ಮಲೈಕಾ ಅರೋರಾ ತಂದೆ ಆತ್ಮಹತ್ಯೆ; ಶೂಟಿಂಗ್‌ ಕ್ಯಾನ್ಸಲ್‌ ಮಾಡಿ ಮಾಜಿ ಪ್ರೇಯಸಿಗೆ ಸಾಂತ್ವನ ಹೇಳಲು ಬಂದ ಅರ್ಜುನ್‌ ಕಪೂರ್‌-bollywood news arjun kapoor went to malaika arora house to console after her father committed suicide rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಮಲೈಕಾ ಅರೋರಾ ತಂದೆ ಆತ್ಮಹತ್ಯೆ; ಶೂಟಿಂಗ್‌ ಕ್ಯಾನ್ಸಲ್‌ ಮಾಡಿ ಮಾಜಿ ಪ್ರೇಯಸಿಗೆ ಸಾಂತ್ವನ ಹೇಳಲು ಬಂದ ಅರ್ಜುನ್‌ ಕಪೂರ್‌

ಮಲೈಕಾ ಅರೋರಾ ತಂದೆ ಆತ್ಮಹತ್ಯೆ; ಶೂಟಿಂಗ್‌ ಕ್ಯಾನ್ಸಲ್‌ ಮಾಡಿ ಮಾಜಿ ಪ್ರೇಯಸಿಗೆ ಸಾಂತ್ವನ ಹೇಳಲು ಬಂದ ಅರ್ಜುನ್‌ ಕಪೂರ್‌

ಮಲೈಕಾ ಅರೋರಾ ತಂದೆ ಅನಿಲ್‌ ಕುಲ್‌ದೀಪ್‌ ಮೆಹ್ತಾ ನಿಧನದ ಸುದ್ದಿ ತಿಳಿದ ಬಾಲಿವುಡ್‌ ಸೆಲೆಬ್ರಿಟಿಗಳು ಅವರ ಅಂತಿಮ ದರ್ಶನ ಪಡೆಯಲು ಬಾಂದ್ರಾಗೆ ತೆರಳುತ್ತಿದ್ದಾರೆ. ಅರ್ಜುನ್‌ ಕಪೂರ್‌ ಕೂಡಾ ಮಾಜಿ ಪ್ರೇಯಸಿ ಮಲೈಕಾ ಅರೋರಾ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.

ಮಲೈಕಾ ಅರೋರಾ ತಂದೆ ಆತ್ಮಹತ್ಯೆ; ಶೂಟಿಂಗ್‌ ಕ್ಯಾನ್ಸಲ್‌ ಮಾಡಿ ಮಾಜಿ ಪ್ರೇಯಸಿಗೆ ಸಾಂತ್ವನ ಹೇಳಲು ಬಂದ ಅರ್ಜುನ್‌ ಕಪೂರ್‌
ಮಲೈಕಾ ಅರೋರಾ ತಂದೆ ಆತ್ಮಹತ್ಯೆ; ಶೂಟಿಂಗ್‌ ಕ್ಯಾನ್ಸಲ್‌ ಮಾಡಿ ಮಾಜಿ ಪ್ರೇಯಸಿಗೆ ಸಾಂತ್ವನ ಹೇಳಲು ಬಂದ ಅರ್ಜುನ್‌ ಕಪೂರ್‌ (PC: Viral Bhayani, HT)

ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಅನಿಲ್‌ ಮೆಹ್ತಾ ಬುಧವಾರ ಬಹು ಮಹಡಿ ಕಟ್ಟಡಿದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಚಾರ ತಿಳಿದು ಬಾಲಿವುಡ್‌ ಶಾಕ್‌ನಲ್ಲಿದೆ. ಅನಿಲ್‌ ಅಂತಿಮ ದರ್ಶನ ಪಡೆಯಲು ಬಾಲಿವುಡ್‌ ಸೆಲೆಬ್ರಿಟಿಗಳು ಬಾಂದ್ರಾ ನಿವಾಸದತ್ತ ತೆರಳುತ್ತಿದ್ದಾರೆ.

