Astrology: ಜ್ಯೋತಿಷಿ ಬೇಡ ಅಂದ್ರು ಅಂತ ನನ್ನನ್ನು ಆ ಸಿನಿಮಾದಿಂದ ರಿಜೆಕ್ಟ್‌ ಮಾಡಿದ್ರು; ಹಳೆ ಘಟನೆ ನೆನಪಿಸಿಕೊಂಡ ತಮನ್ನಾ ಬಾಯ್‌ಫ್ರೆಂಡ್‌
ಕನ್ನಡ ಸುದ್ದಿ  /  ಮನರಂಜನೆ  /  Astrology: ಜ್ಯೋತಿಷಿ ಬೇಡ ಅಂದ್ರು ಅಂತ ನನ್ನನ್ನು ಆ ಸಿನಿಮಾದಿಂದ ರಿಜೆಕ್ಟ್‌ ಮಾಡಿದ್ರು; ಹಳೆ ಘಟನೆ ನೆನಪಿಸಿಕೊಂಡ ತಮನ್ನಾ ಬಾಯ್‌ಫ್ರೆಂಡ್‌

Astrology: ಜ್ಯೋತಿಷಿ ಬೇಡ ಅಂದ್ರು ಅಂತ ನನ್ನನ್ನು ಆ ಸಿನಿಮಾದಿಂದ ರಿಜೆಕ್ಟ್‌ ಮಾಡಿದ್ರು; ಹಳೆ ಘಟನೆ ನೆನಪಿಸಿಕೊಂಡ ತಮನ್ನಾ ಬಾಯ್‌ಫ್ರೆಂಡ್‌

Vijay Varma: ಬಾಲಿವುಡ್‌ ಸಿನಿಮಾ ಮತ್ತು ವೆಬ್‌ ಸರಣಿಗಳಲ್ಲಿ ಜನಪ್ರಿಯತೆ ಪಡೆದಿರುವ ನಟ ವಿಜಯ್‌ ವರ್ಮಾ ಹಳೆಯ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. ಜ್ಯೋತಿಷಿಯೊಬ್ಬರು ಹೇಳಿದರೆಂದು ತನಗೆ ಒಂದು ಸಿನಿಮಾದಲ್ಲಿ ಅವಕಾಶ ದೊರಕಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಹಳೆ ಘಟನೆ ನೆನಪಿಸಿಕೊಂಡ ತಮನ್ನಾ ಬಾಯ್‌ಫ್ರೆಂಡ್‌
ಹಳೆ ಘಟನೆ ನೆನಪಿಸಿಕೊಂಡ ತಮನ್ನಾ ಬಾಯ್‌ಫ್ರೆಂಡ್‌

ಹಿಂದಿ ಸಿನಿಮಾ, ವೆಬ್‌ ಸರಣಿ ನೋಡುವವರಿಗೆ ನಟ ವಿಜಯ್‌ ವರ್ಮಾ ಚಿರಪರಿಚಿತ ಹೆಸರು. ಲಸ್ಟ್‌ ಸ್ಟೋರೀಸ್‌, ಜಾನೇ ಜಾನ್‌, ಡಾರ್ಲಿಂಗ್ಸ್‌, ಗಲ್ಲಿ ಬಾಯ್‌, ಮಿಡಲ್‌ ಕ್ಲಾಸ್‌ ಅಭಯ್‌, ಪಿಂಕ್‌, ಭಾಗಿ 3, ಮಾನ್ಸೂನ್‌ ಶೂಟೌಟ್‌, ಯಾತ್ರಾ, ಹರ್ದಾಂಗ್‌, ಘೋಸ್ಟ್‌ ಸ್ಟೋರೀಸ್‌, ಮರ್ಡರ್‌ ಮುಭಾರಕ್‌ ಮುಂತಾದ ಸಿನಿಮಾ-ವೆಬ್‌ ಸರಣಿಗಳ ಮೂಲಕ ಇವರು ಜನಪ್ರಿಯತೆ ಪಡೆದಿದ್ದಾರೆ. ಈ ನಟ ಆರಂಭದಲ್ಲಿ ಅವಕಾಶ ಪಡೆಯಲು ಸಾಕಷ್ಟು ಕಷ್ಟಪಟ್ಟಿದ್ದರು. ಇದನ್ನೂ ನೋಡಿ: ತಮನ್ನಾ ಭಾಟಿಯಾರ ಚೆಲುವಿನ ಚಿತ್ರಗಳನ್ನು ನೋಡಿರಣ್ಣ

