ಕನ್ನಡ ಸುದ್ದಿ  /  Entertainment  /  Bollywood News Crew Movie Bumper Box Office Opening Comparison To Other Big Female Led Films Kareena, Tabu Kriti Pcp

Crew: ಮೊದಲ ದಿನವೇ ಬಂಗಾರದ ಬೆಳೆ ತೆಗೆದ ಕ್ರ್ಯೂ ಸಿನಿಮಾ; ಇಂತಹ ಸಾಧನೆ ಮಾಡಿದ ಮಹಿಳಾ ಪ್ರಧಾನ ಸಿನಿಮಾಗಳ ಲಿಸ್ಟ್‌ ಇಲ್ಲಿದೆ ನೋಡಿ

Crew box office: ಕರೀನಾ ಕಪೂರ್‌, ತಬು, ಕೃತಿ ಸನನ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಮಹಿಳಾ ಪ್ರಧಾನ ಕ್ರ್ಯೂ ಸಿನಿಮಾ ಮೊದಲ ದಿನವೇ ಬಾಕ್ಸ್‌ ಆಫೀಸ್‌ನಲ್ಲಿ ಬಂಪರ್‌ ಬೆಳೆ ತೆಗೆದಿದೆ. ಇದೇ ರೀತಿಯ ಇನ್ನಿತರ ಮಹಿಳಾ ಪ್ರಧಾನ ಸಿನಿಮಾಗಳ ಜತೆ ಕ್ರ್ಯೂ ಸಿನಿಮಾವನ್ನು ಹೋಲಿಕೆ ಮಾಡೋಣ.

Crew Movie: ಮೊದಲ ದಿನವೇ ಬಾಕ್ಸ್‌ ಆಫೀಸ್‌ನಲ್ಲಿ ಬಂಗಾರದ ಬೆಳೆ ತೆಗೆದ ಕ್ರ್ಯೂ
Crew Movie: ಮೊದಲ ದಿನವೇ ಬಾಕ್ಸ್‌ ಆಫೀಸ್‌ನಲ್ಲಿ ಬಂಗಾರದ ಬೆಳೆ ತೆಗೆದ ಕ್ರ್ಯೂ

ಬೆಂಗಳೂರು: ಬಾಲಿವುಡ್‌ನಲ್ಲಿ ಕ್ರ್ಯೂ (Crew) ಎಂಬ ಸಿನಿಮಾ ಸುದ್ದಿಯಲ್ಲಿದೆ. ಕರೀನಾ ಕಪೂರ್‌, ತಬು, ಕೃತಿ ಸನನ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕ್ರ್ಯೂ ಸಿನಿಮಾವು ಮೊದಲ ದಿನವೇ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಆರಂಭ ಪಡೆದಿದೆ. ಸಚ್‌ನಿಲ್ಕ್‌.ಕಾಂ ಆರಂಭಿಕ ಅಂದಾಜು ಪ್ರಕಾರ ಮೊದಲ ದಿನ ಕ್ರ್ಯೂ ಸಿನಿಮಾ 9.25 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದೇ ರೀತಿ ಕೊರೊನಾ ಸಾಂಕ್ರಮಿಕದ ನಂತರ ಬಂದ ಕೆಲವು ಮಹಿಳಾ ಪ್ರಧಾನ ಸಿನಿಮಾಗಳ ಮೊದಲ ದಿನದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಜತೆ ಕ್ರ್ಯೂ ಸಿನಿಮಾವನ್ನು ಹೋಲಿಕೆ ಮಾಡಿ ನೋಡೋಣ.

ಗಂಗುಬಾಯಿ ಕಾಥಿವಾಡಿ

ಗಂಗುಬಾಯಿ ಕಾಥಿಯವಾಡಿ ಸಿನಿಮಾದಲ್ಲಿ ಆಲಿಯಾ ಭಟ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಫೆಬ್ರವರಿ 25, 2022 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಈ ಚಿತ್ರವು ತನ್ನ ಮೊದಲ ದಿನದಲ್ಲಿ ಸುಮಾರು 10.50 ಕೋಟಿ ರೂಪಾಯಿ ನಿವ್ವಳ ಗಳಿಕೆ ಮಾಡಿತ್ತು. ಭಾರತದ ಬಾಕ್ಸ್ ಆಫೀಸ್‌ನಲ್ಲಿ ಒಟ್ಟಾರೆ 150 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಕೊರೊನಾ ಸಾಂಕ್ರಾಮಿಕ ರೋಗದ ನಂತರ ಬಿಡುಗಡೆಯಾಗಿ ಯಶಸ್ಸು ಪಡೆದ ಪ್ರಮುಖ ನಾಯಕಿ ಪ್ರಧಾನ ಸಿನಿಮಾವಾಗಿದೆ.

