ಕನ್ನಡ ಸುದ್ದಿ  /  ಮನರಂಜನೆ  /  Deepika Padukone: ಬೆನ್ನಿನ ಸೌಂದರ್ಯ ಸಿರಿ ತೋರಿಸಿದ ನಟಿ ದೀಪಿಕಾ ಪಡುಕೋಣೆ; ಫ್ಯಾನ್ಸ್‌ ನೋಡಿದ್ದೇ ಬೇರೆ, ಆರ್‌ಕೆ ಟ್ಯಾಟೂ ಮಿಸ್ಸಿಂಗ್‌

Deepika Padukone: ಬೆನ್ನಿನ ಸೌಂದರ್ಯ ಸಿರಿ ತೋರಿಸಿದ ನಟಿ ದೀಪಿಕಾ ಪಡುಕೋಣೆ; ಫ್ಯಾನ್ಸ್‌ ನೋಡಿದ್ದೇ ಬೇರೆ, ಆರ್‌ಕೆ ಟ್ಯಾಟೂ ಮಿಸ್ಸಿಂಗ್‌

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಇವರು ಇನ್‌ಸ್ಟಾಗ್ರಾಂನಲ್ಲಿ ತನ್ನ ಬೆನ್ನಿನ ಸೌಂದರ್ಯ ಸಿರಿಯನ್ನು ತೋರಿಸುವಂತಹ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಆ ಫೋಟೋದಲ್ಲಿ ಆರ್‌ಕೆ ಟ್ಯಾಟೂ ಮಿಸ್‌ ಆಗಿರುವುದನ್ನು ನೆಟ್ಟಿಗರು ಗುರುತಿಸಿದ್ದಾರೆ.

Deepika Padukone: ಬೆನ್ನಿನ ಸೌಂದರ್ಯ ಸಿರಿ ತೋರಿಸಿದ ನಟಿ ದೀಪಿಕಾ ಪಡುಕೋಣೆ
Deepika Padukone: ಬೆನ್ನಿನ ಸೌಂದರ್ಯ ಸಿರಿ ತೋರಿಸಿದ ನಟಿ ದೀಪಿಕಾ ಪಡುಕೋಣೆ

