ಕನ್ನಡ ಸುದ್ದಿ  /  ಮನರಂಜನೆ  /  Crew Movie Ott: ಕ್ರ್ಯೂ ಒಟಿಟಿಗೆ ಆಗಮನ; ಮನೆಯಲ್ಲೇ ನೋಡಿ ಟಬು, ಕರೀನಾ ಕಪೂರ್‌, ಕೃತಿ ಸನನ್‌ ನಟನೆಯ ಸಿನಿಮಾ

Crew Movie OTT: ಕ್ರ್ಯೂ ಒಟಿಟಿಗೆ ಆಗಮನ; ಮನೆಯಲ್ಲೇ ನೋಡಿ ಟಬು, ಕರೀನಾ ಕಪೂರ್‌, ಕೃತಿ ಸನನ್‌ ನಟನೆಯ ಸಿನಿಮಾ

Crew Movie OTT: ಮೇ 24ರಂದು ಕ್ರ್ಯೂ ಸಿನಿಮಾ ಒಟಿಟಿಗೆ ಆಗಮಿಸುತ್ತಿದೆ. ಟಬು, ಕರೀನಾ ಕಪೂರ್, ಕೃತಿ ಸನೋನ್ ನಟನೆಯ ಈ ಬಾಲಿವುಡ್ ಸಿನಿಮಾ ನಾಳೆಯಿಂದ (ಮೇ 24) ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

Crew Movie OTT: ಕ್ರ್ಯೂ ಒಟಿಟಿಗೆ ಆಗಮನ
Crew Movie OTT: ಕ್ರ್ಯೂ ಒಟಿಟಿಗೆ ಆಗಮನ

ಬೆಂಗಳೂರು: ಟಬು, ಕರೀನಾ ಕಪೂರ್, ಕೃತಿ ಸನೋನ್ ನಟನೆಯ ಕ್ರ್ಯೂ ಸಿನಿಮಾ ಕೊನೆಗೂ ಒಟಿಟಿಯತ್ತ ಮುಖ ಮಾಡಿದೆ. ಕ್ರ್ಯೂ ಸಿನಿಮಾ ಇಂದು ಮಧ್ಯರಾತ್ರಿ ಅಂದರೆ ಮೇ 24ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಬಾಲಿವುಡ್‌ ಕಾಮಿಟಿ ಸಿನಿಮಾವನ್ನು ನಾಳೆಯಿಂದ ಮನೆಯಿಂದಲೇ ನೋಡಬಹುದು. ಕ್ರ್ಯೂ ಸಿನಿಮಾವು ಈಗಾಗಲೇ ಗಲ್ಲಾಪೆಟ್ಟಿಗೆಯಲ್ಲಿ ಸಾಕಷ್ಟು ಹಣ ಬಾಚಿಕೊಂಡಿದೆ. ಇದೀಗ ಒಟಿಟಿ ಮೂಲಕ 190 ದೇಶಗಳಲ್ಲಿ ವೀಕ್ಷಣೆಗೆ ಲಭ್ಯವಿರಲಿದೆ.

ಟ್ರೆಂಡಿಂಗ್​ ಸುದ್ದಿ

ಕ್ರ್ಯೂ ಸಿನಿಮಾವನ್ನು ರಾಜೇಶ್ ಎ ಕೃಷ್ಣನ್ ನಿರ್ದೇಶಿಸಿದ್ದಾರೆ. ಬಾಲಾಜಿ ಮೋಷನ್ ಪಿಕ್ಚರ್ಸ್ ಮತ್ತು ಅನಿಲ್ ಕಪೂರ್ ಫಿಲ್ಮ್ಸ್ & ಕಮ್ಯುನಿಕೇಷನ್ ನೆಟ್ವರ್ಕ್ ನಿರ್ಮಿಸಿದೆ. ಈಗಾಗಲೇ ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ಸು ಕಂಡ ಈ ಸಿನಿಮಾ ಒಟಿಟಿಯಲ್ಲೂ ಜನಪ್ರಿಯತೆಗಳಿಸುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ.

