ಕನ್ನಡ ಸುದ್ದಿ  /  ಮನರಂಜನೆ  /  ಬಾಕ್ಸ್‌ ಆಫೀಸ್‌ನಲ್ಲಿ ಬಡೇ ಮಿಯಾ ಚೋಟೆ ಮಿಯಾ ಭರ್ಜರಿ ಗಳಿಕೆ; ಎರಡೇ ದಿನದಲ್ಲಿ ಬಹುಕೋಟಿ ಕಮಾಯಿ ಮಾಡಿದ ಅಕ್ಷಯ್‌ ಕುಮಾರ್‌ ಸಿನಿಮಾ

ಬಾಕ್ಸ್‌ ಆಫೀಸ್‌ನಲ್ಲಿ ಬಡೇ ಮಿಯಾ ಚೋಟೆ ಮಿಯಾ ಭರ್ಜರಿ ಗಳಿಕೆ; ಎರಡೇ ದಿನದಲ್ಲಿ ಬಹುಕೋಟಿ ಕಮಾಯಿ ಮಾಡಿದ ಅಕ್ಷಯ್‌ ಕುಮಾರ್‌ ಸಿನಿಮಾ

Bade Miyan Chote Miyan box office Report: ಬಡೇ ಮಿಯಾ ಚೋಟೆ ಮಿಯಾ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮವಾಗಿ ಗಳಿಕೆ ಮಾಡುತ್ತಿದೆ. ಅಕ್ಷಯ್‌ ಕುಮಾರ್‌ ಮತ್ತು ಟೈಗರ್‌ ಶ್ರಾಫ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಎರಡು ದಿನದಲ್ಲಿ ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 52 ಕೋಟಿ ರೂ. ಗಳಿಸಿದೆ.

ಬಾಕ್ಸ್‌ ಆಫೀಸ್‌ನಲ್ಲಿ ಬಡೇ ಮಿಯಾ ಚೋಟೆ ಮಿಯಾ ಭರ್ಜರಿ ಗಳಿಕೆ
ಬಾಕ್ಸ್‌ ಆಫೀಸ್‌ನಲ್ಲಿ ಬಡೇ ಮಿಯಾ ಚೋಟೆ ಮಿಯಾ ಭರ್ಜರಿ ಗಳಿಕೆ (Ashish Vaishnav)

ಬೆಂಗಳೂರು: ಬಡೇ ಮಿಯಾ ಚೋಟೆ ಮಿಯಾ ಜಾಗತಿಕ ಬಾಕ್ಸ್‌ ಆಫೀಸ್ಕ ಕಲೆಕ್ಷನ್‌ ದಿನ 2: ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅಭಿನಯದ ಸಾಹಸಮಯ ಸಿನಿಮಾ ಬಡೇ ಮಿಯಾ ಚೋಟೆ ಮಿಯಾವು ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ಕೇವಲ ಎರಡೇ ದಿನಗಳಲ್ಲಿ ಚಿತ್ರ ವಿಶ್ವದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ 55 ಕೋಟಿ ರೂ. ಗಳಿಕೆ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ಬಡೇ ಮಿಯಾ ಚೋಟೆ ಮಿಯಾ ಬಾಕ್ಸ್‌ ಆಫೀಸ್‌ ವರದಿ

ಪ್ರೊಡಕ್ಷನ್‌ ಹೌಸ್‌ ಪೂಜಾ ಎಂಟರ್‌ಟೇನ್‌ಮೆಂಟ್‌ ಇದೀಗ ಬಡೇ ಮಿಯಾ ಚೋಟೆ ಮಿಯಾದ ಬಾಕ್ಸ್‌ ಆಫೀಸ್‌ ವರದಿ ಪ್ರಕಟಿಸಿದೆ. ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಕಳೆದ ಎರಡು ದಿನಗಳಲ್ಲಿ ಈ ಸಿನಿಮಾ 55.14 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಸಿನಿಮಾವು ಈದ್‌ ಹಬ್ಬದಂದು ಅಂದರೆ ಏಪ್ರಿಲ್‌ 11ರಂದು ಬಿಡುಗಡೆಯಾಗಿತುತ. ಮೊದಲ ದಿನ ಜಗತ್ತಿನಾದ್ಯಂತ 36.33 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.

