Amitabh Bachchan: ರೇಖಾ ಜತೆಗೆ ಅಮಿತಾಬ್‌ ಬಚ್ಚನ್‌ ಪ್ರೇಮ ಕಹಾನಿ; ಬಿಗ್‌ಬಿ ನೆನಪಿನಲ್ಲಿ ಒಂಟಿಯಾಗಿಯೇ ಉಳಿದ ಬಾಲಿವುಡ್‌ ನಟಿ
ಕನ್ನಡ ಸುದ್ದಿ  /  ಮನರಂಜನೆ  /  Amitabh Bachchan: ರೇಖಾ ಜತೆಗೆ ಅಮಿತಾಬ್‌ ಬಚ್ಚನ್‌ ಪ್ರೇಮ ಕಹಾನಿ; ಬಿಗ್‌ಬಿ ನೆನಪಿನಲ್ಲಿ ಒಂಟಿಯಾಗಿಯೇ ಉಳಿದ ಬಾಲಿವುಡ್‌ ನಟಿ

Amitabh Bachchan: ರೇಖಾ ಜತೆಗೆ ಅಮಿತಾಬ್‌ ಬಚ್ಚನ್‌ ಪ್ರೇಮ ಕಹಾನಿ; ಬಿಗ್‌ಬಿ ನೆನಪಿನಲ್ಲಿ ಒಂಟಿಯಾಗಿಯೇ ಉಳಿದ ಬಾಲಿವುಡ್‌ ನಟಿ

Amitabh Bachchan Love Story: ಅಮಿತಾಬ್‌ ಬಚ್ಚನ್‌ ಮತ್ತು ರೇಖಾ ಅವರ ಲವ್‌ ಸ್ಟೋರಿ ಈಗ ಗುಟ್ಟಾಗಿ ಉಳಿದಿಲ್ಲ. ತಮ್ಮ ಲವ್‌ ಸ್ಟೋರಿಯನ್ನು ರೇಖಾ ಬಹಿರಂಗವಾಗಿಯೇ ಹಲವು ಬಾರಿ ಹೇಳಿದ್ದಾರೆ. ಈ ಇಬ್ಬರು ಪ್ರೇಮಿಗಳ ಪ್ರೇಮಕಥೆಯು ಮದುವೆಯಲ್ಲಿ ಕೊನೆಗೊಳ್ಳಲಿಲ್ಲ.

Amitabh Bachchan: ರೇಖಾ ಜತೆಗೆ ಅಮಿತಾಬ್‌ ಬಚ್ಚನ್‌ ಪ್ರೇಮ ಕಹಾನಿ
Amitabh Bachchan: ರೇಖಾ ಜತೆಗೆ ಅಮಿತಾಬ್‌ ಬಚ್ಚನ್‌ ಪ್ರೇಮ ಕಹಾನಿ

ಇಂದು ಬಿಗ್‌ಬಿ ಅಮಿತಾಬ್‌ ಬಚ್ಚನ್‌ ಹುಟ್ಟುಹಬ್ಬ. ಅಮಿತಾಬ್‌ ಬಚ್ಚನ್‌ ಎಂದಾಕ್ಷಣ ಅವರ ಹಲವು ಸಿನಿಮಾಗಳು ನೆನಪಿಗೆ ಬರಬಹುದು. ಹಿರಿಯ ನಟನ ಜನಪ್ರಿಯ ಶೋ ಕೌನ್‌ ಬನೇಗಾ ಕರೋಡ್‌ ಪತಿ ನೆನಪಾಗಬಹುದು. ಕೆಲವು ದಿನದ ಹಿಂದೆ ಹುಟ್ಟುಹಬ್ಬ ಆಚರಿಸಿಕೊಂಡ ರೇಖಾ ಅವರೊಂದಿಗಿನ ಲವ್‌ ಸ್ಟೋರಿಯೂ ನೆನಪಾಗಬಹುದು. ಈ ಲೇಖನದಲ್ಲಿ ಅಮಿತಾಬ್‌ ಬಚ್ಚನ್‌ ಮತ್ತು ರೇಖಾ ಅವರ ಆ ಕಾಲದ ಲವ್‌ ಸ್ಟೋರಿಯನ್ನು ನೆನಪಿಸಿಕೊಳ್ಳೋಣ.

