ಕನ್ನಡ ಸುದ್ದಿ  /  ಮನರಂಜನೆ  /  ವಮಿಕಾ ಜತೆ ವಿರಾಟ್‌ ಕೊಹ್ಲಿ ಲಂಚ್‌, ಜೂನಿಯರ್‌ ಅನುಷ್ಕಾಳ ಜುಟ್ಟು ನೋಡಿ ಖುಷಿಪಡಬೇಕಷ್ಟೇ ಅಂದ್ರು ಫ್ಯಾನ್ಸ್‌

ವಮಿಕಾ ಜತೆ ವಿರಾಟ್‌ ಕೊಹ್ಲಿ ಲಂಚ್‌, ಜೂನಿಯರ್‌ ಅನುಷ್ಕಾಳ ಜುಟ್ಟು ನೋಡಿ ಖುಷಿಪಡಬೇಕಷ್ಟೇ ಅಂದ್ರು ಫ್ಯಾನ್ಸ್‌

ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್‌ ಕೊಹ್ಲಿ ಕಳೆದ ವಾರ ತಮಗೆ ಗಂಡುಮಗು ಅಕಾಯ್‌ ಜನಿಸಿರುವ ಕುರಿತು ತಿಳಿಸಿದ್ದರು. ಇದೀಗ ಈ ದಂಪತಿ ತಮ್ಮ ಪುಟ್ಟ ಮಕ್ಕಳ ಜತೆ ಲಂಚ್‌ಗೆ ಹೋಗಿರುವ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವಮಿಕಾ ಜತೆ ವಿರಾಟ್‌ ಕೊಹ್ಲಿ ಲಂಚ್‌
ವಮಿಕಾ ಜತೆ ವಿರಾಟ್‌ ಕೊಹ್ಲಿ ಲಂಚ್‌

ಬೆಂಗಳೂರು: ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್‌ ಕೊಹ್ಲಿಇತ್ತೀಚೆಗೆ ತಮಗೆ ಗಂಡು ಮಗು ಹುಟ್ಟಿರುವ ಮಾಹಿತಿಯನ್ನು ತಿಳಿಸಿದ್ದರು. ಮಗುವಿನ ಹೆಸರು ಅಕಾಯ್‌ ಎಂದು ಘೋಷಿಸಿದ್ದರು. ಇದೀಗ ಹೊಸ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವಿರಾಟ್‌ ಕೊಹ್ಲಿ ತನ್ನ ಮಗಳ ಜತೆ ಇರುವ ಫೋಟೋ ಇದಾಗಿದೆ. ಮಗುವಿನ ಮುಖವನ್ನು ಸದ್ಯ ಇವರು ಸಾರ್ವಜನಿಕವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳದೆ ಇರಲು ನಿರ್ಧರಿಸಿದ್ದಾರೆ.

ಲಂಚ್‌ಗೆ ಹೋದ ವಿರಾಟ್‌, ವಮಿಕಾ

ರೆಡಿಟ್‌ನಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ಈ ರೀತಿ ಕ್ಯಾಪ್ಷನ್‌ ಬರೆಯಲಾಗಿದೆ. "ಲಂಡನ್‌ನಲ್ಲಿ ವಮಿಕಾಳ ಜತೆ ವಿರಾಟ್‌ ಕೊಹ್ಲಿ ಕಾಣಿಸಿದ್ದಾರೆ" . ಫೋಟೋವನ್ನು ಹಿಂಬದಿಯಿಂದ ತೆಗೆಯಲಾಗಿದೆ. ವಿರಾಟ್‌ ಮತ್ತು ವಮಿಕಾ ಟೇಬಲ್‌ನಲ್ಲಿ ತಮ್ಮ ಊಟದ ಮುಂದೆ ಕುಳಿತಿರುವ ಫೋಟೋ ಇದಾಗಿದೆ. ಇಬ್ಬರು ಕಪ್ಪು ಮತ್ತು ಬಿಳಿ ಉಡುಗೆ ಧರಿಸಿದ್ದಾರೆ. "ನಮಗೆ ಮಗುವನ್ನು ಹಿಂಬದಿಯಿಂದ ನೋಡುವ ಅವಕಾಶ ಮಾತ್ರ ದೊರಕಿದೆ" "ತುಂಬಾ ಅದೃಷ್ಟವಂತ ಮಗು" ಎಂದೆಲ್ಲ ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ.

