Aarti Mittal Arrested: ವೇಶ್ಯಾವಾಟಿಕೆ ಆರೋಪ; ಬಾಲಿವುಡ್ ನಟಿ, ಕಾಸ್ಟಿಂಗ್ ಡೈರೆಕ್ಟರ್ ಆರತಿ ಮಿತ್ತಲ್ ಬಂಧನ
ಮುಂಬೈನ ಓಶಿವಾರದ ಆರಾಧನಾ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿರುವ ಆರತಿ ಮಿತ್ತಲ್, ಬಾಲಿವುಡ್‌ನಲ್ಲಿ ಅವಕಾಶ ಹುಡುಕಿ ಬರುವ ಯವತಿಯರಿಗೆ ಹಣದ ಆಮಿಷ ಒಡ್ಡಿ ಆರತಿ ಅವರನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳುತ್ತಿದ್ದಳು.

ಸಿನಿಮಾಗಳಲ್ಲಿ ಅವಕಾಶ ನೀಡುವುದಾಗಿ ನಂಬಿಸಿ ಯುವತಿಯರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಬಾಲಿವುಡ್ ಕಾಸ್ಟಿಂಗ್ ನಿರ್ದೇಶಕಿಯೊಬ್ಬರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಅರೆಸ್ಟ್ ಆಗಿರುವ 27 ವರ್ಷದ ಆರತಿ ಮಿತ್ತಲ್ ಹಣದ ಆಮಿಷ ಒಡ್ಡಿ ಮಾಡೆಲ್‌ಗಳನ್ನು ಈ ದಂಧೆಗೆ ಬಳಸಿಕೊಳ್ಳುತ್ತಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಹಿಳಾ ಕಾಸ್ಟಿಂಗ್ ಡೈರೆಕ್ಟರ್ ಆರತಿ ಮಿತ್ತಲ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾಳೆ ಎಂಬ ಮಾಹಿತಿ ಪೊಲೀಸರಿಗೆ ಕೆಲವು ದಿನಗಳ ಹಿಂದೆ ದೊರೆತಿದೆ. ಆದರೆ ಆಕೆಯನ್ನು ಸಾಕ್ಷಿ ಸಹಿತ ಹಿಡಿಯಬೇಕೆಂದು ಪೊಲೀಸರು ಜಾಲ ಹೆಣೆದಿದ್ದಾರೆ. ಎಲ್ಲಾ ಮಾಹಿತಿ ಸಂಗ್ರಹಿಸಿದ ಪೊಲೀಸ್ ಇನ್‌ಸ್ಪೆಕ್ಟರ್ ಮನೋಜ್ ಸುತಾರ್, ತಂಡವೊಂದನ್ನು ರಚಿಸಿ ಇಬ್ಬರು ಇನ್‌ಸ್ಪೆಕ್ಟರ್‌ಗಳನ್ನು ಆರತಿ ಬಳಿ ಗ್ರಾಹಕರಂತೆ ಕಳಿಸಿದ್ದಾರೆ. ಯುವತಿಯರಿಗಾಗಿ ಆರತಿ 60 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದಾಳೆ. ಇದೇ ಸಮಯದಲ್ಲಿ ಆರತಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ಸಂಪೂರ್ಣ ವಿಡಿಯೋ ಕೂಡಾ ಮಾಡಿದ್ದಾರೆ.
ಮುಂಬೈನ ಓಶಿವಾರದ ಆರಾಧನಾ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿರುವ ಆರತಿ ಮಿತ್ತಲ್, ಬಾಲಿವುಡ್‌ನಲ್ಲಿ ಅವಕಾಶ ಹುಡುಕಿ ಬರುವ ಯವತಿಯರಿಗೆ ಹಣದ ಆಮಿಷ ಒಡ್ಡಿ ಆರತಿ ಅವರನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳುತ್ತಿದ್ದಳು. ಘಟನೆ ವೇಳೆ ಮುಂಬೈನ ಸಮಾಜ ಸೇವಾ ಶಾಖೆಯ ಪೊಲೀಸರು ಇಬ್ಬರು ಯುವತಿಯರನ್ನು ರಕ್ಷಿಸಿ ಪುನರ್ವಸತಿ ಕೇಂದ್ರಕ್ಕೆ ಕಳಿಸಿದ್ದಾರೆ. ಆರತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆರತಿ ಬಾಲಿವುಡ್‌ನಲ್ಲಿ ಕೆಲವು ವರ್ಷಗಳಿಂದ ಕಾಸ್ಟಿಂಗ್ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದು ಅಪ್ನಾಪನ್ ಸೇರಿದಂತೆ ಕೆಲವೊಂದು ಧಾರಾವಾಹಿಗಳಲ್ಲಿ ಕೂಡಾ ನಟಿಸಿದ್ದಳು ಎಂದು ತಿಳಿದುಬಂದಿದೆ.
ಮತ್ತಷ್ಟು ಮನರಂಜನೆ ಸುದ್ದಿಗಳು ಇಲ್ಲಿವೆ
ಪ್ರೆಗ್ನೆನ್ಸಿ ಘೋಷಿಸಿದ ಇಲಿಯಾನಾ: ಮದುವೆ ಯಾವಾಗ ಆಯ್ತು ಎಂದು ಪ್ರಶ್ನಿಸಿದ ನೆಟಿಜನ್ಸ್!
ಸಾರಿಕಾ , ವೀಣಾ ಮಲಿಕ್, ಆಮಿ ಜಾಕ್ಸನ್, ಮಹಿಮಾ ಚೌಧರಿ, ದಿಯಾ ಮಿರ್ಜಾ ಸೇರಿದಂತೆ ಅನೇಕ ನಟಿಯರು ಮದುವೆಗೂ ಮುನ್ನ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ದರು. ಇದೀಗ ಬಹುಭಾಷಾ ನಟಿ ಇಲಿಯಾನಾ ಕೂಡಾ ಇವರ ದಾರಿ ಹಿಡಿದಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಸ್ವತ: ಇಲಿಯಾನಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್. ಪೂರ್ತಿ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಚಾಕೋಲೆಟ್ ಆಗಿ ಬದಲಾಯ್ತು ಬುಲೆಟ್: ಯಶ್ ಹೊಸ ಜಾಹೀರಾತಿಗೆ ಲೈಕ್‌ಗಳ ಸುರಿಮಳೆ
ಕೆಜಿಎಫ್-2 ಬಿಡುಗಡೆ ಆಗಿ ವರ್ಷ ತುಂಬಿದೆ. ಕಳೆದ ವರ್ಷ ಏಪ್ರಿಲ್ 14 ರಂದು ಅಭಿಮಾನಿಗಳು ಹಾಗೂ ಚಿತ್ರತಂಡ, ಸಿನಿಮಾದ ಮೊದಲ ವರ್ಷದ ಆಚರಣೆ ಮಾಡಿದ್ದಾರೆ. ಈ ವಿಶೇಷ ದಿನವಾದರೂ ಯಶ್, ತಮ್ಮ 19ನೇ ಸಿನಿಮಾ ಅಪ್‌ಡೇಟ್ ಮಾಡುತ್ತಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಈ ಬಾರಿ ಕೂಡಾ ನಿರಾಶೆ ಆಗಿದೆ. ಯಶ್ ಸಿನಿಮಾದಲ್ಲಿ ನಟಿಸುತ್ತಿಲ್ಲವಾದರೂ ಸಾಲು ಸಾಲು ಜಾಹೀರಾತುಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಸಂಪೂರ್ಣ ಸ್ಟೋರಿ ಓದಲು ಈ ಲಿಂಕ್ ಒತ್ತಿ.