ಬಾಲ್ಯದಲ್ಲೇ ಹೆತ್ತ ತಂದೆಯಿಂದ ದೂರಾಗಿದ್ದ ಮಲೈಕಾ ಅರೋರಾ

ಅನಿಲ್‌ ಮೆಹ್ತಾ ಮೂಲತ: ಪಂಜಾಬ್‌ಗೆ ಸೇರಿದವರು. ಭಾರತೀಯ ನೌಕಾಪಡೆಯಲ್ಲಿ ಅವರು ಅಧಿಕಾರಿಯಾಗಿದ್ದರು. ಕೇರಳ ಮೂಲದ ಕ್ರೈಸ್ತ ಕುಟುಂಬಕ್ಕೆ ಸೇರಿದ್ದ ಜಾಯ್ಸ್‌ ಪಾಲಿಕಾರ್ಪ್‌ ಅವರನ್ನು ಅನಿಲ್‌ ಮದುವೆ ಆಗಿದ್ದರು. ಜಾಯ್ಸ್‌ ಪಾಲಿಕಾರ್ಪ್‌ ಅವರಿಗೆ ಇದು ಎರಡನೇ ಮದುವೆ ಆಗಿದ್ದು ಮಲೈಕಾಗೆ ಅನಿಲ್‌ ಮೆಹ್ತಾ ಮಲತಂದೆ ಎನ್ನಲಾಗಿದೆ. ಮಲೈಕಾ ಅರೋರಾ ಬಾಲ್ಯದಲ್ಲಿದ್ದಾಗಲೇ ತಾಯಿ-ತಂದೆ ಇಬ್ಬರೂ ವಿಚ್ಚೇದನ ಪಡೆದು ದೂರವಾಗಿದ್ದರು. ತಂದೆ ಜೊತೆಗಿನ ಫೋಟೋಗಳನ್ನು ಮಲೈಕಾ ಅರೋರಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ತಂದೆ ನಿಧನದ ಸುದ್ದಿ ತಿಳಿದ ಮಲೈಕಾ ಪುಣೆಯಲ್ಲಿ ತಾವು ಭಾಗಿಯಾಗಿದ್ದ ಕಾರ್ಯಕ್ರಮದಿಂದ ಮುಂಬೈಗೆ ವಾಪಸಾಗಿದ್ದಾರೆ. ತಂದೆಯ ಅಂತಿಮ ದರ್ಶನ ಪಡೆದು ದುಃಖ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್‌ ಸೆಲೆಬ್ರಿಟಿಗಳು ಮಲೈಕಾ ತಂದೆ ಸಾವಿನ ಸುದ್ದಿ ತಿಳಿದು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಮಲೈಕಾ ಅರೋರಾ ಮಾಜಿ ಪ್ರೇಮಿ ಅರ್ಜುನ್‌ ಕಪೂರ್‌ ಕೂಡಾ ಜಾಹೀರಾತು ಚಿತ್ರೀಕರಣವನ್ನು ಕ್ಯಾನ್ಸಲ್‌ ಮಾಡಿ ಅನಿಲ್‌ ಮೆಹ್ತಾ ಅಂತಿಮ ದರ್ಶನ ಪಡೆದು ಮಾಜಿ ಪ್ರೇಯಸಿಗೆ ಸಾಂತ್ವನ ಹೇಳಿದ್ದಾರೆ. ಮಲೈಕಾ ಹಾಗೂ ಅರ್ಜುನ್‌ ನಡುವೆ ಇತ್ತೀಚೆಗೆ ಬ್ರೇಕಪ್‌ ಆಗಿತ್ತು. ಮಾಜಿ ಪತಿ ಅರ್ಬಾಜ್‌ ಖಾನ್‌ ಕೂಡಾ ಮಲೈಕಾ ಭೇಟಿ ಮಾಡಿ ಸಮಾಧಾನ ಹೇಳಿದ್ದಾರೆ. ಕರೀನಾ ಕಪೂರ್‌, ಫರ್ಹಾ ಖಾನ್‌ ಸೇರಿದಂತೆ ಬಾಲಿವುಡ್‌ ಸೆಲೆಬ್ರಿಟಿಗಳು ಅನಿಲ್‌ ಮೆಹ್ತಾ ಅಂತಿಮ ದರ್ಶನ ಪಡೆದಿದ್ದಾರೆ. ಅನಿಲ್‌ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಆರೋಗ್ಯ ಸಮಸ್ಯೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡ ನಟಿ

