Celebrity kid: ಆರಾಧ್ಯ ಬಚ್ಚನ್ ಸ್ಕೂಲ್ ಫೀಸ್ ಎಷ್ಟು, ಅಂಬಾನಿ ಸ್ಕೂಲ್‌ನಲ್ಲಿ ಓದುತ್ತಿದ್ದಾಳೆ ಐಶ್ವರ್ಯ ಅಭಿಷೇಕ್ ಬಚ್ಚನ್ ಪುತ್ರಿ
Aaradhya Bachchan: ಐಶ್ವರ್ಯ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಪುತ್ರಿ ಆರಾಧ್ಯ ಬಚ್ಚನ್ ಅವರು ಭಾರತದ ಜನಪ್ರಿಯ ಸ್ಟಾರ್ ಕಿಡ್. ಈ ಪುಟಾಣಿ ಭಾರತದ ದುಬಾರಿ ಸ್ಕೂಲ್‌ನಲ್ಲಿ ಒಂದಾದ ಮುಂಬೈನ ಧೀರುಬಾಯಿ ಅಂಬಾನಿ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ(Aaradhya bachchan school fees) ಓದುತ್ತಿದ್ದಾಳೆ.
Aaradhya bachchan school fees: ಈಗ ಮಕ್ಕಳ ಶಾಲಾ ಫೀಸ್ ತುಂಬಾ ದುಬಾರಿ. ಎಲ್‌ಕೆಜಿ ಯುಕೆಜಿ ಮಕ್ಕಳಿಗೆ 50-1 ಲಕ್ಷ ರೂಪಾಯಿವರೆಗೆ ಫೀಸ್ ಇರುತ್ತದೆ. 1ರಿಂದ 12ನೇ ತರಗತಿಯವರೆಗಿನ ಫೀಸ್ ಅಂತೂ ಲಕ್ಷ ರೂಪಾಯಿ ಮೇಲಿರುತ್ತದೆ. ಪಬ್ಲಿಕ್ ಸ್ಕೂಲ್, ಇಂಟರ್‌ನ್ಯಾಷನಲ್ ಸ್ಕೂಲ್ ಎಂದು ಮಕ್ಕಳ ಶಿಕ್ಷಣಕ್ಕೆ ಹಣ ಸುರಿಯುವುದು ಅನಿವಾರ್ಯ. ಮಧ್ಯಮ ಕುಟುಂಬದವರು ಕಷ್ಟಪಟ್ಟು ಮಕ್ಕಳ ಶಿಕ್ಷಣಕ್ಕಾಗಿ ಹಲವು ಲಕ್ಷ ವ್ಯಯಿಸುತ್ತಾರೆ. ಶ್ರೀಮಂತರು ತಮ್ಮ ಲೆವೆಲ್‌ಗೆ ತಕ್ಕಂತೆ ಉತ್ತಮ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತಾರೆ. ಅಂದಹಾಗೆ, ಬಾಲಿವುಡ್‌ನ ಜನಪ್ರಿಯ ನಟಿ ಕುಡ್ಲದ ಪೊನ್ನು ಐಶ್ವರ್ಯ ರೈ ಬಚ್ಚನ್ ಅವರು ತಮ್ಮ ಮಗಳು ಆರಾಧ್ಯಳ ಸ್ಕೂಲ್‌ಗೆ ಎಷ್ಟು ಫೀಸ್ ಕಟ್ತಾರೆ ಎಂಬ ಸಂಶಯ ನಿಮ್ಮಲ್ಲಿರಬಹುದು.
ಐಶ್ವರ್ಯ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಪುತ್ರಿ ಆರಾಧ್ಯ ಬಚ್ಚನ್ ಅವರು ಭಾರತದ ಜನಪ್ರಿಯ ಸ್ಟಾರ್ ಕಿಡ್. ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಆರಾಧ್ಯ ಬಚ್ಚನ್ ಕಾಣಿಸಿಕೊಂಡಿದ್ದು, ಪುಟಾಣಿಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆರಾಧ್ಯ ಬಚ್ಚನ್ ಭಾರತದ ದುಬಾರಿ ಸ್ಕೂಲ್‌ನಲ್ಲಿ ಒಂದಾದ ಮುಂಬೈನ ಧೀರುಬಾಯಿ ಅಂಬಾನಿ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಓದುತ್ತಿರುವ ಮಾಹಿತಿ ಇತ್ತೀಚೆಗೆ ಬಹಿರಂಗವಾಗಿತ್ತು. ಹೀಗಾಗಿ, ಅಲ್ಲಿ ಓದುವ ಆರಾಧ್ಯರ ಸ್ಕೂಲ್ ಫೀಸ್ ಬಗ್ಗೆಯೂ ಮಾಹಿತಿ ಹರಿದಾಡುತ್ತಿದೆ.
ಆರಾಧ್ಯ ಬಚ್ಚನ್ ಸ್ಕೂಲ್ ಫೀಸ್ ಎಷ್ಟು?