ಕ್ರ್ಯೂ

ಕರೀನಾ ಕಪೂರ್‌, ತಬು, ಕೃತಿ ಸನನ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಕಾಮಿಡಿ ಸಿನಿಮಾವು ಈ ಪಟ್ಟಿಯಲ್ಲಿ ಅಗ್ರ ಎರಡನೇ ಸ್ಥಾನ ಪಡೆದಿದೆ. ಮೊದಲ ದಿನ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 9.25 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಿಮಾನಯಾನ ಉದ್ಯಮವು ಕಷ್ಟದಲ್ಲಿರುವ ಸಂದರ್ಭದಲ್ಲಿ ಮೂವರು ವೈಮಾನಿಕ ಕ್ರ್ಯೂ ಸಿಬ್ಬಂದಿಗಳ ಬದುಕಿನ ಕಥೆಯನ್ನು ಈ ಸಿನಿಮಾ ಹೊಂದಿದೆ.

ಕೇರಳ ಸ್ಟೋರಿ

ಸುದಿಪ್ತೊ ಸೇನ್‌ ನಿರ್ದೇಶನದ ಈ ಸಿನಿಮಾದಲ್ಲಿ ಆದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ದೇಶದ ಬಾಕ್ಸ್‌ ಆಫೀಸ್‌ನಲ್ಲಿ ಈ ಸಿನಿಮಾ ಮೊದಲ ದಿನ 8 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈ ಸಿನಿಮಾದಲ್ಲಿ ಯೋಗಿತಾ ಬಿಹಾನಿ, ಸಿದ್ಧಿ ಇದ್ನಾನಿ, ಸೋನಿಯಾ ಬಲಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಆರ್ಟಿಕಲ್‌ 370

ಈ ವರ್ಷ ಫೆಬ್ರವರಿ 23ರಂದು ಬಿಡುಗಡೆಯಾದ ಆರ್ಟಿಕಲ್‌ 370 ಸಿನಿಮಾದಲ್ಲಿ ಯಾಮಿ ಗೌತಮ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಮೊದಲ ದಿನ 5.9 ಕೋಟಿ ರೂಪಾಯಿ ಗಳಿಸಿತ್ತು. ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದನೆ ಹೆಚ್ಚಿದ್ದ ಸಂದರ್ಭದಲ್ಲಿ ಕೇಂದ್ರ ಸರಕಾರವು ಆರ್ಟಿಕಲ್‌ 370 ತೆಗೆದುಹಾಕಿದ ಸಂದರ್ಭದ ಕಥೆಯನ್ನೂ ಈ ಸಿನಿಮಾ ಒಳಗೊಂಡಿದೆ.

ಫೋನ್‌ ಬೂತ್‌

ಕತ್ರಿನಾ ಕೈಫ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಫೋನ್‌ ಬೂತ್‌ ಸಿನಿಮಾವು ನವೆಂಬರ್‌ 4, 2022ರಲ್ಲಿ ಬಿಡುಗಡೆಯಾಗಿತ್ತು. ಈ ಹಾರರ್‌ ಕಾಮಿಡಿ ಸಿನಿಮಾದಲ್ಲಿ ಇಶಾನ್‌ ಖಟ್ಟಾರ್‌, ಸಿದ್ಧಾಂತ್‌ ಚತುರ್ವೇದಿ ನಟಿಸಿದ್ದಾರೆ. ಈ ಸಿನಿಮಾ ಮೊದಲ ದಿನ 2.05 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.

ಹೀಗೆ ಬಾಲಿವುಡ್‌ನ ಹಲವು ಮಹಿಳಾ ಪ್ರಧಾನ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆಯ ಗಳಿಕೆ ಮಾಡಿವೆ. ಸಾಕಷ್ಟು ಮಹಿಳಾ ಪ್ರಧಾನ ಸಿನಿಮಾಗಳು ನಿರೀಕ್ಷಿತ ಗಳಿಕೆ ಮಾಡದೆ ಇರುವ ಸಂದರ್ಭದಲ್ಲಿ ಇಂತಹ ಯಶಸ್ಸು ಇತರೆ ಸಿನಿಮಾ ನಾಯಕಿಯರಿಗೆ ಸ್ಪೂರ್ತಿದಾಯಕವಾಗಿರುತ್ತದೆ. ಇದೀಗ ಕ್ರ್ಯೂ ಸಿನಿಮಾ ಮೊದಲ ದಿನವೇ ಅತ್ಯುತ್ತಮವಾಗಿ ಗಳಿಕೆ ಮಾಡಿದೆ. ಈ ವಾರಾಂತ್ಯದಲ್ಲಿ ಮತ್ತು ಮುಂದಿನ ದಿನಗಳಲ್ಲಿ ಕ್ರ್ಯೂ ಬಾಕ್ಸ್‌ ಆಫೀಸ್‌ ಗಳಿಕೆ ಅತ್ಯುತ್ತಮವಾಗಿ ಮುಂದುವರೆಯುವ ನಿರೀಕ್ಷೆಯಿದೆ.

IPL_Entry_Point