ಕನ್ನಡ ಸುದ್ದಿ  /  Entertainment  /  Bollywood News Did Kareena Kapoor Just Confirm Her South Indian Film Debut With Yash's Toxic Pcp

ಯಶ್‌ ಟಾಕ್ಸಿಕ್‌ ಸಿನಿಮಾದಲ್ಲಿ ಕರೀನಾ ಕಪೂರ್‌ ನಟಿಸ್ತಾರ? ದಕ್ಷಿಣ ಭಾರತದ ಬೃಹತ್‌ ಪ್ರಾಜೆಕ್ಟ್‌ ಕುರಿತು ಮಾತನಾಡಿದ ಬೇಬೊ

ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾದಲ್ಲಿ ಬಾಲಿವುಡ್‌ ಬೇಬೊ ಕರೀನಾ ಕಪೂರ್‌ ನಟಿಸುತ್ತಾರ? ರೆಡಿಟ್‌ನಲ್ಲಿ ಈ ಕುರಿತು ಕರೀನಾ ಕಪೂರ್‌ ಮಾತನಾಡಿರುವ ವಿಡಿಯೋ ಹಂಚಿಕೊಂಡು ಸಿನಿಮಾ ಪ್ರೇಮಿಗಳು ಚರ್ಚಿಸುತ್ತಿದ್ದಾರೆ.

ಯಶ್‌ ಟಾಕ್ಸಿಕ್‌ ಸಿನಿಮಾದಲ್ಲಿ ಕರೀನಾ ಕಪೂರ್‌ ನಟಿಸುವ ಸಾಧ್ಯತೆ
ಯಶ್‌ ಟಾಕ್ಸಿಕ್‌ ಸಿನಿಮಾದಲ್ಲಿ ಕರೀನಾ ಕಪೂರ್‌ ನಟಿಸುವ ಸಾಧ್ಯತೆ

ಸ್ಯಾಂಡಲ್‌ವುಡ್‌ನ ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾದ ಕುರಿತು ಇಡೀ ದೇಶವೇ ಎದುರುನೋಡುತ್ತಿದೆ. ಕೆಜಿಎಫ್‌ ಸ್ಟಾರ್‌ ಯಶ್‌ ಚಿತ್ರದ ಕುರಿತು ಎಲ್ಲರಲ್ಲಿಯೂ ಕುತೂಹಲವಿದೆ. ಇದೀಗ ಬಾಲಿವುಡ್‌ ನಟಿ ಕರೀನಾ ಕಪೂರ್‌ ಮಾತನಾಡಿರುವ ವಿಡಿಯೋವೊಂದು ಹೊಸ ಚರ್ಚೆಗೆ ನಾಂದಿ ಹಾಡಿದೆ. ಯಶ್‌ ಸಿನಿಮಾದಲ್ಲಿ ಬೇಬೊ ಎಂದು ಎಲ್ಲರಿಂದ ಕ್ಯೂಟಾಗಿ ಕರೆಯಲ್ಪಡುವ ಕರೀನಾ ಕಪೂರ್‌ ನಟಿಸುವ ಸಾಧ್ಯತೆ ದಟ್ಟವಾಗಿದೆ ಎಂದು ರೆಡಿಟ್‌ನಲ್ಲಿ ಚರ್ಚೆಯಾಗುತ್ತಿದೆ.

ಕರೀನಾ ಕಪೂರ್‌ ಏನಂದ್ರು?

ರೆಡಿಟ್‌ನಲ್ಲಿ ಬಾಲಿವುಡ್‌ಬ್ಲೈಂಡ್ಸ್‌ಆಂಡ್‌ಗಾಸಿಪ್‌ ಖಾತೆಯು ಕರೀನಾ ಕಪೂರ್‌ ಅವರು "ದಕ್ಷಿಣ ಭಾರತದ ಬೃಹತ್‌ ಸಿನಿಮಾದಲ್ಲಿ ನಟಿಸುವ ಕುರಿತು" ಮಾತನಾಡುವ ವಿಡಿಯೋವನ್ನು ಹಂಚಿಕೊಂಡಿದೆ. "ಯಶ್‌ ಜತೆಗೆ ಕರೀನಾ ಕಪೂರ್‌ ನಟಿಸುವುದು ಖಚಿತವಾಗಿದೆ. ನಿನ್ನೆ ತನ್ನ ಅಭಿಮಾನಿಗಳ ಜತೆಗಿನ ಝೂಮ್‌ ಮಾತುಕತೆಯಲ್ಲಿ ಈ ವಿಷಯ ತಿಳಿಸಿದ್ದಾರೆ" ಎಂಬ ಕ್ಯಾಪ್ಷನ್‌ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.

"ನಾನು ಈಗಾಗಲೇ ಹೇಳಿದಂತೆ ದಕ್ಷಿಣ ಭಾರತದ ದೊಡ್ಡ ಸಿನಿಮಾವೊಂದರಲ್ಲಿ ನಾನು ನಟಿಸಲಿದ್ದೇನೆ. ಈಗ ಎಲ್ಲವೂ ಪ್ಯಾನ್‌ ಇಂಡಿಯಾ. ಹೀಗಾಗಿ, ನಾನು ಎಲ್ಲಿ ನಟಿಸಲಿದ್ದೇನೆ ಎನ್ನುವುದು ಖಾತ್ರಿಯಿಲ್ಲ. ಆದರೆ, ನಾನು ಮೊದಲ ಬಾರಿಗೆ ಅಂತಹ ಪ್ರಾಜೆಕ್ಟ್‌ನಲ್ಲಿ ನಟಿಸಲಿದ್ದೇನೆ ಎಂದು ಅಭಿಮಾನಿಗಳಿಗೆ ತಿಳಿಸಲು ಖುಷಿಯಾಗುತ್ತಿದೆ" ಎಂದು ಕರೀನಾ ಕಪೂರ್‌ ಹೇಳಿದ್ದಾರೆ.

