗರ್ಭಿಣಿಯಾ? ಹೊಟ್ಟೆ ದೊಡ್ಡದಾಗಿಲ್ಲ, ನಡೆಯಲು ಕಷ್ಟವೇಕೆ? ಅವಮಾನಿಸಿದ ನೆಟ್ಟಿಗರ ವಿರುದ್ಧ ಆಲಿಯಾ ಭಟ್‌ ಗರಂ

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಲೋಕಸಭಾ ಚುನಾವಣೆಗೆ ಮತಚಲಾಯಿಸಲು ಹೊರಕ್ಕೆ ಬಂದ ಇವರ ಬೇಬಿ ಬಂಪ್‌ ಫೋಟೋಗೆ ನೆಟ್ಟಿಗರು ಕೆಟ್ಟದ್ದಾಗಿ ಕಾಮೆಂಟ್‌ ಮಾಡಿದ್ದಾರೆ.

ದೀಪಿಕಾ ಪಡುಕೋಣೆಗೆ ಬೆಂಬಲ ಸೂಚಿಸಿದ ಆಲಿಯಾ ಭಟ್
ದೀಪಿಕಾ ಪಡುಕೋಣೆಗೆ ಬೆಂಬಲ ಸೂಚಿಸಿದ ಆಲಿಯಾ ಭಟ್

ಬೆಂಗಳೂರು: ಸೋಷಿಯಲ್‌ ಮೀಡಿಯಾದಲ್ಲಿ ಕೆಟ್ಟದ್ದಾಗಿ ಟ್ರೋಲ್‌ ಮಾಡುವ ಜನರಿಂದ ಸೆಲೆಬ್ರಿಟಿಗಳು ಸಾಕಷ್ಟು ಮುಜುಗರ ಅನುಭವಿಸುತ್ತಾರೆ. ಇತ್ತೀಚೆಗೆ ಲೋಕ ಸಭಾ ಚುನಾವಣೆಯಲ್ಲಿ ಮತ ಚಲಾವಣೆ ಮಾಡಲು ದೀಪಿಕಾ ಪಡುಕೋಣೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಆಕೆಯ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಆಕೆಯ ಹೊಟ್ಟೆಯ ಕುರಿತು ಕಿಡಿಗೇಡಿಗಳು ಸೋಷಿಯಲ್‌ ಮೀಡಿಯಾದಲ್ಲಿ ತಮಗೆ ತೋಚಿದಂತೆ ಕಾಮೆಂಟ್‌ ಮಾಡಲು ಆರಂಭಿಸಿದ್ದರು. ಇದೀಗ ದೀಪಿಕಾ ಪಡುಕೋಣೆ ಬೆಂಬಲಕ್ಕೆ ಬಾಲಿವುಡ್‌ ನಟಿ ಆಲಿಯಾ ಭಟ್‌ ಬಂದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನಟಿ ದೀಪಿಕಾ ಪಡುಕೋಣೆ ಇತ್ತೀಚೆಗೆ ಮುಂಬೈನಲ್ಲಿ ಸಾಗುತ್ತಿರುವಾಗ ತನ್ನ ಬೇಬಿ ಬಂಪ್‌ನ ಒಂದು ನೋಟ ನೀಡಿದ್ದಾರೆ. ಇದಾದ ಬಳಿಕ ಇವರು ತೀವ್ರ ಟ್ರೋಲ್‌ಗೆ ಒಳಗಾಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈಕೆಯದ್ದು ನಕಲಿ ಬಂಪ್‌, ಹೊಟ್ಟೆಯೇ ಇಲ್ಲ ಎಂದೆಲ್ಲ ಹೇಳುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದ ಈ ಕಾಮೆಂಟ್‌ಗಳಿಗೆ ದೀಪಿಕಾ ತಲೆಕೆಡಿಸಿಕೊಂಡಿಲ್ಲ. ಆದರೆ, ಇದನ್ನೆಲ್ಲ ನೋಡುತ್ತ ಸುಮ್ಮನಿರಲು ಆಲಿಯಾ ಭಟ್‌ಗೆ ಸಾಧ್ಯವಾಗಿಲ್ಲ. ದೀಪಿಕಾ ಪಡುಕೋಣೆಗೆ ತನ್ನ ಬೆಂಬಲವನ್ನು ಆಲಿಯಾ ಭಟ್‌ ನೀಡಿದ್ದಾರೆ.

ಈ ವಾರದ ಆರಂಭದಲ್ಲಿ, ದೀಪಿಕಾ ಪಡುಕೋಣೆ ತನ್ನ ಪತಿ ನಟ ರಣವೀರ್ ಸಿಂಗ್ ಅವರೊಂದಿಗೆ ಮುಂಬೈನಲ್ಲಿ ನಡೆದ ಲೋಕಸಭಾ ಚುನಾವಣೆ 2024 ರ ಐದನೇ ಹಂತದ ಚುನಾವಣೆಯಲ್ಲಿ ಮತ ಚಲಾಯಿಸಲು ಆಗಮಿಸಿದ್ದರು. ಈ ಸಂದರ್ಭದಲ್ಲಿ ಈಕೆಯ ಬೇಬಿ ಬಂಪ್‌ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದವು. ಸಾಕಷ್ಟು ಬಳಕೆದಾರರು ಈಕೆಯ ಬೇಬಿ ಬಂಪ್‌ ಅನ್ನು ಅವಮಾನಿಸಿದರು.