ಬೆಂಗಳೂರು: ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಇವರು ಇನ್‌ಸ್ಟಾಗ್ರಾಂನಲ್ಲಿ ತನ್ನ ಬೆನ್ನಿನ ಸೌಂದರ್ಯ ಸಿರಿಯನ್ನು ತೋರಿಸುವಂತಹ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಬೇಬಿಮೂನ್‌ ಫೋಟೋ ಇದಾಗಿದೆ. ಆದರೆ, ನೆಟ್ಟಿಗರು ಆಕೆಯ ಬೆನ್ನು ನೋಡುವುದನ್ನು ಬಿಟ್ಟು ಕೊರಳು ನೋಡಿದ್ದಾರೆ. ದೀಪಿಕಾ ಪಡುಕೋಣೆ ಬೆನ್ನ ಮೇಲೆ ಕತ್ತಿನಲ್ಲಿದ್ದ ಟ್ಯಾಟೂ ಮಸುಕಾಗಿರುವುದನ್ನು ನೆಟ್ಟಿಗರು ಗಮನಿಸಿದ್ದಾರೆ. ಕೊರಳಲ್ಲಿ ಆರ್‌ಕೆ ಎಂಬ ಟ್ಯಾಟೂ ಮಿಸ್‌ ಆಗಿರುವುದರ ಕುರಿತು ಚರ್ಚಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ದೀಪಿಕಾ ಪಡುಕೋಣೆಯ ಬೇಬಿ ಬಂಪ್‌ ಫೋಟೋಗಳ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಆದರೆ, ಬೇಬಿ ಬಂಪ್‌ ಫೋಟೋಗಳ ಬದಲು ದೀಪಿಕಾ ಪಡುಕೋಣೆ ತನ್ನ ಬೆನ್ನಿನ ಸೌಂದರ್ಯ ತೋರಿಸಿದ್ದಾರೆ. ಈ ಫೋಟೋವನ್ನು ತನ್ನ ಪತಿ ರಣವೀರ್‌ ಸಿಂಗ್‌ಗೆ ಟ್ಯಾಗ್‌ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ದೀಪಿಕಾ ಪಡುಕೋಣೆ ಹಂಚಿಕೊಂಡ ಫೋಟೋವನ್ನು ನೆಟ್ಟಿಗರು ರೆಡಿಟ್‌ಗೆ ಕೊಂಡೊಯ್ದು ಅಲ್ಲಿ ಚರ್ಚಿಸಿದ್ದಾರೆ. ಸಾಕಷ್ಟು ಜನರು ಆಕೆಯ ಟ್ಯಾಟೂ ಮಸುಕಾಗಿ ಹೋಗಿದೆ. ಎಲ್ಲಾದರೂ ಲೇಸರ್‌ ಚಿಕಿತ್ಸೆ ಮೂಲಕ ಟ್ಯಾಟೂ ರಿಮೂವ್‌ ಮಾಡಲು ಪ್ರಯತ್ನಿಸಿದ್ದಾರ? ಎಂದೆಲ್ಲ ನೆಟ್ಟಿಗರು ಚರ್ಚಿಸುತ್ತಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಈ ಟ್ಯಾಟೂ ವಿಷಯ ಚರ್ಚೆಗೆ ಬರಲು ಕಾರಣವಿದೆ. ಹಿಂದೊಮ್ಮೆ ದೀಪಿಕಾ ಪಡುಕೋಣೆಗೆ ರಣಬೀರ್‌ ಕಪೂರ್‌ ಜತೆ ಲವ್‌ ಇತ್ತು. ಆ ಸಮಯದಲ್ಲಿ ಈ ಆರ್‌ಕೆ ಎಂಬ ಟ್ಯಾಟೂ ಹಾಕಿಸಿಕೊಂಡಿದ್ದರು. ಪ್ರೇಮಿಯಿಂದ ದೂರವಾಗಿದ್ದರೂ ಟ್ಯಾಟೂ ತೆಗೆಯುವುದು ಸುಲಭವಲ್ಲ. ಇದೇ ಕಾರಣಕ್ಕೆ ಪ್ರೀತಿಯ ಹುಚ್ಚಿನಲ್ಲಿ ಟ್ಯಾಟೂ ಎಲ್ಲಾ ಹಾಕಿಸಲು ಹೋಗಬಾರದು ಎಂದು ಕೆಲವರು ಪ್ರೇಮಿಗಳಿಗೆ ಸಲಹೆ ನೀಡುತ್ತಾರೆ. ಜೀವನಪೂರ್ತಿ ಜತೆಗಿರ್ತಿವಿ ಎಂಬ ಭರವಸೆ ಹುಟ್ಟಿಸಿದ ಪ್ರೀತಿ ಕಾಲದ ಹೊಡೆತಕ್ಕೆ ಸಿಲುಕಿ ಕಳೆದುಹೋಗಬಹುದು. ಆದರೆ, ಆ ಸಮಯದಲ್ಲಿ ಪ್ರೇಮದ ಹುಚ್ಚಿನಲ್ಲಿ ಹಾಕಿಸಿಕೊಂಡ ಟ್ಯಾಟೂವನ್ನು ತೆಗೆಯಲಾಗದೆ ಪರಿತಪಿಸಬೇಕಾಗಬಹುದು.

