ಕನ್ನಡ ಸುದ್ದಿ  /  ಮನರಂಜನೆ  /  ಈದ್‌ ಹಬ್ಬದಂದು ಸಲ್ಮಾನ್‌ ಖಾನ್‌ ಅಭಿಮಾನಿಗಳಿಗೆ ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್‌ ಮುಂದೆ ಪೊಲೀಸರಿಂದ ಲಾಠಿಚಾರ್ಜ್‌, ವಿಡಿಯೋ ನೋಡಿ

ಈದ್‌ ಹಬ್ಬದಂದು ಸಲ್ಮಾನ್‌ ಖಾನ್‌ ಅಭಿಮಾನಿಗಳಿಗೆ ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್‌ ಮುಂದೆ ಪೊಲೀಸರಿಂದ ಲಾಠಿಚಾರ್ಜ್‌, ವಿಡಿಯೋ ನೋಡಿ

ಸಲ್ಮಾನ್‌ ಖಾನ್‌ ಅಭಿಮಾನಿಗಳು ಇಂದು ತಮ್ಮ ನೆಚ್ಚಿನ ಮುಂಬೈ ಮನೆ ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್‌ ಹೊರಗೆ ಜಮಾಯಿಸಿದ್ದರು. ಈದ್‌ ಹಬ್ಬದ ಶುಭಾಶಯ ಹೇಳಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಪೊಲೀಸರು ಲಾಠಿ ಚಾರ್ಜ್‌ ಮಾಡಿ ಸಲ್ಲು ಅಭಿಮಾನಿಗಳನ್ನು ಚದುರಿಸಿದರು.

ಈದ್‌ ಹಬ್ಬದಂದು ಸಲ್ಮಾನ್‌ ಖಾನ್‌ ಅಭಿಮಾನಿಗಳಿಗೆ ಪೊಲೀಸರಿಂದ ಲಾಠಿಚಾರ್ಜ್‌
ಈದ್‌ ಹಬ್ಬದಂದು ಸಲ್ಮಾನ್‌ ಖಾನ್‌ ಅಭಿಮಾನಿಗಳಿಗೆ ಪೊಲೀಸರಿಂದ ಲಾಠಿಚಾರ್ಜ್‌

ಈದ್‌ ಹಬ್ಬದ ಸಂಭ್ರಮದ ಸಮಯದಲ್ಲಿ ಸಿನಿಮಾ ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಮನೆ ಮುಂದೆ ಜಮಾಯಿಸುತ್ತಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಶಾರೂಖ್‌ ಖಾನ್‌, ಸಲ್ಮಾನ್‌ ಖಾನ್‌ ಮನೆಯಲ್ಲಿ ಇಂದು ಬೆಳಗ್ಗಿನಿಂದಲೇ ಅಭಿಮಾನಿಗಳ ದಟ್ಟಣೆ ಇತ್ತು. ಈ ರೀತಿ ಅಭಿಮಾನಿಗಳು ಜಮಾಯಿಸಿದ್ದರಿಂದ ಅಲ್ಲಿನ ಟ್ರಾಫಿಕ್‌ಗೆ ತೊಂದರೆಯೂ ಉಂಟಾಗಿದೆ. ಸಲ್ಮಾನ್‌ ಖಾನ್‌ ಅವರ ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್‌ ಹೊರಗೆ ಜನರ ದಟ್ಟಣೆ ಹೆಚ್ಚಾದ ಕಾರಣ ಪೊಲೀಸರು ಲಘು ಲಾಠಿ ಚಾರ್ಜ್‌ ಮಾಡಿ ಅಭಿಮಾನಿಗಳನ್ನು ಚದುರಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬಾಂದ್ರಾದಲ್ಲಿ ಬೀಡುಬಿಟ್ಟ ಅಭಿಮಾನಿಗಳು

ಈ ರೀತಿ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿದರೂ ಶಾರೂಖ್‌ ಖಾನ್‌ ಆಗಲಿ, ಸಲ್ಮಾನ್‌ ಖಾನ್‌ ಆಗಲಿ ತಮ್ಮ ಬಾಲ್ಕನಿಯಿಂದ ಇಲ್ಲಿಯವರೆಗೆ ಹೊರಗೆ ಬಂದಿಲ್ಲ. ತನ್ನ ಅಭಿಮಾನಿಗಳಿಗೆ ಈದ್‌ ಹಬ್ಬದ ಶುಭಾಶಯ ತಿಳಿಸಿಲ್ಲ. ಹೀಗಿದ್ದರೂ ಅಭಿಮಾನಿಗಳು ರಸ್ತೆಯಲ್ಲಿ ದಟ್ಟಣೆ ಹೆಚ್ಚಿಸುತ್ತಿದ್ದಾರೆ. ಸಲ್ಮಾನ್‌ ಖಾನ್‌ ಅವರ ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್‌ ಹೊರಗಡೆ ಪೊಲೀಸರು ಲಾಠಿಚಾರ್ಜ್‌ ಆರಂಭಿಸಿದ್ದು, ಈ ರೀತಿ ಬರುವ ಅಭಿಮಾನಿಗಳನ್ನು ಓಡಿಸುತ್ತಿದ್ದಾರೆ. ಬಾಂದ್ರಾದ ಒಂದು ವಿಡಿಯೋದಲ್ಲಿ ಪೊಲೀಸರು ಈ ರೀತಿ ಹೊಡೆಯುವ ದೃಶ್ಯವಿದೆ. ಈ ರೀತಿ ಲಾಠಿ ಚಾರ್ಜ್‌ ಮಾಡುವಾಗ ಅಲ್ಲಿ ಮಹಿಳಾ ಅಭಿಮಾನಿಗಳೂ ಇದ್ದರು. ರಸ್ತೆಯಲ್ಲಿ ಜಮಾಯಿಸಿದ ಈ ಅಭಿಮಾನಿಗಳನ್ನು ಅಲ್ಲಿಂದ ಕಳುಹಿಸಿದ ಬಳಿಕ ರಸ್ತೆಯಲ್ಲಿ ಕಾರುಗಳು, ರಿಕ್ಷಾಗಳು ಪ್ರಯಾಣ ಮುಂದುವರೆಸಿದವು.