"ಅಪ್ಪ ಮತ್ತು ಮಗಳು ಒಂದೆಡೆ ಕಾಲ ಕಳೆಯುತ್ತಿದ್ದಾರೆ. ಅಮ್ಮ ಮತ್ತು ಮಗ ಇನ್ನೊಂದೆಡೆ ಕಾಲ ಕಳೆಯುತ್ತಿದ್ದಾರೆ. ಒಟ್ಟಾರೆ ಅಪ್ಪ ಮತ್ತು ಅಮ್ಮ ತಮ್ಮ ಮಕ್ಕಳ ಜತೆ ಅಮೂಲ್ಯ ಸಮಯ ಕಳೆಯುತ್ತಿದ್ದಾರೆ" ಎಂದು ರೆಡಿಟ್‌ ಬಳಕೆದಾರರೊಬ್ಬರು ಕಾಮೆಂಟ್‌ ಮಾಡಿದ್ದಾರೆ. "ಅವಳ ಜಡೆ ನೋಡಿ, ವಮಿಕಾ ಕೊಂಚ ದೊಡ್ಡ ಮಗುವಾಗಿ ಬದಲಾಗಿದ್ದಾಳೆ. ತುಂಬಾ ಕ್ಯೂಟ್‌ ಫ್ಯಾಮಿಲಿ" ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. "ಬಹುಶಃ ಇವಳು ನೋಡಲು ಥೇಟ್‌ ಅನುಷ್ಕಾ ರೀತಿಯೇ ಇರಬಹುದು. ಜೂನಿಯರ್‌ ಅನುಷ್ಕಾಳ ಮುಖ ನೋಡಲು ಇನ್ನೆಷ್ಟು ದಿನ ಕಾಯಬೇಕು" ಎಂದೆಲ್ಲ ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿಗೆ ಇದೇ ಫೆಬ್ರವರಿ 15ರಂದು ಗಂಡು ಮಗು ಜನಿಸಿತ್ತು. ಮಗುವಿಗೆ ಅಕಾಯ್‌ ಎಂದು ಹೆಸರಿಡಲಾಗಿತ್ತು. ಇವರಿಗೆ ಈಗಾಗಲೇ ವಮಿಕಾ ಹೆಸರಿನ ಹೆಣ್ಣು ಮಗುವಿದೆ. ಅಕಾಯ್‌ ಹೆಸರು ತುಂಬಾ ವಿಶೇಷವಾಗಿದೆ. ಅಕಾಯ್‌ ಹೆಸರಿನ ಅರ್ಥ ಏನೆಂದು ಸಾಕಷ್ಟು ಜನರು ಇಂಟರ್‌ನೆಟ್‌ನಲ್ಲಿ ಹುಡುಕಾಡಿದ್ದಾರೆ. ಅಕಾಯ್ ಎಂಬ ಪದವು 'ಕಾಯ' ಎಂಬ ಹಿಂದಿ ಪದದಿಂದ ಬಂದಿದೆ, ಇದರರ್ಥ 'ದೇಹ' ಎಂದಾಗಿದೆ. ಅಕಾಯ್ ಎಂದರೆ ಭೌತಿಕ ದೇಹಕ್ಕಿಂತಲೂ ಶ್ರೇಷ್ಠ ವ್ಯಕ್ತಿ ಎಂಬ ವಿಶೇಷ ಅರ್ಥವನ್ನು ಹೊಂದಿದೆ.

ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟ್‌ ತಾರೆ ವಿರಾಟ್‌ ಕೊಹ್ಲಿ ಅವರು 2017ರಲ್ಲಿ ಇಟಲಿಯಲ್ಲಿ ವಿವಾಹವಾಗಿದ್ದರು. ಹಲವು ವರ್ಷಗಳ ಕಾಲ ಡೇಟಿಂಗ್‌ ಮಾಡಿದ ಬಳಿಕ ಇವರು ವಿವಾಹವಾಗಿದ್ದರು. ಜನವರಿ 11, 2021ರಲ್ಲಿ ಇವರಿಗೆ ವಮಿಕಾ ಎಂಬ ಮಗಳು ಜನಿಸಿದ್ದಳು. ಕಳೆದ ಮೂರು ವರ್ಷಗಳಲ್ಲಿ ಅನುಷ್ಕಾ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ತಮ್ಮ ಮಗಳ ಮುಖವನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ. ಮಗುವನ ಹಿಂಬದಿ ಮಾತ್ರ ಕಾಣಿಸುವಂತೆ ಇವರು ಫೋಟೋ ಹಂಚಿಕೊಳ್ಳುತ್ತಾರೆ.

ವಿರಾಟ್‌ ಕೊಹ್ಲಿ ಅವರು ತಮ್ಮ ಮಗಳ ಮುಖವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚದೆ ಇರುವುದಕ್ಕೆ ಸೂಕ್ತ ಕಾರಣ ನೀಡಿದ್ದರು. "ಇಲ್ಲ ನಾವಿಬ್ಬರು ನಮ್ಮ ಮಗಳ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳದೆ ಇರಲು ನಿರ್ಧರಿಸಿದ್ದೇವೆ. ವಮಿಕಾಳಿಗೆ ಸೋಷಿಯಲ್‌ ಮೀಡಿಯಾ ಎಂದರೆ ಏನೆಂದು ಅರ್ಥವಾಗುವವರೆಗೆ ಅವಳ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚುವುದಿಲ್ಲ" ಎಂದು ಅವರು ಹೇಳಿದ್ದರು. ಇದೀಗ ಅಕಾಯ್‌ ಜನಿಸಿದ್ದು, ವಮಿಕಾಳಂತೆ ಅಕಾಯ್‌ ಮುಖವನ್ನೂ ಸಾರ್ವಜನಿಕರ ಮುಂದೆ ಬಹಿರಂಗಪಡಿಸುವ ಸಾಧ್ಯತೆ ಇಲ್ಲ.