ಒಳ್ಳೆಯ ಕೆಲಸ ಆರಂಭಿಸುವಾಗ, ದೊಡ್ಡ ಹೂಡಿಕೆಯ ವ್ಯವಹಾರ ಮಾಡುವಾಗ ಜ್ಯೋತಿಷಿಗಳ ಅಭಿಪ್ರಾಯ ಕೇಳುವ ಪರಿಪಾಠ ಭಾರತದ ಉದ್ಯಮಿಗಳದ್ದು. ಉದ್ಯೋಗಕ್ಕೆ ಅಭ್ಯರ್ಥಿಗಳನ್ನು ನೇಮಕ ಮಾಡುವಾಗಲೂ ಕೆಲವು ಕಡೆ ಜ್ಯೋತಿಷಿಗಳ ಸಲಹೆ ಕೇಳಲಾಗುತ್ತದೆ. ಇದೇ ರೀತಿಯ ಅನುಭವ ನಟ ವಿಜಯ್‌ ವರ್ಮಾರಿಗೂ ಆಗಿತ್ತಂತೆ. "ನನ್ನ ಫೋಟೋಗಳನ್ನು ಜ್ಯೋತಿಷಿ ರಿಜೆಕ್ಟ್‌ ಮಾಡಿದ ಕಾರಣ ನನಗೆ ಸಿನಿಮಾವೊಂದರಲ್ಲಿ ಅವಕಾಶ ತಪ್ಪಿತ್ತು" ಎಂದು ವಿಜಯ್‌ ವರ್ಮಾ ಅವರು ನ್ಯೂಸ್‌18ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಹಳೆ ಘಟನೆ ನೆನೆದ ವಿಜಯ್‌

"ಒಂದು ಸಿನಿಮಾದ ಪಾತ್ರಕ್ಕೆ ನಾನು ಆಯ್ಕೆಯಾಗಿದ್ದೆ. ನನ್ನ ಫೋಟೋಗಳನ್ನು ಕಳುಹಿಸಲು ಹೇಳಲಾಯಿತು. ನಾನು ಆ ವ್ಯಕ್ತಿಯ ಹೆಸರು ಹೇಳುವುದಿಲ್ಲ. ಆದರೆ, ನನಗೆ ಆ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗಲಿಲ್ಲ. ಅದಕ್ಕೆ ಕಾರಣ ಏನು ಎಂದು ಆಮೇಲೆ ಕಂಡುಕೊಂಡೆ. ಜ್ಯೋತಿಷಿಯೊಬ್ಬರು ನನ್ನ ಫೋಟೋಗಳನ್ನು ಇಷ್ಟಪಡದೆ ಇದ್ದ ಕಾರಣ ನನಗೆ ಆ ಸಿನಿಮಾದಲ್ಲಿ ಅವಕಾಶ ದೊರಕಲಿಲ್ಲ ಎಂದು ತಿಳಿಯಿತು. ಜ್ಯೋತಿಷಿ ರಿಜೆಕ್ಟ್‌ ಮಾಡಿದ ಕಾರಣ ನನಗೆ ಆ ಸಿನಿಮಾದಲ್ಲಿ ನನಗೆ ಪಾತ್ರ ನೀಡಲು ಅವರು ನಿರಾಕರಿಸಲಿಲ್ಲ. ಆ ಜ್ಯೋತಿಷಿಗೆ ನನ್ನ ಮೇಲೆ ನಂಬಿಕೆ ಇರಲಿಲ್ಲ" ಎಂದು ಅವರು ನೆನಪಿಸಿಕೊಂಡಿದ್ದಾರೆ.

ನಾಸಿರುದ್ದೀನ್‌ ಸಲಹೆ ಹಂಚಿಕೊಂಡ ವಿಜಯ್‌

"ನಾನು ಯಾವತ್ತೂ ಭರವಸೆ ಕಳೆದುಕೊಂಡಿರಲಿಲ್ಲ. ಒಂದು ಬಾರಿ ನಾನು ವಿದ್ಯಾರ್ಥಿಯಾಗಿದ್ದಾಗ ನಾಸೀರುದ್ಧೀನ್‌ ಶಾ ಅವರು ಒಂದು ಸಲಹೆ ನೀಡಿದ್ದರು. ನೀವು ನಟ ಆಗಬೇಕಿದ್ದರೆ, ನಿಮ್ಮಲ್ಲಿ ಪ್ಲಾನ್‌ ಬಿ ಕೂಡ ಇರಬೇಕು. ನಿಮಗೆ ಎಲ್ಲಾದರೂ ನಟ ಆಗಲು ಸಾಧ್ಯವಾಗದೆ ಇದ್ದರೆ ಪ್ಲಾನ್‌ ಬಿಯನ್ನೂ ಆಯ್ಕೆ ಮಾಡಿಕೊಳ್ಳಬೇಕು. ಜೀವನದಲ್ಲಿ ಸಾಕಷ್ಟು ಕಷ್ಟದ ದಿನಗಳು ಎದುರಾಗುತ್ತವೆ. ನಟ ಆಗುವುದು ಅಂದುಕೊಂಡಷ್ಟು ಸುಲಭವಲ್ಲ. ಇದೇ ಕಾರಣಕ್ಕೆ ನನಗೆ ಒಳ್ಳೆಯ ಅವಕಾಶ ದೊರಕಲು ಕಾದೆ" ಎಂದು ವಿಜಯ್‌ ವರ್ಮಾ ಹೇಳಿದ್ದಾರೆ.

