ಸಲ್ಮಾನ್‌ ಖಾನ್‌ರನ್ನು ಮೇಲಕ್ಕೆ ಎತ್ತಲು ಪ್ರಯತ್ನಿಸಿದ ಅನಂತ್‌ ಅಂಬಾನಿ; ಮಧುಮಗನಿಗೆ ಬಾಡಿಗಾರ್ಡ್‌ ಸಾಥ್‌-bollywood news anant ambani tries to lift salman khan at wild afterparty sks his bodyguard shera for help pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಸಲ್ಮಾನ್‌ ಖಾನ್‌ರನ್ನು ಮೇಲಕ್ಕೆ ಎತ್ತಲು ಪ್ರಯತ್ನಿಸಿದ ಅನಂತ್‌ ಅಂಬಾನಿ; ಮಧುಮಗನಿಗೆ ಬಾಡಿಗಾರ್ಡ್‌ ಸಾಥ್‌

ಸಲ್ಮಾನ್‌ ಖಾನ್‌ರನ್ನು ಮೇಲಕ್ಕೆ ಎತ್ತಲು ಪ್ರಯತ್ನಿಸಿದ ಅನಂತ್‌ ಅಂಬಾನಿ; ಮಧುಮಗನಿಗೆ ಬಾಡಿಗಾರ್ಡ್‌ ಸಾಥ್‌

Anant Ambani Wedding: ಅನಂತ್‌ ಅಂಬಾನಿ ವಿವಾಹಪೂರ್ವ ಕಾರ್ಯಕ್ರಮಗಳಲ್ಲಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಸೇರಿದಂತೆ ಹಲವು ನಟರು ಭಾಗವಹಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಲ್ಮಾನ್‌ ಖಾನ್‌ರನ್ನು ಮೇಲಕ್ಕೆ ಎತ್ತಲು ಅನಂತ್‌ ಅಂಬಾನಿ ಪ್ರಯತ್ನಿಸಿದ್ದು, ನೆಟ್ಟಿಗರ ಗಮನ ಸೆಳೆದಿದೆ.

ಸಲ್ಮಾನ್‌ ಖಾನ್‌ರನ್ನು ಮೇಲಕ್ಕೆ ಎತ್ತಲು ಪ್ರಯತ್ನಿಸಿದ ಅನಂತ್‌ ಅಂಬಾನಿ; ಮಧುಮಗನಿಗೆ ಬಾಡಿಗಾರ್ಡ್‌ ಸಾಥ್‌
ಸಲ್ಮಾನ್‌ ಖಾನ್‌ರನ್ನು ಮೇಲಕ್ಕೆ ಎತ್ತಲು ಪ್ರಯತ್ನಿಸಿದ ಅನಂತ್‌ ಅಂಬಾನಿ; ಮಧುಮಗನಿಗೆ ಬಾಡಿಗಾರ್ಡ್‌ ಸಾಥ್‌

ಅಂಬಾನಿ ಮನೆಯಲ್ಲಿ ಮದುವೆ ಸಂಭ್ರಮ. ಜಾಮ್‌ನಗರದಲ್ಲಿ ವಾರವಿಡೀ ಮದುವೆ ಪೂರ್ವ ಕಾರ್ಯಕ್ರಮಗಳ ಗೌಜು ಗದ್ದಲ. ಬಾಲಿವುಡ್‌ನ ನಟರು, ನಟಿಯರು ಅಲ್ಲಿ ಪಾರ್ಟಿ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಲ್ಮಾನ್‌ ಖಾನ್‌ ಕೂಡ ಭಾಗವಹಿಸಿದ್ದಾರೆ. ಪಾರ್ಟಿ ಮುಗಿದ ಬಳಿಕ ಜೋಶ್‌ನಲ್ಲಿ ಸಲ್ಮಾನ್‌ ಖಾನ್‌ರನ್ನು ಖುಷಿಯಿಂದ ಮೇಲಕ್ಕೆ ಎತ್ತಲು ಅನಂತ್‌ ಅಂಬಾನಿ ಪ್ರಯತ್ನಿಸಿದ್ದಾರೆ. ಇದಕ್ಕಾಗಿ ತನ್ನ ಬಾಡಿಗಾರ್ಡ್‌ ಶೇರಾನ ಸಹಾಯ ಪಡೆದಿದ್ದಾರೆ. ಭಾನುವಾರ ಸಂಜೆ ಸ್ಟೇಜ್‌ನಲ್ಲಿ ಬಾಲಿವುಡ್‌ ನಟರು, ನಟಿಯರನ್ನು ಒಳಗೊಂಡ ಕಾರ್ಯಕ್ರಮಗಳ ಸಡಗರವಿತ್ತು. ಸ್ಟೇಜ್‌ನಲ್ಲಿ ಸಲ್ಮಾನ್‌ ಖಾನ್‌ ಡ್ಯಾನ್ಸ್‌ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಸಲ್ಮಾನ್‌ ಖಾನ್‌ರನ್ನು ಬಾಡಿಗಾರ್ಡ್‌ ಶೇರಾ ಮೇಲಕ್ಕೆ ಎತ್ತಿದ್ದಾರೆ.

