ಕನ್ನಡ ಸುದ್ದಿ  /  ಮನರಂಜನೆ  /  68ರ ಇಳಿ ವಯಸ್ಸಲ್ಲಿ ಇದೆಂಥಾ ತೆವಲು! ನಟಿ ಪ್ರಿಯಾಮಣಿ ಸೊಂಟ ಬಾಚಿ ತಬ್ಬಿದ ಬಾಲಿವುಡ್‌ ನಿರ್ಮಾಪಕನ ವಿರುದ್ಧ ಕಟು ಟೀಕೆ

68ರ ಇಳಿ ವಯಸ್ಸಲ್ಲಿ ಇದೆಂಥಾ ತೆವಲು! ನಟಿ ಪ್ರಿಯಾಮಣಿ ಸೊಂಟ ಬಾಚಿ ತಬ್ಬಿದ ಬಾಲಿವುಡ್‌ ನಿರ್ಮಾಪಕನ ವಿರುದ್ಧ ಕಟು ಟೀಕೆ

ನಟಿ ಪ್ರಿಯಾಮಣಿ ಜತೆಗೆ ಅನುಚಿತವಾಗಿ ವರ್ತಿಸಿದ ಬಾಲಿವುಡ್‌ನ ಖ್ಯಾತ ನಿರ್ಮಾಪಕನ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಬಗ್ಗೆ ಕಟು ಟೀಕೆ ವ್ಯಕ್ತವಾಗಿದ್ದು, ನಿಮಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎಂದು ತಿವಿಯುತ್ತಿದ್ದಾರೆ.

68ರ ಇಳಿ ವಯಸ್ಸಲ್ಲಿ ಇದೆಂಥಾ ತೆವಲು! ನಟಿ ಪ್ರಿಯಾಮಣಿ ಸೊಂಟ ಬಾಚಿ ತಬ್ಬಿದ ಬಾಲಿವುಡ್‌ ನಿರ್ಮಾಪಕನ ವಿರುದ್ಧ ಕಟು ಟೀಕೆ
68ರ ಇಳಿ ವಯಸ್ಸಲ್ಲಿ ಇದೆಂಥಾ ತೆವಲು! ನಟಿ ಪ್ರಿಯಾಮಣಿ ಸೊಂಟ ಬಾಚಿ ತಬ್ಬಿದ ಬಾಲಿವುಡ್‌ ನಿರ್ಮಾಪಕನ ವಿರುದ್ಧ ಕಟು ಟೀಕೆ

Priyamani: ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ವಿಡಿಯೋ ಇದೀಗ ನೆಟ್ಟಿಗರ ಕಣ್ಣು ಕೆಂಪಗಾಗಿಸಿದೆ. ವಯಸ್ಸು 70ರ ಸನಿಹದಲ್ಲಿದ್ದರೂ, ಮಗಳ ವಯಸ್ಸಿನ ನಟಿಯ ಜತೆಗೆ ಆ ನಿರ್ಮಾಪಕ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯುವ ಜರೂರತ್ತೇನಿತ್ತು. ವಯಸ್ಸಿಗೂ ಒಂದು ಬೆಲೆ ಇಲ್ಲವೇ? ನಿರ್ಮಾಪಕ ಎಂಬ ಕಾರಣಕ್ಕೆ ತನಗೆ ತಿಳಿದಿದ್ದನ್ನು ಮಾಡುವ ಅಧಿಕಾರ ಕೊಟ್ಟವರಾರು? ಹೆಣ್ಣು ಅಂದರೆ ಹೇಗೆ ಬೇಕಾದರೂ ಬಳಸಿಕೊಳ್ಳಬಹುದೇ? ಹೀಗೆ ಸೋಷಿಯಲ್‌ ಮೀಡಿಯಾದಲ್ಲಿ ಬಾಲಿವುಡ್‌ನ ಖ್ಯಾತ ನಿರ್ಮಾಪಕನ ವಿರುದ್ಧ ಕೇಳಿಬಂದ ಕಟು ಟೀಕೆಗಳಿವು.

ಟ್ರೆಂಡಿಂಗ್​ ಸುದ್ದಿ

ಅಷ್ಟಕ್ಕೂ ಈ ವಿಚಾರ ನಟಿಯ ಸೊಂಟ ಬಳಸಿ ಫೋಟೋಗೆ ಪೋಸ್‌ ಕೊಟ್ಟ ನಿರ್ಮಾಪಕನದ್ದು. ಅವರು ಬೇರಾರು ಅಲ್ಲ, ಭಾರತದ ‌ಲೇಡಿ ಸೂಪರ್‌ಸ್ಟಾರ್ ಶ್ರೀದೇವಿ ಪತಿ ಬೋನಿ ಕಪೂರ್.‌ ಇತ್ತೀಚೆಗಷ್ಟೇ ಅಜಯ್‌ ದೇವಗನ್‌ ನಾಯಕನಾಗಿ ನಟಿಸಿರುವ ಮೈದಾನ್‌ ಸಿನಿಮಾ ಬಿಡುಗಡೆ ಆಗಿದೆ. ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಗಳಿಕೆ ವಿಚಾರದಲ್ಲೂ ಸಿನಿಮಾ ದಾಪುಗಾಲಿಟ್ಟಿದೆ. ಹೀಗೆ ಇದೇ ಚಿತ್ರದ ಪ್ರೀಮಿಯರ್‌ ಶೋ ವೇಳೆ ಚಿತ್ರದ ನಿರ್ಮಾಪಕ ಬೋನಿ ಕಪೂರ್‌, ನಟಿ ಪ್ರಿಯಾಮಣಿ ಸೊಂಟ ಹಿಡಿದು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ವ್ಯಾಪಕ ವಿರೋಧವನ್ನೂ ಎದುರಿಸುತ್ತಿದ್ದಾರೆ.