ವಿಜಯ್‌ ವರ್ಮಾ ಸಿನಿಮಾ, ವೆಬ್‌ ಸರಣಿಗಳು

ವಿಜಯ್‌ ವರ್ಮಾ ಅವರು ಸಿನಿಮಾಗಳಲ್ಲಿ ಮತ್ತು ವೆಬ್‌ ಸರಣಿಗಳಲ್ಲಿ ನಟಿಸಿದ್ದಾರೆ. ಮನರಂಜನೆ ಕ್ಷೇತ್ರದಲ್ಲಿ ಕಳೆದ ಒಂದು ದಶಕದಿಂದ ಇವರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ನಟಿಸಿರುವ ಪಿಂಕ್‌ (2016) ಮತ್ತು ಗುಲ್ಲಿ ಬಾಯ್‌ (2019) ಹೆಚ್ಚು ಫೇಮಸ್‌. ಘೋಸ್ಟ್‌ ಸ್ಟೋರೀಸ್‌, ಭಾಘಿ 3, ಹರ್ದಂಗ್‌, ಡಾರ್ಲಿಂಗ್ಸ್‌, ಲಸ್ಟ ಸ್ಟೋರೀಸ್‌ ಕೂಡ ಜನಪ್ರಿಯತೆ ಪಡೆದಿವೆ. ಎ ಸ್ಯುಟೆಬಲ್‌ ಬಾಯ್‌, ಶೀ, ಮಿರ್ಜಾಪುರ್‌, ದಹಾದ್‌ ಮುಂತಾದ ವೆಬ್‌ ಸರಣಿಗಳಲ್ಲಿಯೂ ನಟಿಸಿದ್ದಾರೆ. ಸುಜಯ್‌ ಘೋಷ್‌ ಅವರ ಜಾನೇ ಜಾನ್‌ ಇವರ ಇತ್ತೀಚಿನ ಸಿನಿಮಾ. ಮರ್ಡರ್‌ ಮುಬಾರಕ್‌ ಮತ್ತು ಮಿರ್ಜಾಪುರ್‌ 3 ಇವರ ನಟನೆಯ ಮುಂಬರುವ ಚಿತ್ರಗಳು.

ತಮನ್ನಾ ಜತೆ ಸಂಬಂಧ

ಸಿನಿಮಾ, ವೆಬ್‌ ಸರಣಿ ಮಾತ್ರವಲ್ಲದೆ ತಮನ್ನಾ ಭಾಟಿಯಾರ ಜತೆಗಿನ ಸಂಬಂಧದ ವಿಷಯದಲ್ಲೂ ಇವರು ಮಾಧ್ಯಮಗಳಲ್ಲಿ ಸುದ್ದಿಯಲ್ಲಿದ್ದರು. 2023ರ ಹೊಸ ವರ್ಷದ ವಿಡಿಯೋದಲ್ಲಿ ಇವರಿಬ್ಬರು ಚುಂಬಿಸುವ ದೃಶ್ಯ ವೈರಲ್‌ ಆಗಿತ್ತು. ಇವರಿಬ್ಬರು ಲಸ್ಟ್‌ ಸ್ಟೋರಿಸ್‌ 2ನಲ್ಲೂ ಜತೆಯಾಗಿ ನಟಿಸಿದ್ದರು.

ಇವರಿಬ್ಬರ ಸಂಬಂಧದ ಕುರಿತು ಸುಮಾರು ಒಂದು ತಿಂಗಳು ಚರ್ಚೆ ನಡೆದ ಬಳಿಕ ತಮನ್ನಾ ಭಾಟಿಯಾ ಅವರು ತಮ್ಮ ಸಂಬಂಧವನ್ನು ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದರು. ಇದಾದ ಬಳಿಕ ಇವರಿಬ್ಬರು ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಪೋಸ್ಟ್‌ ಮಾಡುತ್ತಾರೆ. ವಿವಿಧ ಕಾರ್ಯಕ್ರಮಗಳಲ್ಲೂ ಇವರು ಜತೆಯಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಕಪ್ಪು ಸೀರೆಯಲ್ಲಿ ಮೋಹಕ ನೋಟ ಬೀರಿದ ಮಿಲ್ಕಿ ಬ್ಯೂಟಿ ತಮನ್ನಾ; ಚಿತ್ರಗಳನ್ನು ನೋಡಿ

Whats_app_banner