ಸಲ್ಮಾನ್‌ ಖಾನ್‌ ಜತೆ ಅನಂತ್‌ ಅಂಬಾನಿ

ಅಕಾನ್‌ ಪರ್ಫಾಮೆನ್ಸ್‌ ಸಂದರ್ಭದಲ್ಲಿ ಅನಂತ್‌ ಅಂಬಾನಿಯು ಸಲ್ಮಾನ್‌ ಖಾನ್‌ರನ್ನು ಮೇಲಕ್ಕೆ ಎತ್ತಲು ಪ್ರಯತ್ನಿಸಿದ್ದಾರೆ. ಆದರೆ, ಸಲ್ಮಾನ್‌ ಖಾನ್‌ರನ್ನು ಎತ್ತಲು ಸಾಧ್ಯವಾಗದೆ ಇದ್ದಾಗ ಅನಂತ್‌ ತನ್ನ ಬಾಡಿಗಾರ್ಡ್‌ ಶೇರಾನ ಸಹಾಯ ಪಡೆದಿದ್ದಾರೆ. ಸ್ಟೇಜ್‌ ಪಕ್ಕದಲ್ಲಿ ನಿಂತಿದ್ದ ಶೇರಾ ಸಲ್ಮಾನ್‌ ಖಾನ್‌ರನ್ನು ಮೇಲಕ್ಕೆ ಎತ್ತಿದ್ದಾರೆ. ಈ ಕ್ಷಣವನ್ನು ಅಕಾನ್‌ ತನ್ನ ಫೋನ್‌ನಲ್ಲಿ ಸೆರೆಹಿಡಿದು ರೆಡಿಟ್‌ನಲ್ಲಿ ಹಂಚಿದ್ದಾರೆ. ಈ ಸಂದರ್ಭದಲ್ಲಿ ಸಲ್ಮಾನ್‌ ಖುಷಿಯಿಂದ ಕೈಬೀಸುತ್ತ ನೆರೆದವರನ್ನು ರಂಜಿಸಿದ್ದಾರೆ.

ಚಮಕ್‌ ಚಲ್ಲೋ ಪ್ರದರ್ಶನದ ವೇಳೆ ಅಕಾನ್‌ ಅವರು ಸ್ಟೇಜ್‌ ಮೇಲೆ ಹಾಡುತ್ತಿದ್ದರು. ಈ ಸಂದರ್ಭದಲ್ಲಿ ಹಲವು ಸೆಲೆಬ್ರಿಟಿಗಳು ಸ್ಟೇಜ್‌ನಲ್ಲಿದ್ದರು. ಅಂದರೆ, ಶಾರೂಖ್‌ ಖಾನ್‌, ಮಗಳು ಸುಹಾನ ಖಾನ್‌, ಸಲ್ಮಾನ್‌ ಖಾನ್‌, ಮಧುಮಗಳು ರಾಧಿಕಾ ಮರ್ಚೆಂಟ್‌ ಮುಂತಾದವರು ಇದ್ದರು. ಈ ವಿಡಿಯೋವನ್ನು ರೆಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. "ಈ ವರ್ಷದ ಅತ್ಯುತ್ತಮ ಪ್ರಿವೆಡ್ಡಿಂಗ್‌ ಪಾರ್ಟಿಯಿದು. ಭಾರತದ ಎಲ್ಲಾ ಕುಟುಂಬಗಳು ಸ್ಟೇಜ್‌ ಮೇಲೆ ಪ್ರದರ್ಶನ ನೀಡಿದ್ದಾರೆ. ಸುಂದರ ಸಂಜೆ" ಎಂದು ರೆಡಿಟ್‌ನಲ್ಲಿ ಅಕೋನ್‌ ಬರೆದಿದ್ದಾರೆ.

ಅನಂತ್‌ ಅಂಬಾನಿ ಮತ್ತು ರಾಧೀಕಾ ಮರ್ಚೆಂಟ್‌ ಮದುವೆ ಪೂರ್ವ ಕಾರ್ಯಕ್ರಮಗಳ ಎರಡನೇ ದಿನ ಸಲ್ಮಾನ್‌ ಖಾನ್‌ ಭಾಗವಹಿಸಿದ್ದರು. ಅಮಿರ್‌ ಖಾನ್‌ ಮತ್ತು ಶಾರೂಖ್‌ ಖಾನ್ ಕೂಡ ಆಗಮಿಸಿದ್ದರು. ರಾಮ್‌ ಚರಣ್‌ ಮತ್ತು ಎನ್‌ಟಿಆರ್‌ ಜೂನಿಯರ್‌ ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡಿಗೂ ಇವರು ಹೆಜ್ಜೆ ಹಾಕಿದ್ದಾರೆ. ದಿಲ್‌ ಸೇ ಸಿನಿಮಾದ ಚಯ್ಯ ಚಯ್ಯ ಹಾಡಿಗೂ ಹೆಜ್ಜೆ ಹಾಕಿದ್ದಾರೆ.

ಖಾನ್‌ಗಳು ಮಾತ್ರವಲ್ಲದೆ ಹಲವು ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ದೀಪಿಕಾ ಪಡುಕೋಣ್‌ ರಣವೀರ್‌ ಸಿಂಗ್‌, ರಾಣಿ ಮುಖರ್ಜಿ, ವರುಣ್‌ ಧವನ್‌, ಜಾನ್‌ ಅಬ್ರಾಹಂ, ಸಿದ್ಧಾರ್ಥ ಮಲ್ಹೋತ್ರಾ, ಕಿಯಾರ ಅಡ್ವಾಣಿ, ಸೈಫ್‌ ಆಲಿ ಖಾನ್‌, ಕರೀನ್‌ ಕಪೂರ್‌, ಸಾರಾ ಆಲಿ ಖಾನ್‌, ಅನನ್ಯ ಪಾಂಡೆ, ಜಾನ್ವಿ ಕಪೂರ್‌ ಮುಂತಾದವರು ಅನಂತ್‌ ಅಂಬಾನಿ ಮದುವೆ ಪೂರ್ವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

mysore-dasara_Entry_Point