ಪ್ರೀಮಿಯರ್‌ ಶೋ ವೇಳೆ ಪೋಟೋಗ್ರಾಫರ್‌ಗಳು ಸಿನಿಮಾ ನೋಡಲು ಬಂದ ಸೆಲೆಬ್ರಿಟಿಗಳ ಫೋಟೋ ಕ್ಲಿಕಿಸಲು ಮುಂದಾಗಿದ್ದಾರೆ. ಈ ವೇಳೆ ಮೈದಾನ್‌ ಚಿತ್ರದಲ್ಲಿ ಅಜಯ್‌ ದೇವಗನ್‌ ಪತ್ನಿಯಾಗಿ ನಟಿಸಿದ ಪ್ರಿಯಾಮಣಿ ಸಹ ಪೋಟೋ ಕಾರ್ಪೆಟ್‌ ಬಳಿ ಆಗಮಿಸಿದ್ದಾರೆ. ಅಲ್ಲೇ ಇದ್ದ ನಿರ್ಮಾಪಕ ಬೋನಿ ಕಪೂರ್‌ ಸಹ ನಟಿಯ ಮೈಗಂಟಿಕೊಂಡು ನಿಂತು ಫೋಟೋಗಳಿಗೆ ಪೋಸ್‌ ಕೊಟ್ಟಿದ್ದಾರೆ. ಅವರ ಭುಜ ಹಿಡಿದು ಅತ್ತಿಂದಿತ್ತ ಎಳೆದಾಡಿದ್ದಾರೆ. ಅಷ್ಟೇ ಸಾಲದು ಎಂಬಂತೆ ಸೊಂಟ ಹಿಡಿಯಲು ಯತ್ನಿಸಿದ್ದಾರೆ. 68ರ ಇಳಿ ವಯಸ್ಸಿನ ಈ ನಿರ್ಮಾಪಕನ ಈ ಅನುಚಿತ ವರ್ತನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ, ಜಾಲತಾಣದಲ್ಲಿ ಬಾಲಿವುಡ್‌ನ ಹಿರಿಯ ನಿರ್ಮಾಪಕ ಎಂಬುದನ್ನೂ ನೋಡದ ನೆಟ್ಟಿಗರು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇದೆಂಥಾ ವಿಕೃತಿ ಎಂದೂ ಬೋನಿ ಕಪೂರ್‌ಗೆ ಟೀಕೆ ಮಾಡುತ್ತಿದ್ದಾರೆ. ನಿಮಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎಂಬುದು ನಿಮಗೆ ಅರಿವಿರಲಿ. ಈ ರೀತಿ ಸೊಂಟ ಹಿಡಿದು ಪೋಸ್‌ ಕೊಡುವುದು ನಿಮ್ಮ ವಯಸ್ಸಿಗೂ ಸೂಕ್ತವಲ್ಲ ಎಂದಿ ಜರಿದಿದ್ದಾರೆ. ಇನ್ನು ಕೆಲವರು ಹಾಲಿವುಡ್‌ನ ಹಾರ್ವೆ ವೈನ್‌ಸ್ಟೇನ್‌ಗೂ ಹೋಲಿಕೆ ಮಾಡಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ವಿಮರ್ಶೆ ಚೆನ್ನಾಗಿದ್ದರೂ, ಕಲೆಕ್ಷನ್‌ ಡಲ್‌

ಫುಟ್‌ಬಾಲ್‌ ಕೋಚ್‌ ಸೈಯದ್‌ ಅಬ್ದುಲ್‌ ರಹೀಮ್‌ ಅವರ ಜೀವನ ಕಥೆಯನ್ನೇ ಮೈದಾನ್‌ ಹೆಸರಿನಲ್ಲಿ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಅಮಿತ್‌ ರವೀಂದ್ರನಾಥ್‌ ಶರ್ಮಾ. ವಿಮರ್ಶೆ ದೃಷ್ಟಿಯಿಂದ ಮೆಚ್ಚುಗೆ ಪಡೆದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಕಮಾಯಿ ಮಾಡುವಲ್ಲಿ ಹೆಚ್ಚು ಸದ್ದು ಮಾಡಲಿಲ್ಲ. ಸಹಜವಾಗಿ ಅಜಯ್‌ ದೇವಗನ್‌ ಸಿನಿಮಾಗಳೆಂದರೆ, ಮೊದಲ ದಿನ ಕನಿಷ್ಠ 20 ಕೋಟಿಯಾದರೂ ಗಳಿಕೆ ಕಾಣಬಹುದೆಂಬ ನಿರೀಕ್ಷೆ ಇತ್ತು. ಆದರೆ, ಮೈದಾನ್‌ ಸಿನಿಮಾ ನಿರೀಕ್ಷೆ ಮೂಡಿಸಿದರೂ, ಎರಡು ದಿನಗಳಲ್ಲಿ ಕೇವಲ 10 ಕೋಟಿ ಗಳಿಸಲಷ್ಟೇ ಶಕ್ತವಾಗಿದೆ.

IPL_Entry_Point