ಕನ್ನಡ ಸುದ್ದಿ  /  Entertainment  /  Bollywood News Amitabh Bachchan Ride With Unknown Person In Mumbai Netizens Complaint Police To Take Action Rsm

Amitabh Bachchan: ಅಪರಿಚಿತ ವ್ಯಕ್ತಿಯ ಬೈಕ್‌ ಏರಿ ಶೂಟಿಂಗ್‌ ಸ್ಥಳ ತಲುಪಿದ ಅಮಿತಾಬ್‌ ಬಚ್ಚನ್‌; ಪೊಲೀಸರಿಗೆ ದೂರು ನೀಡಿದ ನೆಟಿಜನ್ಸ್

ಅಮಿತಾಬ್‌ ಬಚ್ಚನ್‌ ಹಂಚಿಕೊಂಡಿರುವ ಫೋಟೋಗೆ ಪರ ವಿರೋಧ ಕಾಮೆಂಟ್‌ ವ್ಯಕ್ತವಾಗಿದೆ. ಅಭಿಮಾನಿಯೊಬ್ಬರ ಬೈಕ್‌ ಏರಿ ನೀವು ಸರಳತೆ ಮೆರೆದಿದ್ದೀರಿ. ನೀವು ಯಾವಾಗಲೂ ನಮಗೆ ಸ್ಫೂರ್ತಿ ಎಂದು ರಾಕೇಶ್‌ ರೋಷನ್‌ ಕಾಮೆಂಟ್‌ ಮಾಡಿದ್ದಾರೆ. ಆದರೆ ಕೆಲವರು ಮಾತ್ರ ಹೆಲ್ಮೆಟ್‌ ಎಲ್ಲಿ ಎಂದು ಪ್ರಶ್ನಿಸುತ್ತಿದ್ದಾರೆ.

ಅಮಿತಾಬ್‌ ಬಚ್ಚನ್‌
ಅಮಿತಾಬ್‌ ಬಚ್ಚನ್‌

ಬಾಲಿವುಡ್‌ ಖ್ಯಾತ ನಟ ಅಮಿತಾಬ್‌ ಬಚ್ಚನ್‌ 80ರ ವಯಸ್ಸಿನಲ್ಲೂ ಯುವಕನಂತೆ ಹುರುಪಿನಿಂದ ಕೆಲಸ ಮಾಡುತ್ತಿದ್ದಾರೆ. ಇಂದಿಗೂ ಅನೇಕ ಜಾಹೀರಾತು, ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದಾರೆ. ಹಾಗೇ ಅಮಿತಾಬ್‌ ಬಚ್ಚನ್‌ ತಮ್ಮ ವೃತ್ತಿ ಜೀವನದಲ್ಲಿ ಚಿತ್ರೀಕರಣಕ್ಕೆ ಎಂದಿಗೂ ತಡವಾಗಿ ಹೋಗಿಲ್ಲವಂತೆ. ಆದರೆ ಇತ್ತೀಚೆಗೆ ಟ್ರಾಫಿಕ್‌ನಿಂದ ತಡವಾಗಿದ್ದಕ್ಕೆ ಅವರು ಅಭಿಮಾನಿಯೊಬ್ಬರ ಬೈಕ್‌ ಏರಿ ಹೋಗಿದ್ದಾರೆ, ನಂತರ ಪೇಚಿಗೆ ಸಿಲುಕಿದ್ದಾರೆ.

ಬೆಂಗಳೂರು, ಮುಂಬೈನಂತ ನಗರಗಳಲ್ಲಿ ಟ್ರಾಫಿಕ್‌ ಬಗ್ಗೆ ಹೇಳುವುದೇ ಬೇಡ. ಎಲ್ಲಿಗಾದರೂ ಹೋಗಬೇಕಾದಲ್ಲಿ ನಿಗದಿತ ಅವಧಿಗಿಂತ ಮುನ್ನವೇ ಮನೆಯಿಂದ ಹೊರಡಬೇಕು. ಇಲ್ಲವಾದಲ್ಲಿ ಸ್ವಂತ ವಾಹನದಲ್ಲಿ ಹೋದರೂ ಟ್ರಾಫಿಕ್‌ ದಾಟಿ ಸರಿಯಾದ ಸ್ಥಳಕ್ಕೆ ತಲುಪಲು ಸಾಧ್ಯವೇ ಇಲ್ಲ. ಹಿರಿಯ ನಟ ಅಮಿತಾಬ್‌ ಅವರಿಗೂ ಇದೇ ಸಮಸ್ಯೆ ಉಂಟಾಗಿತ್ತಂತೆ. ಇತ್ತೀಚೆಗೆ ಅವರು ಶೂಟಿಂಗ್‌ ಹೋಗುವಾಗ ಭಾರೀ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಅತ್ತ ಶೂಟಿಂಗ್‌ಗೆ ತಡವಾಗುತ್ತಿದೆ, ಇಲ್ಲಿ ಟ್ರಾಫಿಕ್‌ ಕ್ಲಿಯರ್‌ ಆಗುತ್ತಲೇ ಇಲ್ಲ, ಆ ಸಮಯದಲ್ಲಿ ಅಮಿತಾಬ್‌ ಬಚ್ಚನ್‌ ಬೈಕ್‌ ಸವಾರನೊಬ್ಬರ ಸಹಾಯ ಪಡೆದು ಹೋಗಬೇಕಾದ ಸ್ಥಳಕ್ಕೆ ತೆರಳಿದ್ದಾರೆ.