"ಥಿಯೇಟರ್‌ಗಳಲ್ಲಿ ಯಶಸ್ವಿ ಪ್ರದರ್ಶನಗೊಂಡ ಬಳಿಕ ನೆಟ್‌ಫ್ಲಿಕ್ಸ್‌ನಲ್ಲಿ ಕ್ರ್ಯೂ ಸಿನಿಮಾವನ್ನು ತೋರಿಸಲು ನಾವು ರೋಮಾಂಚನಗೊಂಡಿದ್ದೇವೆ. ಈ ಚಿತ್ರವು ಸ್ನೇಹ, ಮೋಸ ವಿಷಯಗಳನ್ನು ಒಳಗೊಂಡಿದೆ. ಒಂದು ಟನ್‌ನಷ್ಟು ಕಾಮಿಡಿ ಇದರಲ್ಲಿದೆ" ಎಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿರುವ ಕ್ರ್ಯೂ ಸಿನಿಮಾದ ಕುರಿತು ರಿಯಾ ಕಪೂರ್‌ ಮತ್ತು ಏಕ್ತಾ ಆರ್‌ ಕಪೂರ್‌ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಜಗತ್ತಿನಾದ್ಯಂತ ಇರುವ ಪ್ರೇಕ್ಷಕರು ನೆಟ್‌ಫ್ಲಿಕ್ಸ್‌ನಲ್ಲಿ ಈ ಸಸ್ಪೆನ್ಸ್‌, ಮೋಜು, ಡ್ರಾಮವನ್ನು ಅನುಭವಿಸಲು ನಾವಿನ್ನು ಹೆಚ್ಚು ಕಾಯಿಸುವುದಿಲ್ಲ. ಇದು ನಿಮ್ಮನ್ನು ಸೀಟಿನಂಚಿಗೆ ತಂದು ಕೂರಿಸುವ ಸಿನಿಮಾವಾಗಿದೆ" ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಕೃತಿ ಸನನ್‌ ಅವರು ಕ್ರ್ಯೂ ಚಿತ್ರದ ಬಗ್ಗೆ ಮಾತನಾಡಿದ್ದರು."ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಲು ಚಲನಚಿತ್ರವನ್ನು ಒಬ್ಬ ವ್ಯಕ್ತಿ ಮುನ್ನಡೆಸಬೇಕಾಗಿಲ್ಲ. ಬಹುಕಾಲದಿಂದ ಪುರುಷ ಕೇಂದ್ರೀತ ಚಲನಚಿತ್ರಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಮಹಿಳಾ ಆಧರಿತ ಚಲನಚಿತ್ರಗಳನ್ನು ಮಾಡುವ ಅಪಾಯವನ್ನು ಬಹುತೇಕರು ತೆಗೆದುಕೊಂಡಿಲ್ಲ. ಮಹಿಳಾ ಕೇಂದ್ರೀತ ಚಿತ್ರಗಳನ್ನು ನೋಡಲು ಪ್ರೇಕ್ಷಕರು ಥಿಯೇಟರ್‌ಗೆ ಬರೋದಿಲ್ಲ, ಹಾಕಿರುವ ಹಣ ವಾಪಸ್‌ ಬರೋದಿಲ್ಲ ಎಂದೆಲ್ಲ ಭಾವಿಸುತ್ತಾರೆ. ಆದರೆ, ಈಗ ಒಂದು ರೀತಿಯ ಬದಲಾವಣೆ ಆರಂಭವಾಗಿದೆ. ಮಹಿಳಾ ನೇತೃತ್ವದ ಚಲನಚಿತ್ರಗಳಿಗೂ ಬೆಂಬಲ ನೀಡುತ್ತಾರೆ. ಇದಕ್ಕೆ ಕ್ರ್ಯೂ ಸಿನಿಮಾವೇ ಉದಾಹರಣೆ" ಎಂದು ಕೃತಿ ಸನನ್‌ ಅಭಿಪ್ರಾಯಪಟ್ಟಿದ್ದಾರೆ.

ಕ್ರೂ ಸಿನಿಮಾದ ಬಗ್ಗೆ

ನಗು-ಸಾಹಸ ಇರುವ ಈ ಚಿತ್ರವು ವಿಮಾನಯಾನ ಉದ್ಯಮದ ಆರ್ಥಿಕತೆಯ ಕುರಿತೂ ಮಾತನಾಡಿದೆ. ಇದು ಮೂವರು ಮಹಿಳೆಯರ ಕಥೆಯನ್ನು ಹೊಂದಿದೆ. ಅವರು ಸುಳ್ಳುಗಳ ಜಾಲದಲ್ಲಿ ಸಿಲುಕುತ್ತಾರೆ. ವಿಮಾನದಲ್ಲಿರುವ ಕಡಲೆಕಾಯಿ ಬಾಕ್ಸ್‌ಗಳನ್ನು ಕದಿಯುವುದರಿಂದ ಹಿಡಿದು ಉದ್ಯಮಿಯನ್ನು ದರೋಡೆ ಮಾಡಲು ಯೋಜಿಸುವವರೆಗೆ ಈ ಸಿನಿಮಾವು ಹಲವು ಸಾಹಸಮಯ, ಹಾಸ್ಯಮಯ ಅಂಶಗಳನ್ನು ಹೊಂದಿದೆ. ಮಾರ್ಚ್‌ 29ರಂದು ಬಿಡುಗಡೆಯಾದ ಕ್ರ್ಯೂ ಸಿನಿಮಾವು ಒಂಬತ್ತು ದಿನಗಳಲ್ಲಿ ಜಗತ್ತಿನಾದ್ಯಂತ 100 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿತ್ತು. ಈ ಸಿನಿಮಾದಲ್ಲಿ ದಿಲ್ಜಿತ್ ದೋಸಾಂಜ್, ಕಪಿಲ್ ಶರ್ಮಾ ಕೂಡ ನಟಿಸಿದ್ದಾರೆ. ಸಾಸ್ವತ ಚಟರ್ಜಿ, ರಾಜೇಶ್ ಶರ್ಮಾ ಮತ್ತು ಕುಲಭೂಷಣ್ ಖರ್ಬಂದಾ ಮುಂತಾದವರು ನಟಿಸಿದ್ದಾರೆ.

ಟಿ20 ವರ್ಲ್ಡ್‌ಕಪ್ 2024