Deepika Padukone Pregnancy: ಪ್ರೆಗ್ನೆನ್ಸಿ ಫೋಟೋಶೂಟ್‌ಗೆ ಹೊಸ ಭಾಷ್ಯ ಬರೆದ ದೀಪಿಕಾ ಪಡುಕೋಣೆ; ಬೇಬಿ ಬಂಪ್ಸ್‌ ಫೋಟೋಗಳು ವೈರಲ್‌-bollywood news deepika padukone pregnancy photoshoot deepika ranveer singh share glimpses from pregnancy baby bump pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Deepika Padukone Pregnancy: ಪ್ರೆಗ್ನೆನ್ಸಿ ಫೋಟೋಶೂಟ್‌ಗೆ ಹೊಸ ಭಾಷ್ಯ ಬರೆದ ದೀಪಿಕಾ ಪಡುಕೋಣೆ; ಬೇಬಿ ಬಂಪ್ಸ್‌ ಫೋಟೋಗಳು ವೈರಲ್‌

Deepika Padukone Pregnancy: ಪ್ರೆಗ್ನೆನ್ಸಿ ಫೋಟೋಶೂಟ್‌ಗೆ ಹೊಸ ಭಾಷ್ಯ ಬರೆದ ದೀಪಿಕಾ ಪಡುಕೋಣೆ; ಬೇಬಿ ಬಂಪ್ಸ್‌ ಫೋಟೋಗಳು ವೈರಲ್‌

Deepika Padukone Pregnancy Photoshoot: ನಟಿ ದೀಪಿಕಾ ಪಡುಕೋಣೆ ಸುಂದರವಾದ ಬೇಬಿ ಬಂಪ್ಸ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್‌ ಆಗಿವೆ. ತನ್ನ ಬೇಬಿ ಬಂಪ್‌ ಹೊಟ್ಟೆ ಕಾಣಿಸುವಂತೆ ಪೋಸ್‌ ನೀಡಿದ್ದಾರೆ.

ದೀಪಿಕಾ ಪಡುಕೋಣೆ ಪ್ರೆಗ್ನೆನ್ಸಿ ಬೇಬಿಬಂಪ್‌ ಫೋಟೋಶೂಟ್‌ ವೈರಲ್‌
ದೀಪಿಕಾ ಪಡುಕೋಣೆ ಪ್ರೆಗ್ನೆನ್ಸಿ ಬೇಬಿಬಂಪ್‌ ಫೋಟೋಶೂಟ್‌ ವೈರಲ್‌

Deepika Padukone Pregnancy Photoshoot: ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮುಂದಿನ ತಿಂಗಳು ಇವರು ಮಗುವನ್ನು ಸ್ವಾಗತಿಸಲು ರೆಡಿಯಾಗಿದ್ದಾರೆ. ಮೊದಲ ಮಗುವಿನ ಆಗಮನಕ್ಕೆ ಮುನ್ನ ದೀಪಿಕಾ ಪಡುಕೋಣೆ  ಪ್ರೆಗ್ನೆನ್ಸಿ ಫೋಟೋಶೂಟ್‌ ಮಾಡಿಸಿಕೊಂಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಅಮ್ಮನಾಗುವ ಖುಷಿಯಲ್ಲಿ ತನ್ನ ಸುಂದರ ಬೇಬಿ ಬಂಪ್‌ ಅನ್ನು ತೋರಿಸಿದ್ದಾರೆ. ಇನ್ನು ಕೆಲವು ಫೋಟೋಗಳಲ್ಲಿ ದೀಪಿಕಾ ಮತ್ತು ರಣವೀರ್‌ ಸಿಂಗ್‌ ಆಪ್ತ ಕ್ಷಣಗಳಲ್ಲಿ ಇರುವಂತೆ ಕಾಣಿಸಿದ್ದಾರೆ. ಒಟ್ಟಾರೆ ಇಬ್ಬರ ಮುಖದಲ್ಲಿ ನಗು, ಖುಷಿ ತುಂಬಿ ತುಳುಕುತ್ತಿದೆ. ಈ ಫೋಟೋಗಳು ನೆಟ್ಟಿಗರನ್ನು ಪುಳಕಗೊಳಿಸಿವೆ.