ತಂದೆ ನಿಧನದ ಬಳಿಕ ಮಲೈಕಾ ಅರೋರಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡಿದ್ದಾರೆ. ನನ್ನ ತಂದೆ ಅನಿಲ್‌ ಕುಲ್‌ದೀಪ್‌ ಮೆಹ್ತಾ ನಿಧನದ ಸುದ್ದಿ ತಿಳಿಸಲು ವಿಷಾದಿಸುತ್ತೇನೆ. ಅವರು ಪರಿಪೂರ್ಣ ತಂದೆ, ಪರಿಪೂರ್ಣ ಪತಿ, ತಾತ ಆಗಿದ್ದರು. ನನ್ನ ಸ್ನೇಹಿತನಂತೆ ಇದ್ದರು. ಅವರನ್ನು ಕಳೆದುಕೊಂಡು ನಮ್ಮ ಕುಟುಂಬ ಶಾಕ್‌ನಲ್ಲಿದೆ. ಈ ಸಮಯದಲ್ಲಿ ನಮ್ಮ ಹಿತೈಷಿಗಳು ಹಾಗೂ ಮಾಧ್ಯಮದವರು ದಯವಿಟ್ಟು ನಮಗೆ ಪ್ರೈವೆಸಿ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆಂದು ಮಲೈಕಾ ಬರೆದುಕೊಂಡಿದ್ದಾರೆ.

ಮಲೈಕಾ ಅರೋರಾ ನಿರೂಪಕಿಯಾಗಿ ವೃತ್ತಿ ಜೀವನ ಆರಂಭಿಸಿದರು. ಮಾಡೆಲ್‌ ಆಗಿಯೂ ಗುರುತಿಸಿಕೊಂಡಿರುವ ಆಕೆ ಅನೇಕ ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಆಲ್ಬಂ ಹಾಡೊಂದರ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಮಲೈಕಾಗೆ ಹೆಸರು ತಂದುಕೊಟ್ಟದ್ದು ದಿಲ್‌ ಸೆ ಚಿತ್ರದ ಚಯ್ಯಾ ಚಯ್ಯಾ ಹಾಡು. ಅಲ್ಲಿಂದ ಅನೇಕ ಸಿನಿಮಾಗಳ ಅನೇಕ ಹಾಡುಗಳಲ್ಲಿ ಮಲೈಕಾ ಕುಣಿದಿದ್ದಾರೆ. ಅನೇಕ ಡ್ಯಾನ್ಸ್‌ ಶೋಗೆ ಜಡ್ಜ್‌ ಆಗಿಯೂ ಮಲೈಕಾ ಭಾಗವಹಿಸಿದ್ದಾರೆ. ದಬಾಂಗ್‌, ದಬಾಂಗ್‌ 2, ಡಾಲಿ ಕಿ ಡೋಲಿ ಸಿನಿಮಾಗಳನ್ನು ಮಲೈಕಾ ನಿರ್ಮಿಸಿದ್ದಾರೆ. ಅರ್ಬಾಜ್‌ ಖಾನ್‌ ಜೊತೆ ಡಿವೋರ್ಸ್‌ ನಂತರ ಮಲೈಕಾ ತಮಗಿಂತ 13 ವರ್ಷ ಚಿಕ್ಕ ವಯಸ್ಸಿನ ಅರ್ಜುನ್‌ ಕಪೂರ್‌ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಇತ್ತೀಚೆಗೆ ಈ ಜೋಡಿ ಬ್ರೇಕಪ್‌ ಮಾಡಿಕೊಂಡಿದ್ದರು.

mysore-dasara_Entry_Point