ಸಲ್ಮಾನ್‌ ಖಾನ್‌ ಈದ್‌ ಆಚರಣೆ

ಪ್ರತಿವರ್ಷ ಸಲ್ಮಾನ್‌ ಖಾನ್‌ ಮತ್ತು ಶಾರೂಖ್‌ ಖಾನ್‌ ತಮ್ಮ ಹುಟ್ಟುಹಬ್ಬದ ದಿನಗಳಂದು ಮತ್ತು ಈದ್‌ ಹಬ್ಬದಂದು ತಮ್ಮ ಅಭಿಮಾನಿಗಳಿಗೆ ಬಾಲ್ಕನಿಯಲ್ಲಿ ನಿಂತು ಹಾಯ್‌ ಹೇಳುತ್ತಾರೆ. ಇಂದು ಸಲ್ಮಾನ್‌ ಖಾನ್‌ ಅವರು ತಮ್ಮ ಮುಂದಿನ ಸಿನಿಮಾ ಸಿಖಂದರ್‌ನ ಟೈಟಲ್‌ ಘೋಷಣೆ ಮಾಡಿದ್ದಾರೆ. ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಹೀಗೆ ಬರೆದಿದ್ದಾರೆ. "ಈ ಈದ್‌ ಹಬ್ಬದ ಸಮಯದಲ್ಲಿ ಬಡೆ ಮಿಯಾನ್‌ ಚಷೋಟೆ ಮಿಯಾನ್‌ ಮತ್ತು ಮೈದಾನ್‌ ನೋಡಿ, ಮುಂದಿನ ಈದ್‌ ಹಬ್ಬಕ್ಕೆ ಸಿಖಂದರ್‌ನನ್ನು ಭೇಟಿಯಾಗಿ" ಎಂದು ಬರೆದಿದ್ದಾರೆ.

ಸಾಜಿದ್ ನಾಡಿಯಾಡ್‌ವಾಲಾ ಅವರ ಬೆಂಬಲ ಮತ್ತು ಮುರುಗದಾಸ್ ಅವರ ನಿರ್ದೇಶನದಲ್ಲಿ ಸಿಕಂದರ್‌ ಸಿನಿಮಾವು ಮುಂದಿನ ವರ್ಷ ಈದ್‌ ಹಬ್ಬದ ಸಮಯದಲ್ಲಿ ರಿಲೀಸ್‌ ಆಗಲಿದೆ. ಎಆರ್ ಮುರುಗದಾಸ್ ಗಜನಿ ಸಿನಿಮಾದ ಮೂಲಕ ಬಾಲಿವುಡ್‌ಗೆ ಎಂಟ್ರಿ ನೀಡಿದ್ದರು. ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 100 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿತ್ತು. ಇವರು ಅಕ್ಷಯ್ ಕುಮಾರ್ ಅವರ ಹಾಲಿಡೇ: ಎ ಸೋಲ್ಜರ್ ಈಸ್ ನೆವರ್ ಆಫ್ ಡ್ಯೂಟಿ ಚಿತ್ರಕ್ಕೂ ಆಕ್ಷನ್‌ ಕಟ್‌ ಹೇಳಿದ್ದಾರೆ.

ಹಲವು ವರ್ಷಗಳಿಂದ ಸಲ್ಮಾನ್‌ ಖಾನ್‌ ಅವರು ಈದ್‌ ಹಬ್ಬದಂದು ತನ್ನ ಸಿನಿಮಾಗಳನ್ನು ಘೋಷಣೆ ಮಾಡುತ್ತಾರೆ. 1997ರ ಈದ್‌ ಹಬ್ಬದಂದು ಜುದ್ವಾ ಸಿನಿಮಾ ಘೋಷಣೆ ಮಾಡಿದ್ದರು. ದಬಾಂಗ್‌, ಬಾಡಿಗಾರ್ಡ್‌, ಏಕ್‌ತಾ ಟೈಗರ್‌, ಭಜರಂಗಿ ಭಾಯ್‌ಜಾನ್‌, ಸುಲ್ತಾನ್‌, ಭಾರತ್‌, ಕಿಸಿ ಕ ಭಾಯ್‌ ಕಿಸಿ ಕಾ ಜಾನ್‌ ಚಿತ್ರಗಳು ಈದ್‌ ಹಬ್ಬದಂದೇ ಬಿಡುಗಡೆಯಾಗಿವೆ.

IPL_Entry_Point