ಒಂದು ಫೋಟೋದಲ್ಲಿ ದೀಪಿಕಾ ಪಡುಕೋಣೆ ಹಲವು ಉಡುಗೆಗಳನ್ನು ಹಿಡಿದುಕೊಂಡಿದ್ದಾರೆ. ಜನಿಸಲಿರುವ ಮಗುವಿಗೆ ಡ್ರೆಸ್‌ ಹಿಡಿದು ಕಾಯುವಂತೆ ಇವೆ ಈ ಫೋಟೋಗಳು. ಇನ್ನೊಂದರಲ್ಲಿ ಮಾಮ್‌ ಜೀನ್ಸ್‌ ಮತ್ತು ಲಾಸಿ ಬ್ರಾ ಹಾಕಿಕೊಂಡಿದ್ದಾರೆ. ಲೇಡಿ ಬಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಉಡುಗೆಯಲ್ಲಿ ಸುಂದರವಾಗಿ ಕಾಣಿಸಿದ್ದಾರೆ.

ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ತಮ್ಮ ಪ್ರೆಗ್ನೆನ್ಸಿ ಸುದ್ದಿಯನ್ನು ಫೆಬ್ರವರಿ 29ರಂದು ಹಂಚಿಕೊಂಡಿದ್ದರು. ಈ ಲೆಕ್ಕದಲ್ಲಿ ಅಕ್ಟೋಬರ್ ತಿಂಗಳಲ್ಲಿ ಇವರಿಗೆ ಮಗು ಜನಿಸುವ ನಿರೀಕ್ಷೆಯಿದೆ. ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಪ್ರಿವೆಡ್ಡಿಂಗ್‌ ಬಾಷ್‌ ಕಾರ್ಯಕ್ರಮಕ್ಕೆ ಮುಂಚೆ ಈ ಸುದ್ದಿ ಹಂಚಿಕೊಂಡಿದ್ದರು. ಆ ಸಮಯದಲ್ಲಿ ಮಗುವಿನ ಆಕ್ಸೆಸರಿಗಳೊಂದಿಗೆ ಹಲವು ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದರು.

2018ರಲ್ಲಿ ನಟ ರಣವೀರ್ ಸಿಂಗ್ ಮತ್ತು ನಟಿ ದೀಪಿಕಾ ಪಡುಕೋಣೆ ಶುಭವಿವಾಹವಾದರು. ಇವರಿಬ್ಬರಿಗೆ 2013 ರ ಗೋಲಿಯೋನ್ ಕಿ ರಾಸ್ಲೀಲಾ ರಾಮ್-ಲೀಲಾ ಚಿತ್ರದ ಶೂಟಿಂಗ್‌ ಸೆಟ್‌ನಲ್ಲಿ ಲವ್‌ ಆಗಿತ್ತು. ದೀಪಿಕಾ ಮತ್ತು ರಣವೀರ್ 2013ರಲ್ಲಿ ರಾಮ್ ಲೀಲಾ ಪ್ರಾಜೆಕ್ಟ್‌ನಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಆ ಸಂದರ್ಭದಲ್ಲಿ ಅವರು ಲವ್‌ ಪ್ರಪೋಸ್‌ ಮಾಡಿದ್ದರು. ಸುಮಾರು ಐದು ವರ್ಷ ಡೇಟಿಂಗ್‌ ಮಾಡಿದರು. ಗೋಲಿಯೊನ್‌ ಕಿ ರಾಸ್‌ಲೀಲಾ ರಾಮ್‌ಲೀಲಾ ಸಿನಿಮಾದ ಬಳಿಕ ಬಾಜಿರಾವ್ ಮಸ್ತಾನಿ, 83 ಮತ್ತು ಫಾತ್ಮಾವತ್ ಚಿತ್ರಗಳಲ್ಲಿ ಜತೆಯಾಗಿ ನಟಿಸಿದರು. ಪರದೆಯಲ್ಲಿ ಪ್ರೇಮಿಗಳಾಗಿದ್ದ ಇವರು ಹೊರಗೂ ಪ್ರೇಮಿಗಳಾದರು. ಇವರ ಲವ್‌ ಸ್ಟೋರಿ ಕುರಿತು ವದಂತಿಗಳು ಶುರುವಾದವು. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ ಓದಿ.

ಇದೀಗ ಇವರು ಹಂಚಿಕೊಂಡಿರುವ ಬೇಬಿ ಬಂಪ್‌ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ತನ್ನ ಬೇಬಿ ಬಂಪ್‌ ಹೊಟ್ಟೆಯನ್ನು ಜಗತ್ತಿಗೆ ತೋರಿಸಿ ಸಂಭ್ರಮಿಸಿದ್ದಾರೆ ಕರ್ನಾಟಕದ ಕರಾವಳಿ ಮೂಲದ ನಟಿ ದೀಪಿಕಾ.