ಹೀಗಿದ್ದರೂ, ಈ ಸಿನಿಮಾದ ಪರ್ಫಾಮೆನ್ಸ್‌ ಕುರಿತು ಭಾರತದ ಟ್ರೇಡ್‌ ಎಕ್ಸ್‌ಪರ್ಟ್‌ಗಳು ಖುಷಿಪಟ್ಟಂತೆ ಕಾಣುತ್ತಿಲ್ಲ. ಶುಕ್ರವಾರ ತರುಣ್‌ ಆದರ್ಶ್‌ ಹೀಗೆ ಟ್ವೀಟ್‌ ಮಾಡಿದ್ದರು. "ಈದ್‌ ಹಬ್ಬದ ಹಾಲಿಡೆಯಲ್ಲಿ ಬಿಡುಗಡೆಯಾದ ಬಡೇ ಮಿಯಾ ಚೋಟೆ ಮಿಯಾವು ಮೊದಲ ದಿನ ನಿರೀಕ್ಷೆಯಷ್ಟು ಗಳಿಕೆ ಮಾಡಿಲ್ಲ. ಭಾರತದಲ್ಲಿ ಮೊದಲ ದಿನ ಕೇವಲ 16.07 ಕೋಟಿ ರೂಪಾಯಿ ಗಳಿಕೆ ಮಾಡಿದೆ" ಎಂದು ಟ್ವೀಟ್‌ ಮಾಡಿದ್ದಾರೆ. "ಸಿನಿಮಾದ ಪ್ರಮುಖ ತಾರಾಗಣ, ಅನನ್ಯ ಮೇಕಿಂಗ್‌, ಹಾಲಿಡೇ ಅಂಶಗಳು, ಪ್ರಮೋಷನ್‌, ನಿರ್ದೇಶಕರ ಹಿನ್ನೆಲೆ ಇತ್ಯಾದಿಗಳಿಂದ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಆದರೆ, ಮೊದಲ ದಿನ ಈ ಸಿನಿಮಾ ನಿರೀಕ್ಷಿತ ಗಳಿಕೆ ಮಾಡಿಲ್ಲ" ಎಂದು ಅವರು ವಿಶ್ಲೇಷಣೆ ಮಾಡಿದ್ದಾರೆ. ಎರಡನೇ ದಿನ ಭಾರತದಲ್ಲಿ ಬಡೇ ಮಿಯಾನ್‌ ಚೋಟೆ ಮಿಯಾ ಸಿನಿಮಾವು 5 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಬಡೇ ಮಿಯಾ ಚೋಟೆ ಮಿಯಾ ಸಿನಿಮಾದ ಕುರಿತು

ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಜತೆಗೆ ಪೃಥ್ವಿರಾಜ್‌ ಸುಕುಮಾರನ್‌ ಕೂಡ ನಟಿಸಿದ್ದಾರೆ. ಸೋನಾಕ್ಷಿ ಸಿನ್ಹಾ, ಮಾನುಷಿ ಚಿಲ್ಲರ್‌, ಅಲಯ ಎಫ್‌ ಕೂಡ ನಟಿಸಿದ್ದಾರೆ. ಅಕ್ಷಯ್ ಕುಮಾರ್ ಮತ್ತು ಮಾನುಷಿ ಚಿಲ್ಲರ್ ಈ ಚಿತ್ರದ ಮೂಲಕ ಎರಡನೇ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ. ಇಬ್ಬರೂ ಈ ಹಿಂದೆ ಸಾಮ್ರಾಟ್ ಪೃಥ್ವಿರಾಜ್ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು.

ಇಬ್ಬರು ಭಾರತೀಯ ಸೇನಾಧಿಕಾರಿಗಳ ಸುತ್ತ ಈ ಸಿನಿಮಾದ ಕಥೆ ಸುತ್ತುತ್ತದೆ. ಅಕ್ಷಯ್ ಮತ್ತು ಟೈಗರ್ ಈ ಚಿತ್ರದಲ್ಲಿ ಆರ್ಮಿ ಆಫೀಸರ್ ಪಾತ್ರ ನಿರ್ವಹಿಸಿದ್ದಾರೆ. ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ. ಬಡೇ ಮಿಯಾ ಛೋಟೆ ಮಿಯಾ ಚಿತ್ರವನ್ನು ಅಲಿ ಅಬ್ಬಾಸ್ ಜಾಫರ್ ನಿರ್ದೇಶಿಸಿದ್ದಾರೆ. ಮುಂಬೈ, ಲಂಡನ್, ಸ್ಕಾಟ್ಲೆಂಡ್ ಮತ್ತು ಜೋರ್ಡಾನ್ ಸ್ಥಳಗಳಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆದಿದೆ. ವಸು ಭಗ್ನಾನಿ, ದೀಪ್ಶಿಕಾ ದೇಶ್‌ಮುಖ್, ಜಾಖಿ ಭಗ್ನಾನಿ, ಹಿಮಾಂಶು ಕಿಶನ್ ಮೆಹ್ರಾ ಮತ್ತು ಅಲಿ ಅಬ್ಬಾಸ್ ಜಾಫರ್ ಜಂಟಿಯಾಗಿ ನಿರ್ಮಿಸಿದ್ದಾರೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್‌ ಆಗಿದೆ.

IPL_Entry_Point