Animal box office: ಗಲ್ಲಾಪೆಟ್ಟಿಗೆ ಕೊಳ್ಳೆಹೊಡೆಯುತ್ತಿದೆ ಅನಿಮಲ್‌; 200 ಕೋಟಿ ಕ್ಲಬ್‌ಗೆ ಸೇರ್ಪಡೆ; ಭಾನುವಾರದ ಬಾಕ್ಸ್‌ ಆಫೀಸ್‌ ವಿವರ
ಕನ್ನಡ ಸುದ್ದಿ  /  ಮನರಂಜನೆ  /  Animal Box Office: ಗಲ್ಲಾಪೆಟ್ಟಿಗೆ ಕೊಳ್ಳೆಹೊಡೆಯುತ್ತಿದೆ ಅನಿಮಲ್‌; 200 ಕೋಟಿ ಕ್ಲಬ್‌ಗೆ ಸೇರ್ಪಡೆ; ಭಾನುವಾರದ ಬಾಕ್ಸ್‌ ಆಫೀಸ್‌ ವಿವರ

Animal box office: ಗಲ್ಲಾಪೆಟ್ಟಿಗೆ ಕೊಳ್ಳೆಹೊಡೆಯುತ್ತಿದೆ ಅನಿಮಲ್‌; 200 ಕೋಟಿ ಕ್ಲಬ್‌ಗೆ ಸೇರ್ಪಡೆ; ಭಾನುವಾರದ ಬಾಕ್ಸ್‌ ಆಫೀಸ್‌ ವಿವರ

Animal box office collection day 3: ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನದ ರಣಬೀರ್‌ ಕಪೂರ್‌- ರಶ್ಮಿಕಾ ಮಂದಣ್ಣ ನಟನೆಯ ಅನಿಮಲ್‌ ಸಿನಿಮಾವು ಭಾರತದಲ್ಲಿ 200 ಕೋಟಿ ಕ್ಲಬ್‌ಗೆ ಸೇರಿದೆ. ಈ ಸಿನಿಮಾದ ಭಾನುವಾರದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ವಿವರ ಇಲ್ಲಿದೆ.

ಅನಿಮಲ್‌ ಸಿನಿಮಾ- ರಣಬೀರ್‌ ಕಪೂರ್
ಅನಿಮಲ್‌ ಸಿನಿಮಾ- ರಣಬೀರ್‌ ಕಪೂರ್

Animal box office collection day 3: ಅನಿಮಲ್‌ ಸಿನಿಮಾವು ಭಾರತ ಮತ್ತು ಜಗತ್ತಿನಾದ್ಯಂತ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯುವ ಸೂಚನೆ ದೊರಕಿದೆ. ಈ ಸಿನಿಮಾವು ಈ ವರ್ಷದ ಹಲವು ಸಿನಿಮಾಗಳು ಮಾಡಿರುವ ದಾಖಲೆಯನ್ನು ಅಳಿಸುವ ಸಾಧ್ಯತೆಯೂ ಇದೆ. ಸಕ್‌ನಿಲ್ಕ್‌ ವರದಿ ಪ್ರಕಾರ ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನದ ರಣಬೀರ್‌ ಕಪೂರ್‌- ರಶ್ಮಿಕಾ ಮಂದಣ್ಣ ನಟನೆಯ ಅನಿಮಲ್‌ ಸಿನಿಮಾವು ಭಾರತದಲ್ಲಿ 200 ಕೋಟಿ ಕ್ಲಬ್‌ಗೆ ಸೇರಿದೆ. ಈ ಸಿನಿಮಾದ ಭಾನುವಾರದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ವಿವರ ಇಲ್ಲಿದೆ.

ಅನಿಮಲ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ (ಭಾರತದಲ್ಲಿ)

