ಕನ್ನಡ ಸುದ್ದಿ  /  ಮನರಂಜನೆ  /  ಬಾಲಿವುಡ್ ನಟಿ ಐಶ್ವರ್ಯಾ ರೈ ಕೈ‌ಗೆ ದೊಡ್ಡ ಬ್ಯಾಂಡೇಜು; ಇದೇ ಗಾಯದಲ್ಲಿ ಕಾನ್‌ ರೆಡ್‌ ಕಾರ್ಪೆಟ್‌ನಲ್ಲಿ ವಾಕ್‌ ಮಾಡ್ತಾರ ಆರಾಧ್ಯಳ ಅಮ್ಮ

ಬಾಲಿವುಡ್ ನಟಿ ಐಶ್ವರ್ಯಾ ರೈ ಕೈ‌ಗೆ ದೊಡ್ಡ ಬ್ಯಾಂಡೇಜು; ಇದೇ ಗಾಯದಲ್ಲಿ ಕಾನ್‌ ರೆಡ್‌ ಕಾರ್ಪೆಟ್‌ನಲ್ಲಿ ವಾಕ್‌ ಮಾಡ್ತಾರ ಆರಾಧ್ಯಳ ಅಮ್ಮ

Cannes 2024: ಕಾನ್‌ ಫಿಲ್ಮ್‌ ಫೆಸ್ಟಿವಲ್‌ನ 77ನೇ ಆವೃತ್ತಿಯು ಇದೇ ಮೇ 14ರಂದು ಆರಂಭವಾಗಿದೆ. ಈ ಚಲನಚಿತ್ರೋತ್ಸವದಲ್ಲಿ ನಟಿ ಐಶ್ವರ್ಯಾ ರೈ ಅವರು ರೆಡ್‌ ಕಾರ್ಪೆಟ್‌ನಲ್ಲಿ ನಡೆಯಲಿದ್ದಾರೆ. ಆದರೆ, ಐಶ್ವರ್ಯಾ ರೈ ಕೈಗೆ ಗಾಯವಾಗಿದ್ದು, ದೊಡ್ಡ ಬ್ಯಾಂಡೇಜು ನೋಡಿ ಅಭಿಮಾನಿಗಳಿಗೆ ಆತಂಕವಾಗಿದೆ.

ಬಾಲಿವುಡ್ ನಟಿ ಐಶ್ವರ್ಯಾ ರೈ ಕೈ‌ಗೆ  ಗಾಯ
ಬಾಲಿವುಡ್ ನಟಿ ಐಶ್ವರ್ಯಾ ರೈ ಕೈ‌ಗೆ ಗಾಯ

ಬೆಂಗಳೂರು: ಕಾನ್‌ ಚಲನಚಿತ್ರೋತ್ಸವದಲ್ಲಿ ಈ ಬಾರಿಯೂ ಬಾಲಿವುಡ್‌ ನಟಿ ಐಶ್ವರ್ಯಾ ರೈ ಅವರು ರೆಡ್‌ ಕಾರ್ಪೆಟ್‌ನಲ್ಲಿ ನಡೆಯಲು ಸಜ್ಜಾಗಿದ್ದಾರೆ. ಬುಧವಾರ ಸಂಜೆ ಐಶ್ವರ್ಯಾ ಬಚ್ಚನ್ ತನ್ನ ಮಗಳು ಆರಾಧ್ಯ ಬಚ್ಚನ್ ಜತೆ ವಿಮಾನ ನಿಲ್ದಾಣದಲ್ಲಿದ್ದರು. ಕಾನ್‌ ಚಿತ್ರೋತ್ಸವಕ್ಕೆ ಹೋಗಲು ಸಿದ್ಧವಾಗಿದ್ದ ಅವರನ್ನು ಅಭಿಮಾನಿಗಳು ಒಂದು ಕ್ಷಣ ಆತಂಕಕ್ಕೆ ಈಡಾದರು. ಏಕೆಂದರೆ, ಅವರ ಕೈಗೆ ಸ್ಲಿಂಗ್‌ ಹಾಕಲಾಗಿತ್ತು. ದೊಡ್ಡ ಬ್ಯಾಂಡೇಜ್‌ ನೋಡಿ ಫ್ಯಾನ್ಸ್‌ ಕಳವಳಗೊಂಡರು. ಈ ಗಾಯದ ಬಗ್ಗೆ ನಟಿ ಯಾವುದೇ ಮಾಹಿತಿ ನೀಡಿಲ್ಲ. ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಈ ಗಾಯದ ಕುರಿತು ಚರ್ಚಿಸುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಐಶ್ವರ್ಯಾ ರೈ ಅವರು ಮಗಳು ಆರಾಧ್ಯಳೊಂದಿಗೆ ಕಾರಿನಿಂದ ಇಳಿಯುತ್ತಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ತನ್ನ ಬಲಗೈ ಅನ್ನು ಸ್ಲಿಂಗ್‌ನಲ್ಲಿ ಇಟ್ಟುಕೊಂಡಿದ್ರು. ಮಣಿಕಟ್ಟಿನ ಸುತ್ತಲೂ ಬಿಳಿ ಬ್ಯಾಂಡೇಜ್‌ ಕಾಣಿಸುತ್ತಿತ್ತು. ಮೊಣಕಾಲು ಉದ್ದದ ನೀಲಿ ಕೋಟ್‌ ಮತ್ತು ಕಪ್ಪು ಉಡುಗೆಯನ್ನು ಧರಿಸಿದ್ದರು. ಕೂದಲು ಕಟ್ಟಿಕೊಂಡಿದ್ದರು. ಮಗಳು ಆರಾಧ್ಯ ತಿಳಿ ನೀಲಿ ಉಡುಗೆಯಲ್ಲಿದ್ದರು. ಕೆಲವು ಸೆಕೆಂಡ್‌ಗಳ ಕಾಲ ಮಾಧ್ಯಮ ಮಂದಿಯತ್ತ ಕೈಬೀಸಿ ವಿಮಾನ ನಿಲ್ದಾಣವನ್ನು ಪ್ರವೇಶಿಸಿದರು.