ಟ್ರೋಲ್‌ಗಳ ವಿರುದ್ಧ ಆಲಿಯಾ ಭಟ್‌ ಪ್ರತಿಕ್ರಿಯೆ

"ಅವಳು ಗರ್ಭಿಣಿಯಲ್ಲ. ಇದು ಮುಜುಗರದ ಸಂಗತಿ" ಎಂದು ಒಬ್ಬರು ಕಾಮೆಂಟ್‌ ಮಾಡಿದ್ದರು. "ಚಲ್ ಕಿಯು ರಾಹಿ ಎಸ್ಯ್ಯಿ ಅಬಿ ಇಟ್ನಾ ಬಿ ಬೇಬಿ ಬಂಪ್ ಬಹಾರ್ ನಯೀ ಅಯಾ (ಅವಳು ಏಕೆ ಹಾಗೆ ನಡೆಯುತ್ತಿದ್ದಾಳೆ, ಬಂಪ್ ಇನ್ನೂ ದೊಡ್ಡದಾಗಿಲ್ಲ)" ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಇಂತಹದ್ದೇ ಕಾಮೆಂಟ್‌ಗಳ ರಾಶಿಯಿತ್ತು. ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌ಗಳ ತಲೆಹರಟೆ ಜಾಸ್ತಿಯಾಗುತ್ತಿದ್ದಂತೆ ಪತ್ರಕರ್ತೆ ಫಾಯೆ ಡಿಸೋಜಾ ಅವರು ದೀಪಿಕಾ ಅವರನ್ನು ಬೆಂಬಲಿಸಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದರು.

"ಪ್ರೀತಿಯ ಸಾಮಾಜಿಕ ಮಾಧ್ಯಮ, ದೀಪಿಕಾ ಪಡುಕೋಣೆ ತನ್ನ ಪ್ರಜಾಪ್ರಭುತ್ವದ ಕರ್ತವ್ಯವನ್ನು ಮಾಡಲು ಮತ್ತು ಮತ ಚಲಾಯಿಸಲು ಮನೆಯಿಂದ ಹೊರಬಂದಿದ್ದಾರೆ. ಅವಳು ತನ್ನ ದೇಹ ಅಥವಾ ಅವಳ ಗರ್ಭಧಾರಣೆಯ ಬಗ್ಗೆ ನಿಮ್ಮ ಪ್ರತಿಕ್ರಿಯೆಯನ್ನು ಕೇಳಲಿಲ್ಲ. ಅವಳ ಜೀವನದ ಯಾವುದೇ ಅಂಶದ ಬಗ್ಗೆ ಪ್ರತಿಕ್ರಿಯಿಸಲು ನಿಮಗೆ ಹಕ್ಕಿಲ್ಲ. ನಿಲ್ಲಿಸಿ, ಸರಿಯಾಗಿ ವರ್ತಿಸಿ" ಎಂದು ಪೋಸ್ಟ್‌ ಮಾಡಿದ್ದಾರೆ.

ಹಲವಾರು ಸೆಲೆಬ್ರಿಟಿಗಳು ಈ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದಾರೆ. ಸಾಕಷ್ಟು ಜನರು ಸೋಷಿಯಲ್‌ ಮೀಡಿಯಾದಲ್ಲಿನ ಈ ಕೆಟ್ಟ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಲಿಯಾ ಭಟ್‌ ಕೂಡ ಈ ಪೋಸ್ಟ್‌ ಲೈಕ್‌ ಮಾಡಿದ್ದಾರೆ. ಆಲಿಯಾ ಅವರ ಸಹೋದರಿಯರಾದ ಪೂಜಾ ಭಟ್ ಮತ್ತು ಶಾಹೀನ್ ಭಟ್ ಮತ್ತು ತಾಯಿ ಸೋನಿ ರಜ್ದಾನ್ ಕೂಡ ಈ ಪೋಸ್ಟ್‌ ಇಷ್ಟಪಟ್ಟಿದ್ದಾರೆ. ನಟಿ ಶ್ರುತಿ ಸೇಠ್ ಕೂಡ ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಒಂದು ವರ್ಗವು ದೀಪಿಕಾ ಪಡುಕೋಣೆ ವಿರುದ್ಧ ಕೆಟ್ಟದ್ದಾಗಿ ಕಾಮೆಂಟ್‌ ಮಾಡಿದರೆ, ಇನ್ನೊಂದು ವರ್ಗ ದೀಪಿಕಾ ಬೆಂಬಲಕ್ಕೆ ಬಂದಿದ್ದಾರೆ. ಆಲಿಯಾ ಭಟ್‌ ಅವರ ಬೆಂಬಲವನ್ನು ಸಾಕಷ್ಟು ಜನರು ಶ್ಲಾಘಿಸಿದ್ದಾರೆ. ಸುಮಾರು 6 ವರ್ಷದ ಹಿಂದೆ ಮದುವೆಯಾಗಿರುವ ದೀಪಿಕಾ ಮತ್ತು ರಣವೀರ್ ಇತ್ತೀಚೆಗೆ ತಾವು ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಘೋಷಿಸಿದ್ದಾರೆ.

ಟಿ20 ವರ್ಲ್ಡ್‌ಕಪ್ 2024