Brain teaser: ಸಿನಿಮಾಸಕ್ತರಿಗೆ ಗೂಗಲ್ ಸವಾಲ್; ಈ ಚಿತ್ರಗಳನ್ನು ನೋಡಿ ಜನಪ್ರಿಯ ಸಿನಿಮಾಗಳ ಹೆಸರು ಹೇಳಿನೋಡೋಣ
Brain teaser quiz challenges: ಗೂಗಲ್ ಇಂಡಿಯಾವು ಇನ್‌ಸ್ಟಾಗ್ರಾಂನಲ್ಲಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದು, ಸಿನಿಮಾಸಕ್ತರಲ್ಲಿ ಚಿತ್ರ ನೋಡಿ ಸಿನಿಮಾದ ಹೆಸರು ಹೇಳಿ ಎಂಬ ಸವಾಲು ಒಡ್ಡಿದೆ. ನೀವು ಒಮ್ಮೆ ಪ್ರಯತ್ನಿಸಿ.
ಸಿನಿಮಾ ಕ್ವಿಜ್ ಎಂದರೆ ಎಲ್ಲರಿಗೂ ಇಷ್ಟ. ಫೋಟೋ ನೋಡಿ ಉತ್ತರ ಹೇಳಿ ಎಂಬ ಆಟವೂ ನಿಮಗೆ ಇಷ್ಟವಾಗಬಹುದು. ಸಿನಿಮಾದ ಹೆಸರನ್ನು ಸೂಚಿಸುವಂತಹ ಈ ಚಿತ್ರವನ್ನು ನೋಡಿದಾಗ ನಿಮಗೆ ಯಾವ ಸಿನಿಮಾ ನೆನಪಿಗೆ ಬರುತ್ತದೆ? ಇಂತಹ ಒಂದು ಸವಾಲನ್ನು ಗೂಗಲ್ ಇಂಡಿಯಾ ತನ್ನ ಇನ್‌ಸ್ಟಾಗ್ರಾಂನಲ್ಲಿ ನೀಡಿದೆ. ಇವೆಲ್ಲವೂ ಈ ವರ್ಷ ಬಿಡುಗಡೆಯಾದ ಸಿನಿಮಾಗಳು.
"ಗೆಸ್ ಮಾಡುವ ಆಟ ಆರಂಭವಾಗಿದೆ. ಇದು 2023ರಲ್ಲಿ ಹೆಚ್ಚು ಹುಡುಕಾಟ ನಡೆಸಲ್ಪಟ್ಟ ಸಿನಿಮಾಗಳು. ಈ ಚಿತ್ರಗಳನ್ನು ನೋಡಿ ಆ ಸಿನಿಮಾಗಳು ಯಾವುವು ಎಂದು ಗುರುತಿಸಿ" ಎಂದು ಗೂಗಲ್ ಇಂಡಿಯಾವು ಇನ್‌ಸ್ಟಾಗ್ರಾಂನಲ್ಲಿ ಸವಾಲು ಒಡ್ಡಿದೆ. ಹಲವು ಫೋಟೋಗಳನ್ನು ಗೂಗಲ್ ಹಂಚಿಕೊಂಡಿದೆ. ಇದನ್ನು ಓದಿ: Movie Quiz: ಶಂಕರ್‌ನಾಗ್ ತ್ರಿಬಲ್ ಆಕ್ಟಿಂಗ್‌ನಲ್ಲಿ ನಟಿಸಿದ ಸಿನಿಮಾ ಯಾವುದು? ಅಪ್ಪು ಹುಟ್ಟುಹಬ್ಬ ಯಾವಾಗ? 10 ರಸಪ್ರಶ್ನೆಗಳಿಗೆ ಉತ್ತರಿಸಿ
ನಿಮ್ಮ ಮೆದುಳಿಗೆ ಸವಾಲು
ಈ ಫೋಟೋವನ್ನು ಒಂದು ದಿನದ ಹಿಂದೆ ಹಂಚಿಕೊಳ್ಳಲಾಗಿದೆ. ಈಗಾಗಲೇ 20 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಸಾಕಷ್ಟು ಜನರು ಕಾಮೆಂಟ್ ಮೂಲಕ ಉತ್ತರ ನೀಡಲು ಯತ್ನಿಸುತ್ತಿದ್ದಾರೆ. ಕೆಲವರು ಸರಿಯಾದ ಉತ್ತರ ನೀಡಿದ್ದರೆ, ಇನ್ನು ಕೆಲವರು ತಮಾಷೆಯ ಉತ್ತರಗಳನ್ನು ನೀಡಿದ್ದಾರೆ.