ಅಭಿಮಾನಿಗಳ ಪ್ರತಿಕ್ರಿಯೆ ಹೀಗಿತ್ತು

ಐಶ್ವರ್ಯಾ ರೈ ಗಾಯವನ್ನು ನೋಡಿ ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಹಲವು ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. "ಓ ಮೈ ಗಾಡ. ಅವರು ಗಾಯಗೊಂಡ ಕೈಗಳೊಂದಿಗೆ ಕಾನ್‌ ಚಿತ್ರೋತ್ಸವದಲ್ಲಿ ನಡೆಯಲಿದ್ದಾರೆ. ದೇವರು ಒಳ್ಳೆಯದನ್ನು ಮಾಡಲಿ" ಎಂದು ಅಭಿಮಾನಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ. "ಐಶ್ವರ್ಯಾ ತುಂಬಾ ಚೆನ್ನಾಗಿದ್ದಾರೆ. ಈ ಸುಂದರಿ ಕಾನ್‌ನಲ್ಲಿ ನಡೆಯುವುದನ್ನು ನೋಡಲು ಕಾಯುತ್ತಿದ್ದೇನೆ" " ಅವಳು ತನ್ನ ಮಗಳನ್ನು ನೋಡಿಕೊಳ್ಳುವ ರೀತಿ ವಾಹ್‌" ಎಂದೆಲ್ಲ ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ.

ಐಶ್ವರ್ಯಾ ರೈ 2002ರಲ್ಲಿ ನಡೆದ ಕಾನ್‌ ಚಲನಚಿತ್ರೋತ್ಸವದಲ್ಲಿ ನೀತಾ ಲುಲ್ಲಾ ವಿನ್ಯಾಸದ ಸೀರೆಯಲ್ಲಿ, ಭಾರವಾದ ಚಿನ್ನದ ಆಭರಣಗಳೊಂದಿಗೆ ರೆಡ್ ಕಾರ್ಪೆಟ್ ಮೇಲೆ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು. ಆ ಚಿತ್ರೋತ್ಸವದಲ್ಲಿ ಐಶ್ವರ್ಯಾ ರೈ ಅವರ ಚಿತ್ರ ದೇವದಾಸ್‌ ಪ್ರಥಮ ಪ್ರದರ್ಶನ ಕಂಡಿತ್ತು. ನಟ ಶಾರುಖ್ ಖಾನ್ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ ಐಶ್ವರ್ಯಾ ರೈ ಚಿತ್ರೋತ್ಸವಕ್ಕೆ ಆಗಮಿಸಿದ್ದರು. ಅಂದಿನಿಂದ ಪ್ರತಿವರ್ಷ ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಲೋರಿಯಲ್‌ ಪ್ಯಾರಿಸ್‌ ಬ್ರಾಂಡ್‌ನ ಅಂಬಾಸಡರ್‌ಗಳಲ್ಲಿ ಒಬ್ಬರಾಗಿ ಈ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಕಾನ್‌ ಚಿತ್ರೋತ್ಸವದಲ್ಲಿ ಐಶ್ವರ್ಯಾ ರೈ ಮಾತ್ರವಲ್ಲದೆ ನಟಿಯರಾದ ಅದಿತಿ ರಾವ್ ಹೈದರಿ, ಶೋಬಿತಾ ಧುಲಿಪಾಲ ಮತ್ತು ಕಿಯಾರಾ ಅಡ್ವಾಣಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಊರ್ವಶಿ ರೌತೆಲಾ ಈಗಾಗಲೇ ತನ್ನ ಪಿಂಕ್ ಲುಕ್‌ನಲ್ಲಿ ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾ ತಾರೆ ದೀಪ್ತಿ ಸಾಧ್ವಾನಿ ಈಗಾಗಲೇ ರೆಡ್ ಕಾರ್ಪೆಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.

IPL_Entry_Point