ಕನ್ನಡ ಸುದ್ದಿ  /  Entertainment  /  Bollywood News Arjun Kapoor On Playing Villain In Singham Returns Mentors Aditya Chopra Rohit Shetty Pcp

ಸಿಂಗಂ ಎಗೇನ್‌ ಸಿನಿಮಾದಲ್ಲಿ ಖಳನಾಯಕನ ಪಾತ್ರ; ಆದಿತ್ಯ ಚೋಪ್ರಾ, ರೋಹಿತ್‌ ಶೆಟ್ಟಿಯೇ ನನ್ನ ಸ್ಪೂರ್ತಿ ಎಂದ ಅರ್ಜುನ್‌ ಕಪೂರ್‌

ಅರ್ಜುನ್ ಕಪೂರ್ ಅವರು ಇಶಾಕ್ಜಾದೆ ಮತ್ತು ಔರಂಗ್‌ಜೇಬ್‌ ಚಿತ್ರಗಳಲ್ಲಿ ನಕಾರಾತ್ಮಕ ಛಾಯೆಯ ಪಾತ್ರಗಳನ್ನು ನಟಿಸಿದ್ದಾರೆ. ಈ ರೀತಿ ವಿಲನ್‌ ರೋಲ್‌ನಲ್ಲಿ ನಟಿಸಲು ನಿರ್ಮಾಪಕ ಆದಿತ್ಯ ಚೋಪ್ರಾ ಕಾರಣ ಎಂದಿದ್ದಾರೆ.

ಸಿಂಗಂ ಎಗೇನ್‌ ಸಿನಿಮಾದಲ್ಲಿ ಅರ್ಜುನ್‌ ಕಪೂರ್‌ಗೆ ಖಳನಾಯಕನ ಪಾತ್ರ
ಸಿಂಗಂ ಎಗೇನ್‌ ಸಿನಿಮಾದಲ್ಲಿ ಅರ್ಜುನ್‌ ಕಪೂರ್‌ಗೆ ಖಳನಾಯಕನ ಪಾತ್ರ

ಬೆಂಗಳೂರು: ಸುಮಾರು ಹತ್ತು ವರ್ಷದ ಹಿಂದೆ ಸಿಂಗಮ್‌ ರಿಟರ್ನ್ಸ್‌ ಎಂಬ ಸಿನಿಮಾ ಬಿಡುಗಡೆಯಾಗಿತ್ತು. ಇದೀಗ ಈ ವರ್ಷ ಸಿಂಗಮ್‌ ಎಗೇನ್‌ ಎಂಬ ಸಿನಿಮಾ ಬಿಡುಗಡೆಯಾಗಲಿದೆ. ಬಹುತಾರಾಗಣದ ಸಿಂಗಮ್ ಎಗೇನ್‌ನಲ್ಲಿ ಖಳನಾಯಕನಾಗಿ ನಟಿಸಲು ಅರ್ಜುನ್ ಕಪೂರ್ ಸಿದ್ಧವಾಗಿದ್ದಾರೆ. ಇಂತಹ ವಿಶೇಷ ಪಾತ್ರವನ್ನು ನನಗೆ ನೀಡಲು ಧೈರ್ಯ ಮಾಡಿರುವ ತನ್ನ ಮಾರ್ಗದರ್ಶಕರಾದ ಆದಿತ್ಯ ಚೋಪ್ರಾ ಮತ್ತು ರೋಹಿತ್ ಶೆಟ್ಟಿಗೆ ಅರ್ಜುನ್‌ ಕಪೂರ್‌ ಧನ್ಯವಾದ ಹೇಳಿದ್ದಾರೆ. ಅರ್ಜುನ್‌ ಇತ್ತೀಚೆಗೆ ಸಿಂಗಮ್‌ ಎಗೇನ್‌ ಚಿತ್ರದ ಫಸ್ಟ್‌ ಲುಕ್‌ ಹಂಚಿಕೊಂಡಿದ್ದಾರೆ. ರಕ್ತಸಿಕ್ತವಾದ ದೇಹದೊಂದಿಗೆ ಕಪ್ಪು ಬಟ್ಟೆ ಧರಿಸಿರುವ ಲುಕ್‌ನ ಫೋಟೋವನ್ನು ಹಂಚಿಕೊಂಡಿದ್ದರು.

