ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ರಿಲೀಸ್ ಆದ ಕಾಲಾ ವೆಬ್ ಸರಣಿ ಹೇಗಿದೆ? ಇಲ್ಲಿದೆ ಟ್ವಿಟ್ಟರ್ ರಿವ್ಯೂ
ಭ್ರಷ್ಟಾಚಾರ, ದೇಶದ್ರೋಹದ ಆರೋಪ ಎದುರಿಸುವ ತಂದೆ ಹಾಗೂ ಮಗನ ಸುತ್ತ ಕಾಲಾ ಕಥೆ ಸಾಗುತ್ತದೆ. 8 ಎಪಿಸೋಡ್‌ಗಳ ಈ ಸೀರೀಸ್‌ನಲ್ಲಿ ಅನಗತ್ಯ ಪಾತ್ರಗಳನ್ನು ತುಂಬಲಾಗಿದೆ ಎಂದು ನೋಡುಗರು ಬೇಸರ ವ್ಯಕ್ತಪಡಿಸಿದ್ದಾರೆ.
ಅವಿನಾಶ್ ತಿವಾರಿ ನಟನೆಯ ಕಾಲಾ ವೆಬ್ ಸೀರೀಸ್ ಸೆಪ್ಟೆಂಬರ್ 15 ರಂದು ಡಿಸ್ನಿ ಪ್ಲಸ್ ಹಾಟ್ ಸ್ಟಾರ್‌ನಲ್ಲಿ ಸ್ಟ್ರೀಮ್ ಆರಂಭಿಸಿದೆ. ಬಿಜಾಯ್ ನಂಬಿಯಾರ್ ನಿರ್ದೇಶನದ ಈ ವೆಬ್ ಸರಣಿಗೆ ಟ್ವಿಟ್ಟರ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಕ್ರೈಂ ಥ್ರಿಲ್ಲರ್ ಹಿಂದಿ ವೆಬ್ ಸರಣಿ
ಟಿ ಸೀರೀಸ್ ಬ್ಯಾನರ್ ಅಡಿಯಲ್ಲಿ ಈ ಸರಣಿಯನ್ನು ಭೂಷಣ್ ಕುಮಾರ್, ಕೃಷ್ಣ ಕುಮಾರ್, ಬಿಜಾಯ್ ನಂಬಿಯಾರ್ ಜೊತೆ ಸೇರಿ ನಿರ್ಮಿಸಿದ್ದಾರೆ. ಇದೊಂದು ಕ್ರೈಂ ಥ್ರಿಲ್ಲರ್ ಹಿಂದಿ ವೆಬ್ ಸರಣಿ ಆಗಿದ್ದು ಅಪರಾಧ, ಸೇಡಿನ ಸುತ್ತ ಸುತ್ತುವ ಕಥೆ ಆಗಿದೆ. ಸೆಪ್ಟೆಂಬರ್ 1ರಂದು ತಂಡ ಟ್ರೇಲರ್ ರಿಲೀಸ್ ಮಾಡಿತ್ತು. ಸೆಪ್ಟೆಂಬರ್ 8 ರಂದು ವೆಬ್ ಸರಣಿ ತಂಡವು ಬಾಲಿವುಡ್ ಸೆಲೆಬ್ರಿಟಿಗಳಿಗಾಗಿ ವಿಶೇಷ ಸ್ಕ್ರೀನಿಂಗ್ ಏರ್ಪಡಿಸಿತ್ತು. ಶ್ರದ್ಧಾ ಕಪೂರ್, ಕಾರ್ತಿಕ್ ಆರ್ಯನ್, ಅರ್ಜುನ್ ಕಪೂರ್, ಪೂಜಾ ಹೆಗ್ಡೆ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕಾಲಾ ವೆಬ್ ಸರಣಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
8 ಸೀರೀಸ್‌ಗಳಿರುವ ವೆಬ್ ಸೀರೀಸ್
ಭ್ರಷ್ಟಾಚಾರ, ದೇಶದ್ರೋಹದ ಆರೋಪ ಎದುರಿಸುವ ತಂದೆ ಹಾಗೂ ಮಗನ ಸುತ್ತ ಕಾಲಾ ಕಥೆ ಸಾಗುತ್ತದೆ. 8 ಎಪಿಸೋಡ್‌ಗಳ ಈ ಸೀರೀಸ್‌ನಲ್ಲಿ ಅನಗತ್ಯ ಪಾತ್ರಗಳನ್ನು ತುಂಬಲಾಗಿದೆ ಎಂದು ನೋಡುಗರು ಬೇಸರ ವ್ಯಕ್ತಪಡಿಸಿದ್ದಾರೆ. ಕಥೆ ಎತ್ತ ಸಾಗುತ್ತಿದೆ ಎಂದು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ ಎಂದು ಕೆಲವರು ಸರಣಿ ಬಗ್ಗೆ ಟ್ವಿಟ್ಟರ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಕ್ರಮ ಹಣ ಸಾಗಣೆ ದಂಧೆಕೋರರನ್ನು ಮಟ್ಟ ಹಾಕುವ ಐಬಿ ಅಧಿಕಾರಿ ರಿತ್ವಿಕ್ ಮುಖರ್ಜಿ ಪಾತ್ರದಲ್ಲಿ ಅವಿನಾಶ್ ತಿವಾರಿ ನಟಿಸಿದ್ದಾರೆ.
ಎರಡು ದಶಕಗಳ ಕಥೆ
ಕಾಲಾ ಕಥೆಯ ಎರಡು ದಶಕಗಳ ಕಥೆಯನ್ನು ಹೊಂದಿದೆ. 1988ರಲ್ಲಿ ಆರಂಭವಾಗುವ ಕಥೆ 2018ಕ್ಕೆ ಬಂದು ನಿಲ್ಲುತ್ತದೆ. ಕೆಲವೊಮ್ಮೆ ಕಥೆ ಬಹಳ ನಿಧಾನವಾಗಿ ಸಾಗಿದರೆ, ಕೆಲವೆಡೆ ಗೊಂದಲ ಉಂಟು ಮಾಡುತ್ತದೆ. ಒಟ್ಟಿನಲ್ಲಿ ರಿತ್ವಿಕ್ ಮುಖರ್ಜಿ ಪಾತ್ರ ಈ ಸೀರೀಸ್‌ನಲ್ಲಿ ಬಹಳ ಗಮನ ಸೆಳೆದಿದೆ. ಕಾಲಾ ವೆಬ್ ಸರಣಿಯಲ್ಲಿ ಅವಿನಾಶ್ ತಿವಾರಿ ಜೊತೆ ರೋಹನ್ ವಿನೋದ್ ಮೆಹ್ರಾ, ನಿವೇದಾ ಪೇತುರಾಜ್, ತೆಹರ್ ಶಬ್ಬೀರ್, ಹಿತೆನ್ ತೇಜ್ವಾನಿ ಹಾಗೂ ಇನ್ನಿತರರು ನಟಿಸಿದ್ದಾರೆ.
ಹೆಚ್ಚಿನ ಮನರಂಜನೆ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