ಧೀರುಬಾಯಿ ಅಂಬಾನಿ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಫೀಸ್ ಎಷ್ಟಿದೆ ಎಂದು ತಿಳಿದುಕೊಂಡರೆ ಆರಾಧ್ಯ ಬಚ್ಚನ್ ಸ್ಕೂಲ್ ಫೀಸ್ ಕುರಿತು ಅಂದಾಜು ಮಾಡಬಹುದು. ಐಬಿಟೈಮ್ಸ್ ವರದಿ ಪ್ರಕಾರ, ಪ್ರತಿವರ್ಷಕ್ಕೆ ಧೀರುಬಾಯಿ ಅಂಬಾನಿ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ 1 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿವರೆಗೆ ಫೀಸ್ ಇರುತ್ತದೆ. ಎಲ್‌ಕೆಜಿಯಿಂದ 7ನೇ ತರಗತಿಯವರೆಗೆ 1.70 ಲಕ್ಷ ರೂಪಾಯಿ ಫೀಸ್ ಇರುತ್ತದೆ. 8ನೇ ತರಗತಿಯಿಂದ 10ನೇ ತರಗತಿಯವರೆಗೆ 4.48 ಲಕ್ಷ ರೂಪಾಯಿ ಫೀಸ್ ಇರುತ್ತದೆ. ಇದೇ ರೀತಿ 11ನೇ ತರಗತಿಯಿಂದ 12ನೇ ತರಗತಿಯ ಫೀಸ್ ಅಂದಾಜು 9.65 ಲಕ್ಷ ರೂಪಾಯಿ ಇರುತ್ತದೆ. ಗಮನಿಸಿ, ಇದು ನಿಗದಿತ ಶುಲ್ಕ, ಇಷ್ಟಲ್ಲದೆ ಇಂತಹ ಸ್ಕೂಲ್‌ಗಳಲ್ಲಿ ಸೀಟು ದೊರಕುವುದು ಕಷ್ಟ ಇರುತ್ತದೆ. ಕೆಲವೊಂದು ಇಂಟರ್‌ನ್ಯಾಷನಲ್ ಸ್ಕೂಲ್‌ಗಳು ಹಲವು ಲಕ್ಷ ರೂಪಾಯಿ ಹೆಚ್ಚುವರಿಯಾಗಿ ಡೊನೆಷನ್ ಪಡೆಯಬಹುದು. ಹೀಗಾಗಿ, ನಿರ್ದಿಷ್ಟ ವಿದ್ಯಾರ್ಥಿಗೆ ಪೋಷಕರು ಎಷ್ಟು ಶುಲ್ಕ ಪಾವತಿಸುತ್ತಾರೆ ಎಂದು ನಿರ್ಧರಿಸುವುದು ಕಷ್ಟವಾಗಬಹುದು.
ಧೀರುಬಾಯಿ ಸ್ಕೂಲ್‌ನಲ್ಲಿ ಕಲಿಯೋ ಸ್ಟಾರ್ ಕಿಡ್‌ಗಳು
ಅಂದಹಾಗೆ ಈ ಧೀರುಬಾಯಿ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಆರಾಧ್ಯ ಬಚ್ಚನ್ ಮಾತ್ರವಲ್ಲದೆ ಇನ್ನೂ ಹಲವು ಸ್ಟಾರ್ ಕಿಡ್‌ಗಳು ಓದುತ್ತಿದ್ದಾರೆ. ಶಾರೂಖ್ ಖಾನ್ ಪುತ್ರ ಅಬ್ರಾಂ, ಸೈಫ್ ಆಳಿ ಖಾನ್ ತೈಮಾರ್, ಕರಿಷ್ಮಾ ಕಪೂರ್ ಮಗಳು ಸಮಿರಾ, ಚುಂಕಿ ಪಾಂಡೆ ಮಗಳು ಅನನ್ಯ ಕೂಡ ಇಲ್ಲೇ ಓದೋದಂತೆ.
ಮನೆಯೇ ಮೊದಲ ಪಾಠಶಾಲೆ
ಮಕ್ಕಳಿಗೆ ಎಷ್ಟು ಲಕ್ಷ ರೂಪಾಯಿ ನೀಡಿ ಶಿಕ್ಷಣ ನೀಡುವಿರಿ ಎನ್ನುವುದು ಮುಖ್ಯವಲ್ಲ. ಆ ಮಕ್ಕಳಿಗೆ ಮನೆಯಲ್ಲಿ ಏನು ಕಲಿಸುವಿರಿ ಎನ್ನುವುದು ಮುಖ್ಯವಾಗುತ್ತದೆ. ಮನೆಯೇ ಮೊದಲ ಪಾಠಶಾಲೆ ಎನ್ನುವ ಕನ್ನಡ ಗಾದೆ ಇದನ್ನೇ ಹೇಳುತ್ತದೆ. ಈ ವಿಷಯದಲ್ಲಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಹಿಂದೆ ಬಿದ್ದಿಲ್ಲ. ಈ ಕುರಿತು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರು ಹೇಳಿದ ಮಾತು ಸುದ್ದಿಯಾಗಿತ್ತು. "ನನ್ನ ಪತ್ನಿ ನನ್ನ ಮಗಳಿಗೆ ಕಲಿಸುವುದನ್ನು ನೋಡುತ್ತ ಇರುತ್ತೇನೆ. ಪುಟ್ಟ ಆರಾಧ್ಯಗೆ ನಾವು ಯಾವುದೇ ಪ್ರೆಶರ್ ಹಾಕೋದಿಲ್ಲ. ತನ್ನ ತಂದೆಯ ಕುರಿತು ಗೌರವ ನೀಡಬೇಕು ಎಂದು ಆಕೆಯ ಅಮ್ಮ ಕಲಿಸ್ತಾಳೆ. ಆಕೆಗೆ ಕುಟುಂಬದ ಹೆಸರನ್ನು ಹೇಳಲು ಕಲಿಸ್ತಿವಿ" ಎಂದು ಅಭಿಷೇಕ್ ಬಚ್ಚನ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಈ ಕುರಿತು ಈಗಾಗಲೇ ಹಿಂದೂಸ್ತಾನ್ ಟೈಮ್ಸ್ ಕನ್ನಡ ವರದಿ ಮಾಡಿದ್ದು, ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಓದಬಹುದು.
ವಿಭಾಗ