ತನಗೆ ಇಂತಹ ಅವಕಾಶ ನೀಡಿರುವುದಕ್ಕೆ ರೋಹಿತ್‌ ಶೆಟ್ಟಿಗೆ ಅರ್ಜುನ್‌ ಕಪೂರ್‌ ಧನ್ಯವಾದ ತಿಳಿಸಿದ್ದಾರೆ. "ನಾನು ಇಸಾಕ್‌ಝಾದೆ, ಔರಂಗಜೇಬ್‌ನಂತಹ ಸಿನಿಮಾಗಳಲ್ಲಿ ನೆಗೆಟಿವ್‌ ಶೇಡ್‌ಗಳ ಪಾತ್ರಗಳನ್ನು ಮಾಡುವ ಮೂಲಕ ಉದ್ಯಮದಲ್ಲಿ ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದೆ ಮತ್ತು ಇಷ್ಟು ವರ್ಷಗಳ ನಂತರವೂ ಖಳನಾಯಕನಾಗಿ ನಟಿಸುತ್ತಿದ್ದೇನೆ. ಇದೀಗ ಸಿಂಗಮ್‌ನಲ್ಲಿ ಮತ್ತೊಮ್ಮೆ ಖಳನಾಯಕನಾಗಿ ಕಾಣಿಸಲಿದ್ದೇನೆ. ರೋಹಿತ್‌ ಶೆಟ್ಟಿ ನನ್ನ ಮೇಲೆ ನಂಬಿಕೆ ಇಟ್ಟರು. ನನ್ನ ಬದುಕಿನ ಪ್ರತಿ ಹೆಜ್ಜೆಯಲ್ಲೂ ಇವರು ಮಾರ್ಗದರ್ಶಕರು" ಎಂದು ಅರ್ಜುನ್‌ ಕಪೂರ್‌ ಹೇಳಿದ್ದಾರೆ.

"ನನ್ನ ಸಿನಿಮಾ ವೃತ್ತಿಜೀವನದಲ್ಲಿ ರೋಹಿತ್‌ ಶೆಟ್ಟಿ ಮತ್ತು ಆದಿತ್ಯ ಚೋಪ್ರಾ ನಿಜವಾದ ಮಾರ್ಗದರ್ಶಕರು. ರೋಹಿತ್‌ ಶೆಟ್ಟಿಯಂತಹ ಸೂಪರ್‌ಹಿಟ್‌ ಸಿನಿಮಾ ನಿರ್ಮಾಕರು ಸಿಂಗಂ ಎಗೇನ್‌ನಲ್ಲಿ ನನಗೆ ಅವಕಾಶ ನೀಡಿದ್ದಾರೆ. ನನಗೆ ಅವರು ನೀಡಿರುವ ಅವಕಾಶಕ್ಕಾಗಿ ಕೃತಜ್ಞನಾಗಿದ್ದೇನೆ" ಎಂದು ಅವರು ಹೇಳಿದ್ದಾರೆ. ರೋಹಿತ್ ಶೆಟ್ಟಿ ಅವರ ಚಿತ್ರದಲ್ಲಿ ಖಳನಾಯಕನಾಗಿ ನಟಿಸಲು ನನಗೆ ಎಷ್ಟು ಉತ್ಸಾಹ ಇತ್ತು ಎಂಬ ವಿವರವನ್ನೂ ಅವರು ನೀಡಿದ್ದಾರೆ.

ತೆರೆಯ ಮೇಲೆ ವಿಭಿನ್ನ ಪಾತ್ರಗಳನ್ನು ಮಾಡಲು ಸದಾ ಹಂಬಲಿಸುವ ವ್ಯಕ್ತಿ ನಾನು. ಸಿಂಗಂ ಎಗೇನ್‌ನಲ್ಲಿ ಪೊಲೀಸರ ಪ್ರಬಲ ಶತ್ರುವಾಗಿ ನಟಿಸುವುದು ನನಗೆ ದೊರಕಿರುವ ರೋಮಾಂಚಕ ಅವಕಾಶವಾಗಿದೆ ಎಂದು ಅರ್ಜುನ್‌ ಹೇಳಿದ್ದಾರೆ.

ಸಿಂಗಂ ಸಿನಿಮಾವು 2011ರಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ಕಾಜಲ್‌ ಅಗರ್‌ವಾಲ್‌ ಮತ್ತು ಪ್ರಕಾಶ್‌ ರಾಜ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. 2014ರಲ್ಲಿ ಸಿಂಗಂ ರಿಟರ್ನ್ಸ್‌ ಬಿಡುಗಡೆಯಾಗಿತ್ತು. ಇವೆರಡೂ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಸೂಪರ್‌ಹಿಟ್‌ ಆಗಿದ್ದವು. ಇದೀಗ ಹತ್ತು ವರ್ಷದ ಬಳಿಕ ಸಿಂಗಂ ಎಗೇನ್‌ ಚಿತ್ರವು ಬಿಡುಗಡೆಯಾಗಲು ಕಾಯುತ್ತಿದೆ. ಆಗಸ್ಟ್‌ 2024ರಲ್ಲಿ ಸ್ವಾತಂತ್ರ್ಯ ದಿನದಂದು ಸಿಂಗಂ ಎಗೇನ್‌ ಬಿಡುಗಡೆಯಾಗಲಿದೆ.

IPL_Entry_Point