ಅಭಿಮಾನಿಗಳ ಪ್ರತಿಕ್ರಿಯೆ

"ಇವರು ಖಂಡಿತವಾಗಿಯೂ ಟಾಕ್ಸಿಕ್‌ ಮತ್ತು ಸಿಂಗಂನಂತಹ ದೊಡ್ಡ ಫಿಲ್ಮ್‌ಗಳಲ್ಲಿ ನಟಿಸುವುದು ಖಾತ್ರಿ. ಇವೆಲ್ಲವೂ ಜಾನೇ ಜಾನ್‌, ಕ್ರ್ಯೂ, ದಿ ಬಂಕಿಂಗ್‌ಹ್ಯಾಂ ಮರ್ಡರ್ಸ್‌ನಂತಹ ಕಂಟೆಂಟ್‌ ಆಧರಿತ ಸಿನಿಮಾಗಳು" ಎಂದು ಅಭಿಮಾನಿಯೊಬ್ಬರು ಸೋಷಿಯಲ್‌ ಮೀಡಿಯಾದಲ್ಲಿ ಬರೆದಿದ್ದಾರೆ. "ಕರೀನಾ ಕಪೂರ್‌ ಅವರು ತನ್ನ 42ನೇ ವಯಸ್ಸಿನಲ್ಲಿ ಯಶ್‌ ಎದುರು ನಟಿಸುತ್ತಿದ್ದಾರೆಯೇ?" ಎಂದು ಇನ್ನೊಬ್ಬರು ಅಭಿಮಾನಿ ಸಂಶಯ ವ್ಯಕ್ತಪಡಿಸಿದ್ದಾರೆ.

ಕರೀನಾ ಕಪೂರ್‌ ತಂಡ ಈ ಹಿಂದೆ ಏನು ಹೇಳಿತ್ತು?

ಈ ವರ್ಷದ ಜನವರಿಯಲ್ಲಿ ಇಂಡಿಯಾ ಟುಡೇ ವರದಿಯು ಕರೀನಾ ಕಪೂರ್‌ ತಂಡದ ಅಭಿಪ್ರಾಯ ಸಂಗ್ರಹಿಸಿತ್ತು. "ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ನಟಿಸಲಿದ್ದಾರೆ. ಸಿನಿಮಾ ತಂಡವು ಕರೀನಾ ಕುರಿತು ಆಸಕ್ತಿಗೊಂಡಿದೆ. ಈ ಸಿನಿಮಾಕ್ಕೆ ಸಹಿಹಾಕುವ ಕುರಿತು ಮಾತುಕತೆ ನಡೆಸುತ್ತಿದೆ" ಎಂದು ವರದಿ ತಿಳಿಸಿತ್ತು.

ಬೇರೊಂದು ವರದಿಯಲ್ಲಿ ಈ ನಟಿಯ ತಂಡದ ಹೇಳಿಕೆ ಬೇರೆ ರೀತಿ ಇತ್ತು. "ಕರೀನಾ ಕಪೂರ್‌ ಖಾನ್‌ರ ಮುಂದಿನ ಸಿನಿಮಾದ ಕುರಿತು ಸಾಕಷ್ಟು ವದಂತಿ ಹರಿದಾಡುತ್ತಿದೆ. ಅಭಿಮಾನಿಗಳು ಕಾತರ ನಮಗೆ ಅರ್ಥವಾಗುತ್ತಿದೆ. ಕರೀನಾ ಕಪೂರ್‌ ಅವರ ಮುಂದಿನ ಪ್ರಾಜೆಕ್ಟ್‌ ಮತ್ತು ಅವರ ಸಹ ನಟರ ಕುರಿತು ಮಾಧ್ಯಮಗಳು ತುಸು ತಾಳ್ಮೆ ಹೊಂದುವಂತೆ ನಾವು ವಿನಂತಿ ಮಾಡುತ್ತಿದ್ದೇವೆ. ಖುಷಿಪಡುವಂತಹ ಸುದ್ದಿ ಶೀಘ್ರದಲ್ಲಿ ಬರಲಿದೆ. ಎಲ್ಲರೂ ಅಧಿಕೃತ ಹೇಳಿಕೆಗಾಗಿ ಕಾಯುವಂತೆ ವಿನಂತಿಸುತ್ತೇವೆ" ಎಂದು ಟೀಮ್‌ ಕರೀನಾ ಕಪೂರ್‌ ಮಾಹಿತಿ ನೀಡಿತ್ತು.

ಟಾಕ್ಸಿಕ್‌ ಸಿನಿಮಾದ ಕುರಿತು

ಕಳೆದ ವರ್ಷ ಡಿಸೆಂಬರ್‌ ತಿಂಗಳಲ್ಲಿ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾದ ಕುರಿತು ಅಪ್‌ಡೇಟ್‌ ನೀಡಲಾಗಿತ್ತು. ಗೀತು ಮೋಹನ್‌ದಾಸ್‌ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. 2025ರ ಏಪ್ರಿಲ್‌ ತಿಂಗಳಲ್ಲಿ ಇದು ರಿಲೀಸ್‌ ಆಗಲಿದೆ. ಯಶ್‌ ಮತ್ತು ಗೀತು ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ಸಿನಿಮಾವೊಂದು ತಯಾರಾಗುತ್ತಿದೆ.

IPL_Entry_Point