ಈ ಬ್ರೇನ್ ಟೀಸರ್‌ಗೆ ಇನ್‌ಸ್ಟಾಗ್ರಾಂ ಬಳಕೆದಾರರು ಈ ಮುಂದಿನಂತೆ ಕಾಮೆಂಟ್ ಮಾಡಿದ್ದಾರೆ. "ಜವಾನ್, ಗದರ್ 2, ಸರ್ಧಾರ್ ಉದಾಮ್ ಸಿಂಗ್, ಪಠಾಣ್, ಜೈಲರ್, ಅನಿಮಲ್, ಟೈಗರ್ 3 ಎಂದು ಎಲ್ಲಾ ಫೋಟೋಗಳಿಗೆ ಉತ್ತರ ನೀಡಿದ್ದಾರೆ. "ಹ್ಯಾರಿ ಪಾಟರ್ ಮತ್ತು ದಿ ಪ್ರಿಸನರ್ ಆಫ್ ಅಕ್ಬಾನ್" ಎಂದು ಒಬ್ಬರು ತಮಾಷೆ ಮಾಡಿದ್ದಾರೆ. "ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವುದು ಸುಲಭ, ಸುಮ್ಮನೆ ಕಾಮೆಂಟ್ ಓದಿದರೆ ಉತ್ತರ ದೊರಕುತ್ತದೆ" ಎಂದು ಇನ್ನೊಬ್ಬರು ಬರೆದಿದ್ದಾರೆ.
ಗೂಗಲ್‌ನಲ್ಲಿ ಹೆಚ್ಚು ಹುಡುಕಾಟ ನಡೆಸಲ್ಪಟ್ಟ ಸಿನಿಮಾಗಳು
ಭಾರತದಲ್ಲಿ ಈ ವರ್ಷ ಅತ್ಯಧಿಕ ಜನರು ಹುಡುಕಾಟ ನಡೆಸಿದ ಅಗ್ರ ಹತ್ತು ಸಿನಿಮಾಗಳ ಪಟ್ಟಿಯನ್ನು ಸರ್ಚ್ ಎಂಜಿನ್ ದೈತ್ಯ ಗೂಗಲ್ ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಶಾರೂಖ್ ಖಾನ್‌ರ ಬ್ಲಾಕ್‌ಬಸ್ಟರ್ ಸಿನಿಮಾ ಜವಾನ್ ಮತ್ತು ಸನ್ನಿ ಡಿಯೋಲ್ ಅವರ ಗದರ್ 2 ಅಗ್ರ ಸ್ಥಾನದಲ್ಲಿವೆ. ಜವಾನ್, ಪಠಾನ್, ಗದಾರ್ 2 ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಅತ್ಯಧಿಕ ಗಳಿಕೆ ಮಾಡಿದ್ದವು. ಇದೇ ಪಟ್ಟಿಯನ್ನು ಆಧರಿಸಿ ಗೂಗಲ್ ಈ ಬ್ರೇನ್ ಟೀಸರ್ ಫೋಟೋಗಳನ್ನು ಬಿಡುಗಡೆ ಮಾಡಿದೆ.
ಶಾರೂಖ್ ಖಾನ್‌ರ ಪಠಾಣ್ ಸಿನಿಮಾ ಮಾತ್ರವಲ್ಲದೆ ಪ್ರಭಾಸ್ ನಟನೆಯ ಆದಿಪುರುಷ್, ಸಲ್ಮಾನ್ ಖಾನ್ ನಟನೆಯ ಟೈಗರ್ 3, ರಜನಿಕಾಂತ್ ನಟನೆಯ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ಜೈಲರ್ ಕೂಡ ಗೂಗಲ್‌ನ ಅಗ್ರ ಹತ್ತರ ಪಟ್ಟಿಯಲ್ಲಿವೆ. ಇದೇ ಸಂದರ್ಭದಲ್ಲಿ ದಳಪತಿ ವಿಜಯ್ ನಟನೆಯ ಲಿಯೊ ಮತ್ತು ವಾರೀಸು ಕೂಡ ಅತ್ಯಧಿಕ ಸರ್ಚ್ ಪಡೆದಿವೆ.
ವಿಭಾಗ