ಅಂದಹಾಗೆ ಅಮಿತಾಬ್‌ ಬಚ್ಚನ್‌ ಮತ್ತು ರೇಖಾ ಅವರ ಲವ್‌ ಸ್ಟೋರಿ ಈಗ ಗುಟ್ಟಾಗಿ ಉಳಿದಿಲ್ಲ. ತಮ್ಮ ಲವ್‌ ಸ್ಟೋರಿಯನ್ನು ರೇಖಾ ಬಹಿರಂಗವಾಗಿಯೇ ಹಲವು ಬಾರಿ ಹೇಳಿದ್ದಾರೆ. ಈ ಇಬ್ಬರು ಪ್ರೇಮಿಗಳ ಪ್ರೇಮಕಥೆಯು ಮದುವೆಯಲ್ಲಿ ಕೊನೆಗೊಳ್ಳಲಿಲ್ಲ. ಬಿಗ್‌ಬಿ ಅಮಿತಾಬ್‌ ಬಚ್ಚನ್‌ ಅವರು ನಟಿ ಜಯಾ ಬಚ್ಚನ್‌ ಅವರನ್ನು ವಿವಾಹವಾಗಿದ್ದರು. ಬಾಲಿವುಡ್‌ ನಟಿ ರೇಖಾ ಅಮಿತಾಬ್‌ ಬಚ್ಚನ್‌ ನೆನಪಿನಲ್ಲಿ ಒಂಟಿಯಾಗಿಯೇ ಉಳಿದರು. ಆದರೆ, ಸಮಯ ಸಿಕ್ಕಾಗ ತಮ್ಮಿಬ್ಬರ ಲವ್‌ ಸ್ಟೋರಿಯ ಸುಳಿವನ್ನು ರೇಖಾ ನೀಡುತ್ತಲೇ ಬಂದಿದ್ದಾರೆ.

ಸುಮಾರು ಇಪತ್ತು ವರ್ಷಗಳ ಹಿಂದೆ ಟೆಲಿವಿಷನ್‌ ಶೋವೊಂದರಲ್ಲಿ ಸಿಮಿ ಗಾರೆವಲ್‌ ಅವರೊಂದಿಗೆ ರೇಖಾ ಮುಕ್ತವಾಗಿ ಮಾತನಾಡಿದ್ದರು. "ನೀವು ಬಿಗ್‌ಬಿ ಜತೆಗೆ ಪ್ರೀತಿ ಹೊಂದಿದ್ದೀರಾ?ʼ ಎಂದು ಸಿಮಿ ಪ್ರಶ್ನಿಸಿದ್ದರು. ಆ ಸಮಯದಲ್ಲಿ ರೇಖಾ ತನ್ನ ಪ್ರೀತಿಯನ್ನು ಒಪ್ಪಿಕೊಂಡಿದ್ದರು. "ಖಂಡಿತಾ. ಅವರ ಪ್ರೀತಿಗೆ ಬಿದ್ದಿದ್ದೆ. ಆದರೆ, ಸಂಪೂರ್ಣವಾಗಿ, ಉತ್ಸಾಹದಿಂದ, ಹುಚ್ಚುತನದಿಂದ, ಹತಾಶವಾಗಿ ಆತನ ಜತೆ ಪ್ರೀತಿಗೆ ಬೀಳಲು ಸಾಧ್ಯವಾಗಲಿಲ್ಲ. ಇದನ್ನು ಒಪ್ಪಿಕೊಳ್ಳುವುದರಲ್ಲಿ ತಪ್ಪೇನಿದೆ. ಇದನ್ನು ನಾನು ಏಕೆ ನಿರಾಕರಿಸಬೇಕು. ನಾನು ಆತನನ್ನು ಪ್ರೀತಿಸುತ್ತಿಲ್ಲವೇ, ಖಂಡಿತವಾಗಿ ಪ್ರೀತಿಸುತ್ತೇನೆ" ಎಂದು ಅವರು ಹೇಳಿದ್ದರು.