ರಣಬೀರ್‌ ಕಪೂರ್‌ ಜತೆ ಪ್ರೀತಿಯಲ್ಲಿದ್ದ ಸಮಯದಲ್ಲಿ ದೀಪಿಕಾ ಪಡುಕೋಣೆ ತನ್ನ ಕತ್ತಿನ ಹಿಂಭಾಗದಲ್ಲಿ ಆರ್‌ಕೆ ಎಂಬ ಕ್ಯೂಟಾದ ಟ್ಯಾಟು ಹಾಕಿಸಿಕೊಂಡಿದ್ದರು. ಬ್ರೇಕಪ್‌ ಬಳಿಕವೂ ಈ ಟ್ಯಾಟೂ ಹಾಗೆಯೇ ಇತ್ತು. ಹಳೆಯ ನೆನಪ್ಯಾಕೆ ಎಂದು ದೀಪಿಕಾ ಇದೀಗ ಈ ಟ್ಯಾಟೂವನ್ನು ರಿಮೂವ್‌ ಮಾಡಿರಬಹುದು ಎಂದು ಹೇಳಲಾಗಿದೆ. ಕಾಫಿ ವಿತ್‌ ಕರಣ್‌ 3ಯಲ್ಲಿ ಹಿಂದೊಮ್ಮೆ ದೀಪಿಕಾ ಪಡುಕೋಣೆ ಈ ಟ್ಯಾಟೂ ವಿಷಯ ಮಾತನಾಡಿದ್ದರು. "ಈಗಲೂ ಆರ್‌ಕೆ ಟ್ಯಾಟೂ ಇದೆ. ಅದನ್ನು ತೆಗೆಯುವ ಯೋಚನೆಯಿಲ್ಲ" ಎಂದು ಹೇಳಿದ್ದರು. ಆದರೆ, ಈಗ ಈ ಟ್ಯಾಟೂವನ್ನು ತೆಗೆದಿದ್ದಾರೆಯೇ, ಅಳಿಸಿ ಹೋಗಿದೆಯೇ ಎನ್ನುವ ಕುರಿತು ಸ್ಪಷ್ಟತೆಯಿಲ್ಲ.

ಮೊದಲ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡಕೋಣೆ

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ರಣವೀರ್‌ ಸಿಂಗ್‌ ಮತ್ತು ದೀಪಿಕಾ ಪಡುಕೋಣೆ ನವೆಂಬರ್‌ 14, 2018ರಂದು ಮದುವೆಯಾಗಿದ್ದರು. 6 ವರ್ಷಗಳ ಕಾಲ ಡೇಟಿಂಗ್‌ ಮಾಡಿದ ಬಳಿಕ ಇಟಲಿಯ ಲೇಕ್‌ ಕಾಮೊದಲ್ಲಿ ಮದುವೆಯಾಗಿದ್ದರು. ಮೊದಲ ಬಾರಿಗೆ ಸಂಜಯ್‌ ಲೀಲಾ ಬನ್ಸಾಲಿಯವರ ರೋಮಾಂಟಿಕ್‌ ಸಿನಿಮಾ ಗೊಲಿಯಾನ್‌ ಕಿ ರಾಸ್‌ಲೀಲ್‌ ರಾಮ್‌ ಲೀಲಾ ಸಿನಿಮಾ ಸೆಟ್‌ನಲ್ಲಿ ಭೇಟಿಯಾದರು. ಇದಾದ ಬಳಿಕ ಇವರು ಬಾಜಿರಾವ್‌ ಮಸ್ತಾನಿ ಮತ್ತು ಪದ್ಮಾವತ್‌ ಸಿನಿಮಾದಲ್ಲಿ ಜತೆಯಾಗಿ ನಟಿಸಿದರು. 2007ರ ಆಸುಪಾಸಿನಲ್ಲಿ ದೀಪಿಕಾ ಪಡುಕೋಣೆ ಮತ್ತು ರಣ್‌ಬೀರ್‌ ಕಪೂರ್‌ ಲವ್‌ನಲ್ಲಿದ್ದರು. ಬಳಿಕ ಬ್ರೇಕಪ್‌ ಆಗಿ ದೂರವಾಗಿದ್ದರು.

IPL_Entry_Point