ಸಚ್‌ನಿಲ್ಕ್‌ ತಾಣದ ಪ್ರಕಾರ ಅನಿಮಲ್‌ ಸಿನಿಮಾವು ಭಾನುವಾರ 63.8 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಹಿಂದಿ ಭಾಷೆಯಲ್ಲಿ: 54.75 ಕೋಟಿ ರೂಪಾಯಿ; ತೆಲುಗಿನಲ್ಲಿ 8.55 ಕೋಟಿ ರೂಪಾಯಿ; ತಮಿಳಿನಲ್ಲಿ 40 ಲಕ್ಷ ; ಕನ್ನಡದಲ್ಲಿ 9 ಲಕ್ಷ; ಮಲಯಾಳಂನಲ್ಲಿ 1 ಲಕ್ಷ ರೂಪಾಯಿ ಗಳಿಕೆ ಮಾಡಿದೆ. ಎಲ್ಲಾ ಭಾಷೆಗಳಲ್ಲಿ ಒಟ್ಟಾರೆ ಮೂರನೇ ದಿನ ಸುಮಾರು 70 ಕೋಟಿಯವರೆಗೆ ಅನಿಮಲ್‌ ಸಿನಿಮಾ ಗಳಿಕೆ ಮಾಡಿರುವ ಸಾಧ್ಯತೆಯಿದೆ. ಸದ್ಯದ ಬಾಕ್ಸ್‌ ಆಫೀಸ್‌ ವರದಿ ಪ್ರಕಾರ ಭಾನುವಾರದವರೆಗೆ ಅನಿಮಲ್‌ ಸಿನಿಮಾವು ಭಾರತದಲ್ಲಿ 200 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಮೊದಲ ದಿನ ಅನಿಮಲ್‌ ಸಿನಿಮಾ ಸುಮಾರು 60 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇವುಗಳಲ್ಲಿ ಸುಮಾರು 49.50 ಕೋಟಿ ರೂಪಾಯಿ ಹಿಂದಿಯಿಂದ ಮತ್ತು 10 ಕೋಟಿ ರೂಪಾಯಿ ತೆಲುಗು ಆವೃತ್ತಿಗಳಿಂದ ಬಂದಿದೆ. ಉಳಿದ ಭಾಷೆಗಳಿಂದಲೂ ಕೊಂಚ ಗಳಿಕೆ ಆಗಿದೆ. ಸಂದೀಪ್‌ ರೆಡ್ಡಿ ವಂಗಾ ಅವರು 2017ರಲ್ಲಿ ಅರ್ಜುನ್‌ ರೆಡ್ಡಿ ಎಂಬ ಬ್ಲಾಕ್‌ಬಸ್ಟರ್‌ ಸಿನಿಮಾ ನೀಡಿದ್ದರು. ರಶ್ಮಿಕಾ ಮಂದಣ್ಣ ಕಾಂಬಿನೇಷನ್‌ನ ಈ ಸಿನಿಮಾ ಮುಂದಿನ ದಿನಗಳಲ್ಲಿಯೂ ಭರ್ಜರಿ ಗಳಿಕೆ ಮಾಡುವ ನಿರೀಕ್ಷೆಯಿದೆ. ಭಾರತ ಮತ್ತು ಜಗತ್ತಿನಾದ್ಯಂತ ಅನಿಮಲ್‌ ಸಿನಿಮಾ ದೊಡ್ಡಮಟ್ಟದ ಹಿಟ್‌ ನೀಡಲಿದೆ ಎನ್ನಲಾಗುತ್ತಿದೆ.

ರಣಬೀರ್‌ ಕಪೂರ್‌, ರಶ್ಮಿಕಾ ಮಂದಣ್ಣ, ಅನಿಲ್‌ ಕಪೂರ್‌, ಬಾಬಿ ಡಿಯೋಲ್‌, ಶಕ್ತಿ ಕಪೂರ್‌, ಪ್ರೇಮ್‌ ಛೋಪ್ರಾ ಮತ್ತು ತೃಪ್ತಿ ಡಿಮ್ರಿ ಮುಂತಾದ ಕಲಾವಿದರು ನಟಿಸಿರುವ ಸಿನಿಮಾ. ಇದು ಇತ್ತೀಚೆಗೆ ತೆರೆಕಂಡ ದೀರ್ಘಾವಧಿಯ ಸಿನಿಮಾವಾಗಿದೆ. ಈ ಸಿನಿಮಾ 3 ಗಂಟೆ 21 ನಿಮಿಷವಿದೆ.

ಅನಿಮಲ್‌ ಸಿನಿಮಾ ಹೇಗಿದೆ?

ಹಿಂದೂಸ್ತಾನ್‌ ಟೈಮ್ಸ್‌ ಈಗಾಗಲೇ ಅನಿಮಲ್‌ ಸಿನಿಮಾದ ವಿಮರ್ಶೆ ಪ್ರಕಟಿಸಿದೆ. "ಅನಿಮಲ್‌ ಸಿನಿಮಾದಲ್ಲಿ ಕ್ರೌರ್ಯವಿದೆ. ರಣಬೀರ್‌ ಕಪೂರ್‌ ಅವರ ವರ್ತನೆ ನಿಮಗೆ ಕೆಲವೊಮ್ಮೆ ಕಿರಿಕಿರಿ ಅನಿಸಬಹುದು.ಆದರೆ, ಆತನನ್ನು ದ್ವೇಷಿಸಲು ನಿಮ್ಮಿಂದ ಸಾಧ್ಯವಾಗದು. ಅನಿಮಲ್‌ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಣಬೀರ್‌ ಕಪೂರ್‌ ಕೆಮೆಸ್ಟ್ರಿ ಇಷ್ಟವಾಗುತ್ತದೆ. ಆದರೆ, ಅವರಿಬ್ಬರ ಆ ಒಳ್ಳೆಯ ಹೊಂದಾಣಿಕೆಯನ್ನು ರಣಬೀರ್‌ ಕಪೂರ್‌ನನ್ನು ಸ್ತ್ರೀದ್ವೇಷಿಯಾಗಿ ತೋರಿಸುವ ಪ್ರಯತ್ನ ಹಾಳು ಮಾಡಿದೆ. ಈ ಸಿನಿಮಾ ಒಂದಿಷ್ಟು ದೀರ್ಘಾವಧಿ ಎನಿಸಬಹುದು. ಮೂರು ಗಂಟೆಗೂ ಅಧಿಕ ಕಾಲ ಸಿನಿಮಾ ಮಂದಿರದಲ್ಲಿ ಕುಳಿತುಕೊಳ್ಳಲು ಮನಸ್ಸನ್ನು ಸಿದ್ಧಪಡಿಸಿ ಥಿಯೇಟರ್‌ ಪ್ರವೇಶಿಸಿ" ಎಂದು ವಿಮರ್ಶೆ ಮಾಡಲಾಗಿದೆ. ಅನಿಮಲ್‌ ಸಿನಿಮಾದ ವಿಮರ್ಶೆ ಓದಿ

Whats_app_banner