ರೇಖಾ ಮತ್ತು ಅಮಿತಾಬ್‌ ಬಚ್ಚನ್‌ ಬಗ್ಗೆ

ಅಮಿತಾಬ್‌ ಬಚ್ಚನ್‌ ಮತ್ತು ರೇಖಾ ಒಂದಾನೊಂದು ಕಾಲದಲ್ಲಿ ಹಲವು ಬಾಲಿವುಡ್‌ ಬ್ಲಾಕ್‌ಬಸ್ಟರ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ದೋ ಅಂಜಾನೆ, ಸಿಲ್ಸಿಲಾ, ಆಲಾಪ್, ಖೂನ್ ಪಸಿನಾ, ಶ್ರೀ ನಟವರ್ಲಾಲ್, ಗಂಗಾ ಕಿ ಸೌಗಂಧ್, ಮುಕದ್ದರ್ ಕಾ ಸಿಕಂದರ್, ಸುಹಾಗ್ ಮತ್ತು ರಾಮ್ ಬಲರಾಮ್ ಮುಂತಾದ ಚಿತ್ರಗಳಲ್ಲಿ ಜತೆಯಾಗಿ ನಟಿಸಿದ್ದಾರೆ. ರೇಖಾ ಮತ್ತು ಅಮಿತಾಬ್ ಬಚ್ಚನ್ ಹಲವಾರು ಪ್ರಶಸ್ತಿ ಸಮಾರಂಭಗಳಲ್ಲಿ ಮುಖಾಮುಖಿಯಾಗುತ್ತಾರೆ. ಆದರೆ, ಎಂದಿಗೂ ಅವರಿಬ್ಬರು ಪರಸ್ಪರ ಮಾತನಾಡುವುದಿಲ್ಲ. ಇನ್ನೊಂದೆಡೆ ಜಯಾ ಬಚ್ಚನ್ ಮತ್ತು ರೇಖಾ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಇಬ್ಬರೂ ಮುಕ್ತವಾಗಿ ಮಾತನಾಡುತ್ತಾರೆ. ಈ ಎರಡು ರೀತಿಯ ವರ್ತನೆಯನ್ನು ನೋಡಿ ಜನರಿಗೆ ಅಚ್ಚರಿಯಾಗುತ್ತದೆ.

ಜಯಾ ಭಾದುರಿ ಅವರ ಜತೆಗೆ ಅಮಿತಾಬ್‌ ಬಚ್ಚನ್‌ ಅವರ ಮದುವೆಯಾದ ಕುರಿತು ಇಂಟ್ರೆಸ್ಟಿಂಗ್‌ ಸ್ಟೋರಿಯೇ ಇದೆ. ಜಯಾ ಅವರಿಗೆ ಅಮಿತಾಬ್‌ ಬಚ್ಚನ್‌ನಿಂದ ದೂರ ಇರುವಂತೆ ರಾಜೇಶ್‌ ಖನ್ನಾ ಎಚ್ಚರಿಕೆ ನೀಡಿದ್ರಂತೆ. ಈ ಕುರಿತಾದ ಸ್ಟೋರಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅಮಿತಾಬ್‌ ಬಚ್ಚನ್‌ಗೆ 81ನೇ ಹುಟ್ಟುಹಬ್ಬ

ಇಂದು ಅಂದರೆ ಅಕ್ಟೋಬರ್‌ 11 ಅಮಿತಾಬ್‌ ಬಚ್ಚನ್‌ ಅವರ 81ನೇ ಹುಟ್ಟುಹಬ್ಬ. ಅಮಿತಾಬ್‌ ಶ್ರೀವಾತ್ಸವ್‌ ಎನ್ನುವುದು ಇವರ ಬಾಲ್ಯದ ಹೆಸರು. ಇವರು 1942 ಅಕ್ಟೋಬರ್‌ 11ರಂದು ಜನಿಸಿದರು. ಭಾರತದ ನಟನಾಗಿ, ಸಿನಿಮಾ ನಿರ್ಮಾಪಕರಾಗಿ, ಟೆಲಿವಿಷನ್‌ ಹೋಸ್ಟ್‌ ಆಗಿ, ಒಮ್ಮೊಮ್ಮೆ ಹಾಡುಗಾರನಾಗಿ, ರಾಜಕಾರಣಿಯಾಗಿ, ಹೀಗೆ ಹಲವು ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸುಮಾರು ಐದು ದಶಕಗಳ ಕಾಲ ಸಿನಿಮಾ ರಂಗದಲ್ಲಿರುವ ಇವರು ಬಾಲಿವುಡ್‌ನ ಬಿಗ್‌ಬಿ ಎಂದೇ ಜನಪ್ರಿಯತೆ ಪಡೆದಿದ್ದಾರೆ.

Whats_app_banner