ಸಹಾಯ ಮಾಡಿದ ಬೈಕ್‌ ಸವಾರನಿಗೆ ಥ್ಯಾಂಕ್ಸ್‌ ಹೇಳಿದ ಬಿಗ್‌ ಬಿ

ತಾವು ಬೈಕ್‌ ಹಿಂಬದಿಯಲ್ಲಿ ಹೋಗುವಾಗ ಸ್ಥಳದಲ್ಲಿ ಇದ್ದವರು ಫೋಟೋ ಕ್ಲಿಕ್‌ ಮಾಡಿದ್ದಾರೆ. ಇದನ್ನು ಅಮಿತಾಬ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ತಮಗೆ ಸಹಾಯ ಮಾಡಿದ ವ್ಯಕ್ತಿಗೆ ಧನ್ಯವಾದ ಅರ್ಪಿಸಿದ್ದಾರೆ. ''ನೀವು ಯಾರು ಎಂದು ನನಗೆ ಗೊತ್ತಿಲ್ಲ, ನನ್ನನ್ನು ಹೋಗಬೇಕಾದ ಸ್ಥಳಕ್ಕೆ ಸರಿಯಾಗಿ ತಲುಪಿಸಿದ್ದೀರಿ. ವೇಗವಾಗಿ ಮತ್ತು ಪರಿಹರಿಸಲಾಗದ ಟ್ರಾಫಿಕ್ ಜಾಮ್‌ನಿಂದ ನನ್ನನ್ನು ತಪ್ಪಿಸಿದ್ದೀರಿ. ಕ್ಯಾಪ್‌, ಶಾರ್ಟ್ಸ್‌ ಹಳದಿ ಟೀ ಶರ್ಟ್‌ ಧರಿಸಿದ್ದ ಓನರ್‌ಗೆ ಧನ್ಯವಾದಗಳು'' ಎಂದು ಅಮಿತಾಬ್‌ ಬಚ್ಚನ್‌ ಬರೆದುಕೊಂಡಿದ್ದಾರೆ.

ಹೆಲ್ಮೆಟ್‌ ಇಲ್ಲದೆ ಸವಾರಿ ಮಾಡಿದ್ದನ್ನು ಪ್ರಶ್ನಿಸಿದ ನೆಟಿಜನ್ಸ್

ಅಮಿತಾಬ್‌ ಬಚ್ಚನ್‌ ಹಂಚಿಕೊಂಡಿರುವ ಫೋಟೋಗೆ ಪರ ವಿರೋಧ ಕಾಮೆಂಟ್‌ ವ್ಯಕ್ತವಾಗಿದೆ. ಅಭಿಮಾನಿಯೊಬ್ಬರ ಬೈಕ್‌ ಏರಿ ನೀವು ಸರಳತೆ ಮೆರೆದಿದ್ದೀರಿ. ನೀವು ಯಾವಾಗಲೂ ನಮಗೆ ಸ್ಫೂರ್ತಿ ಎಂದು ರಾಕೇಶ್‌ ರೋಷನ್‌ ಕಾಮೆಂಟ್‌ ಮಾಡಿದ್ದಾರೆ. ಆದರೆ ಕೆಲವರು ಮಾತ್ರ ಹೆಲ್ಮೆಟ್‌ ಎಲ್ಲಿ ಎಂದು ಪ್ರಶ್ನಿಸುತ್ತಿದ್ದಾರೆ. ಇಬ್ಬರೂ ಹೆಲ್ಮೆಟ್‌ ಧರಿಸದೆ ನಿಯಮ ಉಲ್ಲಂಘಿಸಿದ್ದೀರಿ ಎಂದಿರುವುದಲ್ಲದೆ ಮುಂಬೈ ಪೊಲೀಸರಿಗೆ ಈ ಫೋಟೋವನ್ನು ಟ್ಯಾಗ್‌ ಮಾಡಿ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಇದರಿಂದ ಅಮಿತಾಬ್‌ ಬಚ್ಚನ್‌ ಪೇಚಿಗೆ ಸಿಲುಕಿದ್ದಾರೆ.

ಅಮಿತಾಬ್‌ ಬಚ್ಚನ್‌ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಅನುಪಮ್‌ ಖೇರ್‌, ಬೊಮ್ಮನ್‌ ಇರಾನಿ ಜೊತೆ ನಟಿಸಿದ್ದ ಊಂಚೈ ಸಿನಿಮಾ ಕಳೆದ ವರ್ಷ ನವೆಂಬರ್‌ನಲ್ಲಿ ತೆರೆ ಕಂಡಿತ್ತು. ಸದ್ಯಕ್ಕೆ ಅವರು ಗಣಪತ್, ಘೂಮರ್‌, ದಿ ಉಮೇಶ್‌ ಕ್ರಾನಿಕಲ್ಸ್‌, ಪ್ರಾಜೆಕ್ಟ್‌ ಕೆ, ಬಟರ್‌ ಫ್ಲೈ ಹಾಗೂ ಇನ್ನಿತರ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇದರಲ್ಲಿ ಕೆಲವೊಂದು ಸಿನಿಮಾಗಳಲ್ಲಿ ಅಮಿತಾಬ್‌ ಬಚ್ಚನ್‌ ಅತಿಥಿ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

IPL_Entry_Point